Friday, 22nd June 2018  

Vijayavani

ಬಜೆಟ್ ಪೂರ್ವಭಾವಿ ಸಭೆ ಆರಂಭ - ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ಸಭೆ -ಸಿಎಂ ನೇತೃತ್ವದಲ್ಲಿ ಮೀಟಿಂಗ್​​        ಟ್ರಾನ್ಸ್​​​ಫರ್​ಗೆ ನೋ ಬ್ರೋಕರ್ ಸಿಸ್ಟಂ - ಸಿಎಂ, ಡಿಸಿಎಂ ಹೆಸ್ರು ಬಳಸಿದ್ರೆ ದೂರವಿಡಿ - ಪೊಲೀಸ್​​​​ ಅಧಿಕಾರಿಗಳಿಗೆ ಸಿಎಂ ಆರ್ಡರ್​​​​        ಲಾರಿಗೆ ಸಿಲುಕಿ ಆತ್ಮಹತ್ಯೆಗೆ ಯುವಕನ ಯತ್ನ - ಚಕ್ರ ಹರಿದು ಎರಡೂ ಕಾಲು ಕಟ್​ - ಕೊಪ್ಪಳದ ಕುಕನೂರು ಪಟ್ಟಣದಲ್ಲಿ ಘಟನೆ        ಗಂಗಾಧರ ಚಡಚಣ ನಿಗೂಢ ಹತ್ಯ ಪ್ರಕರಣ - 6 ಮಂದಿ ಆರೋಪಿಗಳ ಸಿಐಡಿ ತನಿಖೆ ಪೂರ್ಣ        ಇಂದಿನಿಂದ ಮೆಟ್ರೋದ 6 ಬೋಗಿ ರೈಲು ಓಡಾಟ - ಬೈಯಪ್ಪನ ಹಳ್ಳಿಯಿಂದ ಮೈಸೂರು ರಸ್ತೆ ವರೆಗೆ ಸಂಚಾರ        ಹಜ್​ ಭವನಕ್ಕೆ ಟಿಪ್ಪು ಹೆಸರಿಡಲು ಪ್ರಸ್ತಾಪ- ವಕ್ಫ್​ ಸಚಿವ ಜಮೀರ್​ ವಿರುದ್ಧ ಆಕ್ರೋಶ- ಟಿಪ್ಪು ಹೆಸರಿಟ್ರೆ ಉಗ್ರ ಹೋರಾಟ ಎಂದ ಬಿಜೆಪಿ       
Breaking News

ಪೊಲೀಸ್ ಆರೋಗ್ಯ ಭಾಗ್ಯಕ್ಕೆ ಷರತ್ತು

Thursday, 14.09.2017, 3:00 AM       No Comments

| ಕೀರ್ತಿನಾರಾಯಣ ಸಿ.

ಬೆಂಗಳೂರು: ‘ಆರೋಗ್ಯ ಭಾಗ್ಯ’ ಯೋಜನೆಯಡಿ ನಿಮ್ಮ ತಂದೆ-ತಾಯಿ ಉಚಿತವಾಗಿ ಚಿಕಿತ್ಸೆ ಪಡೆಯಬೇಕಾದರೆ ಅವರ ತಿಂಗಳ ಆದಾಯ 6 ಸಾವಿರ ರೂ. ಮೀರಿರಬಾರದು. ಅವರು ನಿಮ್ಮ ಜತೆಯಲ್ಲಿ, ನಿಮ್ಮ ಮನೆಯಲ್ಲೇ ವಾಸವಿರಬೇಕು. ಇದಕ್ಕಾಗಿ ಅವರ ಆದಾಯ ಪ್ರಮಾಣಪತ್ರ ಹಾಗೂ ಜತೆಯಲ್ಲೇ ವಾಸವಿದ್ದಾರೆ ಎಂಬುದಕ್ಕೆ ಆಧಾರ್ ಕಾರ್ಡ್ ದಾಖಲಾತಿಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು…!

ಹಗಲಿರುಳು ಸಮಾಜ ಕಾಯುವ ಪೊಲೀಸರ ತಂದೆ- ತಾಯಿ, ಸರ್ಕಾರದ ಆರೋಗ್ಯ ಭಾಗ್ಯ ಯೋಜನೆ ಅನ್ವಯ ಮಾರಣಾಂತಿಕ ಕಾಯಿಲೆಗಳಿಗೆ ಉಚಿತವಾಗಿ ಚಿಕಿತ್ಸೆ ಪಡೆಯುವುದಕ್ಕೆ ಪೊಲೀಸ್ ಇಲಾಖೆ ವಿಧಿಸಿರುವ ಷರತ್ತುಗಳಿವು.

ಈ ಅವೈಜ್ಞಾನಿಕ ನಿಯಮಾವಳಿಗೆ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ತೀವ್ರ ಬೇಸರ ವ್ಯಕ್ತಪಡಿಸಿದೆ. ಈ ಷರತ್ತುಗಳನ್ನು ತಕ್ಷಣ ವಾಪಸ್ ಪಡೆಯುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ. ಪೊಲೀಸ್ ಸಿಬ್ಬಂದಿ, ಆತನ/ಆಕೆಯ ಪತ್ನಿ/ಪತಿ, 21 ವರ್ಷ ಮೀರದ ಇಬ್ಬರು ಮಕ್ಕಳು ಹಾಗೂ ತಂದೆ-ತಾಯಿ ಆರೋಗ್ಯ ಭಾಗ್ಯ ಯೋಜನೆಯಡಿ ಚಿಕಿತ್ಸೆ ಪಡೆಯಲು ಅವಕಾಶವಿದೆ. ಆದರೆ, ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳ ಪ್ರಕಾರ ಅವಲಂಬಿತ ತಂದೆ-ತಾಯಿಯ ಮಾಸಿಕ ವರಮಾನ 6 ಸಾವಿರ ರೂ. ಮೀರಬಾರದು. ಜತೆಗೆ ಅವರು ಸಿಬ್ಬಂದಿ ಜತೆಯಲ್ಲೇ ವಾಸವಾಗಿರಬೇಕು. ಇದನ್ನು ದೃಢೀಕರಿಸಲು ಆದಾಯ ಪ್ರಮಾಣ ಪತ್ರ ಹಾಗೂ ಆಧಾರ್ ಕಾರ್ಡ್/ಚುನಾವಣಾ ಗುರುತಿನ ಚೀಟಿ ಒದಗಿಸಬೇಕು ಎಂದು ಆದೇಶ ಹೊರಡಿಸಿದೆ.

ಆದರೆ, ಆರೋಗ್ಯ ಭಾಗ್ಯ ಯೋಜನೆಯ ನಿಜವಾದ ಫಲಾನುಭವಿಗಳು ಕಾನ್ಸ್​ಟೆಬಲ್​ಗಳು ಹಾಗೂ ಅವರ ಕುಟುಂಬ ಸದಸ್ಯರು. ಬಹುತೇಕ ಪೇದೆಗಳು ಗ್ರಾಮೀಣ ಭಾಗದಿಂದ ಬಂದವರಾಗಿದ್ದು, ಅವರ ತಂದೆ-ತಾಯಿ ಹಳ್ಳಿಗಳಲ್ಲೇ ವಾಸವಿದ್ದಾರೆ. ಸರ್ಕಾರಿ ನೌಕರನ ಜತೆಯಲ್ಲಿ ವಾಸವಿದ್ದರೆ ಮಾತ್ರ ಯೋಜನೆ ಫಲಾನುಭವಿಗಳಾಗಬಹುದು ಎಂದು ನಿಯಮ ವಿಧಿಸಿರುವುದು ಸರಿಯಾದ ಕ್ರಮವಲ್ಲ.

ಕೂಲಿ ಕೆಲಸ ಮಾಡುವವರೂ ಕೂಡ ತಿಂಗಳಿಗೆ ಕನಿಷ್ಠ 8 ರಿಂದ 9 ಸಾವಿರ ರೂ. ಸಂಪಾದನೆ ಮಾಡುತ್ತಾರೆ. ಅಂಥದರಲ್ಲಿ ಪೊಲೀಸರ ತಂದೆ-ತಾಯಿಯ ಆದಾಯ ಮಾಸಿಕ 6 ಸಾವಿರ ರೂ. ದಾಟಬಾರದು ಎಂದು ಷರತ್ತು ವಿಧಿಸುವುದು ಯಾವ ನ್ಯಾಯ ಎಂದು ಹಲವು ಪೊಲೀಸರು ಪ್ರಶ್ನಿಸಿದ್ದಾರೆ. ಈ ಅವೈಜ್ಞಾನಿಕ ನಿಯಮಾವಳಿ ತೆಗೆದು ಹಾಕುವಂತೆ ಡಿಜಿಪಿ ಆರ್.ಕೆ. ದತ್ತ ಅವರಿಗೆ ಮನವಿ ನೀಡಲು ಚಿಂತನೆ ನಡೆಸಿದ್ದಾರೆ.

ಯಾವ್ಯಾವ ಕಾಯಿಲೆಗೆ ಚಿಕಿತ್ಸೆ?

ಯೋಜನೆಗೆ ಒಳಪಡುವ ಅಧಿಕಾರಿಗಳು ಹಾಗೂ ಸಿಬ್ಬಂದಿ ರಾಜ್ಯದ ಯಾವುದೇ ಆಸ್ಪತ್ರೆ (ಇಲಾಖೆ ಸೂಚಿಸಿರುವ)ಯಲ್ಲಿ ಹೃದ್ರೋಗ, ಕಿಡ್ನಿ ತೊಂದರೆ, ಕ್ಯಾನ್ಸರ್, ಶಸ್ತ್ರಚಿಕಿತ್ಸೆ ನಡೆಸಬೇಕಿರುವ ಕಾಯಿಲೆ, ಐಸಿಯು ಆರೈಕೆ ಅಗತ್ಯದ ರೋಗ, ಹೆರಿಗೆ, ಕಣ್ಣಿನ ಸಮಸ್ಯೆಗಳಿಗೆ ಉಚಿತವಾಗಿ ಚಿಕಿತ್ಸೆ ಕೊಡಿಸಬಹುದು.

15ರೊಳಗೆ ದಾಖಲೆ ಸಲ್ಲಿಸದಿದ್ರೆ ಸಿಗುವುದಿಲ್ಲ ಅನುಮತಿ ಪತ್ರ

ಆರೋಗ್ಯ ಭಾಗ್ಯ ಯೋಜನೆಗೆ ಒಳಪಡುವ ಅಧಿಕಾರಿ,ಸಿಬ್ಬಂದಿ ಸೆ.15ರ ಒಳಗೆ ತಮ್ಮ ತಂದೆ-ತಾಯಿಯ ಆದಾಯ ಪ್ರಮಾಣ ಪತ್ರ ಹಾಗೂ ಆಧಾರ್ ಕಾರ್ಡ್ ಇಲಾಖೆಗೆ ಸಲ್ಲಿಸಬೇಕು. ನಂತರ ಬಂದವರಿಗೆ ಯೋಜನೆ ಅಡಿಯಲ್ಲಿ ಚಿಕಿತ್ಸೆ ಪಡೆಯಲು ಅನುಮತಿ ಪತ್ರ ಕೊಡುವುದಿಲ್ಲ. ಈ ಬಗ್ಗೆ ರೋಲ್​ಕಾಲ್ ಸಂದರ್ಭದಲ್ಲಿ ಸಿಬ್ಬಂದಿಗೆ ತಿಳಿಸುವಂತೆ ಹಾಗೂ ನೋಟಿಸ್ ಬೋರ್ಡ್​ನಲ್ಲಿ ಪ್ರದರ್ಶಿಸುವಂತೆ ಉನ್ನತ ಮಟ್ಟದ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

Leave a Reply

Your email address will not be published. Required fields are marked *

Back To Top