Wednesday, 18th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ಪ್ರಶ್ನೆ ಪರಿಹಾರ

Thursday, 12.10.2017, 3:03 AM       No Comments

| ಮಹಾಬಲಮೂರ್ತಿ ಕೊಡ್ಲೆಕೆರೆ

# ಚಿಕ್ಕಂದಿನಿಂದಲೂ ಕಷ್ಟಪಟ್ಟಿದ್ದೇ ಆಯ್ತು. ವಿದ್ಯೆ ತಲೆಗೆ ಹತ್ತಲಿಲ್ಲ. ಮನೆಯ ಕಷ್ಟದಿಂದ, ಎರಡು ಹೊತ್ತಿನ ಊಟದ ಚಿಂತೆಯಿಂದ ಕರೆದ ಮನೆಗೆಲ್ಲ ಹೋಗಿ ಕೂಲಿ ಮಾಡಿ ಬದುಕಿದ್ದೇನೆ. ಈಗ ಹೊರರಾಜ್ಯದಲ್ಲಿ ಒಬ್ಬರು, ‘ತನ್ನ ವಹಿವಾಟು ನೋಡಿಕೋ. ನಿನ್ನ ಕೆಲಸ ಉತ್ತಮವಾದರೆ ಪಗಾರು ನಿರ್ಧರಿಸುತ್ತೇನೆ. ನಿನ್ನ ಊಟ, ತಿಂಡಿ, ವಸತಿ, ಬಟ್ಟೆ, ದಿನದ ಪುಟ್ಟ ಖರ್ಚುವೆಚ್ಚ ನನ್ನ ಜವಾಬ್ದಾರಿ. ಬಾ ನಾನಿರುವಲ್ಲಿಗೆ’ ಎಂದು ಎನ್ನುತ್ತಿದ್ದಾರೆ. ಇಲ್ಲೀಗ ಹೇಗೋ ದಿನ ದೂಡುತ್ತಿದ್ದೇನೆ. ಅಲ್ಲಿ ಹೇಗೋ ತಿಳಿಯದು. ಅವರ ಬಳಿ ಹೋಗಲೆ? ಒಳಿತಿದೆಯೇ?

| ವಿಶ್ವ ರಾಷ್ಟ್ರಕೂಟ, ಮೈಸೂರು

ಹಿಂದೆಮುಂದೆ ನೋಡಬೇಡಿ. ಜಾತಕದಲ್ಲಿ ಬದುಕಿನ ಮಹತ್ವದ ತಿರುವು ಸಿಗುತ್ತಿದೆ. ಬಹಳಷ್ಟು ಎತ್ತರಕ್ಕೆ ಏರಿಸಲಿರುವ, ಜೀವಮಾನದಲ್ಲಿ ಬಹುಮುಖ್ಯವಾದ ಭೂಮಿಕೆ ವಹಿಸುವ ವ್ಯಕ್ತಿ ಸಿಕ್ಕಿದ್ದಾರೆ. ಮನೆಯ ದೇವರನ್ನು ಸನ್ಮಂಗಳಕಾರಕನಾದ ಸದ್ಗುರು ದತ್ತನನ್ನು ಆರಾಧಿಸಿ, ಅವರಿದ್ದಲ್ಲಿಗೆ ಹೊರಡಿ. ನಿಮ್ಮ ಪ್ರಾಮಾಣಿಕತೆಗೆ ಸಿದ್ಧಿ ಸಿಗಲಿದೆ. ವಿನಯವನ್ನು ಕಾಪಾಡಿಕೊಳ್ಳಿ. ಉಳಿದುದನ್ನು ನಿಮ್ಮ ಜಾತಕದ ಚಂದ್ರ ನೋಡಿಕೊಳ್ಳುತ್ತಾನೆ.

# ಹೇಗೆ ಎಂಜಿನಿಯರಿಂಗ್ ಮುಗಿಸಿದೆ ಎಂಬುದು ತಿಳಿಯುತ್ತಿಲ್ಲ. ಯಾರ್ಯಾರದೋ ಸಹಾಯ ನಮ್ಮ ಅಪ್ಪನಿಗೆ ಸಿಕ್ಕಿತು. ಬಿ.ಇ. ಮುಗಿಸಿದ್ದೀನೆ. ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸವಿದೆ. ರಾಮೇಶ್ವರಂಗೆ ಹೋದಾಗ ಒಬ್ಬ ಹುಡುಗ ಭೇಟಿಯಾದ. ಅದೇನು ಅನಿಸಿತೋ ದೇವರ ಸ್ಥಳದಲ್ಲಿ ಅವನ ಬಗೆಗೆ ನನಗೆ ವಿಶ್ವಾಸ ಹುಟ್ಟಿಸಿತು. ‘ಮಾಡೆಲಿಂಗ್ ಕ್ಷೇತ್ರ ಪ್ರವೇಶಿಸು. ಉತ್ತಮ ಅವಕಾಶ, ಹೆಸರು, ಪ್ರಖ್ಯಾತಿ ಕೊಡಿಸುತ್ತೇನೆ’ ಎಂದು ವಿನಂತಿಸುತ್ತಿದ್ದಾನೆ. ಇರುವ ಕೆಲಸ ಬಿಡಲು ಇಷ್ಟವಿಲ್ಲ. ‘ತನ್ನ ಬದುಕಿನ ಹೊಸ ವಿಸ್ತಾರ ನಿನ್ನಿಂದ ಸಿಗಲಿದೆ. ಗೆಲುವಿನ ದೊಡ್ಡ ರೀತಿಯ ಚೌಕಟ್ಟಿನಲ್ಲಿ ಹೊಸದನ್ನು ಶುರು ಮಾಡೋಣ’ ಎಂದು ಒತ್ತಾಸೆಯಿಂದ ಕೇಳುತ್ತಿದ್ದಾನೆ. ಕೆಲಸ ಬಿಡಲೆ?

| ವಿನುತಾ ರಾಮಕೃಷ್ಣ, ರಾಮಪುರ, ವೆಲ್ಲೋರ್

ಈಗ ನಿಮ್ಮ ಜಾತಕಕುಂಡಲಿ ಮಾತ್ರ ಇದೆ. ಹುಡುಗನ ಬಗೆಗೆ ನಿಮ್ಮಲ್ಲಿ ವಿಶ್ವಾಸ ಹುಟ್ಟಿದೆ ಎಂಬ ಮಾತಿನ ವಿನಾ ಬೇರೆ ಏನನ್ನೂ ತಿಳಿಸಲು ಆಧಾರಗಳ ಕೊರತೆ ಇದೆ. ನಿಮ್ಮ ರಾಹು ಈಗ ವರ್ತಮಾನದ ಸಂದರ್ಭದಲ್ಲಿ ಪ್ರಖರತೆ ಪಡೆದಿದ್ದಾನೆ ಎಂಬುದು ಸತ್ಯವಾದರೂ ಮನಸ್ಸು, ದೇಹ ಹೀಗೆ (ಒಂದೇ ವ್ಯಕ್ತಿಯದ್ದಾದರೂ) ಒಂದರಿಂದ ಇನ್ನೊಂದನ್ನು ಬೇರ್ಪಡಿಸಿ ಅಸಮತೋಲನ ತಂದುಬಿಡುವ ಶನಿಯ ಸಾಡೇಸಾತಿ ಕಾಟವಿದೆ. ಶಶಿಮಂಗಳ ಯೋಗವಿದೆ. ಆದರೂ ಗುರುದೃಷ್ಟಿ ಸಮಾಧಾನಕರ ವಿಚಾರ. ಏನೇ ಇದ್ದರೂ ರಜೆ ಹಾಕಿ ವಿಚಾರ ಗಮನಿಸಿಕೊಂಡು ಬನ್ನಿ. ನೇರ ರಾಜೀನಾಮೆ ಬಿಸಾಡದಿರಿ. ಮನಸ್ಸಿನಲ್ಲಿ ಗರಿಗೆದರಿದ ಉತ್ಸಾಹಕ್ಕೆ ತಣ್ಣೀರು ಎರಚುವ ಶನೈಶ್ಚರನ ಬಗೆಗೆ ಎಚ್ಚರ ಇರಲಿ. ನಿಭಾಯಿಸಿ, ನಿಯಂತ್ರಿಸಿ. ಹುಡುಗನನ್ನು ಎಂಬುದಕ್ಕಿಂತ ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳಿ. ರಾಮರಕ್ಷಾಸ್ತೋತ್ರ ಓದಿ. ಚಾಮುಂಡಿ ಸಹಸ್ರನಾಮಾವಳಿ ಓದಿ.

# ಮೊದಲನೇ ಮದುವೆ ಪ್ರೀತಿಸಿ ಆದದ್ದು. ಎರಡನೆಯದು ಜಾತಕಗಳ ಹೊಂದಾಣಿಕೆ ಮಾಡಿಸಿ ತಂದೆ ತಾಯಿ ಒಪ್ಪಿಸಿ ಆದ ಸಾಂಪ್ರದಾಯಿಕ ಮದುವೆ. ಮಗುವೂ ಎರಡನೆಯ ಗಂಡನಿಂದ ಪಡೆದುದಾಗಿದೆ. ಯಾಕೋ ಎಲ್ಲವೂ ಸರಿ ಇಲ್ಲ. ಎರಡನೇ ಗಂಡನಿಂದ ಸಿಡಿದು ಹೊರಬರಲು ಕರುಳಕೂಸು ತಡೆ ಎನ್ನುವಂತಾಗಿದೆ. ಮಗುವಿನ ಬಗೆಗೆ ಪ್ರೀತಿ, ಆದರೆ ದಾಂಪತ್ಯದಿಂದ ಕಿರಿಕಿರಿ. ಹೊಂದಿಕೊಳ್ಳಲಾಗುತ್ತಿಲ್ಲ. ಪರಿಹಾರ ಇದೆಯೇ?

| ವೆಂಕಟಲಕ್ಷ್ಮಿ ರಂಗನಾಥ, ಬೆಂಗಳೂರು

ಪರಿಹಾರವೇನು ಎಂದು ಕೇಳುತ್ತ ಅಳಲು ತೋಡಿಕೊಂಡಿದ್ದೀರಿ. ಪರಿಹಾರಗಳ ಬಗೆಗಿನ ಸಾಲಲ್ಲಿ ನಂಬರ್ ಒನ್ ಏನು ಎಂಬುದನ್ನು ಅಪ್ರತ್ಯಕ್ಷವಾಗಿ ಕರುಳ ಕೂಸೇ ಕೊಡುತ್ತಿದೆ. ಮಗುವಿಗಾಗಿ ಹೊಂದಾಣಿಕೆ ಅನಿವಾರ್ಯ. ಜ್ಯೋತಿಷಿಯು ಮನಃಶಾಸ್ತ್ರಜ್ಞನಾಗಿ ನಿಮಗೆ ಕೆಲವು ಸಲಹೆಗಳನ್ನು ಕೊಡುವುದು ಎರಡನೆಯ ಪರಿಹಾರ. ಕೆಲವರ ಜಾತಕದಲ್ಲಿ (ನೇರವಾಗಿ ಹೇಳುವುದಾದರೆ ಈಗ ಕಳಿಸಿದ ನಿಮ್ಮ ಜಾತಕದಲ್ಲೂ) ರಾಹುವಿನ ಸಮಸ್ಯೆ ದೊಡ್ಡದಿದೆ. ಕುಜಚಂದ್ರರ ಕಾರಣದಿಂದ ನಿಮ್ಮ ಪತಿಯ ಜಾತಕದಲ್ಲಿ ‘ನಾನು’ ಎಂಬ ವಿಚಾರ – ವಿಸ್ತಾರವಾದ್ದೊಂದು ಹಠಮಾರಿತನ ಅನ್ನಿ – ಇದನ್ನು ತಂದಿದೆ. ಐಕ್ಯಮತ ಸಿದ್ಧಿಗೆ ಎಂದು ಹಲವು ಪರಿಹಾರ ಹೇಳಬಹುದಾದರೂ ಪತಿಯ ‘ನಾನು’ ಎಂಬ ಹಟಮಾರಿತನವನ್ನು ತಾಳ್ಮೆಯಿಂದ ಕೇಳಿಸಿಕೊಳ್ಳಿ. ನಿಮ್ಮ ಜಗಳಗಳು ಮಗುವಿನ ಮನೋವಿಪ್ಲವಕ್ಕೆ ಕಾರಣವಾಗುವ ಅನಪೇಕ್ಷಿತ ಮುಳ್ಳುಗಳಾಗಿ ಚಿಗುರಿಕೊಳ್ಳದಂತೆ ನಿಗಾ ವಹಿಸಿ. ಶ್ರೀಲಕ್ಷ್ಮೀನಾರಾಯಣ ಹೃದಯ ಎಂಬ ಮಂತ್ರಭಾಗ ಓದಿ. ತ್ರಯೋದಶಿಯ ದಿವಸ ಶಿವನಿಗೆ ಬಿಲ್ವಪತ್ರೆಗಳನ್ನಿರಿಸಿ ಆರಾಧಿಸಿ. ಶ್ರೀ ಸಿದ್ಧಿಗೌರಿಯ ಸ್ತೋತ್ರಾವಳಿ, ಐಕ್ಯಮತ್ಯ ಸ್ತವನ ಓದಿ. ಕ್ಷೇಮ.

# ಈ ಶಬ್ದ ಉಪಯೋಗಿಸಿದ್ದಕ್ಕೆ ಬೇಸರಿಸದಿರಿ. ಬಾಸ್ ಆಗಿ ತುಂಬ ಅಯೋಗ್ಯನನ್ನು ಪಡೆದಿರುವ ನೋವು ನನ್ನದು. ಹೀಗೆ ಎಂದಿಲ್ಲ. ನಿಕೃಷ್ಟವಾಗಿ ನೋಡಿ, ತಪ್ಪುಗಳನ್ನೇ ಹುಡುಕುವುದು ಇವರ ಜಾಯಮಾನ. ಒಂದು ಊಟಕ್ಕಾಗಿ ಇಂಥವರನ್ನು ಸಹಿಸಿಕೊಳ್ಳಬೇಕೆ ಎಂಬ ದುಃಖವಾಗುತ್ತದೆ. ಮೂರು ಸಲ ವಿದೇಶಕ್ಕೆ ಹೋಗುವ, ಹೊಸ ಪ್ರಾಜೆಕ್ಟ್​ಗೆ ನಿಯೋಜಿಸುವ ಅವಕಾಶ ಇದರಿಂದಾಗಿ ತಪ್ಪಿತು. ದಿಕ್ಕು ತೋಚದಾಗಿದೆ. ನ್ಯಾಯಕ್ಕೆ ಬೆಲೆ ಇಲ್ಲದ ವ್ಯಕ್ತಿಯಿಂದ ನ್ಯಾಯ ಸಿಗಬೇಕಿದೆ. ಹೊಸ ಕೆಲಸ ಸಿಗಬಹುದೆ?

| ರಂಗನಾಥ ವೆಂಕಟರಮಣಯ್ಯ, ಹಾಸನ

ಬದುಕಿನಲ್ಲಿ ಇವೆಲ್ಲ ನೋವು ನಮ್ಮ ತಾಳ್ಮೆಯನ್ನು ಬಯಸುತ್ತದೆ. ಒಬ್ಬ ವ್ಯಕ್ತಿ ಹಲವರ ಮನಃಶಾಂತಿ ಹಾಳುಮಾಡಬಹುದಾಗಿದೆ. ರಾಜಕೀಯ ಕೇವಲ ರಾಜಕೀಯರಂಗದ ಸೊತ್ತಲ್ಲ. ಈಗ ರಾಜಕಾರಣಿ ಅನೇಕ ಸಲ ದೇವರಂತೆ ಗೌರವಕ್ಕೆ, ಆದರಕ್ಕೆ ಸೂಕ್ತ ವ್ಯಕ್ತಿತ್ವ ಪಡೆದಿರುತ್ತಾನೆ. ನಮ್ಮಂಥ ಜನಸಾಮಾನ್ಯರು ಅಸಾಧ್ಯರಾಗುತ್ತೇವೆ. ಕೆಲಸ ಬಿಡದಿರಿ. ಬಿಟ್ಟ ಮಾತ್ರಕ್ಕೆ ಸಮಸ್ಯೆ ದೂರವಾಗದು. ಪ್ರತಿ ಸೋಮವಾರ ಹತ್ತಿಯ ಒಂದು ಪುಟ್ಟ ಗೋಲಕ್ಕೆ ಜೇನು ಬೆರೆಸಿ, ಎಕ್ಕದ ಹೂವಿನಿಂದ ಶಿವನಾಲಯದ ನಂದಿಗೆ ಏರಿಸಿ ಬನ್ನಿ. ಕಾಲಭೈರವ ಅಷ್ಟೋತ್ತರ, ತ್ರಿಪುರಸುಂದರಿ ಮಹಾಮಂತ್ರ, ದತ್ತ ಕವಚ ಓದಿ. ಮಂಗಳವಾರದಂದು ಗಣೇಶನ ಮೂರ್ತಿಗೆ ಏಳು ಗರಿಕೆಯನ್ನು ಏರಿಸಿ. ಸಿದ್ಧಿಗಣೇಶನನ್ನು ಆರಾಧಿಸಿ. ನೋವಿನ ದಿನಮಾನ ದೂರವಾಗಲಿದೆ.

# ಮೂರು ತಿಂಗಳುಗಳ ಹಿಂದೆಯಷ್ಟೇ ಮದುವೆಯಾಯ್ತು. ತಂದೆ-ತಾಯಿಗಳೇ ನಿಂತು, ನೋಡಿ, ಜಾತಕಗಳ ಹೊಂದಾಣಿಕೆಯೊಂದಿಗೆ ಮದುವೆ ನಡೆಯಿತು. ಆದರೆ ಪತಿಯು ‘ನನ್ನ ತಂದೆ ತಾಯಿಗಳ ಒತ್ತಡಕ್ಕೆ ಮಣಿದು ಮದುವೆಯಾಗಿದ್ದೇನೆ. ನನ್ನ ಜೀವನದ ರೀತಿಯೇ ಬೇರೆ’ ಎಂದು ನನ್ನ ಜೀವನದ ಅಂಧಃಕಾರ ಏನು ಎಂಬುದನ್ನು ಸ್ಪಷ್ಟಪಡಿಸಿದ್ದಾನೆ. ನನ್ನ ತೊಳಲಾಟ ಹೇಳತೀರದು. ಹೊರಬಂದರೆ ಸುಖವಿದೆಯೆ?

ಕಲ್ಪನಾ ಮುಝುಂದಾರ್, ಸೋಲಾಪುರ

ಜಟಿಲವಾದ ಸಮಸ್ಯೆ. ಹುಡುಗ ಸಲಿಂಗಿಯಾಗಿರುವ ವಿಚಾರ ಯಾತನಾಮಯ. ನಿಮ್ಮ ಜಾತಕದಲ್ಲಿನ ಕೇತು ಕುಜ ತೊಂದರೆಗಳು ಭಾಗ್ಯಕ್ಕೆ ಕೊಟ್ಟಿರುವ ಏಟು ಇದು. ನಿವು ಮುಂದೆ ನಿರ್ವಹಿಸಬೇಕಾದ ಜವಾಬ್ದಾರಿಗಾಗಿ ಕಾಯ್ದೆಕಾನೂನುಗಳ ನೆರವು ಪಡೆಯಲು ಸಂಬಂಧಿಸಿದ ಈ ವಿಚಾರವು ಸೂಚಿಸುತ್ತಿದೆ. ತಂದೆ-ತಾಯಿ ನಿಯೋಜಿಸಿದ ಮದುವೆ, ಪ್ರೇಮವಿವಾಹ ಇತ್ಯಾದಿಗಳೇ ಇಂಥ ದುಃಖಕ್ಕೆ ಕಾರಣವಾಗುವುದಿಲ್ಲ. ಜಾತಕ ಪರಿಶೀಲನೆಯ ಸಂದರ್ಭದಲ್ಲಿ ಎಲ್ಲವೂ ಸರಿಯಾಗಿರಬೇಕು. ಭವಾನೀಶಂಕರನನ್ನು ಶ್ರೀಮನ್ನಾರಾಯಣ – ಲಕ್ಷ್ಮೀದೇವಿಯರನ್ನು ಆರಾಧಿಸಿ. ಚಾಮುಂಡೇಶ್ವರಿಯ ಆರಾಧನೆ ಇರಲಿ. ಪರಿಹಾರಗಳಿಗೆ ದಾರಿ ಸಿಗಲು ಸಾಧ್ಯ.

(ಲೇಖಕರು ಕಥೆಗಾರರು ಮತ್ತು ಜ್ಯೋತಿಷ ವಿಜ್ಞಾನ ಸಂಶೋಧಕರು)

Leave a Reply

Your email address will not be published. Required fields are marked *

Back To Top