Wednesday, 13th December 2017  

Vijayavani

1. ನನ್ನ ಮಗನದ್ದು ವ್ಯವಸ್ಥಿತ ಕೊಲೆ- ನ್ಯಾಯ ಸಿಗದಿದ್ರೆ ಕುಟುಂಬದೊಂದಿಗೆ ಆತ್ಮಹತ್ಯೆ- ಪರೇಶ್​ ಮೇಸ್ತಾ ಹೆತ್ತವರ ಕಣ್ಣೀರು 2. ರವಿ ಬೆಳಗೆರೆ ಆರೋಗ್ಯದಲ್ಲಿ ಏರುಪೇರು ಹಿನ್ನೆಲೆ- ಪರಪ್ಪನ ಅಗ್ರಹಾರದಿಂದ ಆಸ್ಪತ್ರೆಗೆ ಶಿಫ್ಟ್​- ಜಯದೇವ ಹಾಸ್ಪಿಟೆಲ್​ಗೆ ಕರೆಯೊಯ್ದ ಸಿಬ್ಬಂದಿ 3. ಸಿಎಂ ಸಿದ್ದರಾಮಯ್ಯ ನಕಲಿ ಕಾಂಗ್ರೆಸಿಗ- ರಾಜ್ಯದಲ್ಲಿರೋದು ಮಾರ್ಕೆಟಿಂಗ್ ಸರ್ಕಾರ- ಜೆಡಿಎಸ್​ ಸಮಾವೇಶದಲ್ಲಿ ದೇವೇಗೌಡರ ಗುಡುಗು 4. ಸೂಪರ್​​ ಸ್ಟಾರ್ ಬರ್ತಡೇಗೆ ಬಿಎಸ್​ವೈ ವಿಶ್- ಧನ್ಯವಾದ ತಿಳಿಸಿದ ತಲೈವಾ- ಥ್ಯಾಂಕ್ಯೂ ಯಡಿಯೂರಪ್ಪ ಜೀ ಎಂದು ರಜನಿ ಟ್ವೀಟ್ 5. ಅಬ್ಬರಿಸಿ ಬೊಬ್ಬಿರಿದ ರೋಹಿತ್ ಶರ್ಮಾ- ಮೊಹಾಲಿಯಲ್ಲಿ ವಿಶ್ವ ಕ್ರಿಕೆಟ್​ ದಾಖಲೆಗಳೆಲ್ಲಾ ಪೀಸ್​​​ಪೀಸ್​- 3ನೇ ದ್ವಿಶತಕ ಸಿಡಿಸಿದ ರೋಹಿತ್​
Breaking News :

ಫೈನಲ್​ಗೆ ಲಗ್ಗೆಯಿಟ್ಟ ಮುಂಬೈ ಇಂಡಿಯನ್ಸ್

Saturday, 20.05.2017, 3:02 AM       No Comments

| ಪ್ರಸಾದ್ ಶೆಟ್ಟಿಗಾರ್

ಬೆಂಗಳೂರು: ಲೀಗ್ ಹಂತದ ಅಗ್ರಸ್ಥಾನಿ ಮುಂಬೈ ಇಂಡಿಯನ್ಸ್ ತಂಡ ಫೈನಲ್​ಗೇರುವ ಮೊದಲ ಅವಕಾಶ ಕೈಚೆಲ್ಲಿದರೂ 2ನೇ ಅವಕಾಶದಲ್ಲಿ ಯಶ ಸಾಧಿಸಿದೆ. ಮಳೆ ಭೀತಿಯ ನಡುವೆಯೇ ಸಾಗಿದ ಐಪಿಎಲ್-10ರ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಕೋಲ್ಕತ ನೈಟ್​ರೈಡರ್ಸ್ ತಂಡ ರನ್​ಬರ ಎದುರಿಸುವಂಥ ಬಿಗಿ ಬೌಲಿಂಗ್ ನಿರ್ವಹಣೆ ತೋರಿದ ಮುಂಬೈ ತಂಡ 6 ವಿಕೆಟ್ ಗೆಲುವು ದಾಖಲಿಸಿತು. ಈ ಮೂಲಕ ರೋಹಿತ್ ಶರ್ಮ ಪಡೆ 4ನೇ ಬಾರಿಗೆ ಐಪಿಎಲ್ ಫೈನಲ್ ಪ್ರವೇಶಿಸಿದರೆ, ಗೌತಮ್ ಗಂಭೀರ್ ಬಳಗ ಮೂರನೇ ಸ್ಥಾನಕ್ಕೆ ಸಮಾಧಾನಪಟ್ಟಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ‘ಸೆಮಿಫೈನಲ್’ ಮಹತ್ವದ ಪ್ಲೇಆಫ್ ಪಂದ್ಯದಲ್ಲಿ ಅದೃಷ್ಟದ ಟಾಸ್ ಒಲಿಸಿಕೊಂಡ ಮುಂಬೈ ನಾಯಕ ರೋಹಿತ್ ಶರ್ಮ ನಿರೀಕ್ಷೆಯಂತೆಯೇ ಫೀಲ್ಡಿಂಗ್ ಆಯ್ದುಕೊಂಡರು. ಯಾರ್ಕರ್ ವೇಗಿ ಜಸ್​ಪ್ರೀತ್ ಬುಮ್ರಾ (7ಕ್ಕೆ 3) ಮತ್ತು ಎಡಗೈ ಲೆಗ್ ಸ್ಪಿನ್ನರ್ ಕರ್ಣ್ ಶರ್ಮ (16ಕ್ಕೆ 4) ಮಾರಕ ಬೌಲಿಂಗ್ ಎದುರು 7 ಓವರ್​ನೊಳಗೇ 5 ವಿಕೆಟ್ ಕಳೆದುಕೊಂಡ ಕೆಕೆಆರ್, ಗೌರವಯುತ ಮೊತ್ತಕ್ಕಾಗಿ ಪರದಾಡುವಂತಾಯಿತು. ಕೊನೆಗೆ 18.5 ಓವರ್​ಗಳಲ್ಲಿ 107 ರನ್​ಗೆ ಕೆಕೆಆರ್ ಸರ್ವಪತನ ಕಂಡಿತು. ಪ್ರತಿಯಾಗಿ ಮುಂಬೈ ತಂಡ 14.3 ಓವರ್​ಗಳಲ್ಲೇ 4 ವಿಕೆಟ್​ಗೆ 111 ರನ್ ಪೇರಿಸಿ ಗೆಲುವು ಒಲಿಸಿಕೊಂಡಿತು.

ಲೀಗ್ ಹಂತದ 2 ಪಂದ್ಯಗಳಲ್ಲೂ ಮುಂಬೈ ಎದುರು ಮುಗ್ಗರಿಸಿದ್ದ ಕೆಕೆಆರ್, 21ನೇ ಮುಖಾಮುಖಿಯಲ್ಲಿ 16ನೇ ಸೋಲನುಭವಿಸಿತು. ಮುಂಬೈ ತಂಡ ಬೆಂಗಳೂರಿನಲ್ಲಿ ಆಡಿದ 10 ಪಂದ್ಯದಲ್ಲಿ 8ನೇ ಗೆಲುವಿನ ಪ್ರಾಬಲ್ಯ ಮೆರೆಯಿತು.

ಮುಂಬೈ ಯಶಸ್ವಿ ಚೇಸಿಂಗ್

ಸಾಧಾರಣ ಸವಾಲು ಎದುರಿದ್ದರೂ ಮುಂಬೈ ತಂಡಕ್ಕೆ ಸರಾಗವಾಗಿ ಮೊತ್ತ ಬೆನ್ನಟ್ಟಲು ಸಾಧ್ಯವಾಗಲಿಲ್ಲ. ಆರಂಭಿಕರಾದ ಲೆಂಡ್ಲ್ ಸಿಮ್ಮನ್ಸ್ (3) ಮತ್ತು ಪಾರ್ಥಿವ್ ಪಟೇಲ್ (14) ಬೇಗನೆ ನಿರ್ಗಮಿಸಿದರೆ, ಅಂಬಟಿ ರಾಯುಡು (6) ಕೂಡ ಸ್ಪಿನ್ನರ್ ಪೀಯುಷ್ ಚಾವ್ಲಾ (34ಕ್ಕೆ 3) ಬಲೆಗೆ ಬಿದ್ದರು. ಇದರಿಂದ ಕೆಕೆಆರ್ ತಿರುಗೇಟು ನೀಡುವ ಸಾಧ್ಯತೆ ಕಾಣಿಸಿದರೂ, ನಾಯಕ ರೋಹಿತ್ ಶರ್ಮ (26 ರನ್, 24 ಎಸೆತ, 1 ಬೌಂಡರಿ, 1 ಸಿಕ್ಸರ್) ಮತ್ತು ಕೃನಾಲ್ ಪಾಂಡ್ಯ (45*ರನ್, 30 ಎಸೆತ, 8 ಬೌಂಡರಿ) ಮುಂಬೈಗೆ ಆಸರೆಯಾಗಿ ನಿಂತು ಚೇಸಿಂಗ್​ಗೆ ಬಲ ತುಂಬಿದರು. ಇವರಿಬ್ಬರು 4ನೇ ವಿಕೆಟ್​ಗೆ 40 ಎಸೆತಗಳಲ್ಲಿ 54 ರನ್ ಸೇರಿಸಿದರ. ಗೆಲುವಿಗೆ 20 ರನ್ ಬೇಕಿದ್ದಾಗ ರೋಹಿತ್ ಎಡವಿದರೂ ಕೈರಾನ್ ಪೊಲ್ಲಾರ್ಡ್ (9*) ಜತೆಗೂಡಿ ಕೃನಾಲ್ ಇನ್ನೂ 5.3 ಓವರ್ ಬಾಕಿ ಇರುವಂತೆಯೇ ಗೆಲುವು ಸಾಧಿಸಿದರು.

ಕೆಕೆಆರ್​ಗೆ ಆರಂಭಿಕ ಆಘಾತ

ಪಂದ್ಯ ನಿಗದಿತ ಸಮಯದಲ್ಲೇ ಆರಂಭಗೊಂಡರೂ ಮಳೆ ಬಂದರೆ ಡಕ್​ವರ್ತ್-ಲೂಯಿಸ್ ಅನ್ವಯವಾಗುವ ಭೀತಿ ಇದ್ದುದರಿಂದ ಕೆಕೆಆರ್​ಗೆ ಟಾಸ್ ಸೋತ ಬಳಿಕ ಆರಂಭ ದಿಂದಲೇ ಬಿರುಸಿನ ಆಟಕ್ಕಿಳಿಯುವ ಒತ್ತಡವಿತ್ತು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಕೆಕೆಆರ್ ಪವರ್​ಪ್ಲೇ ಓವರ್​ಗಳಲ್ಲೇ ಕೇವಲ 25 ರನ್​ಗೆ 3 ವಿಕೆಟ್ ಕಳೆದುಕೊಂಡು ಪರದಾಡಿತು. ಆರಂಭಿಕರಾದ ಕ್ರಿಸ್ ಲ್ಯಾನ್ (4), ಸುನೀಲ್ ನಾರಾಯಣ್ (10) ಜತೆಗೆ ಕನ್ನಡಿಗ ರಾಬಿನ್ ಉತ್ತಪ್ಪ (1) ಬೇಗನೆ ಔಟಾದರು. ಬಳಿಕ ಕರ್ಣ್ ಶರ್ಮ ಎಸೆದ ಇನಿಂಗ್ಸ್​ನ 7ನೇ ಓವರ್​ನಲ್ಲಿ ನಾಯಕ ಗೌತಮ್ ಗಂಭೀರ್ (12), ಗ್ರಾಂಡ್​ಹೋಮ್ (0) ಸತತ 2 ಎಸೆತ ಗಳಲ್ಲಿ ಔಟಾಗಿದ್ದು ಕೆಕೆಆರ್ ಸಂಕಷ್ಟ ಹೆಚ್ಚಿಸಿತು.

ಪ್ರಶಸ್ತಿ ಸುತ್ತಿನಲ್ಲಿ ಮಹಾರಾಷ್ಟ್ರ ಡರ್ಬಿ!

ಎರಡು ಬಾರಿಯ ಚಾಂಪಿಯನ್ ಮುಂಬೈ ತಂಡ ಭಾನುವಾರ ಹೈದರಾಬಾದ್​ನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಪುಣೆ ಸೂಪರ್​ಜೈಂಟ್ ತಂಡವನ್ನು ಎದುರಿಸಲಿದೆ. 3 ಬಾರಿ ದಕ್ಷಿಣ ಭಾರತೀಯ ತಂಡಗಳ ಪ್ರಶಸ್ತಿ ಮುಖಾಮುಖಿ ಕಂಡಿರುವ ಐಪಿಎಲ್​ನಲ್ಲಿ ಮೊದಲ ಬಾರಿ ಒಂದೇ ರಾಜ್ಯ 2 ತಂಡಗಳು ಫೈನಲ್ ಆಡಲಿವೆ. ಟೂರ್ನಿಯಲ್ಲಿ ಮಹಾರಾಷ್ಟ್ರ ಬಿಟ್ಟರೆ ಬೇರೆ ರಾಜ್ಯಗಳಿಗೆ ಅಂಥ ಅದೃಷ್ಟವೂ ಇಲ್ಲ ಎಂಬುದು ಬೇರೆ ಮಾತು.

ಕೊನೆಯಲ್ಲಿ ಮತ್ತೆ ಕುಸಿತ

ಸ್ಲಾಗ್ ಓವರ್​ನಲ್ಲಾದರೂ ಕೆಕೆಆರ್ ರನ್​ಬರ ನೀಗಬಹುದು ಎಂಬ ನಿರೀಕ್ಷೆಯೂ ಹುಸಿಯಾಯಿತು. ಕೇವಲ 13 ರನ್ ಅಂತರದಲ್ಲಿ ಕೆಕೆಆರ್ ಕೊನೇ 4 ವಿಕೆಟ್ ಕಳೆದುಕೊಂಡು 20 ಓವರ್ ಪೂರ್ತಿ ಆಡಲು ಕೂಡ ವಿಫಲಗೊಂಡಿತು.

ಸೂರ್ಯ-ಇಶಾಂಕ್ ಚೇತರಿಕೆ

31 ರನ್​ಗೆ 5 ವಿಕೆಟ್ ಕಳೆದುಕೊಂಡ ಈ ದುಸ್ಥಿತಿಯಿಂದ ಕೆಕೆಆರ್ ನೂರರ ಗಡಿ ದಾಟುವುದೇ ಅನುಮಾನವೆನಿಸಿದ್ದ ಸಮಯದಲ್ಲಿ ಜತೆಗೂಡಿದ ದೇಶೀಯ ಕ್ರಿಕೆಟಿಗರಾದ ಸೂರ್ಯಕುಮಾರ್ ಯಾದವ್ (31 ರನ್, 25 ಎಸೆತ, 2 ಬೌಂಡರಿ, 1 ಸಿಕ್ಸರ್) ಮತ್ತು ಇಶಾಂಕ್ ಜಗ್ಗಿ (28 ರನ್, 31 ಎಸೆತ, 3 ಬೌಂಡರಿ) ಅರ್ಧಶತಕದ ಜತೆಯಾಟದೊಂದಿಗೆ ಒಂದಿಷ್ಟು ಚೇತರಿಕೆ ತಂದರು. ಇವರಿಬ್ಬರು 6ನೇ ವಿಕೆಟ್​ಗೆ 47 ಎಸೆತಗಳಲ್ಲಿ 56 ರನ್ ಪೇರಿಸಿದರು. ಇನಿಂಗ್ಸ್​ನ 15ನೇ ಹಾಗೂ ತಮ್ಮ ಕೊನೇ ಓವರ್​ನಲ್ಲಿ ಕರ್ಣ್ ಶರ್ಮ ಅವರೇ ಈ ಜತೆಯಾಟ ಮುರಿದರು. ಕರ್ಣ್ ಎಸೆತದಲ್ಲಿ ಇಶಾಂಕ್, ಲಾಂಗ್​ಆನ್ ಬಳಿ ಮಿಚೆಲ್ ಜಾನ್ಸನ್ ಹಿಡಿದ ಉತ್ತಮ ಕ್ಯಾಚ್​ಗೆ ಔಟಾದರು. ನಂತರ ಸ್ಲಾಗ್ ಓವರ್​ನಲ್ಲಾದರೂ ಕೆಕೆಆರ್ ರನ್​ಬರ ನೀಗಬಹುದು ಎಂಬ ನಿರೀಕ್ಷೆಯೂ ಹುಸಿಯಾಯಿತು. ಕೇವಲ 13 ರನ್ ಅಂತರದಲ್ಲಿ ಕೆಕೆಆರ್ ಕೊನೇ 4 ವಿಕೆಟ್ ಕಳೆದುಕೊಂಡು 20 ಓವರ್ ಪೂರ್ತಿ ಆಡಲು ಕೂಡ ವಿಫಲಗೊಂಡಿತು.

ಅವಕಾಶ ಹಾಳುಮಾಡಿಕೊಂಡೆವು..

ಫೈನಲ್​ಗೇರುವ ಪ್ರಮುಖ ಅವಕಾಶ ಹಾಳು ಮಾಡಿಕೊಂಡಿದ್ದಕ್ಕೆ ನಿರಾಸೆಯಾಗಿದೆ. ಆರಂಭದಲ್ಲಿಯೇ ಹೆಚ್ಚಿನ ವಿಕೆಟ್ ಕಳೆದುಕೊಂಡೆವು. ಸ್ಲಾಗ್ ಓವರ್​ಗಳಲ್ಲಿ ಇನ್ನಷ್ಟು ವಿಕೆಟ್ ಕಳೆದುಕೊಂಡಿದ್ದು ರನ್​ನ ಮೇಲೆ ಪರಿಣಾಮ ಬೀರಿತು. ಸಂಪೂರ್ಣ ಆವೃತ್ತಿಯಲ್ಲಿ ನಮ್ಮ ಆಟಗಾರರು ವೃತ್ತಿಪರವಾಗಿ ಆಡಿದರು.

| ಗೌತಮ್ ಗಂಭೀರ್ ಕೆಕೆಆರ್ ತಂಡದ ನಾಯಕ

 

ಕೆಕೆಆರ್: 18.5 ಓವರ್​ಗಳಲ್ಲಿ107

ಕ್ರಿಸ್ ಲ್ಯಾನ್ ಸಿ ಪೊಲ್ಲಾರ್ಡ್ ಬಿ ಬುಮ್ರಾ 4

ಸುನೀಲ್ ಸ್ಟಂಪ್ಡ್ ಪಾರ್ಥಿವ್ ಬಿ ಕರ್ಣ್ 10

ಗಂಭೀರ್ ಸಿ ಹಾರ್ದಿಕ್ ಬಿ ಕರ್ಣ್ 12

ಉತ್ತಪ್ಪ ಎಲ್​ಬಿಡಬ್ಲ್ಯು ಬಿ ಬುಮ್ರಾ 1

ಇಶಾಂಕ್ ಸಿ ಜಾನ್ಸನ್ ಬಿ ಕರ್ಣ್ 28

ಗ್ರಾಂಡ್​ಹೋಮ್ ಎಲ್​ಬಿಡಬ್ಲ್ಯು ಬಿ ಕರ್ಣ್ 0

ಸೂರ್ಯಕುಮಾರ್ ಸಿ ಮಾಲಿಂಗ ಬಿ ಬುಮ್ರಾ 31

ಪೀಯುಷ್ ಸಿ ರಾಯುಡು ಬಿ ಜಾನ್ಸನ್ 2

ಕೌಲ್ಟರ್ ನಿಲ್ ಸಿ ಹಾರ್ದಿಕ್ ಬಿ ಜಾನ್ಸನ್ 6

ಉಮೇಶ್ ಯಾದವ್ ಔಟಾಗದೆ 2

ಅಂಕಿತ್ ರಜಪೂತ್ ಬಿ ಮಾಲಿಂಗ 4

ಇತರೆ: 7, ವಿಕೆಟ್ ಪತನ: 1-5, 2-24, 3-25, 4-31, 5-31, 6-87, 7-94, 8-100, 9-101. ಬೌಲಿಂಗ್: ಮಿಚೆಲ್ ಜಾನ್ಸನ್ 4-0-28-2, ಜಸ್​ಪ್ರೀತ್ ಬುಮ್ರಾ 3-1-7-3, ಲಸಿತ್ ಮಾಲಿಂಗ 3.5-0-24-1, ಕರ್ಣ್ ಶರ್ಮ 4-0-16-4, ಕೃನಾಲ್ ಪಾಂಡ್ಯ 3-0-25-0, ಹಾರ್ದಿಕ್ ಪಾಂಡ್ಯ 1-0-4-0.

ಮುಂಬೈ ಇಂಡಿಯನ್ಸ್: 14.3

ಓವರ್​ಗಳಲ್ಲಿ 4 ವಿಕೆಟ್​ಗೆ 111

ಸಿಮನ್ಸ್ ಎಲ್​ಬಿಡಬ್ಲ್ಯು ಬಿ ಪೀಯುಷ್ 3

ಪಾರ್ಥಿವ್ ಸಿ ಉತ್ತಪ್ಪ ಬಿ ಉಮೇಶ್ 14

ಅಂಬಟಿ ರಾಯುಡು ಬಿ ಪೀಯುಷ್ 6

ರೋಹಿತ್ ಸಿ ಅಂಕಿತ್ ಬಿ ಕೌಲ್ಟರ್ ನಿಲ್ 26

ಕೃನಾಲ್ ಪಾಂಡ್ಯ ಅಜೇಯ 45

ಕೈರಾನ್ ಪೊಲ್ಲಾರ್ಡ್ ಔಟಾಗದೆ 9

ಇತರೆ: 8, ವಿಕೆಟ್ ಪತನ: 1-11, 2-24, 3-34, 4-88. ಬೌಲಿಂಗ್: ಉಮೇಶ್ 2.3-0-23-1, ಪೀಯುಷ್ 4-0-34-2, ನಾಥನ್ ಕೌಲ್ಟರ್ ನಿಲ್ 3-0-15-1, ಸುನೀಲ್ ನಾರಾಯಣ್ 4-0-21-0, ಅಂಕಿತ್ ರಜಪೂತ್ 1-0-14-0.

Leave a Reply

Your email address will not be published. Required fields are marked *

Back To Top