Thursday, 19th April 2018  

Vijayavani

ಬಿಜೆಪಿ ಕಚೇರಿಯಲ್ಲಿ ಅಮಿತ್‌ ಷಾ ಮೀಟಿಂಗ್ - ಸೋಶಿಯಲ್‌ ಮೀಡಿಯಾ ಬಗ್ಗೆ ಫುಲ್‌ ಮಾರ್ಕ್ಸ್‌ - ಎಚ್ಚರಿಕೆ ಹೆಜ್ಜೆ ಇಡಲು ಸಲಹೆ        ಒಂಟಿಸಲಗದ ಮನೆಗೆ ಬಂತು ಬಿ ಫಾರಂ ​​ - ಅಂಬಿ ಷರುತ್ತುಗಳಿಗೆ ಒಪ್ಪಿದ ಪರಂ - ಪಕ್ಷದ ನಡೆ ಬಗ್ಗೆ ರೆಬೆಲ್‌ಸ್ಟಾರ್‌ ಗರಂ        ಕೈ ಟಿಕೆಟ್​ ತಪ್ಪಿದ್ದಕ್ಕೆ ಶಶಿಕುಮಾರ್ ಅಸಮಾಧಾನ​ - ದೇವೆಗೌಡರ ಭೇಟಿಯಾದ ಕೊಲ್ಲೂರ ಕಾಳ - ಪದ್ಮನಾಭ ನಗರದ ನಿವಾಸದಲ್ಲಿ ಜೆಡಿಸ್​ ಸೇರ್ಪಡೆ        ಟಿಕೆಟ್​ಗಾಗಿ ಹೆಚ್ಚಿದ ಕಣ್ಣೀರಧಾರೆ - ಮಾಯಕೊಂಡದಲ್ಲಿ ಕಣ್ಣೀರಿಟ್ಟ ಮಾಜಿ ಶಾಸಕ - ತರೀಕೆರೆಯಲ್ಲಿ ಶಿವಶಂಕರಪ್ಪ ಭಾವುಕ        ಭವಾನಿ ಸೋಲಿಸಿ ಎಂದಿದ್ದು ನನ್ನನ್ನಲ್ಲ - ಕೈ ಅಭ್ಯರ್ಥಿ ವಿರುದ್ಧ ಮಾತನಾಡಿದ್ದಾರೆ - ಭವಾನಿ ವಿಡಿಯೋ ಬಗ್ಗೆ ಸಾ.ರಾ ಮಹೇಶ್‌ ಸ್ಪಷ್ಟನೆ        ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ - 6ನೇ ವೇತನ ಆಯೋಗದ ಶಿಫಾರಸು ಜಾರಿಗೆ ಗ್ರೀನ್​ಸಿಗ್ನಲ್ - ಚುನಾವಣಾ ಆಯೋಗದಿಂದ ಒಪ್ಪಿಗೆ       
Breaking News

ಫೋಟೋ ಕಣ್ಕಟ್ಟು…

Monday, 16.04.2018, 3:02 AM       No Comments

ಲವು ಬಾರಿ ನಮ್ಮ ಕಣ್ಣನ್ನು ನಾವು ನಂಬಲಾಗುವುದಿಲ್ಲ. ನಮಗೆ ಕಾಣುವುದು ಒಂದು ಅಲ್ಲಿ ಇರುವುದು ಮತ್ತೊಂದು. ಕಣ್ಣೆದುರಿನ ದೃಶ್ಯದ ಕಡೆಗೆ ಸಾಗಿದಷ್ಟು ನಮಗೆ ಕಾಣುತ್ತಿದ್ದ ಚಿತ್ರಣ ಬೇರೆ ರೂಪಪಡೆದು… ಅರೆ, ಇದು ಹೀಗಿದೆಯಾ ಎಂದು ಹುಬ್ಬೇರಿಸುವಂತೆ ಮಾಡುತ್ತದೆ.

ಒಬ್ಬರೇ ಇದ್ದಾಗ ಮತ್ತು ಕುಟುಂಬಸ್ಥರು ಹಾಗೂ ಸ್ನೇಹಿತರೊಂದಿಗೆ ಕಾಲಕಳೆಯುವಾಗ ಹಲವು ಬಾರಿ ಅಂಥ ಅನುಭವ ನಮ್ಮದಾಗಿರುತ್ತದೆ. ಬೆಳಕಿನ ಬಿಂಬ- ಪ್ರತಿಬಿಂಬದ ಆಟದಿಂದ ಮೂಡಿಬರುವ ಈ ದೃಶ್ಯಗಳು ತಲೆ ತಿರುಗಿಸಿದರೆ ಆಶ್ಚರ್ಯವಿಲ್ಲ.

ಸರ್ಕಸ್​ಗಳಲ್ಲಿನ ಮಾಯಾಗನ್ನಡಿ, ವಸ್ತು ಸಂಗ್ರಹಾಲಯಗಳಲ್ಲಿ ಕಾಣಸಿಗುವ ವಿಶೇಷ ವರ್ಣಚಿತ್ರಗಳು ಕಣ್ಣಿಗೆ ಮೋಸ ಮಾಡುವ ದೃಶ್ಯಗಳಿಗೆ ಉದಾಹರಣೆಗಳು. ಆದರೆ ಪ್ರಕೃತಿಯೇ ನಮ್ಮೆದುರು ಕೆಲವು ಬಾರಿ ಆಶ್ಚರ್ಯ ಚಕಿತಗೊಳಿಸುವ ದೃಶ್ಯಗಳನ್ನು ತಂದು ನಿಲ್ಲಿಸುತ್ತದೆ. ಕ್ಯಾಮರಾ ಕಣ್ಣಿಗೆ ಸೆರೆಸಿಕ್ಕ ಅಂಥ ಕೆಲವು ಫೋಟೋಗಳು ಇಲ್ಲಿವೆ.

ಕೆರೆ ದಡ ಆಕಾಶವಾದಾಗ

ಕೆರೆಯ ದಡದಲ್ಲಿನ ನೀರು ಪ್ರಶಾಂತವಾಗಿ ತಿಳಿಗಟ್ಟಿದಾಗ ಅದರಲ್ಲಿ ಕಾಣಸಿಗುವ ಆಕಾಶದಲ್ಲಿನ ಮೋಡಗಳ ಪ್ರತಿಬಿಂಬ ಥೇಟ್ ಆಕಾಶವೇ ಕೆರೆಯಲ್ಲಿದೆಯೇ ಎಂದು ದಿಗ್ಭ್ರಮೆ ಗೊಳ್ಳುವಂತೆ ಮಾಡಿದೆ.


ಬಿಂಬದಲ್ಲಿ ಟೈರ್ ಪರ್ಫೆಕ್ಟ್

ಸೈಕಲ್ ಟೈರ್ ಪಂಚರ್ ಆಗಿ ರಿಮ್ ಸೊಟ್ಟ ಆಗಿದೆಯೋ ಅಥವಾ ನೀರಿನಲ್ಲಿ ಕಾಣುತ್ತಿರುವ ಬಿಂಬದಂತೆ ಸರಿಯಾಗಿಯೇ ಇದೆಯೋ! ಕಣ್ಣೆದುರಿನ ವಾಸ್ತವದಲ್ಲಿ ಸೈಕಲ್ ದುಸ್ಥಿತಿಯಲ್ಲಿದ್ದರೂ, ಬಿಂಬದಲ್ಲಿ ಸ್ಟ್ಯಾಂಡ್​ ತೆಗೆದು ಓಡಿಸಲು ರೆಡಿಯಾಗಿರುವಂತೆ ಕಾಣುವುದು ಆಶ್ಚರ್ಯ.


ವರನ ಹೆಗಲ ಮೇಲೆ ಕಾಲಿಟ್ಟ ವಧು

ಹೊಸದಾಗಿ ಮದುವೆಯಾದ ವಧು ವರ ಸಂಭ್ರಮಿಸುತ್ತಿರುವಾಗ ಸೆರೆಹಿಡಿಯಲಾದ ಈ ಫೋಟೋದಲ್ಲಿ ಯುವಕ ತೊಟ್ಟಿರುವ ಬಿಳಿ ಅಂಗಿ ಮತ್ತು ಯುವತಿಯ ಸಾಂಪ್ರದಾಯಿಕ ಬಿಳಿ ಉಡುಗೆ ಒಂದಕ್ಕೊಂದು ಸೇರಿಕೊಂಡು ಯುವತಿ ತನ್ನ ಕಾಲುಗಳನ್ನು ಯುವಕನ ಹೆಗಲ ಮೇಲೆ ಇರಿಸಿದ್ದಾಳೆನೋ ಎಂದು ಎರಡು ಬಾರಿ ಕಣ್ಣರಳಿಸಿ ನೋಡುವಂತೆ ಮಾಡುತ್ತಿದೆ.

Leave a Reply

Your email address will not be published. Required fields are marked *

Back To Top