Wednesday, 17th January 2018  

Vijayavani

ಸೈಟ್‌ಗಾಗಿ ಸಾಹಿತ್ಯ ಬರೀತಾರೆ - ತಲೆಬುಡ ಇಲ್ಲದ ಸಂದೇಶಗಳನ್ನ ಕೊಡ್ತಾರೆ - ಬುದ್ಧಿಜೀವಿಗಳ ಮೇಲೆ ಮುಗಿಬಿದ್ದ ಕಾಂಟ್ರವರ್ಸಿ ಸಚಿವ        ಪೂಜೆ ಮಾಡಲು ಬಂದವನು ಮಗಳನ್ನೇ ಕೇಳ್ದ - ಜನರ ಕೈಗೆ ಸಿಕ್ಕಿ ಹಣ್ಣುಗಾಯಾದ ಪಿಳ್ಳಂಗೋವಿ ಬಾಬಾ - ಚಿತ್ರದುರ್ಗದ ಕಂಚಿಪುರ ಗ್ರಾಮದಲ್ಲಿ ಡೋಂಗಿಗೆ ಥಳಿತ        14 ತಿಂಗಳಿಂದ ಸಂಬಳ ನೀಡದ ಸಕ್ಕರೆ ಕಾರ್ಖಾನೆ - ಚಿಕಿತ್ಸೆಗೆ ಹಣವಿಲ್ಲದೇ ಮಗು ಕಳೆದುಕೊಂಡ ಕಾರ್ಮಿಕ - ರಾಜಕಾರಣಿಗಳ ಕಿತ್ತಾಟಕ್ಕೆ ಹಸುಗೂಸು ಬಲಿ        ಐಪಿಎಸ್‌ ಅಧಿಕಾರಿಗಳಿಗೆ ಸಿಎಂ, ಗೃಹ ಸಚಿವರ ತರಾಟೆ - ಮತೀಯವಾದಿಗಳ ಮೇಲೆ ಕ್ರಮಕ್ಕೆ ಸೂಚನೆ - ವಾರ್ಷಿಕ ಸಭೆಯಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಕ್ಲಾಸ್        ಗುಜರಾತ್​​​​​ನಲ್ಲಿ ಇಸ್ರೇಲ್​ ಪ್ರಧಾನಿ - ಮೋದಿ ಜತೆಗೆ ಕಾರ್‌ನಲ್ಲಿ ಜಂಟಿ ರೋಡ್‌ ಶೋ - ಸಾಬರಮತಿ ಆಶ್ರಮದಲ್ಲಿ ಚರಕ ಸುತ್ತಿದ ನೆತನ್ಯಾಹು       
Breaking News :

ಪ್ರಯಾಣದ ದಿಂಬು ಸೂಪರ್ರೋ ಸೂಪರು!

Thursday, 11.01.2018, 3:00 AM       No Comments

ಸದಾ ವಿಮಾನ, ಬಸ್ಸು, ಕಾರಿನಲ್ಲಿ ಪ್ರಯಾಣ ಮಾಡುವವರಿಗೆ ನಿದ್ರೆ ಮಾಡುವುದೊಂದು ದೊಡ್ಡ ಸಮಸ್ಯೆಯಾಗಿರುತ್ತದೆ. ಪ್ರಯಾಣದಲ್ಲಿ ನಿದ್ದೆ ಮಾಡಿದಾಗ ನಮಗೆ ಅರಿವಿಲ್ಲದೇ ನಮ್ಮ ತಲೆ ಹೇಗೇಗೋ ವಾಲುತ್ತಿರುತ್ತದೆ. ಕಿಟಕಿ, ಕಂಬಿಗೆ ಟಪ್ ಎಂದು ಹೊಡೆದುಕೊಳ್ಳುತ್ತಿರುತ್ತದೆ. ಇದಕ್ಕೆ ಪರಿಹಾರ ಏನು..?

ಸಣ್ಣ ತಲೆದಿಂಬು ತೆಗೆದುಕೊಂಡು ಹೋದರೂ ಸಹಾಯವಾಗುವುದಿಲ್ಲ. ಅದರಲ್ಲೂ ಮಕ್ಕಳೇನಾದರೂ ನಮ್ಮ ಪ್ರಯಾಣದಲ್ಲಿದ್ದರೆ ಅವರ ಪಾಡು ಹೇಳತೀರದು. ಅದಕ್ಕೆಲ್ಲಾ ಪರಿಹಾರ ಈಗ ದೊರಕಿದೆ.

ಕೆನಡಾದ ಸಿಲ್ವೆನ್ ಬೆರುಬೆ ಎಂಬ ಕ್ರೀಡಾಳು ಚಿಕಿತ್ಸಕ ‘ದ ಮೋನ್​ಪೆರೆ’ ಎಂಬ ಪ್ರಯಾಣದ ದಿಂಬನ್ನು ಕಂಡುಹಿಡಿದಿದ್ದಾರೆ. ಇದರಿಂದ ನೀವು ಎಲ್ಲಿ ಬೇಕಾದರೂ, ಹೇಗೆ ಬೇಕಾದರೂ ಆರಾಮಾಗಿ ನಿದ್ದೆ ಮಾಡಬಹುದು.

ಎರಡು ಕೈಗಳ ಆಕಾರದಲ್ಲಿರುವ ಈ ದಿಂಬಿನ ಹೊರ ಮೈ ಹತ್ತಿ ಬಟ್ಟೆಯಿಂದ ಮಾಡಿದೆ. ಯಾರಿಗೆ ಹೇಗೆ ಬೇಕೋ ಹಾಗೆ ಆಕಾರ ಪಡೆದುಕೊಳ್ಳುತ್ತದೆ. ಮಲಗಿರುವ ಜಾಗ, ದೇಹಸ್ಥಿತಿ ಹೇಗೆ ಇದ್ದರೂ, ತಲೆ ಎಷ್ಟೇ ತೂಕವಿದ್ದರೂ ಈ ದಿಂಬು ಸಮತೋಲನವನ್ನು ಕಾಯ್ದುಕೊಳ್ಳುತ್ತದೆಯಂತೆ. ಈ ದಿಂಬನ್ನು ತಯಾರಿಸಲು ಬರೋಬ್ಬರಿ 4 ವರ್ಷ ತೆಗೆದುಕೊಂಡಿದ್ದಾರಂತೆ ಸಿಲ್ವೆನ್.

ಈಗಾಗಲೇ ಈ ದಿಂಬಿಗೆ ಭಾರಿ ಬೇಡಿಕೆ ಬಂದಿದ್ದು, 1,12,000 ಕೆನಡಾ ಡಾಲರ್​ನಷ್ಟು ಹಣವನ್ನು ತನ್ನ ಮೊದಲ ಸೇಲ್​ನಲ್ಲೆ ಸಂಗ್ರಹಿಸಿದೆಯಂತೆ. ನಿರೀಕ್ಷಿದಕ್ಕಿಂತ 3 ಪಟ್ಟು ಹೆಚ್ಚು ಮಾರಾಟವಾಗುತ್ತಿದೆ ಎನ್ನುತ್ತಿದ್ದಾರೆ ಸಿಲ್ವೆನ್.

 

Leave a Reply

Your email address will not be published. Required fields are marked *

Back To Top