Tuesday, 20th March 2018  

Vijayavani

ಮುಂಬಡ್ತಿ ಕೇಸ್​​ನಲ್ಲಿ ರಾಜ್ಯ ಸರ್ಕಾರಕ್ಕೆ ಹಿನ್ನಡೆ- ಕಾಲಾವಕಾಶ ನೀಡೋಕೆ ಸುಪ್ರೀಂ ನಕಾರ- ತೀರ್ಪು ಪಾಲಿಸೋಕೆ ಒಂದು ತಿಂಗಳು ಡೆಡ್​​ಲೈನ್​        ಐಸಿಸ್​ನಿಂದ 39 ಭಾರತೀಯರ ಹತ್ಯೆ- ಮಾಹಿತಿ ಬಿಚ್ಚಿಟ್ಟ ಸುಷ್ಮಾ ಸ್ವರಾಜ್​- ಸಾವಿನಲ್ಲೂ ರಾಜಕೀಯ ಅಂತಾ ವಿಪಕ್ಷಗಳಿಗೆ ಚಾಟಿ        ಜೆಡಿಎಸ್​ ರೆಬೆಲ್ಸ್​ ಅಡ್ಡಮತದಾನ ಪ್ರಕರಣ- ನಾಳೆಯೇ ತೀರ್ಪಿಗೆ ಹೈಕೋರ್ಟ್ ಸೂಚನೆ- ಎಜಿ ಕರೆಸಿ ವಿಚಾರಿಸಿದ ಸ್ಪೀಕರ್​        ಮೆಟ್ರೋ ನೌಕರರ ಮುಷ್ಕರ ಇಲ್ಲ- ಬೇಡಿಕೆ ಈಡೇರಿಕೆಗೆ ತಿಂಗಳ ಗಡುವು- ಸಂಧಾನ ಸೂತ್ರಕ್ಕೆ BMRCLಗೆ ಹೈಕೋರ್ಟ್ ಸಲಹೆ        ವೀರಶೈವ ಲಿಂಗಾಯತ ಎರಡೂ ಒಂದೇ- ಸರ್ಕಾರದ ಕ್ರಮ ಅನ್ಯಾಯದ ಪರಮಾವಧಿ- ಸಿಎಂ ವಿರುದ್ಧ ಶಾಮನೂರು ಶಿವಶಂಕರಪ್ಪ ಗರಂ       
Breaking News

ಪೇಪರ್​ನಲ್ಲಿ ಅರಳಿದ ಗಿಡಗಳು

Wednesday, 11.10.2017, 3:01 AM       No Comments

ಲೆ ಮತ್ತು ಕ್ರೀಯಾಶೀಲತೆ ಜತೆಯಾದರೆ ಅದರಿಂದ ಒಂದು ವಿಶೇಷ ಲೋಕವೇ ಸೃಷ್ಟಿಯಾಗುತ್ತದೆ. ಕಲಾವಿದರ ನೈಪುಣ್ಯಕ್ಕೆ ಅವರ ರಚನೆಗಳೆ ಸಾಕ್ಷಿಯಾಗುತ್ತವೆ, ಜತೆಗೆ ಅವರ ವೈಶಿಷ್ಟ್ಯ ತೆಯೂ ಅವರನ್ನು ಪ್ರಸಿದ್ಧ ರನ್ನಾಗಿಸುತ್ತವೆ. ಮೂಲತಃ ಲೆಬನಾನ್ ಮತ್ತು ವೆನಿಜ್ಯುಯೆಲಾದ ಪೇಪರ್ ಕಲಾವಿದೆಯಾದ ರಾಯಾ ಸಾದೆರ್ ಬುಜಾನಾ ಎಂಬಾಕೆಯು ತನ್ನ ವಿಶೇಷ ಪೇಪರ್ ಆರ್ಟ್​ನಿಂದ ಪ್ರಸಿದ್ಧಿ ಪಡೆದಿದ್ದಾಳೆ. ಪ್ರಸ್ತುತ ಆಕೆ ಬಾರ್ಸಿಲೋನದಲ್ಲಿ ನೆಲೆಸಿದ್ದು, ತನ್ನ ಕಲೆಯನ್ನು ಜಗತ್ತಿಗೆ ಪರಿಚಯಿಸುತ್ತಿದ್ದಾಳೆ.

ರಾಯಾ, ಅತ್ಯಂತ ಸೂಕ್ಷ್ಮವಾಗಿ ಮತ್ತು ತೀರಾ ತಾಳ್ಮೆಯಿಂದ 20 ಗಂಟೆಗಳನ್ನು ವ್ಯಯಿಸಿ, ಅದರಿಂದ ಸುಂದರ ಕಲಾಕೃತಿ ಸೃಷ್ಟಿಸಿದ್ದಾಳೆ. ಜತೆಗೆ ಆಕೆ ತನ್ನ ಕಲಾಪ್ರಕಾರಕ್ಕೆ ಆಯ್ದುಕೊಂಡಿರುವುದು ಗಿಡಗಳು ಮತ್ತು ಹೂಗಳನ್ನು. ಪುಟ್ಟದಾದ ಮಿನಿಯೇಚರ್ ಆರ್ಟ್ ಪ್ರಕಾರದಲ್ಲಿ ವಿವಿಧ ಮಾದರಿಯ ಗಿಡ, ಪಕ್ಷಿ ಮತ್ತು ಹೂವುಗಳನ್ನು ಚಿತ್ರಿಸುತ್ತಾಳೆ. ಅವು ಮಿನಿಯೇಚರ್ ಗಾತ್ರದಲ್ಲಿದ್ದು, ನೋಡಲು ಸುಂದರವಾಗಿರುತ್ತವೆ.

ರಾಯಾಳ ಕಲಾಕೃತಿಯನ್ನು ಜನರು ಉಡುಗೊರೆ ಕೊಡಲು ಕೂಡ ಖರೀದಿಸುತ್ತಿದ್ದಾರೆ. ಟೇಬಲ್ ಮೇಲೆ ಹಾಗೂ ಅಲಂಕಾರಿಕ ರೂಪದಲ್ಲಿ ಇರಿಸಲು ಕೂಡ ಜನರು ರಾಯಾಳ ರಚನೆಯನ್ನು ಬಯಸುತ್ತಾರೆ. ಗ್ರಾಹಕರ ಬೇಡಿಕೆ ಅನುಸಾರ ರಾಯಾ ಕಲಾಕೃತಿ ರಚಿಸಿ ಕೊಡುತ್ತಾಳೆ. ಹೀಗಾಗಿ ಇಂಟರ್​ನೆಟ್​ನಲ್ಲೂ ರಾಯಾ ಫೇಮಸ್ ಆಗಿದ್ದಾಳೆ. -ಏಜೆನ್ಸೀಸ್

Leave a Reply

Your email address will not be published. Required fields are marked *

Back To Top