Tuesday, 16th January 2018  

Vijayavani

ಮತ್ತೊಂದು ಟ್ವೀಟ್‌ ಮಾಡಿ ಕೆಣಕಿದ ಪಾಲ್ಯೇಕರ್ - ಕಣಕುಂಬಿ ಕಾಮಗಾರಿ ಪರಿಶೀಲನೆಗೆ ನಾಲ್ವರ ತಂಡ ರಚನೆ - ಗೋವಾ ಸಚಿವನ ವಿರುದ್ಧ ಸಿಎಂ ಆಕ್ರೋಶ        ಪರಮೇಶ್ವರ್‌ಗೂ ಕಂಟಕವಾಯ್ತು ಸದಾಶಿವ ಆಯೋಗ - ವರದಿ ವಿರೋಧಿಸಿದ್ದಕ್ಕೆ ಸ್ವಕ್ಷೇತ್ರದಲ್ಲೇ ಆಕ್ರೋಶ - ಮತ ಹಾಕದಿರಲು ಮಾದಿಗ ಮುಖಂಡರ ನಿರ್ಧಾರ        ಬೆಂಗಳೂರಿನಲ್ಲಿ ಹೊಸ ವರ್ಷಕ್ಕೆ ಮತ್ತೆ ಕೀಚಕ ಕೃತ್ಯ - ಇಂದಿರಾನಗರ ಪೊಲೀಸರಿಂದ ಇಬ್ಬರು ಆರೋಪಿಗಳ ಸೆರೆ - ಗೃಹ ಸಚಿವರ ಬೇಜವಾಬ್ದಾರಿ ಹೇಳಿಕೆಗೆ ಆಕ್ರೋಶ        ಕೊನೆಗೂ ಮೌನ ಮುರಿದ ಸುಪ್ರೀಂಕೋರ್ಟ್‌ ಸಿಜೆ - ಬಂಡಾಯ ನ್ಯಾಯಮೂರ್ತಿಗಳ ಜತೆ ದೀಪಕ್‌ ಮಿಶ್ರ ಚರ್ಚೆ - 15 ನಿಮಿಷಗಳ ಕಾಲ ಸಂಧಾನ ಮಾತುಕತೆ        ಚೆಂಡು ನೆಲಕ್ಕೆ ಎಸೆದ ವಿರಾಟ್‌ಗೆ ಐಸಿಸಿ ತರಾಟೆ - ಟೆಸ್ಟ್‌ ಕ್ರಿಕೆಟ್‌ನಲ್ಲಿ ಸಿಟ್ಟಾದ ಕೊಹ್ಲಿಗೆ ದಂಡ - ಪಂದ್ಯದ 25 ಪರ್ಸೆಂಟ್‌ ಸಂಭಾವನೆ ಕಡಿತ       
Breaking News :

ಪೊಂಗಲ್ ಪೈಪೋಟಿ

Friday, 12.01.2018, 3:02 AM       No Comments

ಯಾವುದೇ ಧಾರ್ವಿುಕ ಹಬ್ಬ ಬಂತೆಂದರೆ ಅದು ಸಿನಿಪ್ರಿಯರ ಪಾಲಿಗೂ ಸಂಭ್ರಮದ ವಾತಾವರಣ ನಿರ್ವಿುಸಿಬಿಡುತ್ತದೆ. ಹಬ್ಬದ ರಜೆಯ ಲಾಭ ಸವಿಯಲು ಸ್ಟಾರ್ ಸಿನಿಮಾಗಳು ಅಖಾಡಕ್ಕೆ ಇಳಿಯುವುದೇ ಅದಕ್ಕೆ ಕಾರಣ. ಅದರಲ್ಲೂ ದೀಪಾವಳಿ, ಕ್ರಿಸ್​ವುಸ್ ರೀತಿಯೇ ಪೊಂಗಲ್ ಕೂಡ ಗಲ್ಲಾಪೆಟ್ಟಿಗೆ ಕದನಕ್ಕೆ ಸಾಕ್ಷಿ ಆಗುತ್ತದೆ. ಈ ಬಾರಿ ತಮಿಳು ಚಿತ್ರರಂಗದಲ್ಲಿ ಪೊಂಗಲ್ ಸಮಯಕ್ಕೆ ಸರಿಯಾಗಿ ಸ್ಟಾರ್ ನಟರಾದ ಸೂರ್ಯ ಮತ್ತು ವಿಕ್ರಮ್ ಹಣಾಹಣಿ ನಡೆಸಲಿರುವುದು ವಿಶೇಷ.

‘ಧಾನ ಸೇಂರ್ಧ ಕೂಟಂ’ ಮೂಲಕ ಸೂರ್ಯ ಭರಪೂರ ಮನರಂಜನೆ ನೀಡಲು ಬರುತ್ತಿದ್ದಾರೆ. ಅತ್ತ ವಿಕ್ರಮ್ ‘ಸ್ಕೆಚ್’ ಚಿತ್ರದ ಮೂಲಕ ಬಾಕ್ಸ್​ಆಫೀಸ್​ಗೆ ಸ್ಕೆಚ್ ಹಾಕುತ್ತಿದ್ದಾರೆ. ಇಬ್ಬರೂ ತಮ್ಮದೇ ಆದ ಫ್ಯಾನ್ ಫಾಲೋಯಿಂಗ್ ಹೊಂದಿರುವುದರಿಂದ ಯಾರಿಗೆ ಎಷ್ಟು ಗಳಿಕೆ ಆಗಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಬಲಾಬಲದ ವಿಚಾರಕ್ಕೆ ಬರುವುದಾದರೆ ಎರಡೂ ಚಿತ್ರಗಳ ಮೇಲೆ ಸಮಪ್ರಮಾಣದ ನಿರೀಕ್ಷೆ ಇದೆ. ಈ ಹಿಂದೆ ಚೊಚ್ಚಲ ಚಿತ್ರ ‘ನಾನುಮ್ ರೌಡಿ ಧಾನ್’ ಮೂಲಕ ಗೆಲುವು ಕಂಡಿದ್ದ ವಿಘ್ನಶ್ ಶಿವನ್ ಅವರೇ ‘ಧಾನ ಸೇಂರ್ಧ ಕೂಟಂ’ ಚಿತ್ರಕ್ಕೆ ಆಕ್ಷನ್ -ಕಟ್ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ಸೂರ್ಯ ಮತ್ತು ಶಿವನ್ ಕಾಂಬಿನೇಷನ್ ಒಂದಾಗಿರುವುದರಿಂದ ಚಿತ್ರದ ಬಗ್ಗೆ ಸಹಜವಾಗಿಯೇ ಕೌತುಕವಿದೆ.

ನಾಯಕಿಯಾಗಿ ಕೀರ್ತಿ ಸುರೇಶ್ ಬಣ್ಣ ಹಚ್ಚಿದ್ದು, ಅನಿರುಧ್ದ ರವಿಚಂದರ್ ಸಂಗೀತ ನೀಡಿದ್ದಾರೆ. ಇನ್ನು ‘ಸ್ಕೆಚ್’ಗೆ ನಿರ್ದೇಶನ ಮಾಡಿರುವ ವಿಜಯ್ ಚಂದರ್ ಅವರಿಗೂ ಇದು ಎರಡನೇ ಆಕ್ಷನ್-ಕಟ್ ಪ್ರಯತ್ನ. ಈ ಹಿಂದೆ ‘ವಾಲು’ ಸಿನಿಮಾ ಮಾಡಿ ಅವರು ಗಮನ ಸೆಳೆದಿದ್ದರು. ಸಾಹಸಮಯ ಸಿನಿಮಾಗಳಿಂದಲೇ ಹೆಚ್ಚು ಫೇಮಸ್ ಆಗಿರುವ ವಿಕ್ರಮ್ ಈ ಬಾರಿಯೂ ಮಾಸ್​ಪ್ರಿಯರಿಗೆ ಮನರಂಜನೆಯ ರಸದೌತಣ ನೀಡುವುದು ಗ್ಯಾರಂಟಿ ಎಂಬುದಕ್ಕೆ ಟ್ರೇಲರ್ ಸಾಕ್ಷಿ ಒದಗಿಸಿದೆ. ವಿಕ್ರಮ್ೆ ಜೋಡಿಯಾಗಿ ತಮನ್ನಾ ಭಾಟಿಯಾ ನಟಿಸಿದ್ದು, ಹಾಡುಗಳಿಗೆ ಎಸ್. ತಮನ್ ಸಂಗೀತ ನೀಡಿದ್ದಾರೆ. ತಾಂತ್ರಿಕವಾಗಿ ಎರಡೂ ಚಿತ್ರಗಳು ಗಟ್ಟಿಯಾಗಿದ್ದು ಈ ವಾರ (ಜ.12) ತೆರೆಕಂಡು ಹಣಾಹಣಿ ನಡೆಸಲಿವೆ.

Leave a Reply

Your email address will not be published. Required fields are marked *

Back To Top