Monday, 19th February 2018  

Vijayavani

ಮೈಸೂರಲ್ಲಿ ಮೋದಿ ಮೇನಿಯಾ - ಕನ್ನಡದಲ್ಲಿ ಮಾತು ಆರಂಭಿಸಿದ ಪ್ರಧಾನಿ -ಮಹಾಪುರುಷರ, ವಸ್ತುಗಳ ಸ್ಮರಿಸಿದ ನಮೋ.        ಬಡವರ ಅವಶ್ಯಕತೆ ಪೂರೈಕೆಗೆ ರೈಲ್ವೆ ಅವಶ್ಯಕ - ಜೋಡಿ ಮಾರ್ಗ ಉದ್ಘಾಟಿಸಿ ನಮೋ ಮಾತು - ಹಿಂದಿನ ಸರ್ಕಾರಗಳ ವಿರುದ್ಧ ವಾಗ್ದಾಳಿ.        ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಿಡಿ - ಸಿಎಂ ವಿರುದ್ಧ ಪ್ರತಾಪಸಿಂಹ ವಾಕ್ಪ್ರಹಾರ - ಮೋದಿಗೆ ಸ್ಮರಣಿಕೆ ನೀಡಿದ ಮುಖಂಡರು.        ಶಾಸಕ ಹ್ಯಾರಿಸ್ ಪುತ್ರನಿಂದ ಹಲ್ಲೆ ಕೇಸ್​ - ಆರೋಪಿಗಳಿಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್​​ - ಶಿವಾಜಿನಗರದ ಬೌರಿಂಗ್​ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್.        ಸರ್ವಸಂಘ ಪರಿತ್ಯಾಗಿಗೆ ಮಹಾಮಜ್ಜನ - ಶ್ರವಣಬೆಳಗೊಳದಲ್ಲಿ ಭಕ್ತ ಸಾಗರ - ಆಸ್ಪತ್ರೆ, ಬೆಟ್ಟದ ಮೆಟ್ಟಿಲು ಲೋಕಾರ್ಪಣೆ.       
Breaking News

ಪಾಕ್​ನ ಬಲೂಚ್​ನಲ್ಲಿ ಅಣ್ವಸ್ತ್ರಗಳ ಉಗ್ರಾಣ

Saturday, 12.08.2017, 3:00 AM       No Comments

ವಾಷಿಂಗ್ಟನ್: ಪಾಕಿಸ್ತಾನ ತನ್ನಲ್ಲಿರುವ ಪ್ರಕ್ಷೇಪಕ ಕ್ಷಿಪಣಿಗಳು, ಅಣ್ವಸ್ತ್ರ ಸಿಡಿತಲೆಗಳನ್ನು ಸುರಕ್ಷಿತವಾಗಿ ದಾಸ್ತಾನು ಮಾಡಲು ಬಲೂಚಿಸ್ತಾನದ ಕಡಿದಾದ ಗುಡ್ಡಗಾಡು ಪ್ರದೇಶದಲ್ಲಿ ‘ನೆಲದಾಳದ ಮತ್ತು ಬಲಿಷ್ಠ‘ವಾದ ಉಗ್ರಾಣವನ್ನು ನಿರ್ವಿುಸಿದೆ ಎಂದು ಅಮೆರಿಕದ ತಜ್ಞರು ತಿಳಿಸಿದ್ದಾರೆ.

ವಿಜ್ಞಾನ ಮತ್ತು ಅಂತಾರಾಷ್ಟ್ರೀಯ ಭದ್ರತಾ ಸಂಸ್ಥೆ ಎಂಬ ಅಮೆರಿಕದ ಎನ್​ಜಿಒದ ಡೇವಿಡ್ ಆಲ್​ಬ್ರೖೆಟ್, ಸಾರಾ ಬರ್ಕ್ ಹಾರ್ಡ್, ಆಲಿಸನ್ ಲಾಚ್ ಮತ್ತು ಫ್ರಾಂಕ್ ಪೇಬಿಯನ್ ಎಂಬ ತಜ್ಞರು ಉಪಗ್ರಹ ಆಧಾರಿತ ಅಧ್ಯಯನದ ಬಳಿಕ ಈ ಮಾಹಿತಿ ನೀಡಿದ್ದಾರೆ.

‘ಪಾಕ್​ನ ಆಗ್ನೇಯ ಭಾಗದಲ್ಲಿ ಅತ್ಯಂತ ಬಲಿಷ್ಠವಾದ, ಹೆಚ್ಚಿನ ಸುರಕ್ಷತೆಯುಳ್ಳ ನೆಲದಾಳದ ಉಗ್ರಾಣವೊಂದು ನಿರ್ವಣಗೊಂಡಿದೆ. ಅದರಲ್ಲಿ ಪ್ರಕ್ಷೇಪಕ ಕ್ಷಿಪಣಿಗಳು ಮತ್ತು ಅಣ್ವಸ್ತ್ರ ಸಿಡಿತಲೆಗಳನ್ನು ದಾಸ್ತಾನು ಮಾಡಬಹುದಾಗಿದೆ‘ ಎಂದು ತಜ್ಞರು ಹೇಳಿದ್ದಾರೆ.

ಈ ಉಗ್ರಾಣವನ್ನು ಯಾವ ಕಾರ್ಯಕ್ಕಾಗಿ ಬಳಸಲಾಗುತ್ತದೆ ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಪಾಕ್ ಇದನ್ನು ಶಸ್ತ್ರಾಸ್ತ್ರ ಕೋಠಿ ಅದರಲ್ಲೂ ವಿಶೇಷವಾಗಿ ಕ್ಷಿಪಣಿಗಳು ಮತ್ತು ಅಣ್ವಸ್ತ್ರ ಸಿಡಿತಲೆಗಳ ಕೋಠಿಯಾಗಿ ಬಳಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ.‘ಸದಾ ಪ್ರಕ್ಷುಬ್ಧವಾಗಿರುವ, ಉಗ್ರಗಾಮಿ ಚಟುವಟಿಕೆಗಳ ತಾಣವಾಗಿರುವ ಬಲೂಚಿಸ್ತಾನದಲ್ಲಿ ಈ ಉಗ್ರಾಣ ನಿರ್ವಣಗೊಂಡಿದೆ. ಅತ್ಯಂತ ದುರ್ಗಮವಾದ ಮತ್ತು ಕಡಿದಾದ ಬೆಟ್ಟಗುಡ್ಡಗಳಿಂದ ಕೂಡಿರುವ, ಭಾರತ ಸೇರಿ ವಿವಿಧ ಶತ್ರ ರಾಷ್ಟ್ರಗಳ ಗಡಿ ಭಾಗದಿಂದ ಸಾಕಷ್ಟು ದೂರವಾಗಿರುವ ಈ ಪ್ರದೇಶದಲ್ಲಿ ಕೋಠಿಯನ್ನು ಹೊಂದುವುದು ಹೆಚ್ಚು ಸುರಕ್ಷಿತ ಎಂದು ಪಾಕ್ ಭಾವಿಸಿದೆ‘ ಎಂದು ತಿಳಿಸಿದ್ದಾರೆ.-ಏಜೆನ್ಸೀಸ್

***

ಮೂರು ಪ್ರವೇಶದ್ವಾರ

ಈ ಉಗ್ರಾಣಕ್ಕೆ 3 ಪ್ರಮುಖ ಪ್ರವೇಶದ್ವಾರಗಳಿವೆ. ಇವು ತುಂಬಾ ದೊಡ್ಡದಾಗಿದ್ದು, ಅದೆಷ್ಟೇ ದೊಡ್ಡ ವಾಹನವಾದರೂ ಸುಲಭವಾಗಿ ಪ್ರವೇಶಿಸಬಹುದಾಗಿದೆ. ಆ ವಾಹನಗಳು ಸುಲಭವಾಗಿ ತಿರುಗಾಡಲು ಅವಕಾಶವಾಗುವ ರೀತಿ ವಿಶಾಲವಾದ ತೆರೆದ ಜಾಗ ಬಿಡಲಾಗಿದೆ. 2012ಕ್ಕೂ ಮೊದಲು ಈ ಕಟ್ಟಡದಲ್ಲಿ ಹೆಚ್ಚಿನ ಭದ್ರತೆ ಇರಲಿಲ್ಲ. ಆದರೆ, 2014ರ ನಂತರದಲ್ಲಿ ಈ ಕಟ್ಟಡದಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆಗಳನ್ನು ಏರ್ಪಡಿಸಲಾಗಿದೆ. ಹೆಚ್ಚುವರಿ ಬೇಲಿಗಳನ್ನು ಅಳವಡಿಸಲಾಗಿದ್ದು, ಚೆಕ್​ಪಾಯಿಂಟ್​ಗಳನ್ನೂ ಹೆಚ್ಚಿಸಲಾಗಿದೆ. ಜತೆಗೆ ಆಯಕಟ್ಟಿನ ಜಾಗದಲ್ಲಿ ಕ್ಷಿಪಣಿನಿರೋಧಕ ಕ್ಷಿಪಣಿಗಳನ್ನು ಸ್ಥಾಪಿಸಲಾಗಿದೆ. ಇದರಿಂದಾಗಿ ಈ ಕಟ್ಟಡವನ್ನು ಪಾಕಿಸ್ತಾನ ಅಣ್ವಸ್ತ್ರಗಳ ಕೋಠಿಯಾಗಿ ಪರಿವರ್ತಿಸಿದೆ ಎನ್ನಬಹುದಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Leave a Reply

Your email address will not be published. Required fields are marked *

Back To Top