Friday, 20th April 2018  

Vijayavani

ಬಿಜೆಪಿ ಅಭ್ಯರ್ಥಿಗಳ 3 ನೇ ಪಟ್ಟಿ ರಿಲೀಸ್​- 59 ಅಭ್ಯರ್ಥಿಗಳ ಹೆಸರು ಪ್ರಕಟ- ವರುಣಾ, ಬಾದಾಮಿ ಇನ್ನೂ ನಿಗೂಢ        ಜೆಡಿಎಸ್​ನಿಂದ ಸೆಕೆಂಡ್​ ಲಿಸ್ಟ್​ ರಿಲೀಸ್​- ಕೈ, ಕಮಲ ರೇಬಲ್​ಗಳಿಗೆ ಮಣೆ- 57 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ        ಎಚ್​ಡಿಕೆ ಆಸ್ತಿ ವಿವರ ಘೋಷಣೆ- ಕುಮಾರಸ್ವಾಮಿ 12 ಕೋಟಿ ಒಡೆಯ- ಗುತ್ತೇದಾರ್​ಗಿಂತ ಪತ್ನಿ ಶ್ರೀಮಂತೆ        ನಟಿ ಉಮಾಶ್ರೀ ಆಸ್ತಿ ವಿವರ ಘೋಷಣೆ- ಸಾಕವ್ವ 1 ಕೆ.ಜಿ ಚಿನ್ನಾಭರಣದ ಒಡತಿ- ಅವಲಂಬಿತರು ಯಾರು ಇಲ್ಲವೆಂದು ಪ್ರಮಾಣಪತ್ರ        ಚಾಮುಂಡೇಶ್ವರಿಯಲ್ಲಿ ಸಿಎಂ, ವರುಣಾದಲ್ಲಿ ಯತೀಂದ್ರ- ಅಪ್ಪ-ಮಗ ನಾಮಪತ್ರ ಸಲ್ಲಿಕೆ- ಭಾರಿ ಬೆಂಬಲಿಗರ ಜತೆ ತೆರಳಿ ನಾಮಿನೇಷನ್​​​​​​        ಬೆಂಗಳೂರಿನಲ್ಲಿ ಗಾಳಿ ಸಹಿತ ಮಳೆ- ಮನೆಗೆ ಹೋಗಲು ವರುಣನ ಅಡ್ಡಿ- ಸಂಜೆಯ ಮಳೆಗೆ ವಾಹನ ಸವಾರರು ಕಂಗಾಲು       
Breaking News

ಪ್ರೊಸ್ಟೇಟ್ ಸಮಸ್ಯೆಗಳೆಲ್ಲ ಕ್ಯಾನ್ಸರ್ ಅಲ್ಲ

Tuesday, 17.04.2018, 3:00 AM       No Comments

| ಡಾ. ವಸುಂಧರಾ ಭೂಪತಿ

ನನಗೆ 50 ವರ್ಷ. ನನಗೆ 5 ವರ್ಷಗಳ ಹಿಂದೆ ಪ್ರೊಸ್ಟೇಟ್ ಆಪರೇಷನ್ ಆಗಿದೆ. ಈಗ ಆ ಸಮಸ್ಯೆಯನ್ನು ಪ್ರೊಸ್ಟೇಟ್ ಕ್ಯಾನ್ಸರ್ ಎಂಬುದಾಗಿ ಪತ್ರಿಕೆಗಳಲ್ಲಿ ಬರೆಯುತ್ತಿದ್ದಾರೆ. ಇದರಿಂದ ಭಯವಾಗುತ್ತಿದೆ. ಆದರೆ, ನನಗೆ ಆಪರೇಷನ್ ಆದಾಗ ಕ್ಯಾನ್ಸರ್ ಇಲ್ಲ ಎಂದು ವೈದ್ಯರು ಹೇಳಿದ್ದರು. ಈಗ ಯಾವುದೇ ಔಷಧ ಕೊಟ್ಟಿಲ್ಲ. 2 ದಿನಕ್ಕೊಮ್ಮೆ ಒಂದು ಟ್ಯೂಬ್ ಬಳಕೆ ಮಾಡಲು ಕೊಟ್ಟಿದ್ದು, ವೈದ್ಯರ ಸಲಹೆಯಂತೆ ನಡೆದುಕೊಳ್ಳುತ್ತಿದ್ದೇನೆ. ಆದರೆ, ನನಗೆ ಆಪರೇಷನ್ ಆದಾಗಿನಿಂದಲೂ ಸೆಕ್ಸ್ ಶಕ್ತಿ ಇಲ್ಲ. ಜತೆಗೆ, ಕೈಕಾಲುಗಳ ಜಾಯಿಂಟ್​ನಲ್ಲಿ ನೋವು ತುಂಬ ಇದೆ. ಸಕ್ಕರೆ ಕಾಯಿಲೆಗೆ ಮಾತ್ರೆ ತೆಗೆದುಕೊಳ್ಳುತ್ತಿದ್ದೇನೆ. ಇವೆರಡು ಸಮಸ್ಯೆಗೆ ಪರಿಹಾರ ಹೇಳಿ.

| ನರಸಿಂಹಣ್ಣ

ಪ್ರೊಸ್ಟೇಟ್ ಶಸ್ತ್ರಚಿಕಿತ್ಸೆಗೂ ಲೈಂಗಿಕ ದೌರ್ಬಲ್ಯಕ್ಕೂ ಸಂಬಂಧವಿಲ್ಲ. ಲೈಂಗಿಕ ದೌರ್ಬಲ್ಯ ಬೇರೆ ಕಾರಣದಿಂದ ಉಂಟಾಗಿರಬಹುದು. ಅಲ್ಲದೆ, ಪ್ರೊಸ್ಟೇಟ್ ಸಮಸ್ಯೆ ಎಲ್ಲವೂ ಕ್ಯಾನ್ಸರ್ ಆಗಿರುವುದಿಲ್ಲ. ನೀವು ಅನಗತ್ಯ ಚಿಂತಿಸುತ್ತಿದ್ದೀರಿ. ಪ್ರೊಸ್ಟೇಟ್ ಗ್ರಂಥಿ ವಯೋಸಹಜವಾಗಿ ದೊಡ್ಡದಾಗಿರುತ್ತದೆ. ನಿಮಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು ಭರವಸೆ ಕೊಟ್ಟ ಮೇಲೆ ಇನ್ನೇಕೆ ಭಯ? ಮನಸ್ಸಿನಲ್ಲಿರುವ ಆತಂಕ, ಗಾಬರಿ ತೆಗೆದುಹಾಕಿ. ಸದ್ಯ, ಅಶ್ವಗಂಧಾರಿಷ್ಟ ಮತ್ತು ಬಲಾರಿಷ್ಟವನ್ನು ದಿನಕ್ಕೊಂದು ಬಾರಿ 4 ಚಮಚೆಯಷ್ಟು ನೀರು ಬೆರೆಸಿ ಊಟದ ನಂತರ ಸೇವಿಸಿ. 6-8 ಬಾದಾಮಿಗಳನ್ನು ರಾತ್ರಿ ಕುಡಿಯುವ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ತಿನ್ನಿ. ಮೊಸರು, ತುಪ್ಪ ಮತ್ತು ಉದ್ದಿನಬೇಳೆಯಿಂದ ತಯಾರಿಸಿದ ಆಹಾರ ಪದಾರ್ಥ ಸೇವಿಸಿ. ನಿಯಮಿತವಾಗಿ ವ್ಯಾಯಾಮ ಮಾಡಿ. 3 ಲೀಟರ್ ನೀರು ಕುಡಿಯಿರಿ. ಮನಸ್ಸಿನ ಸಮಾಧಾನಕ್ಕೆ ಸಂಗೀತ, ಸಾಹಿತ್ಯ, ಧ್ಯಾನ ಸಹಕಾರಿ. ನಿಮಿರು ದೌರ್ಬಲ್ಯ ಸರಿಪಡಿಸಿಕೊಂಡಲ್ಲಿ ಲೈಂಗಿಕ ಕ್ರಿಯೆ ಸುಲಭವಾಗುತ್ತದೆ.

ನಾನು ಆಥ್ರೖೆಟಿಸ್​ನಿಂದ (ಮಂಡಿ ನೋವು) ಬಳಲುತ್ತಿದ್ದೇನೆ. ನನಗೆ ಸಾಮಾನ್ಯವಾಗಿ ಎಲ್ಲ ಸಮಯದಲ್ಲೂ ನೋವಿರುತ್ತದೆ. ಯಾವ ಮಾದರಿಯ ಆಹಾರ ಸೂಕ್ತ?

| ಮೃತ್ಯುಂಜಯ ಪಾಟೀಲ್

ನಿಮಗೆ ಮಂಡಿನೋವು ಸಂಧಿವಾತದ ಕಾರಣದಿಂದ ಉಂಟಾಗಿರುತ್ತದೆ. ನೀವು ಆಹಾರದಲ್ಲಿ ವಾತಪ್ರಕೋಪ ಮಾಡುವಂತಹ ಅಂದರೆ, ಅಲಸಂದೆ, ಅವರೆಕಾಳು, ಆಲೂಗಡ್ಡೆ ಮುಂತಾದವುಗಳನ್ನು ಹೆಚ್ಚು ತಿನ್ನಬೇಡಿ. ಹೆಸರುಬೇಳೆ ಬೇಯಿಸಿ ಕಟ್ಟು ತೆಗೆದು ಅದಕ್ಕೆ ಜೀರಿಗೆ, ಉಪ್ಪು ಬೆರೆಸಿ ಕುಡಿಯಬೇಕು. ಇದೇ ರೀತಿ, ಹುರುಳಿ ಬೇಯಿಸಿ, ಕಟ್ಟು ತೆಗೆದು ಕುಡಿಯುತ್ತಿದ್ದಲ್ಲಿ ನೋವು ಶಮನವಾಗುತ್ತದೆ. ಇದಲ್ಲದೆ, ಕಂದ ಪದಾರ್ಥಗಳ ಸೇವನೆಯೂ ಬೇಡ. ರಾತ್ರಿ ಮಲಗುವ ಮುಂಚೆ ಮತ್ತು ಬೆಳಗ್ಗೆ ಎದ್ದ ತಕ್ಷಣ ಬಿಸಿನೀರು ಕುಡಿಯುವ ರೂಢಿ ಮಾಡಿಕೊಳ್ಳಿ. ಪ್ರತಿದಿನ ಎಳ್ಳೆಣ್ಣೆಯಲ್ಲಿ ಕರ್ಪರ ಬೆರೆಸಿ ಬಿಸಿ ಮಾಡಿ ಆರಿಸಿ, ಮಂಡಿಗೆ ಹಚ್ಚಿ ನೀವಿಕೊಂಡು ಶಾಖ ತೆಗೆದುಕೊಳ್ಳಬೇಕು. ಸ್ನಾನ ಮಾಡುವಾಗ ನೋವಿರುವ ಭಾಗಕ್ಕೆ ಒಮ್ಮೆ ಬಿಸಿನೀರು, ತಣ್ಣೀರು, ಮತ್ತೆ ಬಿಸಿನೀರು-ತಣ್ಣೀರು ಹೀಗೆ ಹತ್ತಿಪ್ಪತ್ತು ಬಾರಿ ಹಾಕಿಕೊಳ್ಳಬೇಕು. ಪ್ರತಿದಿನ ನಡಿಗೆ ಇಲ್ಲವೇ ಕೆಲವು ಸರಳ ವ್ಯಾಯಾಮ ಮಾಡಿ. ಸಕ್ಕರೆ ಕಾಯಿಲೆ ಇದ್ದಲ್ಲಿ ಪಥ್ಯ, ಔಷಧ ಸೇವನೆ ನಿಯಮಿತವಾಗಿ ಮಾಡುತ್ತ ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕು.

Leave a Reply

Your email address will not be published. Required fields are marked *

Back To Top