Monday, 11th December 2017  

Vijayavani

1. ಮತ್ತಷ್ಟು ಹದಗೆಟ್ಟ ರವಿ ಬೆಳಗೆರೆ ಆರೋಗ್ಯ – ಕಾಲು ನೋವು, ನಿಶ್ಯಕ್ತಿಯಿಂದ ಪತ್ರಕರ್ತನ ನರಳಾಟ – ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ 2. ಮಧ್ಯಾಹ್ನ 12ಕ್ಕೆ ಕೋರ್ಟ್​ಗೆ ಹಾಜರ್ – ರವಿ ಬೆಳಗೆರೆ ವಿರುದ್ಧ ಮತ್ತೊಂದು ಕೇಸ್‌ – ಪತ್ರಕರ್ತನಿಗೆ ಜೈಲಾ..? ಬೇಲಾ..? 3. ಬಳ್ಳಾರಿಯಲ್ಲಿ ಗಣಿಗಾರಿಕೆ ವಿರುದ್ಧ ಕೂಗು – ಕುಮಾರಸ್ವಾಮಿ ಬೆಟ್ಟ ಉಳಿವಿಗೆ ಸಂಡೂರು ಬಂದ್ – ಅಂಗಡಿ, ಮುಂಗಟ್ಟುಗಳಿಗೆ ಬೀಗ, ಶಾಲಾ-ಕಾಲೇಜಿಗೆ ರಜೆ 4. ರಾಜ್ಯ ಸರ್ಕಾರದಿಂದ ಬಿಜೆಪಿ ಹತ್ತಿಕ್ಕುವ ಕೆಲಸ – ರ‍್ಯಾಲಿಯಲ್ಲಿ ಭಾಗಿಯಾದವ್ರ ವಿರುದ್ಧ ಟ್ರಾಫಿಕ್‌ ಪೊಲೀಸ್‌ ಕೇಸ್ – ಕಲಬುರಗಿಯಲ್ಲಿ ಖಾಕಿ, ಕೇಸರಿ ಕದನ 5. ಪ್ರಧಾನಿ ಮೋದಿ ರ‍್ಯಾಲಿಗೆ ಅವಕಾಶವಿಲ್ಲ – ಮೆಗಾ ರೋಡ್​ ಶೋಗೆ ಅನುಮತಿ ನಿರಾಕರಣೆ – ರಾಹುಲ್ ಸಮಾವೇಶಕ್ಕೂ ಗುಜರಾತ್ ಪೊಲೀಸರ ತಡೆ
Breaking News :

ಪ್ರಧಾನಿ ಮೋದಿ ಭೇಟಿಯಾದ ಸಚಿನ್ ತೆಂಡುಲ್ಕರ್

Saturday, 20.05.2017, 3:01 AM       No Comments

ನವದೆಹಲಿ: ಟೀಮ್ ಇಂಡಿಯಾ ಮಾಜಿ ಆಟಗಾರ ಹಾಗೂ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಶುಕ್ರವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು. ಈ ವೇಳೆ ಮುಂದಿನ ವಾರ ಬಿಡುಗಡೆ ಯಾಗಲಿರುವ ಬಯೋಪಿಕ್, ‘ಸಚಿನ್: ಎ ಬಿಲಿಯನ್ ಡ್ರೀಮ್್ಸ’ ಕುರಿತಾಗಿ ಮೋದಿ ಜತೆ ಸಚಿನ್ ಚರ್ಚೆ ನಡೆಸಿದರು.

‘ನಾನು ಕೂಡ ದೆಹಲಿಯಲ್ಲಿದ್ದೆ. ಪ್ರಧಾನಿಯವರಿಗೆ ಸಿನಿಮಾ ಕುರಿತಾಗಿ ಮಾಹಿತಿ ನೀಡಿದರೆ ಒಳ್ಳೆಯದು ಅನಿಸಿತು. ಈ ಸಿನಿಮಾದಲ್ಲಿ ಇರುವ ಅಂಶಗಳ ಬಗ್ಗೆ ಅವರಿಗೆ ವಿವರಿಸಿದೆ. ಇದರಿಂದ ಸಂತಸಗೊಂಡ ಅವರು, ಚಿತ್ರದ ಕುರಿತು ಪ್ರೋತ್ಸಾಹಕ ಪ್ರತಿಕ್ರಿಯೆ ನೀಡಿದರು’ ಎಂದು ಭೇಟಿಯ ಬಳಿಕ ಸಚಿನ್ ತಿಳಿಸಿದರು. ಮುಂದಿನ ಜನರೇಷನ್​ಗೆ ಮಾತ್ರವೇ ಈ ಚಿತ್ರ ಸ್ಪೂರ್ತಿ ನೀಡುವುದಿಲ್ಲ. ಬದುಕಿನಲ್ಲಿ ಇಂಥ ಸವಾಲುಗಳನ್ನು ಎದುರಿಸುವ ಎಲ್ಲರಿಗೂ ನನ್ನ ಜೀವನದ ಏಳು-ಬೀಳುಗಳ ಬಗ್ಗೆ ತಿಳಿಸಲಿದೆ. ಸವಾಲುಗಳಿಗೆ ಶರಣಾಗದೆ ಅದನ್ನು ಎದುರಿಸುವ ಕಲೆಯನ್ನು ಈ ಚಿತ್ರ ಕಲಿಸುತ್ತದೆ. ಚಿತ್ರ ಎಲ್ಲರ ಜೀವನಕ್ಕೂ ಅನ್ವಯಿಸುತ್ತದೆ ಎಂದು ಪ್ರಧಾನಿ ಹೇಳಿದ್ದಾಗಿ ತಿಳಿಸಿದರು. ಜೇಮ್್ಸ ರಿಸ್ಕಿನ್ ನಿರ್ದೇಶನದ ಈ ಚಿತ್ರ ಮೇ 26 ರಂದು ಬಿಡುಗಡೆಯಾಗಲಿದೆ.

ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದ ಮೋದಿ, ಬಳಿಕ ಸಚಿನ್​ಗಾಗಿಯೇ ಒಂದು ಸಂದೇಶವನ್ನು ಬರೆದರು. ‘ಜೋ ಖೇಲೇ, ವಹಿ ಖಿಲೇ’ (ಯಾರು ಆಡುತ್ತಾರೋ, ಅವರೇ ಹೊಳೆಯುತ್ತಾರೆ) ಎಂದು ಮೋದಿ ಬರೆದ ಸಂದೇಶ ಕ್ರೀಡಾಪಟುವಾಗಿ ನನಗೆ ಬಹಳ ವಿಶೇಷ ಎಂದು ತೆಂಡುಲ್ಕರ್ ಹೇಳಿದ್ದಾರೆ. 44 ವರ್ಷದ ಸಚಿನ್, ಪತ್ನಿ ಅಂಜಲಿ ಹಾಗೂ ಇತರ ಕೆಲವರೊಂದಿಗೆ ಭೇಟಿ ನಡೆಸಿದರು. ಸಚಿನ್ ಜತೆ ಚರ್ಚೆ ಮಾಡಿದ ಚಿತ್ರವನ್ನು ಪ್ರಧಾನಿ ಮೋದಿ ಕೂಡ ಟ್ವಿಟರ್​ನಲ್ಲಿ ಪ್ರಕಟಿಸಿದರು. ‘ಸಚಿನ್ ಜತೆ ಅತ್ಯುತ್ತಮ ಚರ್ಚೆ ನಡೆಯಿತು. ಅವರ ಜೀವನ ಯಾನ ಹಾಗೂ ಸಾಧನೆಗಳು ದೇಶದ ಪ್ರತಿಯೊಬ್ಬರಿಗೂ ಹೆಮ್ಮೆಯ ಸಂಗತಿ ಮತ್ತು 1.25 ಬಿಲಿಯನ್ ಜನತೆಗೆ ಸ್ಪೂರ್ತಿ’ ಎಂದು ಟ್ವೀಟ್ ಮಾಡಿದ್ದಾರೆ.

 2012ರಲ್ಲಿ ರವಿ (ಚಿತ್ರದ ನಿರ್ವಪಕ) ಕ್ರೀಡಾ ಪಟುಗಳ ಕುರಿತಾದ ಚಿತ್ರವನ್ನು ನಿರ್ವಿುಸುತ್ತಿರುವ ಬಗ್ಗೆ ಮಾತನಾಡಿದ್ದರು. ಇದೇ ವೇಳೆ ನನ್ನ ಜೀವನದ ಬಗ್ಗೆ ಸಿನಿಮಾ ಮಾಡುವುದಾಗಿಯೂ ಹೇಳಿದ್ದರು. ‘ನಟಿಸಲು ನನಗೆ ಇಷ್ಟವಿಲ್ಲ’ ಎಂದು ತಿಳಿಸಿದ್ದೆ. ಚಿತ್ರದ ಕುರಿತಾಗಿ ವಿವರಣೆ ನೀಡಿದ ಬಳಿಕ ಆಗಬಹುದು ಎಂದಿದ್ದೆ. ನನ್ನ ಜೀವನದ ಕುರಿತಾಗಿ ಫಿಕ್ಷನ್ (ಕಲ್ಪನಾತ್ಮಕ) ಚಿತ್ರ ಸಾಧ್ಯವಿರಲಿಲ್ಲ. ಯಾವುದೇ ರೀಟೇಕ್​ಗಳಿಲ್ಲದೆ ಚಿತ್ರ ನಿರ್ವಣವಾಗಲಿದೆ ಎಂದಾಗ ಒಪ್ಪಿಕೊಂಡಿದ್ದೆ.

| ಸಚಿನ್ ತೆಂಡುಲ್ಕರ್

Leave a Reply

Your email address will not be published. Required fields are marked *

Back To Top