Monday, 18th June 2018  

Vijayavani

ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಚಾರ - ಕೆಲವೇ ಕ್ಷಣಗಳಲ್ಲಿ ಮೋದಿ, ಎಚ್​ಡಿಕೆ ಭೇಟಿ - ಕುತೂಹಲ ಕೆರಳಿಸಿದ ಮಾತುಕತೆ        ಸಮುದ್ರ ತೀರದಲ್ಲಿ ವಿಹಾರಕ್ಕೆ ಹೋದಾಗ ಅನಾಹುತ - ಅಲೆಗಳ ಅಬ್ಬರಕ್ಕೆ ಸಿಲುಕಿ ಇಬ್ಬರು ನೀರುಪಾಲು - ಗೋವಾದಲ್ಲಿ ದುರಂತ        ಶಾಸಕಿ, ಸಚಿವೆ ಮಧ್ಯೆ ಸೇವೆಯ ಸಮರ - ಅಪಾರ್ಥ ಬೇಡವೆಂದ ಲಕ್ಷ್ಮಿ ಹೆಬ್ಬಾಳ್ಕರ್ - ಜಯಮಾಲಾಗೆ ಹೊಗಳಿಕೆ        ಅಧಿಕಾರಕ್ಕೆ ಬಂದು ತಿಂಗಳಾದ್ರೂ ಭರವಸೆ ಈಡೇರಿಲ್ಲ - ಅಪ್ಪ-ಮಗ ರೈತರಿಗೆ ಕೊಟ್ಟ ಭರವಸೆ ಈಡೇರಿಸಿಲ್ಲ - ಬಿಎಸ್​ವೈ ಕಿಡಿ        ರಾಜ್ಯಕ್ಕೆ ಎಚ್​​ಡಿಕೆ ಸಿಎಂ, ನನಗೆ ಸಿದ್ದು ಸಿಎಂ - ಸಚಿವನಾಗಲು ಸಿದ್ದರಾಮಯ್ಯರೇ ಕಾರಣ - ಸಚಿವ ಪುಟ್ಟರಂಗಶೆಟ್ಟಿ        ಪೋಷಕರ ಡಾಟಾ ಲೀಕ್​ ಆರೋಪ - ಬಾಲ್ಡ್​​​ವಿನ್​ ಶಾಲೆ ಮಾನ್ಯತೆ ರದ್ದಿಗೆ ಶಿಫಾರಸು       
Breaking News

ಪೊಳ್ಳು ಭರವಸೆ ಇಲ್ಲ, ಹೇಳಿದ್ದನ್ನು ಮಾಡಿದೆ ಕಾಂಗ್ರೆಸ್

Sunday, 13.08.2017, 3:03 AM       No Comments

ರಾಯಚೂರು: ಕಾಂಗ್ರೆಸ್ ಹೇಳಿದ್ದನ್ನು ಮಾಡಿ ತೋರಿಸುತ್ತದೆ. ಬಿಜೆಪಿಯಂತೆ ಪೊಳ್ಳು ಭರವಸೆ ನೀಡಿ, ಹಾದಿ ತಪ್ಪಿಸುವುದಿಲ್ಲ. ನಮಗೆ ಆಶೀರ್ವಾದ ಮಾಡಿ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕೋರಿದ್ದಾರೆ.

ನಗರದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಶನಿವಾರ ಮಾತನಾಡಿದ ಅವರು, ಚುನಾವಣೆಗೆ ಮುನ್ನ ರೈತರಿಗೆ ಸಹಾಯ ಮಾಡುವುದಾಗಿ ಹೇಳಿದ್ದ ಪ್ರಧಾನಿ ಮೋದಿ, ಅವರ ಸಾಲವನ್ನೂ ಮನ್ನಾ ಮಾಡಲಿಲ್ಲ. ಆದರೆ, ಕರ್ನಾಟಕ ಹಾಗೂ ಪಂಜಾಬ್​ನಲ್ಲಿ ಕಾಂಗ್ರೆಸ್ ಸರ್ಕಾರ ರೈತರ ಸಾಲಮನ್ನಾ ಮಾಡುವ ಮೂಲಕ ಹೇಳಿದ್ದನ್ನು ಮಾಡಿ ತೋರಿಸಿದೆ ಎಂದರು.

ರೈತರ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲವೆಂದು ಸದನದಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳುತ್ತಾರೆ. ಆದರೆ, ದೇಶದ 10 ಶ್ರೀಮಂತರ ಒಂದು ಲಕ್ಷ ಕೋಟಿ ರೂ.ಗೂ ಹೆಚ್ಚು ಸಾಲ ಮನ್ನಾ ಮಾಡಿದ್ದಾರೆ ಎಂದು ಆರೋಪಿಸಿದರು.

ವಾಜಪೇಯಿ ಪ್ರಧಾನಿಯಾಗಿದ್ದಾಗ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಮನವಿ ಮಾಡಿ ದಾಗ ಆಡ್ವಾಣಿ ಸಾಧ್ಯವಿಲ್ಲ ಎಂದಿದ್ದರು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 371 (ಜೆ) ಕಲಂಗೆ ತಿದ್ದುಪಡಿ ತಂದು ಈ ಭಾಗದ ಅಭಿವೃದ್ಧಿಗೆ ಅನುಕೂಲ ಕಲ್ಪಿಸಿದ್ದೇವೆ ಎಂದರು.

ಎರಡು ಕೋಟಿ ನಿರುದ್ಯೋಗಿಗಳಿಗೆ ಉದ್ಯೋಗದ ಭರವಸೆ ನೀಡಿದ್ದ ಪ್ರಧಾನಿ ಮೋದಿ, ಕೇವಲ ಒಂದು ಲಕ್ಷ ಯುವಕರಿಗೆ ಕೆಲಸ ನೀಡಿದ್ದಾರೆ. ಈ ಸಂದರ್ಭದಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಬೆಳ್ಳಿ ಗಧೆ ನೀಡಿ ಸನ್ಮಾನಿಸಲಾಯಿತು.

ಲೋಕಸಭೆ ಪ್ರತಿ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ರೈತರ ಗೋಳು ಕೇಳಲು ಗುಜರಾತ್​ಗೆ ರಾಹುಲ್​ಗಾಂಧಿ ಹೋದರೆ ಬಿಜೆಪಿಯವರು ಕಲ್ಲು ಹೊಡೆದು ಕೊಲೆಗೆ ಯತ್ನ ನಡೆಸಿದ್ದಾರೆ. ಆದರೂ, ಅವರು ಪ್ರಾಣದ ಹಂಗು ತೊರೆದು ಪ್ರವಾಸ ನಡೆಸಿ ರೈತರನ್ನು ಭೇಟಿಯಾಗಿದ್ದಾರೆ ಎಂದು ಹೇಳಿದ್ದಾರೆ.

ಸಚಿವರ ತಡೆದರು

ಸಮಾವೇಶದ ವೇದಿಕೆ ಹಂಚಿಕೊಳ್ಳಲು ಪೊಲೀಸ್ ಅಧಿಕಾರಿ ಗಳಿಗೆ ನೀಡಿದ್ದ ಪಟ್ಟಿಯಲ್ಲಿ ಸಚಿವ ಎಚ್. ಆಂಜನೇಯ ಹಾಗೂ ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಹೆಸರು ಇಲ್ಲದ ಕಾರಣ ಭದ್ರತೆ ಜವಾಬ್ದಾರಿ ಹೊತ್ತ ಅಧಿಕಾರಿಗಳು ಇವರಿಬ್ಬರನ್ನು ತಡೆದರು. ಇದರಿಂದ ಆಂಜನೇಯ ಕಿರಿಕಿರಿ ಅನುಭವಿಸಿದರು.

16 ನಿಮಿಷ ರಾಹುಲ್ ಮಾತು

ಸಮಾವೇಶ 11.30ಕ್ಕೆ ನಿಗದಿಯಾಗಿತ್ತು. ಜನರನ್ನು ಹಿಡಿದಿಟ್ಟುಕೊಳ್ಳಲು ಸಚಿವರು, ಮುಖಂಡರು ತಮ್ಮ ಪಾಲಿನ ಭಾಷಣ ಮುಗಿಸಿದರು. ಮಧ್ಯಾಹ್ನ 1.47ಕ್ಕೆ ವೇದಿಕೆ ಹತ್ತಿದ ಎಐಸಿಸಿ ಉಪಾಧ್ಯಕ್ಷ ರಾಹುಲ್​ಗಾಂಧಿ ಮಾತನಾಡಲು ನಿಂತಾಗ ಸಮಯ 3.05 ನಿಮಿಷ ಆಗಿತ್ತು. ಕೇವಲ 16 ನಿಮಿಷದಲ್ಲೇ ಮಾತು ಮುಗಿಸಿ, ಹೆಲಿಪ್ಯಾಡ್​ನತ್ತ ಹೆಜ್ಜೆ ಹಾಕಿದರು.

ಕಾರ್ಯಕರ್ತ ಸಾವು

ಸಮಾವೇಶಕ್ಕೆ ಬಂದಿದ್ದ ಕಾರ್ಯಕರ್ತ, ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಹುಲಿಕಲ್ ಕೆ. ಗ್ರಾಮದ ಶಿವರಾಯ ಅಲಿಯಾಸ್ ಶಿವಪ್ಪ (60) ಎಂಬುವರು ಹೃದಯಾಘಾತದಿಂದ ಮೃತಪಟ್ಟರು. ರಾಹುಲ್ ಗಾಂಧಿ ಭಾಷಣ ಮಾಡುತ್ತಿರುವಾಗಲೇ ಕುಸಿದಿದ್ದಾರೆ. ರಾಹುಲ್ ಭಾಷಣ ನಡೆಯುತ್ತಿದ್ದರಿಂದ ಪೊಲೀಸರು ಶಿವರಾಯನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಬರಲಿಲ್ಲ. ಭಾಷಣ ಮುಗಿಸಿ ರಾಹುಲ್ ಗಾಂಧಿ ತೆರಳಿದ ನಂತರವೇ ಪೊಲೀಸರು ಸ್ಥಳಕ್ಕೆ ಧಾವಿಸಿ, ಶವವನ್ನು ಆಂಬುಲೆನ್ಸ್​ನಲ್ಲಿ ರಿಮ್್ಸ ಆಸ್ಪತ್ರೆಗೆ ಸಾಗಿಸಿದರು.

ವಿದ್ಯಾರ್ಥಿ ದಂಡು

ನಗರದ ಸರ್ಕಾರಿ ಕಾಲೇಜ್, ವಸತಿ ನಿಲಯದ ವಿದ್ಯಾರ್ಥಿಗಳನ್ನು ಸಮಾವೇಶಕ್ಕೆ ಕರೆತರಲಾಗಿತ್ತು. ಅಲ್ಲದೆ, ವಿವಿಧ ಗ್ರಾಮಗಳಿಂದ ತಲಾ 200 ರೂ. ಮತ್ತು ಜೀಪ್ ಹಾಗೂ ಸ್ವಂತ ಬೈಕಿದ್ದವರಿಗೆ 300 ರೂ. ನೀಡಿ ಕರೆತರಲಾಯಿತು ಎಂಬ ಮಾತುಗಳು ಕೇಳಿಬಂದವು. ಅಂದಾಜು 60-70 ಸಾವಿರ ಜನ ಸೇರಿದ್ದರು. ರಾಹುಲ್​ಗಾಂಧಿ ಹಿಂದಿಯಲ್ಲಿ ಭಾಷಣ ಆರಂಭಿಸುತ್ತಿದ್ದಂತೆ ವೇದಿಕೆ ಮುಂಭಾಗದಿಂದ ಜನರು ಹೊರನಡೆದಿದ್ದು, ಕೈ ನಾಯಕರಿಗೆ ಇರುಸುಮುರುಸು ಉಂಟು ಮಾಡಿತು.

ರಾಯಚೂರು ಸಮಾವೇಶದ ಬಳಿಕ ಸಂಪುಟ ವಿಸ್ತರಣೆ ಬಗ್ಗೆ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಜತೆ ರ್ಚಚಿಸಲಾಗುವುದು.

| ಸಿದ್ದರಾಮಯ್ಯ ಸಿಎಂ

ಹೆಚ್ಚಿನ ಬೆಲೆ ನೀಡಿ ವಿದ್ಯುತ್ ಖರೀದಿಸುತ್ತಿದ್ದು, ರೈತರ ಲಕ್ಷಾಂತರ ಪಂಪ್​ಸೆಟ್​ಗಳಿಗೆ 24 ಗಂಟೆ ವಿದ್ಯುತ್ ನೀಡಲು ಸಾಧ್ಯವಾಗುವುದಿಲ್ಲ. ಮುಂದಿನ ಬೇಸಿಗೆಯಲ್ಲಿ ಹಾಗೂ ಬರ ಸ್ಥಿತಿಯಿಂದ ಜಲಾಶಯಗಳು ಭರ್ತಿ ಆಗದಿರುವುದ ರಿಂದ ಸಾವಿರ ಮೆಗಾ ವಾಟ್ ವಿದ್ಯುತ್ ಖರೀದಿಗೆ ಟೆಂಡರ್ ಪ್ರಕ್ರಿಯೆ ನಡೆಸಲಾಗುತ್ತಿದೆ.

| ಡಿ.ಕೆ.ಶಿವಕುಮಾರ ಇಂಧನ ಸಚಿವ


ಅಮಿತ್ ಷಾರಿಂದ ಕೋಮುವಾದ

ಯಡಿಯೂರಪ್ಪಗೆ ರೈತರ ಬಗ್ಗೆ ನಿಜವಾದ ಕಾಳಜಿಯಿದ್ದರೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿನ ರೈತರ ಸಾಲ ಮನ್ನಾ ಮಾಡಿಸಲಿ ಎಂದು ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. ದಲಿತರ ಮನೆಯಲ್ಲಿ ಹೋಟೆಲ್ ಊಟ ತರಿಸಿ ಮಾಡುವ ಬದಲು, ದಲಿತರ ಮನೆಗೆ ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಟ್ಟು, ದಲಿತರ ಹೆಣ್ಣು ಮಕ್ಕಳನ್ನು ತಮ್ಮ ಮನೆಗೆ ತಂದುಕೊಂಡು ಕಾಳಜಿ ತೊರಿಸಲಿ. ನಾವು ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳಲ್ಲಿ 155 ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದ್ದೇವೆ. ಸತತ ಬರದಿಂದ ಜನರು ಸಂಕಷ್ಟ ಎದುರಿಸುತ್ತಿದ್ದರೂ ಅನ್ನಭಾಗ್ಯ ಯೋಜನೆಯಿಂದ ಗುಳೆ ಹೋಗುವುದು ನಿಲ್ಲಿಸಿದ್ದಾರೆ. ರಾಜ್ಯವನ್ನು ಕಾಂಗ್ರೆಸ್ ಮುಕ್ತ ಮಾಡಲು ಬಿಜೆಪಿಯಷ್ಟೆ ಅಲ್ಲ, ಯಾರಿಂದಲೂ ಸಾಧ್ಯವಿಲ್ಲ. ರಾಜ್ಯದಲ್ಲಿ ಕೋಮುವಾದ ಹುಟ್ಟು ಹಾಕಲು ಅಮಿತ್ ಷಾ ಬರುತ್ತಿದ್ದಾರೆ. ಕರ್ನಾಟದಲ್ಲಿ ಕೋಮುವಾದದ ಬೆಂಕಿ ಹಚ್ಚಿ ಮತ ವಿಭಜನೆ ಮಾಡುವುದು ಕನಸಿನ ಮಾತಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಬಿಜೆಪಿಯಿಂದ ಎಷ್ಟು ಲೂಟಿ?

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಭ್ರಷ್ಟಾಚಾರ ರಹಿತ ಸರ್ಕಾರ ನೀಡುತ್ತೇವೆ ಎಂದು ಹೇಳುತ್ತಾರೆ. ಆದರೆ, ರಾಜ್ಯದಲ್ಲಿ ಬಿಜೆಪಿ ಅಧಿಕಾರವಿದ್ದಾಗ ಎಷ್ಟು ಲಕ್ಷ ಕೋಟಿ ರೂ. ಲೂಟಿ ನಡೆದಿದೆ ಎಂದು ಅವರಿಗೆ ಗೊತ್ತಿಲ್ಲವೇ? ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಪರಿಹಾರ ನೀಡದ ಕೇಂದ್ರ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಟೀಕಿಸಿದರು.

ಕಾಂಗ್ರೆಸ್​ನ ಶಿಸ್ತಿನ ಸಿಪಾಯಿ

ನಿಮಗೆ ಅಗೌರವ ತರುವ ಕೆಲಸವನ್ನು ನಾನು ನನ್ನ ಕುಟುಂಬ ಮಾಡುವುದಿಲ್ಲ. ನಾನು ಕಾಂಗ್ರೆಸ್​ನ ಶಿಸ್ತಿನ ಸಿಪಾಯಿ. ಕಾಂಗ್ರೆಸ್​ನ ಶಕ್ತಿಯೇ ದೇಶದ ಶಕ್ತಿ, ಕಾಂಗ್ರೆಸ್​ನ ಇತಿಹಾಸವೇ ದೇಶದ ಇತಿಹಾಸವಾಗಿದೆ. ಬೇರೆ ಪಕ್ಷದಲ್ಲಿ ಇಂತಹ ಶಕ್ತಿ, ಇತಿಹಾಸವಿಲ್ಲ. ದೇಶಕ್ಕೆ ಗಾಂಧಿ ಮನೆತನದಿಂದಲೇ ರಕ್ಷಣೆ ನೀಡಲು ಸಾಧ್ಯ ಎಂದು ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ ಹೇಳಿದರು.

Leave a Reply

Your email address will not be published. Required fields are marked *

Back To Top