Thursday, 19th July 2018  

Vijayavani

ತೆರೆದ ವಾಹನದಲ್ಲಿ ಶೀರೂರು ಶ್ರೀ ಮೆರವಣಿಗೆ - ಉಡುಪಿ ತಲುಪಿದ ಶ್ರೀಗಳ ಪಾರ್ಥಿವ ಶರೀರ - ಭಕ್ತರಲ್ಲಿ ಮಡುಗಟ್ಟಿದ ಶೋಕ        ಶೀರೂರು ಶ್ರೀ ಅಸಹಜ ಸಾವು - ರಥಬೀದಿಯಲ್ಲಿ 45 ನಿಮಿಷ ಸಾರ್ವಜನಿಕ ದರ್ಶನ - ಶೀರೂರಿಗೆ ಡಿಸಿ, ಜಿಪಂ ಸಿಇಓ ಆಗಮನ        ಶೀರೂರು ಶ್ರೀ ಅಹಸಜ ಸಾವು ಹಿನ್ನೆಲೆ - ಶೀರೂರು ಮಠಕ್ಕೆ ಫೋರೆನ್ಸಿಕ್ ತಜ್ಞರ ಭೇಟಿ - ಶ್ರೀಗಳ ಲ್ಯಾಪ್​ಟಾಪ್ ಪರಿಶೀಲನೆ        ರಾಜ್ಯದಲ್ಲಿ ಮಹಾ ಮಳೆಯ ಅಬ್ಬರ - ಮಡಿಕೇರಿಯ ಹಾರಂಗಿ ಜಲಾಶಯ ಭರ್ತಿ - ವಿಶೇಷ ಪೂಜೆ ಸಮರ್ಪಿಸಿದ ಸಿಎಂ        ನಾಳೆ ಕೇಂದ್ರ ಸರ್ಕಾರಕ್ಕೆ ಅವಿಶ್ವಾಸ ಪರೀಕ್ಷೆ - ಮೋದಿ ಸರ್ಕಾರದ ಬೆಂಬಲಕ್ಕೆ ನಿಂತ ಶಿವಸೇನೆ -ನಡೆಯೋದಿಲ್ವಾ ಸೋನಿಯಾ ಆಟ?        ಐನೂರಾಯ್ತು, 2 ಸಾವಿರ ಆಯ್ತು - ಆರ್​ಬಿಐನಿಂದ ಈಗ 100ರ ಹೊಸ ನೋಟು ಬಿಡುಗಡೆ - ನೇರಳೆ ಬಣ್ಣದಲ್ಲಿ ಬರಲಿದೆ ನೂರು ರೂ.       
Breaking News

 ಪ್ರಶ್ನೆ ಪರಿಹಾರ

Thursday, 22.06.2017, 3:00 AM       No Comments

ನನ್ನ ಮಗ ಯಾವುದೇ ಜವಾಬ್ದಾರಿಯಿಲ್ಲದೆ ಇದ್ದ. ಮದುವೆಯಾದರೆ ಸರಿಯಾಗುತ್ತಾನೆಂದು ಮದುವೆ ಮಾಡಿದೆವು. ಒಂದು ಗಂಡುಮಗುವೂ ಆಗಿದೆ. ಆದರೆ ಇದುವರೆಗೂ ಯಾವುದೇ ಜವಾಬ್ದಾರಿ ಹೊರದೆ, ಕೆಲಸಕ್ಕೂ ಸರಿಯಾಗಿ ಹೋಗದೆ ಇದ್ದಾನೆ. ಹೆಂಡತಿ-ಮಕ್ಕಳನ್ನೂ ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ನಾವು ಇರುವವರೆಗೆ ಅವರಿಗೆ ಯಾವುದೇ ತೊಂದರೆಯಿಲ್ಲ. ಮುಂದೆ ಅವರ ಜೀವನದ ಬಗ್ಗೆ ಚಿಂತೆಯಾಗಿದೆ. ಇದಕ್ಕೆ ಪರಿಹಾರ ತಿಳಿಸಿ.

| ಹೆಸರು ಬೇಡ, ಬಳ್ಳಾರಿ

ನಿಮ್ಮ ಮಗನ ಜಾತಕದಲ್ಲಿ ಉತ್ತಮವಾದ ಗಜಕೇಸರಿ ಯೋಗವಿದೆ. ಆದರೆ ಗುರುವು ತುಸು ಜಡತ್ವ ತರುವುದರಿಂದ ಉದಾಸೀನತೆ ಪ್ರಾಪ್ತಿಯಾಗುತ್ತಿದೆ. ವ್ಯಕ್ತಿತ್ವವನ್ನು ಸಂವರ್ಧಿಸಿಕೊಳ್ಳುವ ನಿಟ್ಟಿನಲ್ಲಿ ಚಂದ್ರನು ಶಕ್ತಿ ಪಡೆದು (ಜೀವನದಲ್ಲಿ ಉತ್ಸಾಹದಿಂದ ಹಳೆಯದನ್ನೆಲ್ಲ ಕೊಡವಿ ಮೇಲೆದ್ದರೆ) ಅಪಾರವಾದ ಯಶಸ್ಸು ಪಡೆಯಲು ಅನುಕೂಲವಿದೆ. ಸಾಲ ಮಾಡದೆಯೇ, ತಿಳಿದಿರುವ ತನ್ನ ಮಿತಿಯಲ್ಲಿ ಮುಂದುವರಿದು ಡ್ರೖೆವಿಂಗ್​ಗೆ ಅಂಟಿಕೊಂಡರೆ ಅನೇಕ ರೀತಿಯ ಎಡವಟ್ಟುಗಳನ್ನು ಈಗ ಮಾಡಿಕೊಂಡಿದ್ದರೂ ಮತ್ತೆ ಸುಧಾರಿಸಿಕೊಳ್ಳಲು ಸಾಧ್ಯ. ಬುಧಗ್ರಹಕ್ಕೆ ನೀಚತ್ವವನ್ನು ನಿವಾರಿಸಿಕೊಂಡಿರುವ ಸಿದ್ಧಿಯೋಗ ಇದ್ದಿರುವುದರಿಂದ ಧೈರ್ಯಂ ಸರ್ವತ್ರ ಸಾಧನಂ ಎಂಬುದನ್ನು ತಿಳಿದು ಮುಂದುವರಿಯಲಿ. ಮಗ ಪ್ರತಿದಿನ ಶ್ರೀದೇವಿ ಲಲಿತಾತ್ರಿಶತಿ ನಾಮಾವಳಿ ಓದಲಿ. ಒಳಿತಿದೆ.

 

ನಾನು ಮದುವೆಯಾಗಿ ಒಂದೂವರೆ ವರ್ಷ ಕಳೆದಿದೆ. ಕಳೆದ ಒಂಭತ್ತು ತಿಂಗಳಿಂದ ಗಂಡನ ಮನೆಯವರ ಕಿರುಕುಳ ಹೆಚ್ಚಾಗಿ ಸದ್ಯ ತವರಿನಲ್ಲಿದ್ದೇನೆ. ಮೂರು ತಿಂಗಳಿಗೆ ಗರ್ಭಿಣಿಯಾದರೂ ಅಬಾರ್ಷನ್ ಆಗಿದೆ. ಗಂಡ ತನ್ನ ಅಕ್ಕ, ಅಪ್ಪ, ಅಮ್ಮಂದಿರ ಮಾತುಕೇಳಿ ನನಗೆ ವಿಚ್ಛೇದನ ಕೊಡುವ ಹಂತಕ್ಕೆ ಬಂದಿದ್ದಾರೆ. ಮಾತುಕತೆಯಾಗಿ ಬೇರೆ ಮನೆ ಮಾಡಿ ಇರುವಂತಾದರೂ ಅದಕ್ಕೆ ಒಪ್ಪದೆ ತಂದೆ-ತಾಯಿಯನ್ನು ಬಿಡುವುದಿಲ್ಲ ಎನ್ನುತ್ತಿದ್ದಾರೆ. ನಮ್ಮ ಸಂಸಾರ ಸರಿಯಾಗಬಹುದೆ? ಸಂತಾನ ಭಾಗ್ಯ ಲಭಿಸುವುದೇ? ನಾನು ಬಿಎಡ್ ಪದವಿ ಪಡೆದಿದ್ದು ಸರ್ಕಾರಿ ನೌಕರಿ ಸಿಗಬಹುದೆ?

| ಹೆಸರು, ಊರು ಬೇಡ

ನಿಮಗಿಬ್ಬರಿಗೂ (ಗಂಡ-ಹೆಂಡತಿ) ಶನಿಕಾಟ ನಡೆಯುತ್ತಿದೆ. ಪತ್ನಿಗೆ ಸಾಡೇಸಾತಿ ದಿನಗಳು ಪತಿಗೆ ಅಷ್ಟಮಶನಿಕಾಟ ನಡೆಯುತ್ತಿದೆ. ನಿಮ್ಮ ಪತ್ರದ ಧಾಟಿಯಲ್ಲಿ ಪತಿಯ ಬಗೆಗೆ ಪೂರ್ತಿಯಾಗಿ ತಿರಸ್ಕಾರ ಬೆಳೆದಿದೆ. ಗಂಡನ ಜತೆ ಸಂಸಾರ ಸರಿಹೋದೀತೆ ಎಂಬ ಆಶಯವನ್ನೂ ಪ್ರಶ್ನೆಯಾಗಿ ಕೇಳಿದ್ದೀರಿ. ಅತ್ತೆಗೆ ನಿಮ್ಮಿಬ್ಬರಲ್ಲೂ ಒಡಕು ತರುವ ಕೆಲಸವೇ ಆಗಿದೆ ಎಂಬ ಆರೋಪ ಮಾಡಿದ್ದೀರಿ. ನಿಮ್ಮ ಕೇಡನ್ನು ಬಯಸಿ ಮಾಟಮಂತ್ರಕ್ಕೆ ಸದಾ ಮುಂದು ಎಂಬ ಆರೋಪವನ್ನೂ ಮಾಡಿದ್ದೀರಿ. ಮುರಿದ ಮನಸ್ಸುಗಳು. ಶನಿಕಾಟದ ಸಂದರ್ಭ, ಧಕ್ಕೆ ತರುತ್ತಿರುವ ರಾಹುಕೇತುಗಳು ಇತ್ಯಾದಿ ಪೀಡೆಗಳಿಂದಾಗಿ ಹೈರಾಣವಾಗಿದ್ದೀರಿ. ಪ್ರತಿದಿನ ರಾಮರಕ್ಷಾ ಸ್ತೋತ್ರ, ನರಸಿಂಹ ಅಷ್ಟೋತ್ತರ, ಶ್ರೀ ಲಲಿತಾ ಅಷ್ಟೋತ್ತರ (ಶುಕ್ರವಾರ ಲಲಿತಾ ಸಹಸ್ರನಾಮಾವಳಿ) ಓದಿ. ಸರ್ಕಾರಿ ಕೆಲಸಕ್ಕೆ ಪ್ರಯತ್ನಿಸಿ. ಆದರೆ ಖಾಸಗಿ ಕೆಲಸ ಸಿಕ್ಕಿದರೆ ಸೇರಿಕೊಳ್ಳಿ. ಹಿರಿಯರನ್ನು ಸೇರಿಸಿ ಮಾತನಾಡಿಸಿ. ಒಡೆದ ಮನಸ್ಸು ಶಾಂತಿ ಭರಿಸುವ, ಒಗ್ಗೂಡುವ ಅವಕಾಶವೊಂದು ಶ್ರೀದೇವಿಯ ಕೃಪೆಯಿಂದ ಸಾಧ್ಯ.

 

ನಾನು ಬಡತನದಲ್ಲಿ ಹುಟ್ಟಿ ಬೆಳೆದವಳು. ಆರ್ಥಿಕ ಪರಿಸ್ಥಿತಿಯಿಂದ ವಯಸ್ಸಿನ ಅಂತರ ಇರುವವರೊಡನೆ ಮದುವೆಯಾಯಿತು. ಗಂಡನಮನೆಯಲ್ಲೂ ಸುಖವಿಲ್ಲ. ಎಲ್ಲರಿಗೂ ನಾನು ಸಹಾಯ ಮಾಡಬೇಕು. ನನ್ನ ಸಹಾಯಕ್ಕೆ ಯಾರೂ ಇಲ್ಲ. ಗಂಡನಿಗೆ 62 ವರ್ಷ. ಅವರನ್ನೂ ಸಾಕಬೇಕಾಗಿದೆ. ಮಗಳಿಗೆ ಮದುವೆ ಮಾಡಿದ್ದೇನೆ. ಮುಂದಾದರೂ ಒಳ್ಳೆಯ ಕಾಲ ಬರುತ್ತದೆಯೆ?

| ಹೆಸರು ಬೇಡ, ಬೆಂಗಳೂರು

ನಿಮ್ಮ ಬದುಕು ಕುಸಿದ ಬಗೆಯನ್ನು ಗಮನಿಸಿದಾಗ ನಿಜಕ್ಕೂ ಸಂತಾಪ ಬರುತ್ತದೆ. ಹಣ ಕೇಳಿದರೆ ಕೊಡಲು ಹೋಗಬೇಡಿ. ಈ ಉದ್ದದ ದಾರಿ ನಡೆದು ಬಂದಾಗಿದೆ. ಶಿವನನ್ನು ಸುಬ್ರಹ್ಮಣ್ಯನನ್ನು ಸ್ತುತಿಸಿ. ಮನೆಯವರು ಸ್ವಲ್ಪ ಕೆಲಸ ಮಾಡುವ ಚೈತನ್ಯ ಪಡೆಯುತ್ತಾರೆ. ಮಗಳ ಬಗೆಗೆ ಗಮನ ಹರಿಸಿ. ಶ್ರೀ ಲಲಿತಾ ಹಾಗೂ ದತ್ತಾತ್ರೇಯ ಧ್ಯಾನದಿಂದ ನೆಮ್ಮದಿ. ದುಡಿಯುವುದಕ್ಕೂ ಉತ್ಸಾಹ, ಶಕ್ತಿಗಳು ಲಭ್ಯವಾಗುತ್ತವೆ. ಜೀವನವು ನಿಮ್ಮನ್ನು ನಿರಾಸೆಯಿಂದ ಹೊರಗೆ ಎಳೆದುತಂದು ಒಂದಿಷ್ಟು ಸಂತೋಷಕ್ಕೆ, ಕೆಲವು ರೀತಿಯ ಉಳಿತಾಯಕ್ಕೆ ದಾರಿ ಮಾಡಿಕೊಡಲಿದೆ.

 

ನಾನು ದ್ವಿತೀಯ ಪಿಯು ಓದುತ್ತಿದ್ದೇನೆ. ಓದಿನಲ್ಲಿ ಆಸಕ್ತಿಯಿಲ್ಲ. ಜೀವನವೇ ಬೇಸರವಾಗಿದೆ. ಖಿನ್ನತೆ ಆವರಿಸಿದೆ. ತಂದೆ-ತಾಯಿ ಕಷ್ಟದಿಂದ ನನ್ನನ್ನು ಓದಿಸುತ್ತಿದ್ದಾರೆ. ಅವರ ಕಷ್ಟವನ್ನು ನೋಡಲಾಗುತ್ತಿಲ್ಲ, ಓದಲೂ ಆಗುತ್ತಿಲ್ಲ. ಯಕ್ಷಗಾನಕಲೆಯನ್ನು ಅಭ್ಯಾಸ ಮಾಡಿದ್ದೇನೆ. ಅದರಲ್ಲಿ ನನ್ನ ಭವಿಷ್ಯವಿದೆಯೆ? ತಿಳಿಸಿ.

| ಹೆಸರು, ಊರು ಬೇಡ

ಉತ್ತಮರಲ್ಲಿ ಉತ್ತಮನಾದ ರವಿಯು ನಿಮ್ಮ ಜಾತಕದಲ್ಲಿ ಉತ್ಸಾಹದಿಂದ ನಿಮ್ಮನ್ನು ತೊಡಗಿಸಿಕೊಳ್ಳಲು ಇದು ಸೂಕ್ತ ಕಾಲ. ಪ್ರತಿದಿನ ಸದ್ಗುರುವಾದ ಮಹಾವಿಷ್ಣು ಹಾಗೂ ದಯಾನಿಧಿ ಮಹಾಲಕ್ಷ್ಮಿಯನ್ನು ಆರಾಧಿಸಿ.

ಶ್ರೀ ಲಕ್ಷ್ಮೀನಾರಾಯಣಹೃದಯ ಮಂತ್ರಭಾಗ ಪಠಿಸಿ. ಯಕ್ಷಕಲೆಯನ್ನು ಕೈಬಿಡಬೇಡಿ. ವೃತ್ತಿಯನ್ನಾಗಿ ಸ್ವೀಕರಿಸಿ. ವಿದೇಶದಲ್ಲೂ ನೀವು ಯಕ್ಷಗಾನದ ಅಭಿಮಾನಿಗಳನ್ನು, ಶಿಷ್ಯರನ್ನು ಪಡೆಯುತ್ತೀರಿ. ಹೊಸ ಬದುಕು, ಹೊಸ ವಿಸ್ತಾರ ಲಭ್ಯವಿದೆ. ಕೆಲವು ಬಾರಿ ಹೊಯ್ದಾಡುವ ಮನಸ್ಸನ್ನು ನಿಗ್ರಹಿಸಿ. ಹೊಯ್ದಾಟವಿರದಿದ್ದರೆ ನೆಲ ಸುರಕ್ಷಿತ.

 

 ನನ್ನ ಮಗ ಬಿಬಿಎಂ ಮುಗಿಸಿ, ಎಂಬಿಎ ಮಾಡಿದ್ದಾನೆ. ಕಳೆದ ಆರು ವರ್ಷಗಳಿಂದ ಕೆಲಸಕ್ಕೂ ಹೋಗದೆ ಮನೆಯಲ್ಲೇ ಇದ್ದಾನೆ. ಅವನ ಭವಿಷ್ಯ ಹೇಗಿದೆ? ಕಾರ್ಯಕ್ಷೇತ್ರ ಯಾವುದು? ಸ್ವಂತ ಉದ್ಯೋಗ ಮಾಡಬಹುದೇ?

| ಹೆಸರು, ಊರು ಬೇಡ

ರಾಹು-ಕೇತುಗಳು ಆತ್ಮಸ್ಥೈರ್ಯ ಕುಗ್ಗಿಸಿವೆ. ಬಲಯುತನಾದ ಗುರುವು ದುಷ್ಟತನ ಕಳೆದುಕೊಂಡು ಒಳಿತನ್ನು ನೀಡುವ ಜಾಗದಲ್ಲಿರುವುದರಿಂದ ಸಣ್ಣ ಬಂಡವಾಳ ತೊಡಗಿಸಿ ಸ್ವಂತ ಉದ್ಯೋಗ ಒದಗಿಸಲು ಬೆಂಬಲ ಕೊಡುತ್ತಾನೆ. ರಾಹುದೋಷ ನಿಗ್ರಹಿಸಲು ನಾರಾಯಣಜಪ ಮಾಡಲಿ. ಬುದ್ಧಿ, ಮನಸ್ಸು, ಏನೂ ಬೇಡ ಎಂಬ ಜಡತ್ವ ನೀಗಿಸಲು ಗಣೇಶನನ್ನು ಸ್ತುತಿಸಿದರೆ ಆರ್ಥಿಕ ಲಾಭವುಂಟು.

 

ನಾನು ಸರ್ಕಾರಿ ನೌಕರನಾಗಿದ್ದು ಸಾಲದ ಬಾಧೆ ಕಾಡುತ್ತಿದೆ. ಮನೆಯಲ್ಲಿ ಕಿರಿಕಿರಿಯಿದೆ. ಸಂತಾನ ಪ್ರಾಪ್ತಿಯ ಬಗ್ಗೆ ತಿಳಿಸಿ.

| ಹೆಸರು, ಊರು ಬೇಡ

ವಿಷಮ ಘಟ್ಟದ ಸಂದರ್ಭ ಇದು. ಬುಧನ ಕಾರಣಗಳಿಂದಾಗಿ ಧನನಷ್ಟ, ಸಾಲ, ಸಾಲದಿಂದ ಹೊರಬರಲು ಹೊಸ ಸಾಲಕ್ಕೆ ಕೊಂಡಿ ಕೂಡಿಸುವ ತಾಪತ್ರಯದ ದಿನಗಳಿವು. ಹಾಸಿಗೆ ಇದ್ದಷ್ಟು ಕಾಲು ಚಾಚಿ. ಸಾಲದ ಬಾಧೆ ಮನಸ್ಸನ್ನು ನೋಯಿಸಿದೆ. ಚಂದ್ರನಿಗೆ ಸಂಕುಚಿತತೆ ಒದಗಿದೆ. ಪುತ್ರಭಾಗ್ಯ ವಿಳಂಬವಾಗಿದೆ. ನೀವಿಬ್ಬರೂ ಶ್ರೀಮನ್ನಾರಾಯಣನನ್ನೂ ಲಕ್ಷ್ಮೀಯನ್ನೂ ಶ್ರೀ ಲಕ್ಷ್ಮೀನಾರಾಯಣಹೃದಯ ಎಂಬ ಮಂತ್ರಭಾಗ ಓದಿ ಪ್ರಾರ್ಥಿಸಿ. ಸಂತಾನಗೋಪಾಲಕೃಷ್ಣ ಸ್ತೋತ್ರವನ್ನೂ ಓದಿ. ಹೆಚ್ಚಿನ ತಾಳ್ಮೆ, ಸಾಲ ಮಾಡದೆ ದ್ರವ್ಯ ಸಂವರ್ಧನೆ, ಸ್ತೋತ್ರ ಪಠಣಗಳಿಂದ ಯಶಸ್ಸಿಗೆ ದಾರಿ.

ನಾನು ಹುಟ್ಟಿದ್ದು ಬಡತನದಲ್ಲಿ. ಮದುವೆಯಾದ ಮೇಲೆ ಗಂಡನ ಕಿರುಕುಳ. ಬೆಂಕಿ ಅವಘಡದಿಂದ ಮಗಳಿಗೆ ಶೇ. 40 ಭಾಗ ಸುಟ್ಟಿದೆ. ಅವಳ ದೇಹದ ಚರ್ಮದ ಮೇಲೆ ಕಿಲಾಯಡ್ ಎಂಬ ಮತ್ತೊಂದು ಚರ್ಮ ಬೆಳೆಯುತ್ತಿದೆ ಇದಕ್ಕೆ ಚಿಕಿತ್ಸೆ ಇಲ್ಲವೆಂದು ವೈದ್ಯರು ಹೇಳಿದ್ದಾರೆ. ಸರ್ಕಾರಿ ಕೆಲಸವಿದ್ದರೂ ಅಲ್ಲಿಯ ಕಿರುಕುಳ ಸಾಕಾಗಿದೆ. ಕೆಲಸವೇ ಜೀವನಕ್ಕೆ ಆಧಾರವಾಗಿದೆ. ಪರಿಹಾರ ತಿಳಿಸಿ.

| ಹೆಸರು ಬೇಡ, ಗದಗ

ನಿಮ್ಮ ಜಾತಕದ ರಾಹು-ಕೇತುಗಳು ತಾಪತ್ರಯ ನೀಡುತ್ತ ಜೀವನದಲ್ಲಿ ಅಶಾಂತಿ ತುಂಬಿವೆ. ಕಷ್ಟಗಳು ಯಾಕೆ ಬಂದು ಸೇರಿಕೊಳ್ಳುತ್ತವೆ ಎಂಬುದು ತಿಳಿಯಲಾಗದ ವಿಚಾರ. ಶತಶತಮಾನಗಳಿಂದ ಎದುರಾದ ಪ್ರಶ್ನೆ ಇದು. ಮಗಳು ಶನಿ, ಶುಕ್ರ, ರವಿ, ಮಂಗಳ, ಬುಧರ ವಿಷಮ ಸಂಯೋಜನೆ ಪಡೆದು ಬೆಂಕಿ ಬಾಧೆಯ ಅವಘಡ ಎದುರಿಸಿದ್ದಾಳೆ. ಕೆಲವು ವಿಷಮ ಸನ್ನಿವೇಶಗಳು ಸಂಭವಿಸಲ್ಪಟ್ಟು ಪಡುವ ಯಾತನೆ ಆಗಬಾರದು. ಆದರೆ ಸಂಭವಿಸುತ್ತವೆ. ತಾಳ್ಮೆ ಇರಲಿ. ಮಗಳ ಗಜಕೇಸರಿಯೋಗ ಒಂದು ನೆರಳನ್ನು ಒದಗಿಸಲೇಬೇಕು. ಶಿವ ಸಹಸ್ರನಾಮಾವಳಿ, ನವಗ್ರಹ ಪೀಡಾ ನಿವಾರಣಾ ಸ್ತೋತ್ರ ಓದಿ. ವಿಧಿಯು ಕತ್ತಲೆಯ ದಾರಿಗೆ ಹಣತೆಗಳ ಬೆಳಕನ್ನು ಒದಗಿಸಲು ಸಾಧ್ಯ.

 

ನಾನು ನಿವೃತ್ತ ಶಿಕ್ಷಕಿ. ನಮ್ಮ ಹಳ್ಳಿಯಲ್ಲಿ ಮನೆ ಕಟ್ಟಿಸಿದ್ದೇನೆ. ಆದರೆ ಅದರಲ್ಲಿ ವಾಸವಿರದೆ ದೂರದೂರಿನಲ್ಲಿ ತಂಗಿಯ ಜತೆ ವಾಸವಾಗಿದ್ದೇನೆ. ಮಕ್ಕಳಿಲ್ಲ. ಈಗ ನಮ್ಮ ಹಳ್ಳಿಯ ಮನೆಯನ್ನು ಮಾರಬೇಕೆಂದಿದ್ದೇನೆ. ಆದರೆ ಅದಕ್ಕೆ ಹಲವಾರು ಅಡ್ಡಿ ಆತಂಕಗಳು ಎದುರಾಗಿವೆ. ಇದಕ್ಕೆ ಪರಿಹಾರವೇನು?

| ಹೆಸರು, ಊರು ಬೇಡ

ಈಗ ಕೇತು ಮತ್ತು ಗುರುಗ್ರಹಗಳಿಂದ ಬೇರೆಯವರು ತೊಂದರೆ ತರುತ್ತಿರುವ ಸಂದರ್ಭ ಎದುರಾಗುತ್ತಿದೆ. ಮನೆಯ ವಿಚಾರವನ್ನು ಧೈರ್ಯ ಸ್ಥೈರ್ಯದಿಂದ ಎದುರಿಸಲು ಶುಕ್ರನ ಶಕ್ತಿ ಬಳಸಿಕೊಳ್ಳಬಹುದು. ನೀವು ಒಂದು ತುಲಸಿಯ ಗಿಡಕ್ಕೆ ಜೇನು ಬೆರೆಸಿದ ಹಾಲನ್ನು (ಹಸುವಿನ) ಪ್ರತಿ ಶುಕ್ರವಾರ ಎರೆಯಬೇಕು. ಮುಂದಿನ ಆರು ತಿಂಗಳಲ್ಲಿ ಅನೇಕ ರೀತಿಯ ಒಳಿತುಗಳಿಗೆ ದಾರಿ ಸಿಗಲಿದೆ. ಆಯ ಹಾಗೂ ವಾಸ್ತುವಿಚಾರಗಳ ಬಗ್ಗೆ ಈಗ ಚಿಂತೆ ಬೇಡ. ಶಿವನನ್ನು, ದುರ್ಗೆಯನ್ನು ಆರಾಧಿಸಿ. ದಾರಿ ಸುರಳೀತ.

 

ನನಗೆ ಮದುವೆಯಾದಾಗಿನಿಂದ ಕಷ್ಟಗಳು ಹೆಚ್ಚಾಗಿವೆ.ಚರ್ಮರೋಗ ಬಂದಿದೆ. ಸಾಲಬಾಧೆಯೂ ಕಾಡುತ್ತಿದೆ. ಪರಿಹಾರವಿದೆಯೆ?

| ಹೆಸರು, ಊರು ಬೇಡ

ಬುಧನೂ ಸೂರ್ಯನೂ ವಿವಾಹಕ್ಕೆ ಅವಕಾಶ ಕಲ್ಪಿಸಿ ಕ್ಷೀಣ ಚಂದ್ರನ ಬಾಧೆಯಿಂದ, ಚರ್ಮರೋಗ ಆವರಿಸುವ ದುರ್ಬಲತೆಯನ್ನು ಬುಧನಿಗೆ ಒದಗಿಸಿತು. ಪ್ರತಿದಿನ ಬುಧನ ಬಗೆಗೂ, ಚಂದ್ರ-ಸೂರ್ಯರ ಬಗೆಗೂ ಅಷ್ಟೋತ್ತರ ಪಠಿಸಿ. ಇದರಿಂದ ವೈದ್ಯರ ಸಲಹೆಗಳ ನೆರವು ಒದಗಲು ಸಾಧ್ಯ.

 

ನಾನು ಎಷ್ಟು ದುಡಿದರೂ ಸಾಲುತ್ತಿಲ್ಲ. ಮಗನಿಗೂ ಕೆಲಸವಿಲ್ಲ. ನಾವು ಬಾಡಿಗೆ ಮನೆಯಲ್ಲಿದ್ದೇವೆ. ಮನೆ ಯಾವ ದಿಕ್ಕಿನಲ್ಲಿರಬೇಕು?

| ನಾಗರಾಜ, ಕೋಲಾರ

ಪೂರ್ವದಿಕ್ಕಿನ ಬಾಗಿಲು ಒಳ್ಳೆಯದು. ಹಣ ನಿಲ್ಲಲು ಕುಬೇರ ಅಷ್ಟೋತ್ತರ ಓದಿ. ಸಂಪನ್ನನಾದ ಗುರುವಿಗೂ ಶಕ್ತಿ ಒದಗಿ ಕುಜ ಚಂದ್ರರನ್ನು ಪ್ರೇರೇಪಿಸಲು ಸಾಧ್ಯವಾಗುತ್ತದೆ. ಪ್ರತಿದಿನ ಹರಳುಪ್ಪನ್ನು ತೆಂಗಿನಮರ ಅಥವಾ ವಿಶಾಲವಾಗಿ ಬೆಳೆದುನಿಂತ ಯಾವುದೇ ಮರದ ಕೆಳಗಡೆ ಚೆಲ್ಲಿ. ಶಕ್ತಿದಾಯಕನಾದ ಉಗ್ರನರಸಿಂಹನನ್ನು, ಶಾಂತಮೂರ್ತಿಯಾದ ಲಕ್ಷ್ಮಿಯನ್ನು ಧ್ಯಾನಿಸಿ. ಚೈತನ್ಯಕ್ಕೆ ದಾರಿಯಾಗಲು ಈ ಎಲ್ಲ ಅಂಶಗಳು ಸೂಕ್ತ ಅವಕಾಶ ನಿರ್ವಿುಸುತ್ತವೆ.

ಮಹಾಬಲಮೂರ್ತಿ ಕೊಡ್ಲೆಕೆರೆ 7760063034 (ಪ್ರತಿಕ್ರಿಯಿಸಿ: [email protected], [email protected])

 

 

 

Leave a Reply

Your email address will not be published. Required fields are marked *

Back To Top