Friday, 18th August 2017  

Vijayavani

1. ಕಾಂಗ್ರೆಸ್‌ನಲ್ಲಿ ಎಡಪಂಥಿಯರಿಗೆ ಮಾತ್ರ ಮಣೆ- ಚುನಾವಣಾ ತಂತ್ರಗಾರ ಕೈ ಗುಡ್‌ಬೈ- ಅಲ್ಪ ಸಂಖ್ಯಾತರರನ್ನ ಅತಿಯಾಗಿ ಓಲೈಸ್ತಿದ್ಯಾ ಕಾಂಗ್ರೆಸ್‌.? 2. ಜೆಡಿಎಸ್​ ಭಿನ್ನರಿಗೆಲ್ಲಾ ಇಲ್ಲಾ ಟಿಕೆಟ್​ – 3 ಕ್ಷೇತ್ರಗಳ ಟಿಕೆಟ್​​​​​​​​ಗೆ ಖಾತ್ರಿ ನೀಡದ ಖರ್ಗೆ- ತ್ರಿಶಂಕು ಸ್ಥಿತಿಯಲ್ಲಿ ಜೆಡಿಎಸ್​​​​​​ ಭಿನ್ನರ ಸ್ಥಿತಿ 3. ಸಿಲಿಕಾನ್ ಸಿಟಿಗೆ ಖತರ್ನಾಕ್​ ಗ್ಯಾಂಗ್​ ಎಂಟ್ರಿ- ಸೆಕ್ಯೂರಿಟಿ ಡ್ರೆಸ್​​​ನಲ್ಲಿ ಮಾಡ್ತಿದ್ದಾರೆ ಕಳ್ಳತನ- ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಕೃತ್ಯ 4. ರಾಜೀನಾಮೆ ಬಳಿಕ ವಿಶಾಲ್‌ ಸಿಕ್ಕಾ ಮೊದಲ ಮಾತು- ನನ್ನ ಜೀವನದ ದುಃಖದ ವಿಚಾರ ಅಂತಾ ಬೇಸರ- ಅತ್ತ ನಾನು ಕಾರಣನಲ್ಲ ಎಂದ ನಾರಾಯಣ ಮೂರ್ತಿ 5. ಯುಪಿ ಆಸ್ಪತ್ರೆಯಲ್ಲಿ ಮಕ್ಕಳ ಸಾವು ಪ್ರಕರಣ- ಹೈಕೋರ್ಟ್‌ನಿಂದ ಯೋಗಿ ಸರ್ಕಾರಕ್ಕೆ ತರಾಟೆಗೆ- ಕೂಡಲೇ ವರದಿ ನೀಡಲು ಸೂಚನೆ
Breaking News :

ಪ್ರಜಾಕೀಯಕ್ಕೆ ಉಪ್ಪಿ ರಿಯಲ್ ಎಂಟ್ರಿ?

Saturday, 12.08.2017, 3:08 AM       No Comments

ಬೆಂಗಳೂರು: ಹಲವಾರು ವರ್ಷಗಳಿಂದ ಸಿನಿಮಾ ಹಾಗೂ ಸಾಮಾಜಿಕ ಜಾಲತಾಣಗಳಲ್ಲೂ ರಾಜಕೀಯ ಪರಿವರ್ತನೆಯ ಚರ್ಚೆ ಮಾಡುತ್ತಿದ್ದ ರಿಯಲ್ ಸ್ಟಾರ್ ಉಪೇಂದ್ರ ರಿಯಲ್ಲಾಗಿ ರಾಜಕೀಯಕ್ಕೆ ಕಾಲಿಡುವುದು ಖಾತ್ರಿಯಾಗಿದೆ.

ಸ್ವತಃ ಉಪೇಂದ್ರ ಈ ಕುರಿತು ಧ್ವನಿ ಮುದ್ರಿಕೆಯೊಂದನ್ನು ಶುಕ್ರವಾರ ಬಿಡುಗಡೆ ಮಾಡಿದ್ದಾರೆ. 13 ನಿಮಿಷವಿರುವ ಆಡಿಯೋ ತುಣುಕಿ ನಲ್ಲಿ ಅನೇಕ ವಿಚಾರಗಳನ್ನು ರ್ಚಚಿಸಿದ್ದಾರೆ. ರಾಜಕಾರಣಿಗಳು ಹಾಗೂ ಅಧಿಕಾರಿಗಳು ನಮ್ಮ ನೌಕರರಿದ್ದಂತೆ. ಆದರೆ ಅವರನ್ನೇ ನಮ್ಮ ರಾಜರಂತೆ ಬಿಂಬಿಸಲು ನಮ್ಮ ತಪ್ಪೂ ಕಾರಣ. ಅನರ್ಹರನ್ನು ಮೇಲೆ ಕೂರಿಸಿದ್ದರಿಂದಾಗಿಯೇ ಭ್ರಷ್ಟಾಚಾರ ಹೆಚ್ಚಾಗಿದೆ. ಚುನಾವಣೆಗೆ ಟಿಕೆಟ್ ನೀಡುವ ಮುನ್ನ ತಮ್ಮ ಕ್ಷೇತ್ರದ ಸಮಸ್ಯೆ ಹಾಗೂ ಪರಿಹಾರದ ಕುರಿತು ಲೇಖನ ಬರೆದು ಕಳಿಸಬೇಕು. ಇದನ್ನು ಪಕ್ಷದ ವರಿಷ್ಠರು ಓದಿ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಿ ಟಿಕೆಟ್ ನೀಡುವಂತಾಗಬೇಕು. ಅಭ್ಯರ್ಥಿಗಳನ್ನು ಜಾತಿ, ಮತ, ಹಣದಿಂದ ಅಳೆಯುವುದನ್ನು ಜನರು ಬಿಡಬೇಕು. ಟಿವಿ ಚಾನೆಲ್​ಗಳಲ್ಲಿ ಒಂದೆಡೆ ಕುಳಿತು ರಾಜ್ಯದ ಎಲ್ಲೆಡೆಯ ವರದಿಗಾರರನ್ನು ನಿಯಂತ್ರಿಸುವ ರೀತಿಯಲ್ಲಿ ಸಚಿವರು ಶಾಸಕರ ಮೇಲೆ ನಿಗಾ ಇಡಬೇಕು. ಶಾಸಕರ ಎಲ್ಲ ಕೆಲಸಗಳೂ ಆನ್​ಲೈನ್​ನಲ್ಲಿ ಜನರಿಗೆ ಕಾಣಬೇಕು.

ದುಡ್ಡೇ ಇಲ್ಲದೆ ಚುನಾವಣೆ ಗೆಲ್ಲಬೇಕು ಎಂದರೆ ಪಾರ್ಟಿ ಫಂಡ್ ಎನ್ನುವ ವಿಚಾರವೇ ಇಲ್ಲದಂತಾಗಬೇಕು. ಇದೇ ಭ್ರಷ್ಟಾಚಾರಕ್ಕೆ ಮೂಲ. ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳನ್ನಷ್ಟೆ ಬಳಸಿಕೊಂಡು ಬಾಯಿಂದ ಬಾಯಿಗೆ ಪ್ರಚಾರ ಮಾಡಿ ಗೆಲ್ಲುವ ವಾತಾವರಣ ನಿರ್ಮಾಣ ಆಗಬೇಕು‘ ಎಂದಿದ್ದಾರೆ.

ಇಂಥದ್ದೊಂದು ಪ್ರಯತ್ನಕ್ಕೆ ತಾವೇ ಕೈಹಾಕುವುದಾಗಿ ತಿಳಿಸಿರುವ ಉಪ್ಪಿ, ದುಡ್ಡೇ ಇಲ್ಲದ ಪಕ್ಷವೊಂದನ್ನು ಆರಂಭಿಸುವುದಾಗಿ ಹೇಳಿದ್ದಾರೆ. ರಾಜಕೀಯ ಎನ್ನುವ ಬದಲಿಗೆ ‘ಪ್ರಜಾಕೀಯ‘ ಎಂಬ ಪದವನ್ನೂ ಸೃಷ್ಟಿಸಿದ್ದಾರೆ. ‘ಈ ಹೋರಾಟದಲ್ಲಿ ಕೈಜೋಡಿಸಬಲ್ಲವರು ನನ್ನ ಮನೆ ಬಳಿ ಬರುವ ಅವಶ್ಯಕತೆಯಿಲ್ಲ. ತಮ್ಮ ಕ್ಷೇತ್ರದ ಕುರಿತು ಲೇಖನವೊಂದನ್ನು ಬರೆದು ನನಗೆ

ಕಳಿಸಿದರೆ ಸಾಕು. ಇತರೆ ಪಕ್ಷಗಳೂ ಇದೇ ರೀತಿ ಮಾಡ ಬಹುದು. ಯಾರು ಮಾಡಲಿ, ಬಿಡಲಿ ನಾನಂತೂ ಹೆಜ್ಜೆ ಇಟ್ಟಿದ್ದೇನೆ. ಸೋಲುವ ಭಯ, ಗೆಲ್ಲುವ ಅಹಂಕಾರವಿಲ್ಲ. ಸತ್ಯಮೇವ ಜಯತೆ ಘೋಷಣೆಯೊಂದಿಗೆ ಫಲಾಪೇಕ್ಷೆಯಿಲ್ಲದೆ ಕೆಲಸ ಆರಂಭಿಸಿದ್ದೇನೆ’ ಎಂದಿದ್ದಾರೆ.

***

ಗುಟ್ಟು ಬಿಟ್ಟುಕೊಡದ ನಟ

ಹೊಸ ಪಕ್ಷಕ್ಕೆ ಹೆಸರು ಹಾಗೂ ಯಾವಾಗಿನಿಂದ ಪ್ರಾರಂಭ ಎಂಬ ಕುರಿತು ಉಪೇಂದ್ರ ಗುಟ್ಟು ಬಿಟ್ಟುಕೊಟ್ಟಿಲ್ಲ. ಇದೆಲ್ಲದರ ನಡುವೆ ಅವರು ಬಿಜೆಪಿಗೆ ಸೇರ್ಪಡೆ ಆಗಬಹುದು ಎಂಬ ಸುದ್ದಿಗಳೂ ಹರಿದಾಡುತ್ತಿವೆ. ಚಿಂತಕರೊಂದಿಗೆ ಅಮಿತ್ ಷಾ ನಡೆಸುತ್ತಿರುವ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಇದ್ಯಾವುದನ್ನು ಉಪೇಂದ್ರ ಖಚಿತಪಡಿಸಿಲ್ಲ.

Leave a Reply

Your email address will not be published. Required fields are marked *

Back To Top