Thursday, 19th July 2018  

Vijayavani

ಮೂಲ ಮಠದಲ್ಲಿ ಶ್ರೀಗಳ ಪಾರ್ಥೀವ ಶರೀರ - ಪೂಜಾ ಸಾಮಗ್ರಿ ಜತೆಗಿಟ್ಟು ಸಂಸ್ಕಾರ ಕಾರ್ಯ        ಶೀರೂರು ಶ್ರೀಗಳು ಇನ್ನು ನೆನಪು ಮಾತ್ರ - ಕನಕನ ಕಿಂಡಿ ಮೂಲಕ ಕೃಷ್ಣನ ಕೊನೆಯ ದರ್ಶನ - ಆರತಿ ಸೇವೆ ಸಲ್ಲಿಸಿದ ಸ್ವಾಮೀಜಿ        ಶೀರೂರು ಶ್ರೀ ಸಾವಿನ ಸುತ್ತ ಅನುಮಾನದ ಹುತ್ತ - ಸ್ವಾಮೀಜಿಗಳಿಗೆ ವಿಷಪ್ರಾಸನದ ಶಂಕೆ - ಹಿರಿಯಡ್ಕ ಠಾಣೆಯಲ್ಲಿ ದೂರು ದಾಖಲು        ಸಾಮಾಜಿಕ ಹೋರಾಟಕ್ಕೂ ಶೀರೂರು ಶ್ರೀಗಳು ಸೈ - ವಾದ್ಯಪರಿಕರಗಳನ್ನು ನುಡಿಸುವುರಲ್ಲೂ ಎತ್ತಿದ ಕೈ        ಶೀರೂರು ಶ್ರೀ ಮಠಾಧಿಶರೇ ಅಲ್ಲ - ಅದಕ್ಕೇ ಅವರಿಗೆ ಪಟ್ಟದೇವರು ಕೊಡಲಿಲ್ಲ - ಪೇಜಾವರ ಶ್ರೀಗಳಿಂದ ಸ್ಫೋಟಕ ಹೇಳಿಕೆ        ಮಹಾ ಮಳೆಗೆ ಮೈದುಂಬಿದ ಕೃಷ್ಣೆ - ಚಿಕ್ಕೋಡಿಯಲ್ಲಿ ಹಲವು ಸೇತುವ ಜಲಾವೃತ - ಇತ್ತ ಕೊಡಗಿನಲ್ಲಿ ಕಾವೇರಿಗೆ ಎಚ್​ಡಿಕೆ ಬಾಗಿನ       
Breaking News

ಬದಲಾಯಿಸುವುದರ ಬದಲು ಬದಲಾಗೋಣ

Saturday, 07.07.2018, 3:00 AM       No Comments

| ಪಂಚಮಿ

ರಡು ನೂರು ವರ್ಷಗಳ ಹಿಂದೆ ರಾಜಪ್ರಭುತ್ವ ಇತ್ತು. ರಾಜನ ಆಡಳಿತದಿಂದ ಎಲ್ಲರೂ ಸಂತುಷ್ಟರಾಗಿದ್ದರು. ಜನರು ನೆಮ್ಮದಿಯ ಜೀವನ ನಡೆಸುತ್ತಿದ್ದರು. ಎಲ್ಲ ಸೌಕರ್ಯಗಳೊಂದಿಗೆ, ಅಪರಾಧಗಳ ಹಾವಳಿಯಿಲ್ಲದೆ ಸಮೃದ್ಧ ಜನ ಜೀವನ ಆ ಪ್ರದೇಶದಲ್ಲಿತ್ತು. ಒಮ್ಮೆ ರಾಜ ಐತಿಹಾಸಿಕ ಸ್ಥಳ, ಪುಣ್ಯಕ್ಷೇತ್ರಗಳ ಭೇಟಿ ಮಾಡುವ ಯೋಚನೆ ಮಾಡಿದ, ನಡೆದುಕೊಂಡೇ ಪ್ರವಾಸ ಮಾಡಬೇಕೆಂದು ಸಂಕಲ್ಪ ಮಾಡಿದ.

ಜನರು ಹೇಗೆ ಬಾಳುತ್ತಿದ್ದಾರೆ? ಅವರಿಗೆ ಕೊರತೆಯೇನಾದರೂ ಇದೆಯೇ? ಜೀವನಮಟ್ಟ ಹೇಗಿದೆ ಎಂದು ತಿಳಿದುಕೊಳ್ಳುವ ಕಾತುರ ರಾಜನಿಗೆ. ಹೀಗಾಗಿ ಜನರೊಡನೆ ಸಂವಹನ ಮಾಡಿದರೆ ಸೂಕ್ತ ಎಂದು ಲೆಕ್ಕ ಹಾಕಿದ. ಜನರು ಒಳ್ಳೆಯ ರಾಜ ಸಿಕ್ಕಿದ್ದಾನೆಂದು ಖುಷಿ ಪಟ್ಟಿದ್ದರು. ಅವನೊಡನೆ ಮಾತನಾಡುತ್ತೇವೆ ಎಂದು ತಿಳಿದು ಆ ಕ್ಷಣಕ್ಕಾಗಿ ಕಾಯುತ್ತಿದ್ದರು. ರಾಜ ಪ್ರವಾಸ ಆರಂಭಿಸಿದ. ಜನರೆಲ್ಲರೂ ನೆಮ್ಮದಿಯಿಂದ ಇದ್ದಾರೆ ಎಂದು ತಿಳಿದು ಬಹಳ ಖುಷಿ ಪಟ್ಟ. ಪುಣ್ಯಕ್ಷೇತ್ರ, ಐತಿಹಾಸಿಕ ಸ್ಥಳದ ದರ್ಶನ ಆಯಿತು. ಹಲವಾರು ವಾರಗಳ ಕಾಲ ಕಾಲುನಡಿಗೆಯಲ್ಲಿಯೇ ಪ್ರಯಾಣ ಮುಗಿಸಿದ. ಆಮೇಲೆ ಅವನಿಗೆ ಕಾಲು ನೋವು ಆರಂಭವಾಯಿತು. ನೋವು ತಡೆಯಲೇ ಆಗಲಿಲ್ಲ. ಮೊದಲ ಬಾರಿಗೆ ನಡೆದೇ ಪ್ರಯಾಣಿಸಿದ್ದ. ಮಂತ್ರಿಗಳನ್ನು ಕರೆಸಿ ‘ರಸ್ತೆ ಸರಿಯಿಲ್ಲ, ಪೂರ್ತಿ ಕಲ್ಲುಗಳಿಂದ ತುಂಬಿವೆ. ಹೀಗಾಗಿ ನನಗೆ ಕಾಲು ನೋವು ಬಂದಿದೆ. ಹೀಗಾದರೆ ಸಾಮಾನ್ಯ ಜನರ ಪಾಡೇನು ಎಂದು ಪ್ರಶ್ನಿಸಿದ. ಆಮೇಲೆ ಅವನೇ ಯೋಚಿಸಿ ‘ಸಾವಿರಾರು ಕಿ.ಮೀ. ವ್ಯಾಪ್ತಿಯುಳ್ಳ ದೇಶದ ಉದ್ದಗಲಕ್ಕೂ ಚರ್ಮದ ಹೊದಿಕೆ ಹಾಕಿರಿ, ಆಗ ಎಲ್ಲರೂ ಆರಾಮದಾಯಕವಾಗಿ ನಡೆಯಬಲ್ಲರು’ ಎಂದ. ಇದನ್ನು ಕೇಳಿ ಮಂತ್ರಿಗಳು ಕಂಗಾಲಾದರು. ಚರ್ಮದ ರಸ್ತೆ ಮಾಡಲು ಕನಿಷ್ಠ ಸಾವಿರಾರು ಪ್ರಾಣಿಗಳಾದರೂ ಬೇಕು. ಇದು ಅಷ್ಟು ಸುಲಭದ ಕೆಲಸವಲ್ಲ ಎಂದು ಮಂತ್ರಿಗಳು ಚಿಂತಾಕ್ರಾಂತರಾದರು.

ಕೊನೆಯಲ್ಲಿ ಒಬ್ಬ ವಯಸ್ಸಾದ ಮಂತ್ರಿ ಎದ್ದು ಬಂದು ನನ್ನ ಬಳಿ ಇನ್ನೊಂದು ಉಪಾಯವಿದೆ ಎಂದ. ಆಶ್ಚರ್ಯದಿಂದ ರಾಜ ‘ಏನು’ ಎಂದು ಕೇಳಿದ. ಆಗ ವೃದ್ಧ ‘ರಸ್ತೆಗೆ ಚರ್ಮದ ಹೊದಿಕೆ ಹಾಕುವುದರ ಬದಲು, ಚರ್ಮದ ತುಂಡೊಂದನ್ನು ನಿಮ್ಮ ಕಾಲಿನ ಆಕಾರಕ್ಕೆ ತಕ್ಕಂತೆ ರೂಪುಗೊಳಿಸಿ ಎರಡೂ ಪಾದಗಳಿಗೆ ಹಾಕಿಕೊಳ್ಳಬಹುದಲ್ಲವೇ!’ ಎಂದ. ಅವನ ಉಪಾಯ ಕೇಳಿ ರಾಜನಿಗೆ ತುಂಬ ಖುಷಿಯಾಯಿತು. ಒಂದು ಜತೆ ಚಪ್ಪಲಿ ಹೊಲಿದು ತರಲು ತಕ್ಷಣ ಆದೇಶಿಸಿದ, ನಂತರ ದೇಶದ ಜನರೆಲ್ಲರೂ ಚಪ್ಪಲಿ ಧರಿಸಬೇಕು ಎಂದು ಆಜ್ಞೆ ಹೊರಡಿಸಿದ.

ನೀತಿ: ಪ್ರಪಂಚವನ್ನು ಬದಲಿಸುವ ಉದ್ದೇಶವನ್ನು ಮೊದಲು ಬದಿಗಿಟ್ಟು ನಾವು ಬದಲಾಗಬೇಕು.

Leave a Reply

Your email address will not be published. Required fields are marked *

Back To Top