Friday, 20th April 2018  

Vijayavani

ಹಾಸನದಲ್ಲಿ ರೇವಣ್ಣ, ಮೈಸೂರಲ್ಲಿ ಜಿಟಿಡಿ- ದಿಗ್ಗಜರಿಂದ ನಾಮಪತ್ರ ಸಲ್ಲಿಕೆ- ಅಫಜಲ್​ಪುರದಲ್ಲಿ ಗುತ್ತೇದಾರ್​ಗೆ ಬಿಎಸ್​ವೈ ಸಾಥ್​        ಭಾಲ್ಕಿಯಲ್ಲಿ ಖಂಡ್ರೆ ಬಲ ಪ್ರದರ್ಶನ- ಲಿಂಗಸೂರಲ್ಲಿ ಎತ್ತಿನ ಬಂಡಿ ಮೆರವಣಿಗೆ- ಉಮೇದುವಾರಿಕೆಗೂ ಮುನ್ನ ಭರ್ಜರಿ ರೋಡ್​ ಶೋ        ಚಾಮುಂಡಿ ದರ್ಶನ.. ಸ್ವಗ್ರಾಮದ ದೇಗುಲದಲ್ಲೂ ನಮನ- ಕೋಟೆ ಆಂಜನೇಯನಿಗೂ ಸಿಎಂ ಪೂಜೆ- ಒಂದೇ ದಿನ ಸಿದ್ದು ಟೆಂಪಲ್​ರನ್​        ರೆಡಿಯಾಯ್ತು ಬಿಜೆಪಿ ಮೂರನೇ ಪಟ್ಟಿ- ಕೆಲವೇ ಹೊತ್ತಲ್ಲಿ ಕದನ ಕಲಿಗಳ ಹೆಸರು ಪ್ರಕಟ- ಜೆಡಿಎಸ್​​​ನಿಂದಲೂ ಇಂದು ಎರಡನೇ ಪಟ್ಟಿ ರಿಲೀಸ್        ಶಟರ್ ಮುರಿದು ಮೊಬೈಲ್ ದೋಚಿದ ಕಳ್ಳರು- ಮತ್ತಿಕೆರೆಯಲ್ಲಿ ಅಂಗಡಿ ರಾಬರಿ- ಕಳ್ಳರ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆ        ಸುಪ್ರೀಂ ಮುಖ್ಯನ್ಯಾಯಮೂರ್ತಿ ವಿರುದ್ಧ ವಿಪಕ್ಷಗಳು ಗರಂ- ಸಿಜೆಐ ವಿರುದ್ಧ 7 ಪಕ್ಷಗಳ ಮಹಾಭೀಯೋಗ ನಿರ್ಣಯ- ಉಪರಾಷ್ಟ್ರಪತಿ ಭೇಟಿ, ಮನವಿ ಸಲ್ಲಿಕೆ       
Breaking News

ಫೈನಲ್​ಗೇರಿದ ತಮಿಳುನಾಡು ತಂಡ

Tuesday, 28.03.2017, 7:52 AM       No Comments

ವಿಶಾಖಪಟ್ಟಣ: ದಿನೇಶ್ ಕಾರ್ತಿಕ್ (93 ರನ್, 98 ಎಸೆತ, 6 ಬೌಂಡರಿ, 1 ಸಿಕ್ಸರ್) ಶತಕವಂಚಿತ ಬ್ಯಾಟಿಂಗ್ ಹಾಗೂ ರಾಹಿಲ್ ಷಾ (37ಕ್ಕೆ 3), ಸಾಯಿ ಕಿಶೋರ್ (39ಕ್ಕೆ 3) ಜೋಡಿಯ ಮಾರಕ ದಾಳಿ ನೆರವಿನಿಂದ ತಮಿಳುನಾಡು ತಂಡ ದೇವಧರ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಪ್ರಶಸ್ತಿ ಸುತ್ತಿಗೇರಿತು. ವೈಎಸ್ ರಾಜಶೇಖರ ರೆಡ್ಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ವಿಜಯ್ ಹಜಾರೆ ಟ್ರೋಫಿ ಚಾಂಪಿಯನ್ ತಮಿಳುನಾಡು ತಂಡ 73 ರನ್​ಗಳಿಂದ ಭಾರತ ಎ (ಬ್ಲೂ) ತಂಡವನ್ನು ಸೋಲಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದ ತಮಿಳುನಾಡು 6 ವಿಕೆಟ್​ಗೆ 303 ರನ್ ಪೇರಿಸಿದರೆ, ಪ್ರತಿಯಾಗಿ ಹರ್ಭಜನ್ ಸಿಂಗ್ ಸಾರಥ್ಯದ ಭಾರತ ಎ ತಂಡ ಮಂದೀಪ್ ಸಿಂಗ್ (97ರನ್, 114ಎಸೆತ, 6 ಬೌಂಡರಿ, 3 ಸಿಕ್ಸರ್) ಏಕಾಂಗಿ ಹೋರಾಟದ ನಡುವೆಯೂ 44.4 ಓವರ್​ಗಳಲ್ಲಿ 230 ರನ್​ಗೆ ಸರ್ವಪತನ ಕಂಡಿತು. ಭಾರತ ಎ ತಂಡ ಪರ ಕನ್ನಡಿಗ ಮಯಾಂಕ್ ಅಗರ್ವಾಲ್ (12) ಮತ್ತೆ ವೈಫಲ್ಯ ಅನುಭವಿಸಿದರು.

ತಮಿಳುನಾಡು: 6 ವಿಕೆಟ್​ಗೆ 303 (ದಿನೇಶ್ ಕಾರ್ತಿಕ್ 93, ಎನ್.ಜಗದೀಶನ್ 71, ಬಾಬಾ ಇಂದ್ರಜಿತ್ 36*, ಕೌಶಿಕ್ ಗಾಂಧಿ 34, ಶಾರ್ದೂಲ್ ಠಾಕೂರ್ 49ಕ್ಕೆ 3, ಹರ್ಭಜನ್ 57ಕ್ಕೆ 1). ಭಾರತ ಎ: 44. 4 ಓವರ್​ಗಳಲ್ಲಿ 230 (ಮಂದೀಪ್ ಸಿಂಗ್ 97, ಮಯಾಂಕ್ 12, ಕೃನಾಲ್ ಪಾಂಡ್ಯ 36, ರಾಹಿಲ್ ಷಾ 37ಕ್ಕೆ 3, ಸಾಯಿ ಕಿಶೋರ್ 39ಕ್ಕೆ 3).

-ಏಜೆನ್ಸೀಸ್

Leave a Reply

Your email address will not be published. Required fields are marked *

Back To Top