Monday, 23rd October 2017  

Vijayavani

1. ಲಿಂಗಾಯತರು ಹಿಂದೂಗಳಲ್ಲ ಹೇಳಿಕೆ – ಜಾಮದಾರ್​ಗೆ ಕನೇರಿ ಮಠದ ಶ್ರೀ ತಿರುಗೇಟು – ಬಹಿರಂಗ ಚರ್ಚೆಗೆ ಕಾಡಸಿದ್ದೇಶ್ವರ ಸ್ವಾಮಿಗಳ ಆಹ್ವಾನ 2. ರಾಜ್ಯ ಕಾಂಗ್ರೆಸ್​ನಲ್ಲಿ ಭುಗಿಲೆದ್ದ ಭಿನ್ನಾಭಿಪ್ರಾಯ – ಸಿದ್ದು, ಪರಂ, ಡಿಕೆಶಿ ದೂರ ದೂರ – ಹೈಕಮಾಂಡ್​ ಸಾಮೂಹಿಕ ಜಪ, ನಾಯಕರು ಸಪರೇಟ್​ ರೂಪ 3. ಧಾರವಾಡದಲ್ಲಿ ಸರ್ಕಾರದ ಸಾಧನಾ ಸಮಾವೇಶ – ಜನರ ತೆರಿಗೆ ದುಡ್ಡಲ್ಲಿ ಕಾಂಗ್ರೆಸ್‌ ಪಕ್ಷಕ್ಕೂ ಪ್ರಚಾರ – ಬೆನ್ನುತಟ್ಟಿಕೊಳ್ಳೋ ಸಮಾವೇಶಕ್ಕೆ ಪಿಡಿಓಗಳೂ ದುರ್ಬಳಕೆ 4. ನಟ ವಿಜಯ್ ಬೆಂಬಲಕ್ಕೆ ನಿಂತ ತಲೈವಾ – ಮೆರ್ಸಲ್‌ ಸಿನಿಮಾದ ಬಗ್ಗೆ ಮೆಚ್ಚುಗೆಯ ಟ್ವೀಟ್ – ವಿವಾದಾತ್ಮಕ ವಿಷಯಗಳಿಗೂ ರಜನಿಕಾಂತ್ ಪರೋಕ್ಷ ಶ್ಲಾಘನೆ 5. ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗೆ ಬಿಗ್​ ಶಾಕ್​ – ಬಿಜೆಪಿಗೆ ಸೇರಲು 1 ಕೋಟಿ ರೂ ಆಮೀಷ – ಹಾರ್ದಿಕ್​ ಪಟೇಲ್​ ಸಂಗಡಿಗನ ಗಂಭೀರ ಆರೋಪ
Breaking News :

ಫೋರ್ಬ್ಸ್ ಪಟ್ಟಿಯಲ್ಲಿ ಮುಕೇಶ್ ಮತ್ತೆ ನಂ. 1

Friday, 06.10.2017, 3:00 AM       No Comments

ನವದೆಹಲಿ: ದೇಶದ ಸಿರಿವಂತ ಉದ್ಯಮಿಗಳ ಪಟ್ಟಿಯನ್ನು ಫೋರ್ಬ್ಸ್ ಮ್ಯಾಗಜಿನ್ ಬಿಡುಗಡೆ ಮಾಡಿದ್ದು, 2.50 ಲಕ್ಷ ಕೋಟಿ ರೂ. ಆಸ್ತಿ ಹೊಂದುವ ಮೂಲಕ ಉದ್ಯಮಿ ಮುಕೇಶ್ ಅಂಬಾನಿ ನಂಬರ್ 1 ಸ್ಥಾನ ಕಾಯ್ದುಕೊಂಡಿದ್ದಾರೆ. ಸತತ 10 ವರ್ಷಗಳ ಕಾಲ ಮುಕೇಶ್ ಅಂಬಾನಿ ದೇಶದ ಸಿರಿವಂತ ಉದ್ಯಮಿ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ವಿಶೇಷ ಸಾಧನೆಗೈದಿದ್ದಾರೆ. ದೇಶದಲ್ಲಿ ಆರ್ಥಿಕ ಹಿನ್ನಡೆಯಿದ್ದರೂ, 100 ಸಿರಿವಂತ ಉದ್ಯಮಿಗಳ ಆಸ್ತಿ ಒಟ್ಟಾರೆ ಶೇ. 26 (31 ಲಕ್ಷ ಕೋಟಿ ರೂ.ಗೂ ಅಧಿಕ) ಹೆಚ್ಚಳವಾಗಿದೆ. ಜತೆಗೆ ಪ್ರಧಾನಿ ನರೇಂದ್ರ ಮೋದಿಯವರ ನೋಟು ನಿಷೇಧ ಕ್ರಮ ಇವರನ್ನು ಬಾಧಿಸಿಲ್ಲ ಎಂದು ಫೋರ್ಬ್ಸ್ ಹೇಳಿದೆ. ಜಿಎಸ್​ಟಿ ಮತ್ತು ನೋಟು ನಿಷೇಧದಿಂದ ಒಟ್ಟಾರೆ ಆರ್ಥಿಕ ಪ್ರಗತಿ ಕುಂಠಿತವಾಗಿದ್ದರೂ, ಷೇರು ಉದ್ಯಮ ಉತ್ತಮ ಪ್ರಗತಿ ಸಾಧಿಸಿದೆ.

ಮುಕೇಶ್ ಅಂಬಾನಿ ಒಟ್ಟು ಆಸ್ತಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಒಟ್ಟಾರೆ ಶೇ. 67 ಹೆಚ್ಚಳವಾಗಿದ್ದು, ಏಷ್ಯಾದ ಐವರು ಶ್ರೀಮಂತ ಉದ್ಯಮಿಗಳ ಸಾಲಿನಲ್ಲಿ ಸ್ಥಾನ ಪಡೆದಿದ್ದಾರೆ. ರಿಲಯನ್ಸ್ ಜಿಯೋ ಕೂಡ ಉದ್ಯಮ ಬೆಳವಣಿಗೆಗೆ ಕೊಡುಗೆ ನೀಡಿದೆ. ಆದರೆ ಕಳೆದ ಬಾರಿ 32ನೇ ಸ್ಥಾನದಲ್ಲಿದ್ದ ಅನಿಲ್ ಅಂಬಾನಿ, ಈ ಬಾರಿ 45ನೇ ಸ್ಥಾನ ಪಡೆದಿದ್ದಾರೆ. ಉಳಿದಂತೆ ಕಳೆದ ಬಾರಿ 48ನೇ ಸ್ಥಾನದಲ್ಲಿದ್ದ ಪತಂಜಲಿ ಆಯುರ್ವೆದದ ಆಚಾರ್ಯ ಬಾಲಕೃಷ್ಣ ಈ ಬಾರಿ 43,000 ಕೋಟಿ ರೂ. ಆಸ್ತಿ ಹೊಂದುವ ಮೂಲಕ 19ನೇ ಸ್ಥಾನಕ್ಕೆ ಏರಿದ್ದಾರೆ.

ವಿವಿಧ ಉದ್ಯಮ ಮತ್ತು ಕಂಪನಿಗಳ ಷೇರು ವಹಿವಾಟು, ಹೂಡಿಕೆ, ಗಳಿಕೆ ಮತ್ತು ನಿಯಂತ್ರಣ ಸಂಸ್ಥೆಗಳ ವರದಿ, ತಜ್ಞರ ಅಭಿಪ್ರಾಯ ಆಧರಿಸಿ ಫೋರ್ಬ್ಸ್ ಸಿರಿವಂತರ ಪಟ್ಟಿ ಬಿಡುಗಡೆ ಮಾಡುತ್ತದೆ. – ಏಜೆನ್ಸೀಸ್

 2 ನೇ ಸ್ಥಾನದಲ್ಲಿ ಅಜೀಂ

1.20 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವ ವಿಪ್ರೋದ ಅಜೀಂ ಪ್ರೇಮ್ ಎರಡನೇ ಸ್ಥಾನದಲ್ಲಿದ್ದು, ಹಿಂದುಜಾ ಸಹೋದರರು ಮೂರನೇ ಸ್ಥಾನದಲ್ಲಿ, ಲಕ್ಷ್ಮೀ ಮಿತ್ತಲ್ ನಾಲ್ಕನೇ ಸ್ಥಾನ ಮತ್ತು ಪಲ್ಲೊಂಜಿ ಮಿಸ್ತ್ರಿ ಐದನೇ ಸ್ಥಾನ ಹಾಗೂ ಸನ್ ಫಾರ್ವದ ದಿಲೀಪ್ ಸಾಂಘ್ವಿ 9ನೇ ಸ್ಥಾನ ಪಡೆದಿದ್ದಾರೆ.

Leave a Reply

Your email address will not be published. Required fields are marked *

Back To Top