Saturday, 20th October 2018  

Vijayavani

ಚೀಪ್ ಮೆಂಟಾಲಿಟಿ ನನಗಿಲ್ಲ - ಇದರ ಹಿಂದೆ ಕೈವಾಡ ಇರಬಹುದು - ನಟಿ ಶ್ರುತಿ ಹರಿಹರನ್ ಆರೋಪ ತಳ್ಳಿಹಾಕಿದ ಅರ್ಜುನ್ ಸರ್ಜಾ        ಸ್ಯಾಂಡಲ್​ವುಡ್​​ನಲ್ಲಿ ಮೀ ಟೂ - ನಾಳೆ ಸುದ್ದಿಗೋಷ್ಠಿಯಲ್ಲಿ ಶ್ರುತಿ ಹಾಕ್ತಾರಾ ಬಾಂಬ್ - ನಟಿ ವಿರುದ್ಧ ಗುಡುಗಿದ ಅರ್ಜುನ್ ಸರ್ಜಾ ಅತ್ತೆ        ಧರ್ಮ ವಿಚಾರದಲ್ಲಿ ಡಿಕೆಶಿ ಕ್ಷಮೆಯಾಚನೆಗೆ ಸಿದ್ದು ಸಿಟ್ಟು - ಒಂದೇ ವೇದಿಯಲ್ಲಿದ್ರೂ ಮುಖ ಮುಖ ನೋಡಲಿಲ್ಲ - ಜಂಟಿ ಸುದ್ದಿಗೋಷ್ಠಿಯಲ್ಲಿ ನಾಯಕರ ಮಹಾ ಮುನಿಸು        ಜೆಡಿಎಸ್‌, ಕಾಂಗ್ರೆಸ್‌ನ ಸುದ್ದಿಗೋಷ್ಠಿ - ಕಾಂಗ್ರೆಸ್‌, ಜೆಡಿಎಸ್‌ ಜಂಟಿ ಸಮರಕ್ಕೆ ಬಿಜೆಪಿ ವ್ಯಂಗ್ಯ- ಟ್ವೀಟ್‌ ಮೂಲಕ ಟಾಂಗ್‌        ಒಂದೇ ಮನಸ್ಸು ಎರಡು ದೇಹ ಅಂದ್ರು ಸಿಎಂ - ಈ ಜನ್ಮದಲ್ಲಿ ಗೌಡ್ರು-ಸಿದ್ದು ಒಂದಾಗಲ್ಲ ಅಂದ್ರು ಕಾರಜೋಳ - ದೋಸ್ತಿಗಳಿಗೆ ಬಿಜೆಪಿ ನಾಯಕರ ಟಕ್ಕರ್        ಗದಗಿನ ತೋಂಟದಾರ್ಯ ಶ್ರೀಗಳು ಲಿಂಗೈಕ್ಯ - ಹೃದಯಾಘಾತದಿಂದ ಗದಗ್‌ನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶ - ನಾಳೆ ಗದಗದಲ್ಲಿ ಅಂತ್ಯಕ್ರಿಯೆ       
Breaking News

ಪೋರರಿಗೂ ಮಣಿಹಾರ

Saturday, 11.08.2018, 3:02 AM       No Comments

ದುವೆ, ಮುಂಜಿ ಮುಂತಾದ ಸಮಾರಂಭಗಳಲ್ಲಿ ಹುಡುಗರು ಗ್ರಾ್ಯಂಡ್ ಆದ ಜುಬ್ಬಾ, ಪೈಜಾಮ ಹಾಕುತ್ತಾರೆ. ಆ ಜುಬ್ಬಾಗಳು ಎಷ್ಟೇ ಗ್ರಾ್ಯಂಡ್ ಆಗಿದ್ದರೂ ಸರ ಹಾಕದಿದ್ದರೆ ನೋಡಲು ಸರಿ ಕಾಣದು. ಇತ್ತೀಚೆಗೆ ಜುಬ್ಬಾಗಳ ನೆಕ್​ಗಳು ವಿಭಿನ್ನವಾಗಿ ವಿನ್ಯಾಸಗೊಳಿಸಲ್ಪಡುತ್ತಿವೆ. ಜತೆಗೆ ನೆಕ್​ಗಳು ಎಂಬ್ರಾಯಡರಿ, ಸ್ಟೋನ್, ಮುತ್ತುಗಳಿಂದ ಸಿಂಗರಿಸಲ್ಪಟ್ಟಿರುತ್ತವೆ. ಆದಾಗ್ಯೂ ಜುಬ್ಬಾ ಹಾಕಿಕೊಂಡಾಗ ಸರ ಹಾಕಿಕೊಳ್ಳಬೇಕು. ಜುಬ್ಬಾದ ನೆಕ್ ಪ್ಲೇನ್ ಆಗಿದ್ದಾಗ ಮುತ್ತಿನ ಹಾರ ಹಾಕಿಕೊಂಡರೆ ಸೂಕ್ತ, ಅದೇ ವಿಭಿನ್ನವಾಗಿ ವಿನ್ಯಾಸಗೊಂಡಿದ್ದಾಗ ಮಾತ್ರ ಬಂಗಾರದ ಸರಳವಾದ ಸರ ಧರಿಸಬೇಕು. ಇದರಿಂದ ಡ್ರೆಸ್​ಗೆ ರಾಯಲ್ ಲುಕ್ ಸಿಗುವುದರಿಂದ ನೋಡಲು ತುಂಬ ಚೆನ್ನಾಗಿ ಕಾಣುತ್ತದೆ. ಬೆಳ್ಳಿಯ ಬಣ್ಣದ ಸರವನ್ನು ಸಾಂಪ್ರದಾಯಿಕ ಜುಬ್ಬಾಗಳಿಗೆ ಧರಿಸಿದರೆ ಹೊಂದಿಕೆಯಾಗುವುದಿಲ್ಲ. ಮುತ್ತಿನ ಸರದಲ್ಲಿ ಲಾಕೆಟ್ ಇದ್ದರೂ, ಇಲ್ಲದಿದ್ದರೂ ಅಷ್ಟೊಂದು ವ್ಯತ್ಯಾಸವಾಗುವುದಿಲ್ಲ. ಉದ್ದದ ಸರಕ್ಕೆ ಲಾಕೆಟ್ ಇದ್ದರೆ ಚೆನ್ನ.

ನಮಗೆ ಗೊತ್ತಿರದ ಸ್ಟೈಲ್ ನಿಮಗೆ ಗೊತ್ತಿರಬಹುದು. ಅಂಥವನ್ನು ಬರೆದು ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ.

Leave a Reply

Your email address will not be published. Required fields are marked *

Back To Top