Thursday, 22nd March 2018  

Vijayavani

ಮುಂದಿನ ಚುನಾವಣೆಯಲ್ಲಿ ಮೋದಿ ಸೋಲ್ತಾರೆ- ಇಂದಿರಾಗಾಂಧಿಯಂತೆ ನಮ್ಮನ್ನೂ ಗೆಲ್ಲಿಸಿ- ಚಿಕ್ಕಮಗಳೂರಿನಲ್ಲಿ ರಾಹುಲ್‌ ಟಾಕ್‌ವಾರ್‌        ಕುಡಿದು ಅಡ್ಡಾದಿಡ್ಡಿ ಬಸ್‌ ಚಲಾಯಿಸಿದ- ಕಾರು, ಬೈಕ್‌ ಮರಕ್ಕೆ ಡಿಕ್ಕಿ ಹೊಡೆಸಿದ- ಬೆಂಗಳೂರಿನಲ್ಲಿ ಬಿಎಂಟಿಸಿ ಚಾಲಕನ ಅವಾಂತರ        ಜೆಡಿಎಸ್ ಬಂಡಾಯ ಶಾಸಕರ ಅನರ್ಹತೆ ವಿಚಾರ- ಹೈಕೋರ್ಟ್​ಗೆ ಅಭಿಪ್ರಾಯ ತಿಳಿಸಿದ ಸ್ಪೀಕರ್​- ಮುಚ್ಚಿದ ಲಕೋಟೆಯಲ್ಲಿ ಎಜಿ ಮೂಲಕ ರವಾನೆ        5 ಕೋಟಿ ಫೇಸ್​ಬುಕ್‌ಗಳ ಮಾಹಿತಿ ಹ್ಯಾಕ್- ಕಾಂಗ್ರೆಸ್‌ ವಿರುದ್ಧ ಬಿಜೆಪಿ ಗಂಭೀರ ಆರೋಪ- ರವಿಶಂಕರ್‌ ಆರೋಪಕ್ಕೆ ಕೈತಿರುಗೇಟು        ಬೈಕ್ ಸವಾರನ ಮೇಲೆ ಬಿದ್ದ ಬೃಹತ್ ಮರ- ಹೆಲ್ಮೆಟ್ ಧರಿಸಿದ್ದರಿಂದ ಪ್ರಾಣಾಪಾಯದಿಂದ ಪಾರು- ಹೆಲ್ಮೆಟ್​ ಪುಡಿಪುಡಿ ತಲೆ ಸೇಫ್​       
Breaking News

ಪೈಲಟ್ ಮೊದಲ ಸಂಬಳ ಗೋಶಾಲೆಗೆ!

Monday, 02.10.2017, 3:03 AM       No Comments

| ಪರಶುರಾಮ ಭಾಸಗಿ

ವಿಜಯಪುರ: ಬರದ ಜಿಲ್ಲೆಯಲ್ಲಿ ಪ್ರತಿಭೆಗಳಿಗೆ ಬರವಿಲ್ಲ ಎಂಬುದನ್ನು ಸಾಬೀತುಪಡಿಸಿರುವ ವಿಜಯಪುರದ ದಿಟ್ಟ ಯುವತಿ ಪ್ರೀತಿ ಇಂಡಿಗೋ ಏರ್​ಲೈನ್ಸ್​ನಲ್ಲಿ ಸೇವೆಗೆ ಸೇರುವ ಮೂಲಕ ಜಿಲ್ಲೆಯ ಮೊದಲ ಪೈಲಟ್ ಎಂಬ ಇತಿಹಾಸ ಬರೆದಿದ್ದಾರೆ. ತನ್ನ ಮೊದಲ ಸಂಬಳವನ್ನು ಗೋಶಾಲೆಗೆ ಮೀಸ ಲಿಟ್ಟಿರುವುದು ಈಕೆಯ ಸಾಧನೆ ಜತೆಗಿನ ಮತ್ತೊಂದು ಹೆಗ್ಗಳಿಕೆ.

ನಗರದ ಔಷಧ ವ್ಯಾಪಾರಸ್ಥ ಸುಧೀರ ಬಿರಾದಾರ ಪುತ್ರಿ ಪ್ರೀತಿ ಬಿರಾದಾರ ಎರಡು ತಿಂಗಳ ಹಿಂದೆಯೇ ಗಗನ ಸೇವೆಗೆ ಸೇರ್ಪಡೆಯಾಗಿದ್ದಾರೆ. ಮೂಲತಃ ವಿಜಯಪುರದವರೇ ಆದ ಪ್ರೀತಿ ಸೈನಿಕ ಶಾಲೆ ಶಿಶುನಿಕೇತನ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಕೇಂದ್ರೀಯ ವಿದ್ಯಾಲಯದಲ್ಲಿ ಪ್ರೌಢ ಶಿಕ್ಷಣ ಮುಗಿಸಿದ್ದರು.

ನಂತರ ಪಿಡಿಜೆ ಮತ್ತು ಸಿಕ್ಯಾಬ್ ಕಾಲೇಜಿನಿಂದ ಪಿಯು ಶಿಕ್ಷಣ ಪಡೆದಿದ್ದಾರೆ. ನಂತರ ಹುಬ್ಬಳ್ಳಿಯ ಬಿ.ವಿ. ಭೂಮರಡ್ಡಿ ಕಾಲೇಜಿನಿಂದ ಇಂಜಿನಿಯರಿಂಗ್(ಇಸಿ) ಪದವಿ ಪಡೆದು ಎನ್​ಎಫ್​ಟಿಎ (ನ್ಯಾಷನಲ್ ಫ್ಲೈಯಿಂಗ್ ಟ್ರೇನಿಂಗ್ ಅಕಾಡೆಮಿ)ಗೆ ಆಯ್ಕೆಯಾದರು. ಮಹಾರಾಷ್ಟ್ರದಲ್ಲಿರುವ ಈ ಅಕಾಡೆಮಿಯಲ್ಲಿ ತರಬೇತಿ ಪಡೆದ ಪ್ರೀತಿ ಎರಡು ತಿಂಗಳ ಮಟ್ಟಿಗೆ ದುಬೈನಲ್ಲಿ ಹೆಚ್ಚುವರಿ ತರಬೇತಿ ಪಡೆದಿದ್ದಾರೆ. ಸದ್ಯ ಒಪ್ಪಂದದ ಮೇರೆಗೆ ಇಂಡಿಗೋ ಏರ್​ಲೆನ್ಸ್​ನಲ್ಲಿ ಸೇವೆಗೆ ಹಾಜರಾಗಿದ್ದಾರೆ.

ಗೋ ಪ್ರೇಮಕ್ಕೆ ಜಿಲ್ಲಾ ಪುರಸ್ಕಾರ

ಪೈಲಟ್ ಆಗುವ ಕನಸು ನನಸಾದರೆ ಮೊದಲ ತಿಂಗಳ ಸಂಬಳವನ್ನು ಗೋಶಾಲೆಗೆ ಮೀಸಲಿಡುವುದಾಗಿ ತಂದೆ , ಮಗಳು ಮೊದಲೇ ನಿರ್ಧರಿಸಿದ್ದರು. ಅದರಂತೆ ಮೊದಲ ಸಂಬಳ ಬರುತ್ತಿದ್ದಂತೆ ಜಿಲ್ಲೆಗಾಗಮಿಸಿದ ಪ್ರೀತಿ ತಂದೆಯೊಡಗೂಡಿ ಕಗ್ಗೋಡ ಗೋಶಾಲೆಗೆ ಚೆಕ್ ವಿತರಿಸಿದರು. ಕಗ್ಗೋಡ ಗೋಶಾಲೆ ಹಾಗೂ ಸಿದ್ಧೇಶ್ವರ ಸಂಸ್ಥೆಯಿಂದ ಪ್ರೀತಿ ಕುಟುಂಬಕ್ಕೆ ಜಿಲ್ಲೆ ಪರವಾಗಿ ಪುರಸ್ಕರಿಸಲಾಯಿತು.

ಉತ್ತರಕರ್ನಾಟಕ ಭಾಗದಲ್ಲಿ ಮಹಿಳೆಯರಿಗೆ ಕಾಲೇಜುವರೆಗೂ ಕಲಿಸೋದೆ ಹೆಚ್ಚು. ಅಂಥದರಲ್ಲಿ ನಮ್ಮ ತಂದೆ 80 ಲಕ್ಷ ರೂ. ಖರ್ಚು ಮಾಡಿ ತರಬೇತಿ ಕೊಡಿಸಿದರು. ವಿಜಯಪುರದಂಥ ಹಿಂದುಳಿದ ಜಿಲ್ಲೆಗಳಲ್ಲೂ ವಿಮಾನ ಚಾಲನೆ ತರಬೇತಿ ಕೇಂದ್ರಗಳಾಗಬೇಕು. ಕನಿಷ್ಠ ಅಂಥ ತರಬೇತಿಗೆ ಬೇಕಾದ ಪೂರ್ವ ತಯಾರಿ ಕುರಿತು ಮಾಹಿತಿ ನೀಡುವ ಕಾರ್ಯವಾಗಬೇಕು. ಈ ಭಾಗದಲ್ಲಿ ರಾಜ್ಯ ಮಹಿಳಾ ವಿವಿ ಇದೆ. ಅಲ್ಲಿ ಕರಿಯರ್ ಕೌನ್ಸಿಲ್​ನಂತ ಚಟುವಟಿಕೆ ಹಮ್ಮಿಕೊಳ್ಳಬೇಕು.

| ಪ್ರೀತಿ ಬಿರಾದಾರ, ಪೈಲಟ್

Leave a Reply

Your email address will not be published. Required fields are marked *

Back To Top