Wednesday, 21st March 2018  

Vijayavani

ಮುಂದಿನ ಚುನಾವಣೆಯಲ್ಲಿ ಮೋದಿ ಸೋಲ್ತಾರೆ- ಇಂದಿರಾಗಾಂಧಿಯಂತೆ ನಮ್ಮನ್ನೂ ಗೆಲ್ಲಿಸಿ- ಚಿಕ್ಕಮಗಳೂರಿನಲ್ಲಿ ರಾಹುಲ್‌ ಟಾಕ್‌ವಾರ್‌        ಕುಡಿದು ಅಡ್ಡಾದಿಡ್ಡಿ ಬಸ್‌ ಚಲಾಯಿಸಿದ- ಕಾರು, ಬೈಕ್‌ ಮರಕ್ಕೆ ಡಿಕ್ಕಿ ಹೊಡೆಸಿದ- ಬೆಂಗಳೂರಿನಲ್ಲಿ ಬಿಎಂಟಿಸಿ ಚಾಲಕನ ಅವಾಂತರ        ಜೆಡಿಎಸ್ ಬಂಡಾಯ ಶಾಸಕರ ಅನರ್ಹತೆ ವಿಚಾರ- ಹೈಕೋರ್ಟ್​ಗೆ ಅಭಿಪ್ರಾಯ ತಿಳಿಸಿದ ಸ್ಪೀಕರ್​- ಮುಚ್ಚಿದ ಲಕೋಟೆಯಲ್ಲಿ ಎಜಿ ಮೂಲಕ ರವಾನೆ        5 ಕೋಟಿ ಫೇಸ್​ಬುಕ್‌ಗಳ ಮಾಹಿತಿ ಹ್ಯಾಕ್- ಕಾಂಗ್ರೆಸ್‌ ವಿರುದ್ಧ ಬಿಜೆಪಿ ಗಂಭೀರ ಆರೋಪ- ರವಿಶಂಕರ್‌ ಆರೋಪಕ್ಕೆ ಕೈತಿರುಗೇಟು        ಬೈಕ್ ಸವಾರನ ಮೇಲೆ ಬಿದ್ದ ಬೃಹತ್ ಮರ- ಹೆಲ್ಮೆಟ್ ಧರಿಸಿದ್ದರಿಂದ ಪ್ರಾಣಾಪಾಯದಿಂದ ಪಾರು- ಹೆಲ್ಮೆಟ್​ ಪುಡಿಪುಡಿ ತಲೆ ಸೇಫ್​       
Breaking News

ಪ್ರಯೋಗಕ್ಕಿಳಿದ ಕೃತಿ-ದಿಲ್​ಜಿತ್

Friday, 12.01.2018, 3:02 AM       No Comments

ಹೀರೋ ಎಂದರೆ ಹೀಗೆಯೇ ಇರಬೇಕು ಎಂಬ ಕೆಲವೊಂದಿಷ್ಟು ಕ್ಲೀಷೆಗಳಿವೆ. ಕಟ್ಟುಮಸ್ತಾದ ಮೈಕಟ್ಟು ಹೊಂದಿರಬೇಕು, ಹೇರ್​ಸ್ಟೆ ೖಲ್ ಚೆನ್ನಾಗಿರಬೇಕು, ನೋಡಲು ಸುಂದರವಾಗಿರಬೇಕು ಇತ್ಯಾದಿ. ಈ ನಿಯಮಗಳನ್ನೆಲ್ಲ ಗಾಳಿಗೆ ತೂರಿ ಕೆಲವೊಮ್ಮೆ ಪ್ರಯೋಗಗಳೂ ನಡೆಯುತ್ತವೆ. ಸದ್ಯ ಶಾರುಖ್ ಖಾನ್ ಸ್ಟಾರ್​ಗಿರಿ ಬಿಟ್ಟು ಸಂಪೂರ್ಣ ಕುಳ್ಳನ ಅವತಾರದಲ್ಲಿ ಕಾಣಿಸಿಕೊಳ್ಳಲಿರುವ ‘ಜೀರೋ’ ಚಿತ್ರದ ಬಗ್ಗೆ ಈಗಾಗಲೇ ಸುದ್ದಿಯಾಗಿದೆ. ಈಗ ಬಾಲಿವುಡ್​ನಲ್ಲಿ ಮತ್ತೊಬ್ಬ ಹೀರೋ ಕುಳ್ಳನಾಗಲು ಓಕೆ ಎಂದಿದ್ದಾರೆ. ‘ಉಡ್ತಾ ಪಂಜಾಬ್’ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ನೀಡಿದ ದಿಲ್​ಜಿತ್ ದೊಸಾಂಜ್ ಅವರೇ ಇಂಥ ಗಟ್ಟಿ ನಿರ್ಧಾರ ತೆಗೆದುಕೊಂಡಿರುವುದು. ಈ ಹಿಂದೆ ‘ರಾಬ್ತ’ ಚಿತ್ರವನ್ನು ನಿರ್ದೇಶಿಸಿದ್ದ ದಿನೇಶ್ ವಿಜನ್ ಅವರು ‘ಅರ್ಜುನ್ ಪಟಿಯಾಲಾ’ ಶೀರ್ಷಿಕೆಯಲ್ಲಿ ಹೊಸ ಸಿನಿಮಾ ಮಾಡುತ್ತಿದ್ದಾರೆ.

ಈ ಚಿತ್ರದಲ್ಲಿ ಮಾಮೂಲಿಗಿಂತ ಭಿನ್ನವಾದ ಕಥಾಹಂದರ ಇರಲಿದ್ದು, ನಾಯಕನಿಗಿಂತ ನಾಯಕಿಯೇ ಎತ್ತರವಾಗಿರುತ್ತಾಳಂತೆ. ಅಂಥ ಒಂದು ಜೋಡಿಯ ನಡುವೆ ಪ್ರೇಮಾಂಕುರವಾದರೆ ಹೇಗಿರುತ್ತದೆ ಎಂಬುದೇ ಈ ಚಿತ್ರದ ತಿರುಳು. ನಿಜಜೀವನದಲ್ಲಿ ದಿಲ್​ಜಿತ್ 5.8 ಅಡಿ ಎತ್ತರವಿದ್ದರೆ, ಕೃತಿ 5.7 ಅಡಿ ಎತ್ತರವಿದ್ದಾರೆ. ಆದರೆ ಚಿತ್ರದಲ್ಲಿ ಕೃತಿಗಿಂತಲೂ ಕುಳ್ಳನಾಗಿ ದಿಲ್​ಜಿತ್ ಕಾಣಿಸಿಕೊಳ್ಳಲಿದ್ದಾರೆ. ಕೃತಿಗೆ ಇಲ್ಲಿ ಪತ್ರಕರ್ತೆಯ ಪಾತ್ರ ಇರಲಿದೆಯಂತೆ. ಇಂಥ ಭಿನ್ನ ಲವ್​ಸ್ಟೋರಿಯ ಚಿತ್ರದಲ್ಲಿ ನಟಿಸುವುದು ಕೃತಿಗೆ ಹೊಸದೇನೂ ಅಲ್ಲ. ಕಳೆದ ವರ್ಷ ತೆರೆಕಂಡಿದ್ದ ‘ಬರೇಲಿ ಕಿ ಬರ್ಫಿ’ ಚಿತ್ರದಲ್ಲೂ ಕೆಲವೊಂದಿಷ್ಟು ಪ್ರಯೋಗಾತ್ಮಕ ಅಂಶಗಳಿದ್ದವು. ಅವರ ಜತೆ ರಾಜ್​ಕುಮಾರ್ ರಾವ್ ಮತ್ತು ಆಯುಷ್ಮಾನ್ ಖುರಾನ ನಟಿಸಿದ್ದರು. ಆ ಚಿತ್ರ ಅದ್ದೂರಿ ಯಶಸ್ಸು ಕಂಡ ಬಳಿಕ ಕೃತಿ ಮನಸ್ಸು ಪ್ರಯೋಗಾತ್ಮಕ ಕಥೆಗಳ ಕಡೆಗೆ ಹೆಚ್ಚು ಒಲವು ತೋರಿಸುತ್ತಿದೆ. ಅದಕ್ಕೂ ಮುನ್ನ ‘ಹೀರೋಪಂಥಿ’ ಹೊರತುಪಡಿಸಿದರೆ ಅವರು ಮಾಡಿದ ಕಮರ್ಷಿಯಲ್ ಚಿತ್ರಗಳಾದ ‘ರಾಬ್ತಾ’ ಮತ್ತು ‘ದಿಲ್​ವಾಲೇ’ ಚಿತ್ರಗಳು ಸೋಲುಂಡಿದ್ದವು. ಹಾಗಾಗಿ ಕಮರ್ಷಿಯಲ್ ಸಿನಿಮಾಗಿಂತ ಪ್ರಯೋಗಾತ್ಮಕ ಚಿತ್ರಗಳೇ ಲೇಸು ಎಂಬ ನಿರ್ಧಾರಕ್ಕೆ ಅವರು ಬಂದಂತಿದೆ.

Leave a Reply

Your email address will not be published. Required fields are marked *

Back To Top