Monday, 23rd October 2017  

Vijayavani

1. ಬಡವರ ಹೊಟ್ಟೆ ಮೇಲೆ ಹೊಡೀತಿದ್ಯಾ ಸರ್ಕಾರ – 100 ಸಿಸಿ ಹಿಂಬದಿ ಸವರಾರಿಗೆ ಬ್ರೇಕ್​ – ರಾಜ್ಯ ಸರ್ಕಾರದಿಂದ ಇದೆಂಥ ಆದೇಶ 2. ಮಾಂಸ ತಿಂದು ಬರಬೇಡ ಅಂತಾ ದೇವರು ಹೇಳಿಲ್ಲ – ಬೇಡರ ಕಣ್ಣಪ್ಪ ಶಿವನಿಗೆ ನೈವೇದ್ಯ ಮಾಡಿದ್ದೇನು – ಮಂಜುನಾಥನ ದರ್ಶನಕ್ಕೆ ಸಿಎಂ ಸಮರ್ಥನೆ 3. ಕಾಗೋಡು ಕಾಲಿನಿಂದ ಜಾರಿದ ಚಪ್ಪಲಿ – ಅದನ್ನ ಎತ್ತಿಕೊಟ್ಟು ಕಿಮ್ಮನೆ ಕಳಕಳಿ – ಹಿರಿಯರಿಗೆ ತೋರಿದ ಗೌರವ ಎಲ್ಲರಿಗೂ ಮಾದರಿ 4. ಧಾರವಾಡದಲ್ಲಿ ಸರ್ಕಾರದ ಸಾಧನಾ ಸಮಾವೇಶ – ಬಿಜೆಪಿ ವಿರುದ್ಧ ಸಿಎಂ ಸಿದ್ರಾಮಯ್ಯ ವೀರಾವೇಶ – ಮೋದಿ, ಷಾ ವಿರುದ್ಧವೂ ಟೀಕಾಸ್ತ್ರ 5. ಗುಜರಾತ್​ನಲ್ಲಿ ಜನರ ಸರ್ಕಾರ ವಿಲ್ಲ – ಐದಾರು ಉದ್ಯಮಿಗಳು ಆಡಳಿತ ನಡೆಸ್ತಿದಾರೆ – ಮೋದಿ ವಿರುದ್ಧ ರಾಹುಲ್​ ವಾಗ್ದಾಳಿ
Breaking News :

ಬಣ್ಣದ ಲೋಕದಲ್ಲಿ ರಾಕ್ಷಸರು!

Friday, 13.10.2017, 3:01 AM       No Comments

ರಾಕ್ಷಸರು ಅಂದಕೂಡಲೆ ಎಲ್ಲರಿಗೂ ಬಾಲ್ಯದಲ್ಲಿ ಕೇಳಿದ ಕಥೆಯಲ್ಲಿನ ರಾಕ್ಷಸನ ಕಲ್ಪನೆ ಕಣ್ಣ ಮುಂದೆ ಬರುತ್ತದೆ. ಆದರೆ ಅಮೆರಿಕದಲ್ಲಿ ಕಲಾವಿದನ ಕುಂಚದಿಂದ ತಯಾರಾದ ಈ ರಾಕ್ಷಸರನ್ನು ನೋಡಿದರೆ ಭಯ ಆಗುವುದಿಲ್ಲ. ಬದಲಾಗಿ, ವಾವ್… ಎಷ್ಟು ಚೆನ್ನಾಗಿದೆ ಅಲ್ಲವೇ ಅಂತ ಅನ್ನಿಸುತ್ತದೆ.

ಕ್ರಿಸ್ ಸೀಮ್ಯಾನ್ ಎಂಬ ವೃತ್ತಿಪರ ಸಚಿತ್ರಕಾರ ಹಾಗೂ ಗ್ರಾಫಿಕ್ ಕಲಾವಿದನ ಕೈಚಳಕದಲ್ಲಿ ಮೂಡಿಬಂದ ಉದಾತ್ತ ರಾಕ್ಷಸರ ಸಣ್ಣ ಭಾವಚಿತ್ರಗಳು ಎಲ್ಲರ ಮೆಚ್ಚುಗೆ ಪಡೆದಿವೆ. ಕ್ರಿಸ್ 2014ರಲ್ಲಿ ಕಲಾವಿದರಿಗಾಗಿ ಕ್ಯಾಮಿಯೋ ಕ್ರೀಪ್ಸ್ ಎಂಬ ಸಂಸ್ಥೆ ಮಾಡಬೇಕೆಂದುಕೊಂಡಿದ್ದರು. ಸತತ ಪರಿಶ್ರಮದಿಂದಾಗಿ 2016ರಲ್ಲಿ ಕ್ಯಾಮಿಯೋ ಕ್ರೀಪ್ಸ್ ಸಂಸ್ಥೆ ಸಮಾಜಕ್ಕೆ ಪರಿಚಯವಾಯಿತು. ಇಂದು ಪ್ರಪಂಚದಾದ್ಯಂತ ಇರುವ ತಮ್ಮ ಅಭಿಮಾನಿಗಳಿಗೆ ಚಿತ್ರವನ್ನು ಕಳುಹಿಸುತ್ತಾರಂತೆ. ಪ್ರತಿಯೊಬ್ಬರಿಗೂ ಕಲೆ ಸುಲಭವಾಗಿ ದೊರೆಯಬೇಕು ಎಂಬುದು ಇವರ ಉದ್ದೇಶವಾಗಿತ್ತಂತೆ.

ಸ್ಕೈಲ್ಯಾಂಡರ್ಸ್, ವರ್ಲ್ಡ್ ಆಫ್ ವಾರ್​ಕ್ರಾಫ್ಟ್, ಹ್ಯಾರಿ ಪಾಟರ್, ಪಾತ್​ಫೈಂಡರ್ ಆರ್. ಪಿ.ಜಿ, ಮ್ಯಾಜಿಕ್ ಹಾಗೂ ಇನ್ನಿತರ ಹಲವು ಪ್ರಪಂಚದ ಪ್ರಸಿದ್ಧ ಸಂಸ್ಥೆಗಳಲ್ಲಿ ಕ್ರಿಸ್ ಕೆಲಸ ಮಾಡಿದ್ದಾರೆ. ಆದರೆ ಕ್ರಿಸ್​ಗೆ ತಾನೇ ಏನಾದರೂ ಮಾಡಬೇಕು ಅನ್ನುವ ಹಂಬಲ ಸದಾ ಇತ್ತಂತೆ. ಅದರ ಫಲವೇ ಕಲ್ಪನೆಯಲ್ಲಿ ಮೂಡಿಬಂದ ಸುಂದರ ರಾಕ್ಷಸರ ಭಾವಚಿತ್ರ ಅನ್ನುತ್ತಾರೆ. -ಏಜೆನ್ಸೀಸ್

Leave a Reply

Your email address will not be published. Required fields are marked *

Back To Top