Friday, 20th April 2018  

Vijayavani

ಬಾದಾಮಿಯಿಂದ ಸ್ಪರ್ಧೆ ವಿಚಾರದಲ್ಲಿ ದ್ವಂದ್ವ- ಸ್ಪರ್ಧೆ ಬಗ್ಗೆ ಸ್ಪಷ್ಟವಾಗಿ ಹೇಳದ ಸಿಎಂ- ಹೈಕಮಾಂಡ್​ ನಿರ್ಧಾರ ಅಂತಿಮ        ಉಲ್ಟಾ ಹೊಡೆದ ಸಿಎಂ ಪುತ್ರ ಯತೀಂದ್ರ- ತಂದೆಯ ಬಾದಾಮಿ ಸ್ಪರ್ಧೆ ಪೋಸ್ಟ್​​​ ಡಿಲೀಟ್​​ - ಏ.23 ಕ್ಕೆ ನಾಮಪತ್ರ ಎಂದಿದ್ದ ಯತೀಂದ್ರ        ಜಗಳೂರು ಟಿಕೆಟ್​ ವಂಚಿತೆ ಆಸ್ಪತ್ರೆಗೆ ದಾಖಲು- ಟಿಕೆಟ್​​ ಕೊಟ್ಟು ಕಸಿದಿದ್ದರಿಂದ ನೊಂದಿದ್ದ ಪುಷ್ಪಾ- ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ        ಕಾಂಗ್ರೆಸ್​ನಲ್ಲಿ ಆಗಿದೆಯಂತೇ ಕೋಟಿ ಕೋಟಿ ಡೀಲ್​- ಕೆಪಿಸಿಸಿ ಅಧ್ಯಕ್ಷರಿಂದಲೇ ಟಿಕೆಟ್​ ಸೇಲ್​- ಛಲವಾದಿ ನಾರಾಯಣಸ್ವಾಮಿ ಹೊಸ ಬಾಂಬ್​        ಕೋಲಾರದ ಮಾಲೂರಿನಲ್ಲಿ ವೈದ್ಯರ ಎಡವಟ್ಟು- ಮಗುವಿನ ದೇಹದಲ್ಲೇ ಸೂಜಿ ಬಿಟ್ಟ ಡಾಕ್ಟರ್​- ಏಳು ದಿನದ ಬಳಿಕ ಮಗು ಸಾವು        ನರೋಡಾ ಪಾಟೀಯಾ ಹತ್ಯಾಖಾಂಡ ಪ್ರಕರಣ- ಮಾಜಿ ಸಚಿವೆ ಮಾಯಾ ಕೊಡ್ನಾನಿ ನಿರ್ದೋಶಿ- ಗುಜರಾತ್​​ ಹೈಕೋರ್ಟ್​​ನಿಂದ ತೀರ್ಪು       
Breaking News

ಪೂಜಾ ಪುನರಾಗಮನ

Friday, 19.05.2017, 3:03 AM       No Comments

|ರವಿಕಾಂತ ಕುಂದಾಪುರ

ಬೆಂಗಳೂರು: ಪೂಜಾ ಲೋಕೇಶ್ ಸ್ಯಾಂಡಲ್​ವುಡ್​ಗೆ ಪುನರಾಗಮಿಸಿದ್ದಾರೆ. ‘ಹುಲಿಯಾ’, ‘ಯುದ್ಧ’, ‘ಉಲ್ಟಾ ಪಲ್ಟಾ’ ಚಿತ್ರಗಳಲ್ಲಿ ಗಮನಸೆಳೆದಿದ್ದ ಅವರು ನಟಿ ಖುಷ್ಬೂ ಅಭಿನಯಿಸಿದ ‘ಮ್ಯಾಜಿಕ್ ಅಜ್ಜಿ’ ಬಳಿಕ ಕನ್ನಡ ಚಿತ್ರದಲ್ಲಿ ಕಾಣಿಸಿರಲಿಲ್ಲ. ಈಗ 12 ವರ್ಷಗಳ ಬಳಿಕ ‘ಟೈಗರ್ ಗಲ್ಲಿ’ ಚಿತ್ರದಲ್ಲಿ ನಟಿಸಿದ್ದಾರೆ. ಇಷ್ಟು ವರ್ಷಗಳ ಗ್ಯಾಪ್, ಕಂಬ್ಯಾಕ್ ಕುರಿತ ಅವರ ಅನಿಸಿಕೆಗಳನ್ನು ನಿಮ್ಮ ಮುಂದಿಟ್ಟಿದೆ ಇಂದಿನ ‘ನಮಸ್ತೆ ಬೆಂಗಳೂರು’.

ಹಲವು ವರ್ಷಗಳಿಂದ ಕಾಣಿಸಲಿಲ್ಲ, ಎಲ್ಲಿಗೆ ಹೋಗಿದ್ರಿ?

12 ವರ್ಷಗಳ ನಂತರ ಕನ್ನಡ ಚಿತ್ರರಂಗಕ್ಕೆ ಮರಳಿದ್ದೇನೆ. ಏಕೆಂದರೆ ಇಷ್ಟು ವರ್ಷಗಳ ಕಾಲ ತಮಿಳು ಕಿರುತೆರೆಯಲ್ಲಿ ಬಿಜಿಯಾಗಿದ್ದೆ. ಹಲವಾರು ಧಾರಾವಾಹಿಗಳಲ್ಲಿ ನಟಿಸಿದೆ. ಒಂದು ತಮಿಳು ಸಿನಿಮಾದಲ್ಲೂ ಕಾಣಿಸಿಕೊಂಡಿದ್ದೇನೆ. ಆಮೇಲೆ ‘ಮಜಾ ಟಾಕೀಸ್’ ಶುರುವಾಯಿತು, ನಮ್ಮದೇ ಪ್ರೊಡಕ್ಷನ್ ಹೌಸ್ ಆರಂಭವಾಯಿತು, ಹಾಗಾಗಿ ಮರಳಿದೆ.

ಅದು ನಮ್ಮ ಗುರುಗಳಾದ ಕೆ.ವಿ. ರಾಜು ಅವರಿಂದಾಗಿ. ಒಂದು ದಿನ ನಿರ್ದೇಶಕ ರವಿ ಶ್ರೀವತ್ಸ ಅವರು ಕರೆ ಮಾಡಿ, ಇಂಥದ್ದೊಂದು ಚಿತ್ರ ಇದೆ ಮಾಡುತ್ತೀರಾ ಎಂದು ಕೇಳಿದರು. ಚಿತ್ರದ ಕಥೆ ತುಂಬ ಇಷ್ಟವಾಯಿತು, ಅದರಲ್ಲೂ ಚಿತ್ರದ ಕಥೆ-ಚಿತ್ರಕಥೆ ರಾಜು ಅವರದ್ದು ಎಂದಾಗ ಸಿನಿಮಾ ಬಗ್ಗೆ ಕಾನ್ಪಿಡೆನ್ಸ್ ಹೆಚ್ಚಾಯಿತು. ಹಾಗಾಗಿ ತಕ್ಷಣ ಒಪ್ಪಿದೆ. ಶೂಟಿಂಗ್ ಶುರುವಾದ ಮೇಲೆ ಗೊತ್ತಾಯಿತು, ಈ ಚಿತ್ರಕ್ಕೆ ನನ್ನ ಹೆಸರನ್ನು ಶಿಫಾರಸು ಮಾಡಿದವರೇ ಕೆ.ವಿ. ರಾಜು ಅವರು ಅಂತ.

ಈ ಚಿತ್ರದಲ್ಲಿ ನಿಮ್ಮ ಪಾತ್ರವೇನು, ಅದಕ್ಕಾಗಿ ನಡೆಸಿದ ತಯಾರಿ ಹೇಗಿತ್ತು?

ನನ್ನದು ಇಲ್ಲಿ ಜಡ್ಜ್ ಪಾತ್ರ. ಇದೇ ಮೊದಲ ಬಾರಿಗೆ ಈ ಪಾತ್ರದಲ್ಲಿ ನಟಿಸಿದ್ದೇನೆ. ಜಡ್ಜ್ ಪಾತ್ರ ಎಂದಾಗ ಮೊದಲು ಒಂದು ರೀತಿಯ ಆತಂಕವಾಗಿತ್ತು. ಅದೊಂದು ಪ್ರಬುದ್ಧ ಪಾತ್ರ. ಎಕ್ಸ್​ಪ್ರೆಷನ್-ಬಾಡಿ ಲ್ಯಾಂಗ್ವೇಜ್ ಹೇಗಿರಬೇಕು ಎಂಬುದನ್ನೆಲ್ಲ ನಿರ್ದೇಶಕ ರವಿ ಶ್ರೀವತ್ಸ ಅವರು ಅಚ್ಚುಕಟ್ಟಾಗಿ ತಿಳಿಹೇಳಿದ್ದರಿಂದ ಪಾತ್ರ ನಿರ್ವಹಣೆ ಸುಲಭ ಆಯಿತು. ಜತೆಗೆ ನ್ಯಾಯಾಲಯದ ದೃಶ್ಯಗಳಿರುವ ಒಂದಷ್ಟು ಸಿನಿಮಾಗಳನ್ನು ನೋಡಿ ಪಾತ್ರಕ್ಕೆ ಸಿದ್ಧಳಾಗಿದ್ದೆ.

ತುಂಬ ವರ್ಷಗಳ ನಂತರ ಕನ್ನಡ ಚಿತ್ರರಂಗಕ್ಕೆ ಮರಳಿದ್ದಕ್ಕೆ ಏನನಿಸುತ್ತಿದೆ?

ನಟನೆಯ ಅನುಭವವೇನೋ ಇದೆ. ಆದರೂ ದೊಡ್ಡ ಗ್ಯಾಪ್​ನಿಂದಾಗಿ ಫ್ರೆಷ್ ಸ್ಟಾರ್ಟ್ ಎಂದೆನಿಸುತ್ತಿದೆ. ಎಲ್ಲವನ್ನೂ ಮತ್ತೆ ಹೊಸದಾಗಿ ಶುರು ಮಾಡಿದ್ದೇನೋ ಎಂಬಂಥ ಅನುಭವ. ಎಲ್ಲವನ್ನೂ ಹೊಸದಾಗಿ ಕಲಿಯುತ್ತಿರುವಂತೆ ಅನಿಸುತ್ತಿರುವುದರಿಂದ ಆರಂಭದ ಆ ಎಕ್ಸೈಟ್​ವೆುಂಟ್ ಈಗಲೂ ಅನುಭವಕ್ಕೆ ಬರುತ್ತಿದೆ. ವಿಶೇಷ ಎಂದರೆ ಆಗಿನಿಂದಲೂ ನನ್ನನ್ನು ನೋಡಿದ್ದ ಪರಿಚಿತರು ಮಾತನಾಡಿಸಿ ಖುಷಿ ವ್ಯಕ್ತಪಡಿಸಿದಾಗ ತುಂಬ ಸಂತೋಷವಾಗುತ್ತದೆ.

ಚಿತ್ರದ ಬಗ್ಗೆ ನಿಮ್ಮ ನಿರೀಕ್ಷೆ ಹೇಗಿದೆ?

ಚಿತ್ರದಲ್ಲಿ ಬರುವ ಪ್ರತಿ ಪಾತ್ರವೂ ಬಹಳ ಪ್ರಾಮುಖ್ಯತೆ ಹೊಂದಿರುವಂಥದ್ದೇ. ಇಲ್ಲಿ ನನಗೊಬ್ಬಳಿಗಷ್ಟೇ ಅಲ್ಲ, ಅನೇಕರಿಗೆ ಈ ಚಿತ್ರ ಒಂದು ರೀತಿಯಲ್ಲಿ ಟರ್ನಿಂಗ್ ಪಾಯಿಂಟ್ ಇದ್ದಂತೆ. ಜನ ಹೇಗೆ ಸ್ವೀಕರಿಸುತ್ತಾರೆ ಎಂಬುದರ ಮೇಲೆ ಎಲ್ಲ ಅವಲಂಬಿಸಿದೆ. ಸದ್ಯ ಆ ನಿರೀಕ್ಷೆಯ ಜತೆಗೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರಬಹುದು ಎಂಬ ಕುತೂಹಲದಲ್ಲಿದ್ದೇನೆ.

ಕಾಲಿವುಡ್ ಚಿತ್ರರಂಗದಲ್ಲಿನ ಅನುಭವ ಹೇಗಿತ್ತು ?

‘ಮ್ಯಾಜಿಕ್ ಅಜ್ಜಿ’ ಚಿತ್ರದ ಬಳಿಕ ನಾನು ಕನ್ನಡದಲ್ಲಿ ನಟಿಸಿರಲಿಲ್ಲ. ಅಲ್ಲಿಯೇ ನನಗೆ ಖುಷ್ಬು ಪರಿಚಿತರಾಗಿದ್ದು. ಆಮೇಲೆ ಅವರಿಂದಾಗಿ ತಮಿಳು ಕಿರುತೆರೆಯಲ್ಲಿ ಅವಕಾಶ ಸಿಕ್ಕಿತು. ಅಲ್ಲಿನ ಪ್ರೇಕ್ಷಕರು ನನ್ನನ್ನು ತುಂಬ ಒಳ್ಳೆಯ ರೀತಿಯಲ್ಲಿ ಸ್ವೀಕರಿಸಿದರು. ಹಾಗಾಗಿ 11 ವರ್ಷಗಳು ಕಳೆದಿದ್ದೇ ಗೊತ್ತಾಗಲಿಲ್ಲ.

ಕನ್ನಡ ಚಿತ್ರರಂಗಕ್ಕೂ ತಮಿಳು ಚಿತ್ರರಂಗಕ್ಕೂ ಏನಾದರೂ ವ್ಯತ್ಯಾಸ ಎನಿಸಿತಾ?

ಅಭಿನಯದ ವಿಷಯದಲ್ಲಿ ಯಾವ ವ್ಯತ್ಯಾಸವೂ ಇಲ್ಲ. ಬೆಳೆಯುತ್ತ ಬೆಳೆಯುತ್ತ ಕಲಾವಿದರು ಸುಧಾರಿಸಿಕೊಳ್ಳುತ್ತಲೇ ಹೋಗುತ್ತಾರೆ. ಪ್ರತಿ ದಿನ, ಪ್ರತಿ ಚಿತ್ರ, ಪ್ರತಿ ಪಾತ್ರದಿಂದಲೂ ಕಲಿಯುತ್ತಲೇ ಹೋಗುತ್ತೇವೆ. ಪ್ರತಿ ನಿರ್ದೇಶಕರಿಂದಲೂ ಏನಾದರೂ ಹೊಸದನ್ನು ಕಲಿಯುತ್ತಿರುತ್ತೇವೆ. ಅದು ಕನ್ನಡವೇ ಆಗಲಿ ತಮಿಳು ಚಿತ್ರರಂಗವೇ ಆಗಲಿ, ಅದೊಂದು ನಿರಂತರ ಕಲಿಯುವ ಪ್ರಕ್ರಿಯೆ.

ಮುಂದಿನ ಯೋಜನೆಗಳು ಏನೇನು?

‘ನವಂಬರ್ 19’ ಎಂಬ ಥ್ರಿಲ್ಲರ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದೇನೆ. ಆರ್ಯನ್ ಪ್ರತಾಪ್ ನಿರ್ದೇಶನದ ಈ ಚಿತ್ರದಲ್ಲಿ ನನಗೆ ಪೊಲೀಸ್ ಪಾತ್ರ. ಮೂರು ವಿಭಿನ್ನ ಕಥೆಗಳಿರುವ ಈ ಚಿತ್ರದಲ್ಲಿ ಮೂವರು ನಾಯಕರು. ಈಗಾಗಲೇ ಒಂದು ಹಂತದ ಚಿತ್ರೀಕರಣ ಮುಗಿದಿದೆ. ಮತ್ತೊಂದೆಡೆ ತಮಿಳಿನಿಂದಲೂ ಆಫರ್ಸ್ ಬರುತ್ತಿವೆ. ‘ಟೈಗರ್ ಗಲ್ಲಿ’ ಬಿಡುಗಡೆ ಆದ ಬಳಿಕ ಆ ಬಗ್ಗೆ ಯೋಚಿಸುತ್ತೇನೆ.

Leave a Reply

Your email address will not be published. Required fields are marked *

Back To Top