Friday, 21st September 2018  

Vijayavani

ಸಿಎಂ ‘ದಂಗೆ’ ಹೇಳಿಕೆ ವಿರುದ್ಧ ಕೇಸರಿ ಗುಟುರು - ಡಿಜಿಪಿ ನೀಲಮಣಿ ರಾಜುಗೆ ಬಿಜೆಪಿ ದೂರು - ಸಂಜೆ 4.30ಕ್ಕೆ ಗವರ್ನರ್ ಭೇಟಿ​​​​        ರಾಜ್ಯಾದ್ಯಂತ ಭುಗಿಲೆದ್ದ ‘ದಂಗೆ’ ಉರಿ - ಕಲಬುರಗಿ, ಮಂಡ್ಯ, ಧಾರವಾಡ, ಕೊಡಗಿನಲ್ಲಿ ದಳ್ಳುರಿ        ಬ್ರದರ್ಸ್​​ ತಂಟೆಗೆ ಹೋಗ್ಬೇಡಿ, ವಿವಾದಾತ್ಮಕ ಹೇಳಿಕೆ ಕೊಡ್ಬೇಡಿ - ಸಾಫ್ಟ್​ ಪಾಲಿಟಿಕ್ಸ್ ಬಗ್ಗೆ ಡಿಕೆಶಿಗೆ ಸಿದ್ದು ಕ್ಲಾಸ್        ಕರ್ನಾಟಕದಲ್ಲಿ ನಮಗೆ ಅಧಿಕಾರ ಬೇಕು - ಇಲ್ದಿದ್ರೆ ಲೋಕಸಭೆ ಚುನಾವಣೆಯಲ್ಲಿ ಕಷ್ಟ ಕಷ್ಟ - ಪರಿಸ್ಥಿತಿ ನಿಭಾಯಿಸಲು ಸಿದ್ದುಗೆ ಸೂಚನೆ        ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ - ಅಪಹರಿಸಿದ್ದ ಮೂವರು ಪೊಲೀಸರ ಹತ್ಯೆಗೈದ ಕಿರಾತಕರು        ಓಡಿಶಾದಲ್ಲಿ ಡೆಯ್ ಚಂಡಮಾರುತದ ಅಬ್ಬರ - ಕಾಲಾಪುರಕ್ಕೆ ನುಗ್ಗಿದ ಡ್ಯಾಮ್ ನೀರು ನುಗ್ಗಿ ಪ್ರವಾಹ - ಬಿರುಗಾಳಿಗೆ ಜನರು ಕಂಗಾಲ್       
Breaking News

ಪವಿತ್ರಾ ರಾಜ್ಯಕ್ಕೆ 8ನೇ ರ್ಯಾಂಕ್

Wednesday, 13.06.2018, 10:58 AM       No Comments

ಮುಧೋಳ: ಬಡತನದಲ್ಲಿ ಅರಳಿದ ಪ್ರತಿಭೆ ತಾಲೂಕಿನ ಸೋರಗಾಂವಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಪವಿತ್ರಾ ಪರಮಾನಂದ ಈ ಹಿಂದೆ ಎಸ್​ಎಸ್​ಎಲ್​ಸಿಯಲ್ಲಿ 11 ನೇ ರ್ಯಾಂಕ್ ಪಡೆದಿದ್ದರು. ಆದರೆ ಈಗ ಮರು ಮೌಲ್ಯಮಾಪನಲ್ಲಿ ನಾಲ್ಕು ಅಂಕಗಳನ್ನು ಹೆಚ್ಚುವರಿಯಾಗಿ ಪಡೆದಿರುವ ಪರಿಣಾಮ ರಾಜ್ಯಕ್ಕೆ 8 ರ್ಯಾಂಕ್ ಪಡೆದಿದ್ದಾರೆ.

ಮರು ಮೌಲ್ಯಮಾಪನದಿಂದ ಸಮಾಜ ವಿಜ್ಞಾನ ಹಾಗೂ ದ್ವಿತೀಯ ಭಾಷೆ ಇಂಗ್ಲಿಷ್​ನಲ್ಲಿ ತಲಾ ಎರಡು ಅಂಕಗಳು ಹೆಚ್ಚುವರಿಯಾಗಿ ಬಂದ ಪರಿಣಾಮ ಒಟ್ಟು ಅಂಕ 614 ರಿಂದ 618ಕ್ಕೆ ಏರಿಕೆಯಾಗಿದ್ದು ರಾಜ್ಯಕ್ಕೆ 8ನೇ ರ್ಯಾಂಕ್ ಪಡೆದಿದ್ದಾರೆ.

ಅಲ್ಲದೇ ಇದೇ ಶಾಲೆ ಮತ್ತೊಬ್ಬ ವಿದ್ಯಾರ್ಥಿನಿ ಕೀರ್ತಿ ಪಾಟೀಲ ವಿಜ್ಞಾನ ವಿಷಯದಲ್ಲಿ 18 ಅಂಕ ಪಡೆದು ಅನುತ್ತೀರ್ಣಳಾಗಿದ್ದು, ಈಗ ಮರು ಮೌಲ್ಯಮಾಪನದಿಂದ ಆಕೆಗೆ ಮತ್ತೆ 6 ಅಂಕಗಳು ಸೇರ್ಪಡೆಯಾಗಿ ಉತ್ತೀರ್ಣಳಾಗಿದ್ದಾಳೆ. ಇದರಿಂದ ಶಾಲೆಯ ಒಟ್ಟು ಫಲಿತಾಂಶವೂ ಪ್ರತಿಶತವಾಗಿದೆ ಎಂದು ಮುಖ್ಯೋಪಾಧ್ಯಾಯ ಸಂಜೀವ ಜುನ್ನೂರ ‘ವಿಜಯವಾಣಿ’ಯೊಂದಿಗೆ ಸಂತಸ ಹಂಚಿಕೊಂಡರು.

ನನಗೆ ಇನ್ನೂ ಹೆಚ್ಚು ಅಂಕಗಳು ಬರಬೇಕಿತ್ತು. ಈ ಕಾರಣಕ್ಕಾಗಿಯೇ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದೆ. ಈಗ ನನಗೆ ಮತ್ತೆ ನಾಲ್ಕು ಅಂಕ ಬಂದಿದ್ದು ಸಂತಸ ತಂದಿದೆ.

| ಪವಿತ್ರಾ ಅರೇನಾಡ, 8ನೇ ರ್ಯಾಂಕ್ ಪಡೆದ ವಿದ್ಯಾರ್ಥಿನಿ

 

Leave a Reply

Your email address will not be published. Required fields are marked *

Back To Top