Saturday, 26th May 2018  

Vijayavani

ರಾಮನಗರದಲ್ಲಿ ನಾಡಿಗೆ ಬಂತು ಚಿರತೆ - ರೇಷ್ಮೆ ಸಾಕಾಣಿಕಾ ಕೊಠಡಿಯಲ್ಲಿ ಸೆರೆ - ಅರಣ್ಯಇಲಾಖೆ ಅಧಿಕಾರಿಗಳಿಂದ ಆಪರೇಷನ್​​ ಚಿರತೆ        ಬಿಬಿಎಂಪಿ ರಸ್ತೆ ಕಾಮಗಾರಿ ವೇಳೆ ದುರಂತ - ಬಾಲಕನ ಮೇಲೆ ಹರಿದ ರೋಡ್​​ರೋಲರ್​​ - ಸೈಕಲ್​ ತುಳಿಯುತ್ತಿದ್ದ ಬಾಲಕ ದರ್ಮರಣ        ಕೈ​​​ ಹೈ ಕಮಾಂಡ್​ ಭೇಟಿಗೆ ನಿಗದಿಯಾಗದ ಟೈಂ - ರಾಜ್ಯ ಕಾಂಗ್ರೆಸ್​​​​ ನಾಯಕರ ದೆಹಲಿ ಪ್ರವಾಸ ಕ್ಯಾನ್ಸಲ್​​​ - ಇತ್ತ ಪ್ರಧಾನಿ ಭೇಟಿಗೆ ಸಮಯಾವಕಾಶ ಕೇಳಿದ ಸಿಎಂ        11 ದಿನವಾದ್ರೂ ಸ್ವಕ್ಷೇತ್ರದತ್ತ ಬಾರದ ಶಾಸಕರು - ನಾಯಕರ ಮನೆಗಳಿಗೆ ಬಂದ್ರು ಬೆಂಬಲಿಗರು - ಗೋಳು ಕೇಳೋರಿಲ್ಲದೆ ಜನರ ಕಂಗಾಲು        ಮೋದಿ ಸರ್ಕಾರಕ್ಕೆ ತುಂಬಿತು ನಾಲ್ಕು ವರ್ಷ - 15 ದಿನಗಳ ಕಾಲ ಬಿಜೆಪಿ ಸಂಭ್ರಮಾಚರಣೆ - ಅತ್ತ ಕಾಂಗ್ರೆಸ್​​​ನಿಂದ ವಿಶ್ವಾಸ ದಿನಾಚರಣೆ        ಗಡಿ ನುಸುಳಲು ಬಂದವರಿಗೆ ಬ್ರೇಕ್​ - ಜಮ್ಮುವಿನಲ್ಲಿ ಸೇನಾ ದಾಳಿಗೆ ಐವರು ಉಗ್ರರು ಮಟಾಷ್​​ - ಶಸ್ತ್ರಾಸ್ತ್ರಗಳು ವಶ, ಮುಂದುವರಿದ ಶೋಧ       
Breaking News

ಬಟ್ಟೆ ಹೊಲಿದು ಏಳು ಚಿನ್ನ ಪಡೆದ ವಿದ್ಯಾರ್ಥಿನಿ

Saturday, 24.12.2016, 4:00 AM       No Comments

ಶಿವಮೊಗ್ಗ: ಮನೆಯಲ್ಲಿ ಬಡತನ, ಪಿಯು ಓದುವಾಗಲೇ ಪಾಲಕರನ್ನು ಕಳೆದುಕೊಂಡ ಬಾಲಕಿಯೊಬ್ಬಳು ಚಿಕ್ಕಪ್ಪನ ಮನೆಯಲ್ಲಿದ್ದು ಟೈಲರಿಂಗ್ ಮಾಡಿ ಪದವಿಗಳಿಸಿ ಈಗ ಸ್ನಾತಕೋತ್ತರದಲ್ಲಿ ಏಳು ಚಿನ್ನದ ಪದಕಗಳನ್ನು ಕೊರಳಿಗೆ ಹಾಕಿಕೊಂಡ ಸಂಭ್ರಮ.

ಇದು ಶುಕ್ರವಾರ ನಡೆದ ಕುವೆಂಪು ವಿವಿ ಘಟಿಕೋತ್ಸವದ ಸ್ನಾತಕೋತ್ತರ ಪದವಿಯಲ್ಲಿ ಸಹಕುಲಾಧಿಪತಿ ಹಾಗೂ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರಿಂದ ಏಳು ಚಿನ್ನದ ಪದಕ ಪಡೆದ ಕಡೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಸಿ.ಜಿ.ಪವಿತ್ರಾ ಅಪ್ರತಿಮ ಸಾಧನೆ ಮಾಡಿದರು. ಕಡೂರು ತಾಲೂಕು ಚಿಕ್ಕಂಗಳ ಗ್ರಾಮದ ಗೋವಿಂದಪ್ಪ-ಯಶೋದಾ ದಂಪತಿ ಪುತ್ರಿ ಪವಿತ್ರಾ ಹತ್ತನೇ ತರಗತಿವರೆಗೆ ಹಿರೇನಲ್ಲೂರು ಸರ್ಕಾರಿ ಶಾಲೆಯಲ್ಲಿ ಓದಿದ್ದಳು. ಪದವಿ(ಬಿಎ) ವ್ಯಾಸಂಗ ಮಾಡುತ್ತಿರುವಾಗಲೇ ಟೈಲರಿಂಗ್ ಕಲಿತು ಹಣ ಸಂಪಾದಿಸಿ ಸ್ವಾವಲಂಬಿಯಾಗಿ ಜೀವನ ಸಾಗಿಸಿದರು.

ಕೃಷಿಕರ ಮಗಳು ಅರ್ಚನಾಗೆ 5 ಸ್ವರ್ಣ

ಭದ್ರಾವತಿ ತಾಲೂಕು ಅರಕೆರೆಯ ಜಿ.ಎಸ್.ಅರ್ಚನಾ, ಎಂಎಸ್ಸಿ ಜೈವಿಕ ತಂತ್ರಜ್ಞಾನದಲ್ಲಿ ಐದು ಸ್ವರ್ಣ ಪದಕ ಪಡೆದಿದ್ದಾರೆ. ಮೂಲತಃ ಕೃಷಿ ಕುಟುಂಬದ ಶಂಕರಪ್ಪ, ಗಾಯತ್ರಿ ದಂಪತಿ ಪುತ್ರಿಗೆ ಬಯೋಮೆಟ್ರಿಕ್​ನಲ್ಲಿ ಸಾಕಷ್ಟು ಸಂಶೋಧನೆ ಮಾಡಿ ವಿಜ್ಞಾನಿಯಾಗುವಾಸೆ.

 ಬಿಎ ಪದವಿ ಕಾಲೇಜಿ ನಲ್ಲಿ ಪ್ರಥಮ ಸ್ಥಾನ ಪಡೆದಿದ್ದೆ. ಸ್ನಾತಕೋತ್ತರ ದಲ್ಲಿ ಅಗ್ರಸ್ಥಾನ ಗಳಿಸುವ ಐವರಲ್ಲಿ ಒಬ್ಬಳಾಗ ಬಹುದು ಎಂದು ನಿರೀಕ್ಷೆಸಿದ್ದೆ. ಆದರೆ ನನ್ನ ಶ್ರದ್ಧೆ, ಸಾಧನೆಯಿಂದ ಮೊದಲ ಸ್ಥಾನ ಸಿಕ್ಕಿದ್ದು ಈ ಎಲ್ಲ ಶ್ರೇಯಸ್ಸು ಅಜ್ಜಿ, ಚಿಕ್ಕಮ್ಮ, ಚಿಕ್ಕಪ್ಪ ಅವರಿಗೇ ಸಲ್ಲಬೇಕು. ನನಗೆ ಉಪನ್ಯಾಸಕಿಯಾಗುವ ಹಂಬಲವಿದೆ.

| ಸಿ.ಜಿ.ಪವಿತ್ರಾ, ಏಳು ಚಿನ್ನದ ಪದಕ ವಿಜೇತೆ

 

Leave a Reply

Your email address will not be published. Required fields are marked *

Back To Top