Wednesday, 18th July 2018  

Vijayavani

ಸಾಲದ ಸುಳಿಯಲ್ಲಿದ್ರೂ ಐ ಫೋನ್​ ಗಿಫ್ಟ್​ - ಹತ್ತಾರು ಸಮಸ್ಯೆ ಮಧ್ಯೆ ಬೇಕಿತ್ತಾ ದುಬಾರಿ ಉಡುಗೊರೆ​ - ಇಟ್ಕೊಂಡೋರಾರು..? ವಾಪಸ್ ಕೊಟ್ಟವರಾರು.?        ದೆಹಲಿಯಲ್ಲಿದ್ರೂ ರೇವಣ್ಣಗೆ ತವರಿನ ಜಪ - ಹಾಸನದ ಅಭಿವೃದ್ಧಿ ಬಗ್ಗೆ ಕೇಂದ್ರ ಸಚಿವರ ಜತೆ ಚರ್ಚೆ - ಸಿಎಂ ಎಚ್​ಡಿಕೆಯನ್ನೇ ಓವರ್​​ಟೇಕ್​ ಮಾಡಿದ PWD ಮಿನಿಸ್ಟರ್​​​        ಜಾರಕಿಹೊಳಿ ಬ್ರದರ್ಸ್​​​​ ನಡುವೆ ಸಮರ - ದೆಹಲಿಗೆ ಶಾಸಕರನ್ನ ಕರೆದೊಯ್ದ ರಮೇಶ್​​​​​​​ ಜಾರಕಿಹೊಳಿ - ಸತೀಶ್​​ಗೆ ಮಂತ್ರಿಗಿರಿ ತಪ್ಪಿಸಲು ಶಕ್ತಿ ಪ್ರದರ್ಶನ        ಇಂದಿನಿಂದ ಸಂಸತ್ ಅಧಿವೇಶನ - ಮಹಿಳಾ ಮೀಸಲಾತಿ, ತ್ರಿಪಲ್ ತಲಾಖ್​​​​​ ಮಸೂದೆ ಅಂಗೀಕಾರ ಸಾಧ್ಯತೆ - ಸಂಜೆ ರಾಜ್ಯ ಸಂಸದರ ಜತೆ ಸಿಎಂ ಮೀಟಿಂಗ್​​        ವಸತಿ ಯೋಜನೆಯ ಹಣವನ್ನೇ ನುಂಗಿದ್ರು - 140 ಅನರ್ಹರಿಂದ 8 ಕೋಟಿ ಗುಳುಂ ಸ್ವಾಹ - ಗದಗ ನಗರಸಭೆಯಲ್ಲಿ ಬಯಲಾಯ್ತು ಗೋಲ್​ಮಾಲ್​​​​        ದೀಪಾಲಂಕಾರದಿಂದ ಕಂಗೊಳಿಸಿದ ಕೆಆರ್​ಎಸ್​ - ಗಗನ ಚುಕ್ಕಿ ಜಲಪಾತ ನಯನ ಮನೋಹರ - ಡ್ರೋಣ್​​ ಕಣ್ಣಲ್ಲಿ ಸೆರೆಯಾಯ್ತು ಜಲಧಾರೆಯ ದೃಶ್ಯ ವೈಭವ       
Breaking News

ಪುತ್ರಿ ಹತ್ಯಾ ದೋಷದಿಂದ ಮುಕ್ತಿ

Friday, 13.10.2017, 3:04 AM       No Comments

ಅಲಹಾಬಾದ್: ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಆರುಷಿ ಹಾಗೂ ಹೇಮರಾಜ್ ಹತ್ಯೆ ಪ್ರಕರಣದಲ್ಲಿ ಸಿಬಿಐ ಕೋರ್ಟ್​ನಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ರಾಜೇಶ್ ಹಾಗೂ ನೂಪುರ್ ತಲ್ವಾರ್ ದೋಷಮುಕ್ತ ಎಂದು ಅಲಹಾಬಾದ್ ಹೈಕೋರ್ಟ್ ಗುರುವಾರ ತೀರ್ಪು ಪ್ರಕಟಿಸಿದೆ.

ನ್ಯಾ.ಎ.ಕೆ.ಮಿಶ್ರಾ ಮತ್ತು ನ್ಯಾ.ಬಿ.ಕೆ.ನಾರಾಯಣ ಅವರಿದ್ದ ದ್ವಿಸದಸ್ಯ ಪೀಠ, ಹತ್ಯೆಯಲ್ಲಿ ತಲ್ವಾರ್ ದಂಪತಿ ಪಾತ್ರವನ್ನು ಸಾಬೀತು ಮಾಡುವಲ್ಲಿ ಸಿಬಿಐ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಸಾಕ್ಷ್ಯಾಧಾರಗಳ ಕೊರತೆ ಸಿಬಿಐ ವರದಿಯಲ್ಲಿ ಎದ್ದುಕಾಣುತ್ತಿದೆ. ಶಂಕೆಯ ಆಧಾರದಲ್ಲಿ ದಂಪತಿಯನ್ನು ಕಾರಾಗೃಹದಲ್ಲಿ ಇರಿಸಲಾಗುವುದಿಲ್ಲ ಎಂದು ಕೋರ್ಟ್ ಹೇಳಿದೆ. ದಸ್ನಾ ಜೈಲಿನಲ್ಲಿ ಟಿವಿ ಮುಂದೆ ಕುಳಿತು ಕೋರ್ಟ್ ತೀರ್ಪು ವೀಕ್ಷಿಸಿದ ತಲ್ವಾರ್ ದಂಪತಿ ಬಿಡುಗಡೆಯ ಆನಂದಬಾಷ್ಟ ಹರಿಸಿದ್ದಾರೆ.

ಆರುಷಿ ಹತ್ಯೆಯ ಬಳಿಕ ಸಾಕ್ಷ್ಯಾಧಾರ ನಾಶಕ್ಕೂ ದಂಪತಿಗಳು ಪ್ರಯತ್ನಿಸಿದ್ದರು ಎಂದು ಆರೋಪಪಟ್ಟಿಯಲ್ಲಿ ಸಿಬಿಐ ಹೇಳಿತ್ತು. ಸಾಂರ್ದಭಿಕ ಸಾಕ್ಷಿಯ ಆಧಾರದ ಮೇಲೆ ಆರೋಪಿಗೆ ಶಿಕ್ಷೆ ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ. ಪಿಟಿಐ/ಏಜೆನ್ಸೀಸ್

ಚಿದಂಬರ ರಹಸ್ಯ…

# ಹತ್ಯೆ ದಿನ ಬೆಳಗ್ಗೆ 6 ಗಂಟೆಗೆ ಮನೆಯ ಮುಂಬಾಗಿಲಿನ ಗ್ರಿಲ್ ಒಳಗಿನಿಂದ ಲಾಕ್ ಆಗಿತ್ತು ಎಂದ ಮನೆಕೆಲಸದ ಭಾರತಿ ಮಂಡಲ್. ಹೀಗಾಗಿ ಮನೆ ಒಳಗಿನವರೇ ಕೊಲೆ ಮಾಡಿರುವ ಶಂಕೆ

# ಖುಕ್ರಿ(ನೇಪಾಳಿಗರ ಆಯುಧ)ಯಿಂದ ಹತ್ಯೆ ಎಂದು ಮೊದಲು ಶಂಕಿಸಿದ್ದ ಸಿಬಿಐ. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಗಾಲ್ಪ್ ಸ್ಟಿಕ್​ನಿಂದ ಹತ್ಯೆಯಾಗಿದ್ದು, ರಾಜೇಶ್ ಬಳಿಯಿರುವ ಗಾಲ್ಪ್ ಸ್ಟಿಕ್​ಗೆ ಇದು ಹೋಲಿಕೆಯಾಗುತ್ತದೆ ಎಂದು ಉಲ್ಲೇಖವಾಗಿದೆ.

# ಆರುಷಿ ಜನನಾಂಗ ಶುಚಿತ್ವಕ್ಕೆ ಪ್ರಯತ್ನಿಸಲಾಗಿದೆ ಎಂದ ಏಮ್ಸ್​ ವರದಿ.

# ಹೇಮರಾಜ್ ರೂಂನಲ್ಲಿ ಸಿಕ್ಕ ದಿಂಬು, ಆರುಷಿ ಕೋಣೆಯಿಂದ ತರಲಾಗಿತ್ತು ಎಂದು ಕೋರ್ಟ್​ಗೆ ಸಿಬಿಐ ವರದಿ. ಮುದ್ರಣ ದೋಷ ಎಂದು ಸಿಬಿಐ ಸಬೂಬು.

ನ್ಯಾಯಾಲಯ ತಲ್ವಾರ್ ದಂಪತಿ ನಿದೋಷಿ ಎಂದು ಹೇಳಿಲ್ಲ. ಹತ್ಯೆಯಾದ ಕೊಠಡಿಯಲ್ಲಿ ಹೇಮರಾಜ್ ರಕ್ತ ಸಿಗದಿರುವುದು ತನಿಖೆಗೆ ದೊಡ್ಡ ಹಿಂದೇಟು. ನೋಯ್ಡಾ ಪೊಲೀಸರು ಆರಂಭದಲ್ಲಿ ಮಾಧ್ಯಮದವರಿಗೆ ಘಟನಾ ಸ್ಥಳ ಪ್ರವೇಶಕ್ಕೆ ಅವಕಾಶ ಕೊಟ್ಟಿದ್ದು ತಪು್ಪ. ಇಂಥ ಹಲವು ಲೋಪದೋಷಗಳಿವೆ.

| ಎ.ಪಿ. ಸಿಂಗ್ ಸಿಬಿಐ ಮಾಜಿ ನಿರ್ದೇಶಕ

ಆರುಷಿ ಹತ್ಯಾಕಾಂಡ

# ಮೇ 16, 2008 – ನೋಯ್ಡಾದ ನಿವಾಸದಲ್ಲಿ ಆರುಷಿ ತಲ್ವಾರ್ ಹತ್ಯೆ

# ಮೇ 17 – ತಲ್ವಾರ್ ನಿವಾಸದ ಛಾವಣಿಯಲ್ಲಿ ಕೆಲಸದಾಳು ಹೇಮರಾಜ್ ಶವ ಪತ್ತೆ

# ಮೇ 23 – ಎರಡು ಹತ್ಯೆಯ ಆರೋಪದಲ್ಲಿ ಆರುಷಿ ತಂದೆ ರಾಜೇಶ್ ಬಂಧನ

# ಮೇ 31 – ಸಿಬಿಐಗೆ ತನಿಖೆ ಹೊಣೆ

# 2008 ಜೂ. 11 – ಸಾಕ್ಷ್ಯಾಧಾರ ಕೊರತೆಯಿಂದ ರಾಜೇಶ್​ಗೆ ಬಿಡುಗಡೆ

# 2010 ಡಿ. 29 – ತನಿಖೆ ಮುಕ್ತಾಯ ವರದಿ ಸಲ್ಲಿಸಿದ ಸಿಬಿಐ, ರಾಜೇಶ್ ವಿರುದ್ಧ ಸೂಕ್ತ ಸಾಕ್ಷ್ಯ ಇಲ್ಲ. ಆದರೂ ಆತನೇ ಮುಖ್ಯ ಆರೋಪಿ ಎಂದು ವರದಿ.

# 2012, ಏ.30 – ರಾಜೇಶ್ ಪತ್ನಿ ನೂಪುರ್ ಪೊಲೀಸರಿಗೆ ಶರಣು. ನ್ಯಾಯಾಂಗ ವಶಕ್ಕೆ.

# ಮೇ 25 – ದಂಪತಿಗಳ ವಿರುದ್ಧ ಹತ್ಯೆ, ಸಾಕ್ಷ್ಯ ನಾಶ ಮತ್ತು ಕೊಲೆಗೆ ಸಂಚು ಆರೋಪ ಪುರಸ್ಕರಿಸಿದ ಕೋರ್ಟ್

# 2013, ಏಪ್ರಿಲ್ – ಆರುಷಿ ಮತ್ತು ಹೇಮರಾಜ್ ಲೈಂಗಿಕ ಸಂಪರ್ಕದಲ್ಲಿದ್ದಾಗ ತಲ್ವಾರ್ ದಂಪತಿ ನೋಡಿ ಮರ್ಯಾದೆಗೆ ಅಂಜಿ ಕೊಲೆ ಮಾಡಿದ್ದಾರೆಂದು ಕೋರ್ಟ್​ಗೆ ಸಿಬಿಐ ಮಾಹಿತಿ.

# ಅ.10 – ಅಂತಿಮ ಹಂತದ ವಿಚಾರಣೆ ಆರಂಭ.

# ನ. 26 – ತಲ್ವಾರ್ ದಂಪತಿಗೆ ಸಿಬಿಐ ಕೋರ್ಟ್​ನಿಂದ ಜೀವಾವಧಿ ಶಿಕ್ಷೆ ಪ್ರಕಟ.

# 2014 ಜ.21 – ತೀರ್ಪು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್​ಗೆ ತಲ್ವಾರ್ ದಂಪತಿ ಮೇಲ್ಮನವಿ.

# 2017 ಸೆ. 7 – ಪ್ರಕರಣದ ತೀರ್ಪು ಕಾಯ್ದಿರಿಸಿದ ನ್ಯಾಯಾಲಯ.

# ಅ.12 – ಸಾಕ್ಷ್ಯಾಧಾರ ಕೊರತೆಯಿಂದ ತಲ್ವಾರ್ ದಂಪತಿ ಖುಲಾಸೆಗೊಳಿಸಿದ ಹೈಕೋರ್ಟ್.

ಹೈಕೋರ್ಟ್ ಹೇಳಿದ್ದೇನು?

# ತಲ್ವಾರ್ ದಂಪತಿ ಹತ್ಯೆ ಮಾಡಿರುವುದಕ್ಕೆ ಸೂಕ್ತ ಸಾಕ್ಷಿ ಇಲ್ಲ.

# ಅನುಮಾನದ ಮೇಲೆ ಅಪರಾಧಿಗಳು ಎನ್ನಲಾಗುವುದಿಲ್ಲ

# ಆರೋಪ ಸಾಬೀತಿಗೆ ಸಿಬಿಐ ವಿಫಲ.

# ಶಂಕಾಸ್ಪದ ಹತ್ಯೆಯ ಲಾಭ ಆರೋಪಿಗಳಿಗೆ ದೊರೆಯಲಿದೆ.

# ಸಾಂರ್ದಭಿಕ ಸಾಕ್ಷ್ಯಳ ಮೇಲೆ ನಿಂತಿರುವ ಪ್ರಕರಣವಿದು.

ಏನಿದು ಪ್ರಕರಣ?

ದೆಹಲಿ ಪಬ್ಲಿಕ್ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಆರುಷಿ ನೋಯ್ಡಾ ನಿವಾಸದಲ್ಲಿ 2008, ಮೇ 15ರ ಮಧ್ಯರಾತ್ರಿ ಕೊಲೆಯಾಗಿದ್ದಳು. ಕುತ್ತಿಗೆ ಸೀಳಿ ಹತ್ಯೆಮಾಡಲಾಗಿತ್ತು. ತಲೆಯ ಮೇಲೆ ಗಾಯಗಳಿದ್ದವು. ಮಾರನೇ ದಿನ(ಮೇ 16) ಮನೆಯ ಟೆರೆಸ್​ನಲ್ಲಿ ನೇಪಾಳ ಮೂಲದ ಮನೆಕೆಲಸದವ ಹೇಮರಾಜ್ ಬಂಜಾಡೆ (45) ಶವ ಪತ್ತೆಯಾಗಿತ್ತು. ಹೇಮರಾಜ್ ಮತ್ತು ಆರುಷಿ ನಡುವೆ ದೈಹಿಕ ಸಂಬಂಧ ಇರುವುದು ತಿಳಿದ ಹಿನ್ನೆಲೆಯಲ್ಲಿ ಆರುಷಿ ಪಾಲಕರಾದ ರಾಜೇಶ್ ತಲ್ವಾರ್ ಮತ್ತು ನೂಪುರ್ ತಲ್ವಾರ್ ಆಕೆಯನ್ನು ಹತ್ಯೆ ಮಾಡಿದ್ದಾರೆ ಎಂದು ಸಿಬಿಐ ಆರೋಪಿಸಿತ್ತು.

ಹೈಕೋರ್ಟ್ ತಲ್ವಾರ್ ದಂಪತಿಗಳ ಮನವಿ ಪುರಸ್ಕರಿಸಿದ್ದಕ್ಕೆ ಮೊದಲು ಸಂತಸವಾಗಿದೆ. ಯಾಕೆಂದರೆ ವಾಸ್ತವವಾಗಿ ಮತ್ತು ಕಾನೂನಾತ್ಮಕವಾಗಿ ಇದೊಂದು ಅಸಮರ್ಥನೀಯ ಪ್ರಕರಣ. ಹತ್ಯೆಯ ನಂತರ ಕಾನೂನು ಕ್ರಮಗಳು ಮತ್ತು ಅಪರಾಧ ನಿರ್ಣಯ ನ್ಯಾಯದಿಂದ ಬಲು ದೂರ ಸಾಗಿತ್ತು.

| ರೆಬೆಕಾ ಜಾನ್ ತಲ್ವಾರ್ ದಂಪತಿ ಪರ ವಕೀಲೆ

Leave a Reply

Your email address will not be published. Required fields are marked *

Back To Top