Friday, 19th October 2018  

Vijayavani

ನಾಡಿನೆಲ್ಲೆಡೆ ವಿಜಯದಶಮಿ ಸಡಗರ-ಐತಿಹಾಸಿಕ ಜಂಬೂಸವಾರಿಗೆ ಕ್ಷಣಗಣನೆ-ಸಾಂಸ್ಕೃತಿಕ ನಗರಿಯತ್ತ ಜನಸ್ತೋಮ ತೂಕ ಹೆಚ್ಚಿಸಿಕೊಂಡ ಅರ್ಜುನ & ಟೀಂ-ಅಂಬಾರಿ ಹೊರಲು ಕ್ಯಾಪ್ಟನ್ ಗ್ರೀನ್‌ ಸಿಗ್ನಲ್-ಮೈಸೂರು ನಗರಿಗೆ ಬಿಗಿ ಬಂದೋಬಸ್ತ್​​​        ಡಿಕೆ ತಪ್ಪೊಪ್ಪಿಗೆಗೆ ಕಾಂಗ್ರೆಸ್​​​​​​ನಲ್ಲಿ ಭಿನ್ನಮತ-ಕನಕಪುರ ನಾಯಕನ ವಿರುದ್ಧ ದಿಗ್ಗಜರ ಆಕ್ರೋಶ-ಉಪಚುನಾವಣೆ ಹೊತ್ತಲ್ಲಿ ಬೇಕಿತ್ತಾ ಇದೆಲ್ಲಾ..?        ಶಬರಿಮಲೆ ಸುತ್ತ ನಿಲ್ಲದ ಪ್ರತಿಭಟನೆ-ಸುಪ್ರೀಂಗೆ ಅರ್ಜಿ ಸಲ್ಲಿಕೆ ಕುರಿತು ಮತ್ತೊಮ್ಮೆ ಸಭೆ-ಅಯ್ಯಪ್ಪನ ಪೂಜೆಗೆ ಕರ್ನಾಟಕದ ಅರ್ಚಕನ ನೇಮಕ        ಅಮೆರಿಕಾ ಅಧ್ಯಕ್ಷನಿಂದ ಮತ್ತೊಂದು ಶಾಕ್​-ಎಚ್​​1 ಬಿ ವೀಸಾ ನಿಯಮ ಮತ್ತಷ್ಟು ಬಿಗಿ ಮಾಡಲು ಸಿದ್ಧತೆ-ಅನಿವಾಸಿ ಭಾರತೀಯರಿಗೆ ತಟ್ಟಲಿದೆ ಭಾರಿ ಬಿಸಿ        ಕಲೆಕ್ಷನ್​​​​​​ನಲ್ಲಿ ಧೂಳೆಬ್ಬಿಸುತ್ತಿದ್ಧಾನೆ ವಿಲನ್​-ಮೊದಲ ದಿನವೇ ಇಪ್ಪತ್ತುವರೆ ಕೋಟಿ ಕಲೆಕ್ಷನ್​-ಸ್ಯಾಂಡಲ್​​​ವುಡ್​​​​ನ ದಾಖಲೆಗಳೆಲ್ಲ ಪೀಸ್​ ಪೀಸ್​​       
Breaking News

ಪ್ರಭುತ್ವ ವಿರೋಧಿ ಅಲೆ

Sunday, 03.12.2017, 3:02 AM       No Comments

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನಡೆಸಿರುವ ಪರಿವರ್ತನಾ ಯಾತ್ರೆ ರಾಜ್ಯ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಸೃಷ್ಟಿಸಲು ಯಶಸ್ವಿಯಾಗಿದ್ದು, ಇದರ ಕಾವು ಕಾಯ್ದಿರಿಸಿಕೊಳ್ಳಲು ಮುಂದಿನ 3 ತಿಂಗಳ ಕಾಲ ನಿರಂತರ ಕಾರ್ಯಕ್ರಮಗಳ ಮೂಲಕ ಮತವಾಗಿ ಪರಿವರ್ತನೆ ಮಾಡಲು ಬಿಜೆಪಿ ಮುಂದಾಗಿದೆ.

ರಾಜ್ಯದ 60 ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆಗೆ ಸಿಕ್ಕಿರುವ ಜನ ಬೆಂಬಲ, ಅಲ್ಲಿ ಯಡಿಯೂರಪ್ಪ ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿಸುತ್ತ ಮಾಡುತ್ತಿರುವ ಭಾಷಣಕ್ಕೆ ಸಾಮಾನ್ಯರಿಂದ ಸಿಗುತ್ತಿರುವ ಸ್ಪಂದನೆ ಪ್ರಭುತ್ವ ವಿರೋಧಿ ಅಲೆಯನ್ನು ಸೃಷ್ಟಿಸಲು ಯಶಸ್ವಿಯಾಗಿದೆ ಎಂದು ಬಿಜೆಪಿಯ ಪದಾಧಿಕಾರಿಗಳು ವಿಶ್ಲೇಷಣೆ ಮಾಡುತ್ತಾರೆ. ಯಾವುದೇ ರಾಜಕೀಯ ಸಮಾರಂಭಗಳಲ್ಲಿ ಜನ ಸಾಮಾನ್ಯರು ಕೊನೆಯ ತನಕ ಭಾಗವಹಿಸುವುದು, ಸರ್ಕಾರದ ವಿರುದ್ಧ ಟೀಕೆಗೆ ನೀಡುವ ಸ್ಪಂದನೆ, ಕೇಳಿ ಬರುವ ಶಿಳ್ಳೆ, ಕೇಕೆಗಳು, ಎಷ್ಟು ಪ್ರಮಾಣದಲ್ಲಿ ಜನ ಸಾಮಾನ್ಯರು ಭಾಗವಹಿಸಿದ್ದಾರೆ ಎಂಬುವು ಪ್ರಮುಖ ಅಂಶಗಳು.

ಪ್ರದೇಶವಾರು ಪ್ರಸ್ತಾಪ: ಯಡಿಯೂರಪ್ಪ ಬಹಳ ಎಚ್ಚರಿಕೆಯಿಂದಲೇ ಪ್ರದೇಶವಾರು ವಿಷಯಗಳನ್ನು ಪ್ರಸ್ತಾಪ ಮಾಡುತ್ತಿದ್ದಾರೆ. ಬಿಜೆಪಿ ಪ್ರಬಲವಾಗಿರುವ ಕರಾವಳಿಯ ಜಿಲ್ಲೆಗಳಲ್ಲಿ ಹಿಂದುತ್ವದ ವಿಷಯ, ಹಿಂದು ಕಾರ್ಯಕರ್ತರ ಮೇಲೆ ಹಲ್ಲೆಯ ಪ್ರಕರಣ, ಬೆಳಗಾವಿಯಲ್ಲಿ ಮಹಾದಾಯಿ ವಿವಾದವನ್ನು ಬಗೆ ಹರಿಸುವ ಭರವಸೆ, ಕಬ್ಬಿನ ಬೆಲೆ ನಿಗದಿಯಲ್ಲಿ ಸರ್ಕಾರ ಎಡವಿದ ರೀತಿ, ವಿಜಯಪುರ ಜಿಲ್ಲೆಯಲ್ಲಿ ಕೆರೆಗಳ ನೀರು ತುಂಬಿಸುವಲ್ಲಿ ಆಗಿರುವ ವೈಪಲ್ಯದಂತಹ ವಿಚಾರಗಳ ಮೂಲಕವೇ ಸರ್ಕಾರವ ವಿರುದ್ಧ ಎತ್ತಿ ಕಟ್ಟುವ ಪ್ರಯತ್ನ ಯಶಸ್ವಿಯಾಗಿ ಮಾಡಿದ್ದಾರೆ. ನವಶಕ್ತಿ ಸಮಾವೇಶ

ಪರಿವರ್ತನಾ ಯಾತ್ರೆ ನಡೆಯುತ್ತಿರುವ ಜಿಲ್ಲೆಗಳಲ್ಲಿ ಕಾರ್ಯಕ್ರಮ ಯಶಸ್ವಿ ಯಾಗುತ್ತಿದೆ. ಪ್ರತಿ ಕ್ಷೇತ್ರದಲ್ಲೂ 10ರಿಂದ 15 ಸಾವಿರ ಜನ ಸೇರುತ್ತಿದ್ದಾರೆ. ಮುಂದೆ ಯಾತ್ರೆ ನಡೆಯುವ ಜಿಲ್ಲೆ ಗಳಲ್ಲಿ ಸಿದ್ಧತೆ ಇರುತ್ತದೆ. ಆದರೆ ಯಾತ್ರೆ ಮುಗಿದ ಜಿಲ್ಲೆಗಳಲ್ಲಿ ಕಾರ್ಯಕರ್ತರಲ್ಲಿ ಮೂಡಿರುವ ಉತ್ಸಾಹದ ಕಾವು ಮುಂದುವರಿಸಲು ಯೋಜನೆ ಸಿದ್ಧವಾಗಿದೆ. ಈ ಯೋಜನೆ ಪ್ರಕಾರ ಈಗಿರುವ ಕಾವನ್ನು ಮತವಾಗಿ ಪರಿವರ್ತನೆ ಮಾಡಬೇಕೆಂಬ ಉದ್ದೇಶದಿಂದ ಪ್ರತಿ ತಾಲೂಕಿನಲ್ಲಿ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಅದಕ್ಕೆ ನವಶಕ್ತಿ ಸಮಾವೇಶವೆಂಬ ಹೆಸರು ನೀಡಲಾಗುತ್ತದೆ. ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತ, ಯುವ, ಮಹಿಳಾ ಮೋರ್ಚಾಗಳ ಪದಾಧಿಕಾರಿಗಳು ಆಸಕ್ತಿ ತೆಗೆದುಕೊಂಡು ಸಮಾವೇಶ ಯಶಸ್ವಿಗೊಳಿಸುವಂತೆ ಸೂಚನೆ ನೀಡಲಾಗಿದೆ. ತಾಲೂಕು ಮಟ್ಟದ ನಂತರ ಮಂಡಲ ಮಟ್ಟದಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶ ನಡೆಸಲಾಗುತ್ತದೆ. ಕಲಹಕ್ಕೆ ಪರಿಹಾರ

ಪರಿವರ್ತನಾ ಯಾತ್ರೆ ಕೇವಲ ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸುವುದು ಮಾತ್ರವಲ್ಲ, ಬಿಜೆಪಿಯಲ್ಲಿದ್ದ ಆಂತರಿಕ ಕಲಹ ಮುಚ್ಚಿ ಹಾಕಿದೆ. ಬೆಂಗಳೂರಿನಿಂದ ಹೊರಗಡೆ ಸಿಗುತ್ತಿರುವ ಬೆಂಬಲ ಪಕ್ಷದಲ್ಲಿನ ಯಡಿಯೂರಪ್ಪ ವಿರೋಧಿಗಳ ಬಾಯಿ ಮುಚ್ಚಿಸಿದೆ. ಪಕ್ಷ ಗೆದ್ದರೇ ಮಾತ್ರ ನಮಗೆಲ್ಲ ಭವಿಷ್ಯವೆಂದು ಎಲ್ಲಾ ಮುಖಂಡರು ಭಾಗವಹಿಸುತ್ತಿದ್ದಾರೆ. ಕಾಂಗ್ರೆಸ್​ನಲ್ಲಿ ಭಿನ್ನಮತ

ಬಿಜೆಪಿಯ ಪರಿವರ್ತನಾ ಯಾತ್ರೆ ಕಾಂಗ್ರೆಸ್​ನಲ್ಲಿ ದಿಕ್ಕು ತೋಚದಂತಹ ಸ್ಥಿತಿಯನ್ನು ನಿರ್ಮಾಣ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ನಡುವೆ ಭಿನ್ನಮತ ಹೆಚ್ಚಾಗುವಂತೆ ಮಾಡಿದ್ದು ಪರಿವರ್ತನಾ ಯಾತ್ರೆಗೆ ಯಾವ ರೀತಿ ಉತ್ತರ ನೀಡಬೇಕು ಎಂಬುದೇ ಕಾಣದಂತಹ ಸ್ಥಿತಿ ಇದೆ. ಯಾತ್ರೆಯ ಉದ್ದಗಲಕ್ಕೂ ಕೇವಲ ಸಿಎಂ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿದ್ದು, ಜೆಡಿಎಸ್ ವಿರುದ್ಧ ಎಲ್ಲಿಯೂ ಟೀಕೆ ಮಾಡಿಲ್ಲ.

Leave a Reply

Your email address will not be published. Required fields are marked *

Back To Top