Sunday, 15th July 2018  

Vijayavani

ಬಾಲಕನ ವಿಡಿಯೋ ಹಿಂದೆ ಬಿಜೆಪಿ ಕೈವಾಡ ಆರೋಪ - ವಿಡಿಯೋ ತನಿಖೆಗೆ ಸದಾನಂದಗೌಡ ಆಗ್ರಹ - ರಾಜಕಾರಣಿಗಳ ಆಟಕ್ಕೆ ಕೊಡವರ ಆಕ್ರೋಶ        26 ವರ್ಷ ಲಿಂಗಾಯತರೇ ರಾಜ್ಯ ಆಳಿದ್ದಾರೆ - ಕುಮಾರಸ್ವಾಮಿ ಸಿಎಂ ಆಗಿ 2 ತಿಂಗಳಾಗಿದೆ - ಉತ್ತರ ಕರ್ನಾಟಕ ನಿರ್ಲಕ್ಷ್ಯ ಆರೋಪಕ್ಕೆ ದೇವೇಗೌಡ ತಿರುಗೇಟು        ಕೊನೆಗೂ ಶಿರಾಡಿ ಘಾಟ್‌ ಲೋಕಾರ್ಪಣೆ - ವಾಸ್ತು ಪ್ರಕಾರ ರೇವಣ್ಣ ಉದ್ಘಾಟನೆ - ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತ        ಮಟನ್ ಬಿರಿಯಾನಿ, ಚಿಕನ್ ಚಾಪ್ಸ್, ಬೋಟಿ ಗೊಜ್ಜು, ಮೊಟ್ಟೆ - 25 ಸಾವಿರ ಮಂದಿಗೆ ಭರ್ಜರಿ ಬಾಡೂಟ - ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ಜಿಟಿಡಿ ಕೃತಜ್ಞತೆ        ಒಂದು ದೇಶ ಒಂದೇ ಚುನಾವಣೆ - ಮೋದಿ ಪರಿಕಲ್ಪನೆಗೆ ಸೂಪರ್‌ಸ್ಟಾರ್‌ ಬೆಂಬಲ - ಹಣ, ಸಮಯ ಉಳಿತಾಯ ಎಂದ ರಜನಿ        ಉಕ್ಕಿಹರಿಯುತ್ತಿರೋ ಕೃಷ್ಣೆ - ಬೆಳಗಾವಿ, ಚಿಕ್ಕೋಡಿ ಭಾಗದಲ್ಲಿ ಪ್ರವಾಹ ಪರಿಸ್ಥಿತಿ - ಇತ್ತ ತಮಿಳುನಾಡಿನಲ್ಲಿ ಕಾವೇರಿ ಭೋರ್ಗರೆತ       
Breaking News

ಪ್ರಶ್ನೆ ಪರಿಹಾರ

Thursday, 14.09.2017, 3:00 AM       No Comments

ನನ್ನ ಮಗನಿಗೆ ಇನ್ನೂ ಮದುವೆಯಾಗಿಲ್ಲ. ಎಲ್ಲಾ ರೀತಿಯ ಶಾಂತಿ, ಹೋಮ ಮಾಡಿಸಿದ್ದೇವೆ. ಜಾತಕ ತೋರಿಸಿದರೆ ಮದುವೆ ಆಗುತ್ತೆ ಎನ್ನುತ್ತಾರೆ. ಅವನ ಕಾಲುಗಳಿಗೆ ಚರ್ಮದ ಕಾಯಿಲೆಯಿದೆ. ಅದು ವಾಸಿಯಾಗುತ್ತಾ? ನನಗೆ ಮಂಡಿನೋವು. ನಡೆಯುವುದು ಕಷ್ಟವಾಗಿದೆ. ಏನು ಮಾಡುವುದು? ತಿಳಿಸಿ.

ಹೆಸರು, ಊರು ಬೇಡ

ಮಗನ ಜಾತಕವನ್ನು ಪರಿಶೀಲಿಸುವ ವಿಚಾರ ನಡೆಸಿದಾಗ ದೈವಪವಾಡ ಎಂಬುದೊಂದನ್ನು ನಂಬಿ ಈಗ ಹೆಜ್ಜೆ ಇರಿಸಬೇಕಾಗಿದೆ. ಶನೈಶ್ಚರನು ತುಸು ಇಕ್ಕಟ್ಟನ್ನು ಎದುರಿಸಿ ಧೈರ್ಯಭಾವದಲ್ಲಿ ಕುಳಿತಿದ್ದು, ಭಾಗ್ಯವನ್ನು ವಿಸ್ತರಿಸುವ ಹೊಣೆ ಹೊರಬೇಕಾಗಿದೆ. ಈ ತಿಂಗಳ 12ನೇ ತಾರೀಖಿನಿಂದ ಗುರುಬಲವೂ ಒದಗಿಬರುತ್ತದೆ. ನಿಮ್ಮ ಮಗನು ಸ್ವಯಂವರ ಪಾರ್ವತಿ ಎಂಬುದಾಗಿ ನೆನೆಸಿಕೊಂಡು ಒಂದು ಇಡೀ ದುಂಡು ಅಡಕೆಗೆ ಅರಿಶಿಣ, ಕುಂಕುಮ, ಅಕ್ಷತೆ ಇರಿಸಿ ಸ್ವಯಂವರ ಪಾರ್ವತಿ ಸ್ತೋತ್ರ ಓದಿ, ದೀಪವೊಂದನ್ನು ಬೆಳಗಲಿ. ಪ್ರತಿ ಶುಕ್ರವಾರ, ಮಂಗಳವಾರ ಕ್ರಮವಾಗಿ ಅಲ್ಪಪ್ರಮಾಣದಲ್ಲಿ ಬಾಳೆಹಣ್ಣು ಮತ್ತು ದ್ರಾಕ್ಷಿಯನ್ನು (5-6 ಒಣದ್ರಾಕ್ಷಿ, ಎರಡು ಬಾಳೆಹಣ್ಣು) ನೈವೇದ್ಯ ಮಾಡಿ ಸೇವಿಸಲಿ. ಜಗನ್ಮಾತೆ ಶ್ರೀ ದುರ್ಗೆ ಮತ್ತು ಮನಸ್ಸಿನ ಪಾಲಿನ ಶಕ್ತಿಗೆ ಕಾರಣನಾದ ಶಿವಸ್ವರೂಪದ ಚಂದ್ರನು ಪ್ರಸ್ತುತ ಗುರುದಶಾಕಾಲದಲ್ಲಿ ಮದುವೆ ಏರ್ಪಡುವ ವಿಚಾರ ನಡೆಸಿಕೊಡುವ ಪವಾಡ ನಡೆಯಲಿ. ಧನ್ವಂತರಿ ಸ್ತೋತ್ರ, ವಿಷ್ಣು ಅಷ್ಟೋತ್ತರ ಪಠಣದಿಂದ ನಿಮ್ಮ ಆರೋಗ್ಯವೂ ಇನ್ನಿಷ್ಟು ವಿಷಮಿಸದು.

ನನ್ನ ಮಗನಿಗೆ 21 ವರ್ಷ. ಬಿ.ಇ. ಮಾಡುತ್ತಿದ್ದಾನೆ. ಪಿಯು ಫೇಲಾದ ಮೇಲೆ ಡಿಪ್ಲೊಮಾ ಮಾಡಿ ಅದರಲ್ಲಿ ಒಳ್ಳೆಯ ಅಂಕ ಬಂದು ಬಿ.ಇ.ಗೆ ಸೀಟು ಸಿಕ್ಕಿದೆ. ಈಗ ಓದಿನಲ್ಲಿ ಆಸಕ್ತಿಯಿಲ್ಲ. ತಂದೆ ಬಿಜಿನೆಸ್ ಮಾಡಲು ಹೇಳುತ್ತಿದ್ದಾರೆ. ಅದಕ್ಕೂ ಒಪ್ಪುತ್ತಿಲ್ಲ. ಅವನ ಮುಂದಿನ ಭವಿಷ್ಯ ತಿಳಿಸಿ.

ಹೆಸರು ಬೇಡ, ಹುಬ್ಬಳ್ಳಿ

ರಾಹುದಶಾ ನಡೆಯುತ್ತಿದ್ದು ನರಸಿಂಹನನ್ನು ಆರಾಧಿಸಿ. ರಾಹುಪೀಡಾ ನಿವಾರಣಾ ಸ್ತೋತ್ರ 27 ಬಾರಿ, ನರಸಿಂಹ ಕವಚ ಒಮ್ಮೆ ಓದಿ (12 ನಿಮಿಷಗಳು ಸಾಕು) ಹುರಿದುಂಬಿಸಿ.ಎದುರಿಗೆ ಕುಳ್ಳಿರಿಸಿಕೊಂಡು, ನಿಮ್ಮ ಆತಂಕ ತೋರಿಸದೆಯೇ ರಗಳೆಯಾಗದಂತೆ ಮೈದಡವಿ ಧೈರ್ಯದ ಮಾತು ಮಾತನಾಡಿ. ತಾಯಿಯಿಂದ ಲಾಭವಿದೆ. ಶನೈಶ್ಚರನಿಂದ, ಬುಧನಿಂದ ಸಿದ್ಧಿ ಇದೆ. ಈ ತಿಂಗಳ 12ರಿಂದ ಗುರುಬಲವೂ ಕೂಡಿ ಬರಲಿದೆ. ನರಸಿಂಹನಿಂದ ರಕ್ಷೆ ಇದೆ.

ನನಗೆ ಇಬ್ಬರು ಮಕ್ಕಳು. ಅವರ ಮದುವೆಯ ಯೋಗ ಯಾವಾಗ ಕೂಡಿಬರುತ್ತದೆ? ಅವರ ಮುಂದಿನ ಭವಿಷ್ಯ, ಆರೋಗ್ಯದ ಬಗ್ಗೆ ತಿಳಿಸಿ.

ಹೆಸರು ಬೇಡ, ಹುಬ್ಬಳ್ಳಿ

ಮಗಳ ಸಂದರ್ಭದಲ್ಲಿ ಈ ಕಾಲಘಟ್ಟವು ಮದುವೆಗೆ ಸಹಕಾರಿಯಾಗಿದ್ದು ಈ ತಿಂಗಳ 12ರಂದು ಕೂಡಿಬರುವ ಗುರುಬಲದ ಮೂಲಕ ಚಾಲನೆಗೆ ಸಿಗಬೇಕು. ಎರಡನೇ ಮಗಳು 21 ಬಾರಿ ರಾಹುಪೀಡಾ ನಿವಾರಣಾ ಸ್ತೋತ್ರ ಓದಲಿ.

(5 ನಿಮಿಷ ಸಾಕು). ಪ್ರಯತ್ನದಲ್ಲೀಗ ಉತ್ಸಾಹದಿಂದ ಹೆಜ್ಜೆ ಇರಿಸಿ. ದಿಗ್ಬಲ ಪಡೆದ ಸೂರ್ಯನಿಂದ ಸೂಕ್ತ ವರನನ್ನು ಪಡೆಯುವ ಯೋಗ ಸಾಧ್ಯವಾಗಲಿದೆ. ಪ್ರತಿದಿನ ಮಗಳು ಆದಿತ್ಯಹೃದಯ ಓದಲಿ. ದೇವಿಯನ್ನು ಪ್ರಾರ್ಥಿಸಲಿ. ಇನ್ನು ಮೊದಲ ಮಗಳ ಸಂಬಂಧವಾಗಿ (ಈ ತಿಂಗಳು ಒದಗಿಬರುತ್ತಿರುವ ಗುರುಬಲ ಇವಳಿಗೂ ಆಶಾದಾಯಕವಾಗಿದೆ) ಗಣೇಶನ ಬಗೆಗಿನ ಪಠಣ ನಡೆಯಲಿ. ದಯಾಮಯನಾದ ಗಣಪತಿಯು ಗುರುಗ್ರಹದ ಶಕ್ತಿ ಒದಗಿಸಿ ಮದುವೆಗೆ ಕಾಲವನ್ನು ಪಕ್ವವಾಗಿಸುತ್ತಾನೆ. ಮಗಳು ಪ್ರತಿದಿನ ಶ್ರೀ ಲಲಿತಾ ಅಷ್ಟೋತ್ತರ ನಾಮಾವಳಿ ಪಠಿಸಲಿ. ಪ್ರಯತ್ನ ಫಲಿಸಲಿದೆ.

ಮಗಳ ಜಾತಕ ಪರಿಶೀಲಿಸಿ ಅವಳ ಮದುವೆಗೆ ಯೋಗ ಹಾಗೂ ಯೋಗ್ಯ ವರ ಸಿಗುವ ನಿರೀಕ್ಷೆಯಲ್ಲಿ ಇದ್ದೇವೆ. ಅದು 2018ರಲ್ಲಿ ಕೈಗೂಡುವುದೇ ದಯಮಾಡಿ ತಿಳಿಸಿ.

ಬಿ.ಎಸ್. ಶೆಟ್ಟಿ, ಉಡುಪಿ

ಪ್ರಧಾನವಾಗಿ ಸದೃಢನಾಗಿರುವ ಕುಜನು, ಶನೈಶ್ಚರರು ಈ ವರ್ಷ ನಿಮ್ಮ ಮಗಳ ಮದುವೆಗಾಗಿನ ಮಂಗಳವಾದ್ಯ ಊದಿಸಲೇಬೇಕಿದೆ. ಸಕಾರಾತ್ಮಕ ಪ್ರಯತ್ನ ಮುಂದುವರಿಯಲಿ. ಮಗಳು ಪ್ರತಿದಿನ 27 ಬಾರಿಗೆ ಕಡಿಮೆ ಇರದಷ್ಟು ಮಂಗಳ ಚಂಡಿಕಾಸ್ತೋತ್ರ ಪಠಣ (7 ನಿಮಿಷ ಸಾಕು) ಓದಲಿ. ಪ್ರತಿದಿನ

ಶ್ರೀ ದುರ್ಗಾ ಅಷ್ಟೋತ್ತರವನ್ನೂ (5 ನಿಮಿಷ ಸಾಕು) ಓದಲಿ. ಶಿವನ ಸ್ತುತಿ, ಚಂದ್ರಪೀಡಾ ನಿವಾರಣಾ ಸ್ತೋತ್ರವನ್ನು 7 ಬಾರಿ ಓದಲಿ.

2 ಕೆರೆಟ್ ಮುತ್ತನ್ನು ಬೆಳ್ಳಿಯಲ್ಲಿ ಬಲಗೈಯ ಕಿರುಬೆರಳಿಗೆ ಧರಿಸಲಿ. ಒಳಿತಿನ ದಾರಿ ಸರಳ.

ನನ್ನ ಮಗಳು ಬೇರೆಯವರಿಗೆ ಸಹಾಯ ಮಾಡಲು ಹೋಗಿ ಜೈಲು ಸೇರಿದ್ದಾಳೆ. ಫಿಕ್ಸ್ ಆಗಿದ್ದ ಆಕೆಯ ಮದುವೆ ಮುರಿದುಬಿದ್ದಿದೆ. ಇದರಿಂದ ನಮ್ಮ ಬಗ್ಗೆ ಜನರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಇರುವ ಮನೆ ಮಾರಬೇಕೆಂದಿದ್ದೇನೆ. ಯಾವಾಗ ಕೂಡಿಬರುತ್ತದೆ? ಮಗಳು ಯಾವಾಗ ಜೈಲಿನಿಂದ ಹೊರಬರುತ್ತಾಳೆ? ಮುಂದಿನ ಭವಿಷ್ಯ ಹೇಗಿದೆಯೆಂದು ತಿಳಿಸಿ.

ಹೆಸರು ಬೇಡ, ರಾಯಚೂರು

ಈಗ ಸಹೃದಯರನ್ನು ಹುಡುಕಿ ಮಾತನಾಡಿ. ಮಹಿಳಾ ಕಲ್ಯಾಣ, ರಕ್ಷಣಾ ಸಚಿವರನ್ನು ಕಂಡು ಮಾತನಾಡಿ. ಪ್ರಬಲ ಆದರೆ ಸಹೃದಯ ರಾಜಕಾರಣಿಯನ್ನು (ಒಳ್ಳೆಯವರು ಇದ್ದೇ ಇರುತ್ತಾರೆ) ಭೇಟಿ ಮಾಡಿ ಕಷ್ಟ ಬಿನ್ನವಿಸಿ. ಗಡಿಬಿಡಿ, ಗೊಂದಲ, ಆತುರದ ನಿರ್ಣಯ, ವಿಷಸೇವನೆ ಇತ್ಯಾದಿ ನಕಾರಾತ್ಮಕ ಧೋರಣೆಗಳನ್ನು ಕೈಬಿಡಿ. ಮೃತ್ಯುಂಜಯ ಮಹಾಮಂತ್ರ ಪಠಿಸಿ. ಮಹಿಳಾ ಆಯೋಗದ ಹಿರಿಯ ಮಹಿಳೆಯೋರ್ವರಿಂದ ನಿಮಗೆ, ಮಗಳಿಗೆ ಅನುಕೂಲವಾಗಲಿದೆ. ಪ್ರಬಲ ರಾಜಕಾರಣಿಯೋರ್ವರ ಆಪ್ತ ಸಹಾಯಕ (ಸೂರ್ಯನ ಸಿದ್ಧಿ ಇದೆ) ನಿಮಗೆ ಸಹಾಯ ಮಾಡುತ್ತಾನೆ.

ನನ್ನ ಮಗನ ಪ್ರಶ್ನೆಗೆ ಉತ್ತರಿಸಿದ್ದಕ್ಕೆ ಕೃತಜ್ಞ. ಆದರೆ ಅವನು ಯಾರ ಮಾತನ್ನೂ ಕೇಳುವುದಿಲ್ಲ. ಯಾವುದನ್ನೂ ಪೂರ್ತಿ ಮಾಡುವುದಿಲ್ಲ. ಮಗನ ಪರವಾಗಿ ನಾನು ಹಾಗೂ ನನ್ನ ಹೆಂಡತಿ ಅಷ್ಟೋತ್ತರ ಓದಬಹುದೆ? ಅವನಿಗೆ ಯಾವುದರ ಬಗ್ಗೆಯೂ ನಂಬಿಕೆ ಇಲ್ಲ. ಎಷ್ಟೇ ಸಮಾಧಾನ ಮಾಡಿದರೂ ಮಾನಸಿಕವಾಗಿ ಕುಗ್ಗಿದ್ದಾನೆ. ಪರಿಹಾರ ಸೂಚಿಸಿ.

ಹೆಸರು, ಊರು ಬೇಡ

ಆಗಲಿ, ಮಗನ ಪರವಾಗಿ ನೀವಾಗಲಿ, ನಿಮ್ಮ ಪತ್ನಿಯಾಗಲಿ ಉತ್ತರದಲ್ಲಿ ತಿಳಿಸಿದ (ಆಗಸ್ಟ್ 17ರ ಪ್ರಶ್ನೆ ಪರಿಹಾರದಲ್ಲಿ ಉತ್ತರಿಸಿದಂತೆ) ಮಂತ್ರ ಭಾಗಗಳನ್ನು ಪಠಿಸುವುದು ಪರವಾಗಿಲ್ಲ. ತಂದೆ-ತಾಯಿಯ ಮೂಲಕವೇ ಸಿದ್ಧಿಗೆ ಏನೋ ಒಂದು ದಾರಿ ದೊರಕಲಿ. ಶುಕ್ರನ ಬಗೆಗೂ ಪ್ರತಿ ಮಂಗಳವಾರ, ಶುಕ್ರವಾರ ಶ್ರೀಲಲಿತಾ ಸಹಸ್ರ ನಾಮಾವಳಿ ಓದಿ. ಇವೆಲ್ಲ ಒಗ್ಗೂಡಿದ ಶಕ್ತಿಯಿಂದಾಗಿ ಒಳಿತಿಗೆ ದಾರಿ ಇದೆ. ಮಗನನ್ನು ಮೃದುವಾಗಿ ಮಾತನಾಡಿಸಿ ಪ್ರೋತ್ಸಾಹಿಸಿ. ತಣ್ಣೀರು ಎಂಬುದು ಸತ್ಯವೇ ಆದರೂ ತಣ್ಣೀರನ್ನೂ ಆರಿಸಿ ಕುಡಿಯುವ ತಾಳ್ಮೆ ತೋರಿಸಿ. ಒಳಿತಾಗಲಿದೆ. ಮಹಾಬಲಮೂರ್ತಿ ಕೊಡ್ಲೆಕೆರೆ 7760063034 ಲೇಖಕರು ಕಥೆಗಾರರು ಮತ್ತು ಜ್ಯೋತಿಷ ವಿಜ್ಞಾನ ಸಂಶೋಧಕರು) (

ಪ್ರತಿಕ್ರಿಯಿಸಿ: [email protected], [email protected])

 

 

Leave a Reply

Your email address will not be published. Required fields are marked *

Back To Top