Wednesday, 22nd November 2017  

Vijayavani

1. ಉಗ್ರನ ವಿರುದ್ಧ ಕೊಡಲಿಲ್ಲ ಪಾಕ್ ಸಾಕ್ಷ್ಯ – LET ಕ್ರಿಮಿ ಹಫೀಜ್ ಸಯೀದ್​ಗೆ ಕ್ಲೀನ್​ಚಿಟ್ – ಮನೆಯಿಂದ ಹೊರಬರ್ತಾನೆ ಮುಂಬೈ ದಾಳಿ ಮಾಸ್ಟರ್ ಮೈಂಡ್ 2. ಅಲೆಮಾರಿಗಳ ಮನೆ ತೆರವು ವೇಳೆ ಅಮಾನವೀಯ ವರ್ತನೆ – ನಡುರಸ್ತೆಯಲ್ಲಿ ಮಹಿಳೆಗೆ ಹೆರಿಗೆ – ದಿಗ್ವಿಜಯ ನ್ಯೂಸ್​ ವರದಿಗೆ ಡಿಸಿ ಸ್ಪಂದನೆ 3. ಹೆರಿಗೆ ವೇಳೆ ಮೃತಪಟ್ಟಿದ್ದಾಳೆ ಅಂದ್ರು ಡಾಕ್ಟರ್ಸ್​ – ಅಂತ್ಯ ಸಂಸ್ಕಾರದ ವೇಳೆ ಕಣ್ಣು ಬಿಟ್ಲಂತೆ ಬಾಣಂತಿ – ಮನೆಗೆ ತರೋವಷ್ಟರಲ್ಲಿ ಮತ್ತೆ ಸಾವಿನ ದರ್ಶನ 4. ಕೊಪ್ಪಳ ಜಿಲ್ಲಾಪ್ರವಾಸದಲ್ಲಿ ಎಚ್​ಡಿಡಿ – ಗವಿಮಠಕ್ಕೆ ಮಾಜಿ ಪ್ರಧಾನಿ ಭೇಟಿ – ಇಳಿವಯಸ್ಸಿನಲ್ಲೂ ಕಿಂಡಿಯಲ್ಲೆ ತೆರಳಿ ದರ್ಶನ 5. ಯೂರ್ಟನ್​ ವೇಳೆ ಕಾರಿಗೆ ಲಾರಿ ಡಿಕ್ಕಿ – ಡಿಕ್ಕಿ ಹೊಡೆದ ಲಾರಿಗೆ ಟ್ರಕ್ ಡ್ಯಾಶ್ – ಸೌದಿ ಹೈವೇಯಲ್ಲಿ ಹಾರಿಬಲ್ ಆಕ್ಸಿಡೆಂಟ್
Breaking News :

ಫೇಸ್​ಬುಕ್ ಬಳಕೆ ಹೆಚ್ಚಾದರೆ ಮಿದುಳಿನಲ್ಲಿ ಅಸಮತೋಲನ

Tuesday, 21.03.2017, 7:45 AM       No Comments

ತಂತ್ರಜ್ಞಾನ ಬೆಳೆದಂತೆ ಸಾಮಾಜಿಕ ಜಾಲತಾಣಗಳ ಪ್ರಭಾವ ಯುವಜನತೆ ಮೇಲೆ ಊಹಿಸಲಾಗದ ಮಟ್ಟಿಗೆ ಪರಿಣಾಮ ಬೀರಿದೆ. ಸಾಮಾಜಿಕ ಜಾಲತಾಣ ಪೈಕಿ ಅತಿ ಖ್ಯಾತಿಹೊಂದಿರುವ ಫೇಸ್​ಬುಕ್ ಬಳಕೆಯಿಂದ ಮಾನಸಿಕ ನೆಮ್ಮದಿ ಅಷ್ಟೆ ಅಲ್ಲದೇ ಮಿದುಳಿನ ಸಮತೋಲನವನ್ನು ಹಾಳುಮಾಡುತ್ತದೆ ಎಂದು ಅಮೆರಿಕ ಮೂಲದ ಡಿಪೌಲ್ ವಿಶ್ವವಿದ್ಯಾಲಯದ ಸಂಶೋಧಕರು ತಿಳಿಸಿದ್ದಾರೆ.

ಮಿದುಳಿಗೆ ಒಂದೇ ಕೆಲಸ ನೀಡಿದರೆ ಅದು ಸರಿಯಾಗಿ ಮಾಡುತ್ತೆ. ಕಾರ್ ಚಲಾಯಿಸುವಾಗ ಫೇಸ್​ಬುಕ್ ಬಳಕೆ ಮಾಡುವುದು, ಸಭೆ ಸಮಾರಂಭಗಳಲ್ಲಿ ಭಾಗವಹಿಸಿದಾಗ ಫೇಸ್​ಬುಕ್ ವೀಕ್ಷಣೆಯಿಂದ ಕಾರ್ಯದ ಕಡೆ ಗಮನವಿರುವುದಿಲ್ಲ. ಇದರಿಂದ ಮಿದುಳಿನಲ್ಲಿ ಅಸಮತೋಲನ ಉಂಟಾಗುವ ಸಾಧ್ಯತೆ ಇರುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಇದಕ್ಕಾಗಿಯೇ ವಿವಿಧ ಕಾಲೇಜುಗಳ ಫೇಸ್​ಬುಕ್ ಬಳಕೆ ಮಾಡುವ ಮತ್ತು ಮಾಡದ 341 ಪದವಿಪೂರ್ವ ವಿದ್ಯಾರ್ಥಿಗಳನ್ನು ಈ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿತ್ತು. ಫೇಸ್​ಬುಕ್ ಬಳಕೆ ಮಾಡುವವರಲ್ಲಿ ಇಂತಹ ಚುರುಕುತನ, ಗ್ರಹಿಸುವಿಕೆಯಲ್ಲಿ ನಿಧಾನತೆ ಕಂಡುಬಂದಿತ್ತು.

– ಪಿಟಿಐ

Leave a Reply

Your email address will not be published. Required fields are marked *

Back To Top