Wednesday, 22nd November 2017  

Vijayavani

1. ಉಗ್ರನ ವಿರುದ್ಧ ಕೊಡಲಿಲ್ಲ ಪಾಕ್ ಸಾಕ್ಷ್ಯ – LET ಕ್ರಿಮಿ ಹಫೀಜ್ ಸಯೀದ್​ಗೆ ಕ್ಲೀನ್​ಚಿಟ್ – ಮನೆಯಿಂದ ಹೊರಬರ್ತಾನೆ ಮುಂಬೈ ದಾಳಿ ಮಾಸ್ಟರ್ ಮೈಂಡ್ 2. ಅಲೆಮಾರಿಗಳ ಮನೆ ತೆರವು ವೇಳೆ ಅಮಾನವೀಯ ವರ್ತನೆ – ನಡುರಸ್ತೆಯಲ್ಲಿ ಮಹಿಳೆಗೆ ಹೆರಿಗೆ – ದಿಗ್ವಿಜಯ ನ್ಯೂಸ್​ ವರದಿಗೆ ಡಿಸಿ ಸ್ಪಂದನೆ 3. ಹೆರಿಗೆ ವೇಳೆ ಮೃತಪಟ್ಟಿದ್ದಾಳೆ ಅಂದ್ರು ಡಾಕ್ಟರ್ಸ್​ – ಅಂತ್ಯ ಸಂಸ್ಕಾರದ ವೇಳೆ ಕಣ್ಣು ಬಿಟ್ಲಂತೆ ಬಾಣಂತಿ – ಮನೆಗೆ ತರೋವಷ್ಟರಲ್ಲಿ ಮತ್ತೆ ಸಾವಿನ ದರ್ಶನ 4. ಕೊಪ್ಪಳ ಜಿಲ್ಲಾಪ್ರವಾಸದಲ್ಲಿ ಎಚ್​ಡಿಡಿ – ಗವಿಮಠಕ್ಕೆ ಮಾಜಿ ಪ್ರಧಾನಿ ಭೇಟಿ – ಇಳಿವಯಸ್ಸಿನಲ್ಲೂ ಕಿಂಡಿಯಲ್ಲೆ ತೆರಳಿ ದರ್ಶನ 5. ಯೂರ್ಟನ್​ ವೇಳೆ ಕಾರಿಗೆ ಲಾರಿ ಡಿಕ್ಕಿ – ಡಿಕ್ಕಿ ಹೊಡೆದ ಲಾರಿಗೆ ಟ್ರಕ್ ಡ್ಯಾಶ್ – ಸೌದಿ ಹೈವೇಯಲ್ಲಿ ಹಾರಿಬಲ್ ಆಕ್ಸಿಡೆಂಟ್
Breaking News :

ಪವರ್​ಫುಲ್ ಇಲೆಕ್ಟ್ರಾನಿಕ್ ಬಾಂಬ್

Friday, 21.04.2017, 3:00 AM       No Comments

ಮಾಸ್ಕೋ: ಮತ್ತೊಂದು ಜಾಗತಿಕ ಸಮರ ನಡೆಯಬಹುದೆಂಬ ಆತಂಕದ ಛಾಯೆ ಎಲ್ಲಡೆ ವ್ಯಾಪಿಸಿರುವಾಗಲೇ, ರಷ್ಯಾ ಇಲೆಕ್ಟ್ರಾನಿಕ್ ಬಾಂಬ್ ಅಭಿವೃದ್ಧಿಪಡಿಸಿದೆ ಎಂಬ ಸುದ್ದಿಯನ್ನು ಅಲ್ಲಿನ ಸರ್ಕಾರಿ ಸ್ವಾಮ್ಯದ ಟಿವಿ ಚಾನೆಲ್ ಬಿತ್ತರಿಸಿದೆ.

ರಷ್ಯಾದ ಇಲೆಕ್ಟ್ರಾನಿಕ್ ವಾರ್​ಫೇರ್(ಆರ್​ಇಡಬ್ಲ್ಯು) ಸಂಶೋಧನಾ ತಂಡ ಈ ಬಾಂಬನ್ನು ಅಭಿವೃದ್ಧಿಪಡಿಸಿದೆ. ಇದರಲ್ಲಿ ಶಕ್ತಿಶಾಲಿ ಇಲೆಕ್ಟ್ರಾನಿಕ್ ಸಿಗ್ನಲ್ ಜಾಮಿಂಗ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಇದರೊಂದಿಗೆ ರಷ್ಯಾದ ಸೇನೆ ಅಮೆರಿಕದ ಯುದ್ಧ ವಿಮಾನ, ನೌಕೆ, ಕ್ಷಿಪಣಿಗಳನ್ನು ನಿಷ್ಕ್ರಿಯಗೊಳಿಸಬಲ್ಲ ಸಾಮರ್ಥ್ಯ ಪಡೆದುಕೊಂಡಿದೆ. ಇಲೆಕ್ಟ್ರಾನಿಕ್ ಬಾಂಬ್ ಶತ್ರುರಾಷ್ಟ್ರದ ತಾಂತ್ರಿಕ ವ್ಯವಸ್ಥೆ, ರಾಡಾರ್ ಮತ್ತು ಉಪಗ್ರಹಗಳ ಸಂಕೇತಗಳನ್ನು ಗುರುತಿಸಿ ಅವುಗಳನ್ನೆಲ್ಲ ನಿಷ್ಕ್ರಿಯಗೊಳಿಸುವಷ್ಟು ಶಕ್ತಿಶಾಲಿಯಾಗಿದೆ. ಈ ಬಾಂಬನ್ನು ಅಮೆರಿಕ ಸೇನೆ ಪತ್ತೆಹಚ್ಚಲಾಗದು ಎಂದು ವರದಿ ಹೇಳಿದೆ. ಕೆಲವು ವರ್ಷಗಳ ಹಿಂದೆ ಕಪ್ಪು ಸಮುದ್ರದಲ್ಲಿದ್ದ ಅಮೆರಿಕದ ಯುಎಸ್​ಎಸ್ ಡೊನಾಲ್ಡ್ ಕುಕ್ ಎಂಬ ಸಮರ ನೌಕೆಯ ಮೇಲೆ ರಷ್ಯಾದ ಸಮರ ವಿಮಾನ ಒಂದೇ ಹಲವು ಸಲ ಹಾರಾಟ ನಡೆಸಿದೆ. ಅಂದು, ಇಲೆಕ್ಟ್ರಾನಿಕ್ ಸಿಗ್ನಲ್ ಜಾಮ್ ಮಾಡಲು ಇದೇ ತಂತ್ರಜ್ಞಾನ ನೆರವಾಗಿತ್ತು. ಅಮೆರಿಕದ ಜನರಲ್ ಫ್ರಾಂಕ್ ಗೋರೆನ್ಕ್ ಒಂದಡೆ, ‘ರಷ್ಯಾ ಅಭಿವೃದ್ಧಿ ಪಡಿಸಿರುವ ಇಲೆಕ್ಟ್ರಾನಿಕ್ ಯುದ್ಧೋಪಕರಣಗಳು ಅಮೆರಿಕದ ಕ್ಷಿಪಣಿ, ವಿಮಾನ, ಸಮರ ನೌಕೆ ಸೇರಿ ಎಲ್ಲ ಇಲೆ ಕ್ಟ್ರಾನಿಕ್ ಉತ್ಪನ್ನಗಳನ್ನು ನಿಷ್ಕ್ರಿಯಗೊಳಿಸಬಲ್ಲ ಸಾಮರ್ಥ್ಯ ಹೊಂದಿವೆ’ ಎಂದು ಹೇಳಿದನ್ನು ಕೂಡ ವರದಿ ಉಲ್ಲೇಖಿಸಿದೆ. ಆದಾಗ್ಯೂ, ಇದಕ್ಕೆ ಅಮೆರಿಕ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

 

Leave a Reply

Your email address will not be published. Required fields are marked *

Back To Top