Sunday, 18th February 2018  

Vijayavani

ಶಾಸಕ ಹ್ಯಾರಿಸ್ ಪುತ್ರನ ಗೂಂಡಾಗಿರಿ ಕೇಸ್ - ಪ್ರಕರಣ ಸಂಬಂಧ ಐವರು ಅರೆಸ್ಟ್ - ಮಹಮ್ಮದ್‌ ಬಂಧನ ಯಾವಾಗ?        ಮಕ್ಕಳಂದ್ರೆ ಹಿಂಗೆ ಬೆಳಸ್ಪೇಕು ನೋಡಿ - ಹ್ಯಾರಿಸ್‌ ಪುತ್ರನನ್ನು ಹೊಗಳಿದ್ದ ಪ್ರಕಾಶ್ ರೈ - ಘಟನೆ ಬಳಿಕ ಉಲ್ಟಾ ಹೊಡೆದ ನಟ.        ವಿಂದ್ಯಗಿರಿಯಲ್ಲಿ ಮಹಾಮಸ್ತಕಾಭಿಷೇಕ ಸಂಭ್ರಮ - ನಾಳೆ ಮೋದಿಯಿಂದ ಜೈನಮುನಿಗಳಿಗೆ ನಮನ - ಶ್ರವಣಬೆಳಗೊಳದಲ್ಲಿ ಬಿಗಿ ಬಂದೋಬಸ್ತ್.        ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗುದ್ದಲಿಪೂಜೆ ಗುದ್ದಾಟ - ಸಿಎಂ ಪುತ್ರ ಯತೀಂದ್ರಗೆ ಘೇರಾವ್‌ - ಜೆಡಿಎಸ್‌ ಕಡೆಗಣಿಸಿದ್ದಕ್ಕೆ ಆಕ್ರೋಶ.        ತಮಿಳುನಾಡು ರಾಜಕೀಯದಲ್ಲಿ ಮಹಾಪರ್ವ - ತಲೈವಾ ಭೇಟಿ ಮಾಡಿದ ಕಮಲ್‌ - ಮೈತ್ರಿ ಕುರಿತು ಮಹತ್ವದ ಚರ್ಚೆ.       
Breaking News

ಪಳನಿಸಾಮಿ ಬೆಂಬಲಕ್ಕೆ ರೂ.20 ಕೋಟಿ ಆಮಿಷ

Thursday, 14.09.2017, 3:03 AM       No Comments

ಮಡಿಕೇರಿ: ತಮಿಳುನಾಡಿನ ಆಡಳಿತಾರೂಢ ಪಕ್ಷಕ್ಕೆ ಬೆಂಬಲ ನೀಡುವಂತೆ ಪೊಲೀಸರ ಮೂಲಕ ತಮಗೆ 15-20 ಕೋಟಿ ರೂ. ಆಮಿಷ ಒಡ್ಡಲಾಗಿದೆ ಎಂದು ಕೊಡಗಿನ ಪ್ಯಾಡ್ಡಿಂಗ್ಟನ್ ರೆಸಾರ್ಟ್​ನಲ್ಲಿ ವಾಸ್ತವ್ಯ ಹೂಡಿರುವ ಎಐಎಡಿಎಂಕೆಯ ಟಿ.ಟಿ.ವಿ.ದಿನಕರನ್ ಬೆಂಬಲಿಗ ಶಾಸಕ ಸೆಂದಿಲ್ ಬಾಲಾಜಿ ಆರೋಪಿಸಿದ್ದಾರೆ.

ಬುಧವಾರ ರೆಸಾರ್ಟ್ ನಿಂದ ಹೊರಬಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳವಾರ ರೆಸಾರ್ಟ್​ಗೆ ಬಂದಿದ್ದ ತಮಿಳುನಾಡಿನ ಪೊಲೀಸ್ ಅಧಿಕಾರಿಗಳು ಮುಖ್ಯಮಂತ್ರಿ ಪಳನಿಸ್ವಾಮಿ ಜತೆ ಮಾತನಾಡುವಂತೆ ನಮ್ಮ ಮೇಲೆ ಒತ್ತಡ ಹಾಕಿದರು. ಮುಖ್ಯಮಂತ್ರಿಯನ್ನು ಬೆಂಬಲಿಸುವಂತೆ ಹೇಳಿದರು. ಅದಕ್ಕಾಗಿ 15 ರಿಂದ 20 ಕೋಟಿವರೆಗೆ ಹಣದ ಆಮಿಷವೊಡ್ಡಿದರು ಎಂದು ಗಂಭೀರ ಆರೋಪ ಮಾಡಿದ್ದಾರೆ.

ತಮಿಳುನಾಡಿನಲ್ಲಿ ನಮಗೆ ರಕ್ಷಣೆ ಇಲ್ಲದ್ದರಿಂದ ಕರ್ನಾಟಕಕ್ಕೆ ಬಂದಿದ್ದೇವೆ. ತಮಿಳುನಾಡು ಪೊಲೀಸರು ಶೋಧನೆ ನೆಪದಲ್ಲಿ ನಮಗೆ ಆಮಿಷವೊಡ್ಡಿದ್ದಾರೆ. ಪೊಲೀಸ್ ಅಧಿಕಾರಿಗಳು ನಮಗೆ ಹಿಂಸೆ ನೀಡುತ್ತಿದ್ದಾರೆ. ರಕ್ಷಣೆ ನೀಡಲು ಸ್ಥಳೀಯ ಪೊಲೀಸರಿಗೆ ಮನವಿ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.

ಶಾಸಕ ಸೆಲ್ವಂ ರೋಷಾವೇಶ: ರೆಸಾರ್ಟ್​ನಿಂದ ಹೊರಬಂದ ಶಾಸಕ ತಂಗತಮಿಳ್ ಸೆಲ್ವಂ ಮಾಧ್ಯಮ ಪ್ರತಿನಿಧಿಗಳ ಎದುರು ರೋಷಾವೇಶ ಪ್ರದರ್ಶಿಸಿದರು. ರೆಸಾರ್ಟ್ ವಾಸ್ತವ್ಯದ ಬಗ್ಗೆ ಪ್ರತಿಕ್ರಿಯೆ ಕೇಳಲು ಮುಂದಾದ ಸುದ್ದಿಗಾರರ ಮೇಲೆ ಹರಿಹಾಯ್ದರು. ಕಾರಿನಿಂದ ಇಳಿದು ಹಲ್ಲೆಗೂ ಮುಂದಾದ ಘಟನೆ ನಡೆಯಿತು. ರೆಸಾರ್ಟ್​ನಲ್ಲಿರುವ ಶಾಸಕರ ಉಸ್ತುವಾರಿಯನ್ನು ಶಾಸಕ ಸೆಲ್ವಂ ಹೊತ್ತಿದ್ದಾರೆ.

ರೆಸಾರ್ಟ್​ನಲ್ಲಿ 18 ಶಾಸಕರು: ರೆಸಾರ್ಟ್​ನಲ್ಲಿ ಟಿ.ಟಿ.ವಿ.ದಿನಕರನ್ ಬೆಂಬಲಿತ 19 ಶಾಸಕರು ಸೆ.7 ರಿಂದ ವಾಸ್ತವ್ಯ ಹೂಡಿದ್ದಾರೆ. ಆದರೆ ತಮಿಳುನಾಡಿನಲ್ಲಿ ವಂಚನೆ ಪ್ರಕರಣ ದಾಖಲಾಗಿರುವುದರಿಂದ ಶಾಸಕ ಪಳನಿಯಪ್ಪನ್ ಸೆ. 11ರಂದು ರೆಸಾರ್ಟ್​ನಿಂದ ನಿರ್ಗಮಿಸಿದ್ದಾರೆ.

ಇಡೀ ರೆಸಾರ್ಟ್ ಬುಕ್: ಪ್ಯಾಡ್ಡಿಂಗ್ಟನ್ ರೆಸಾರ್ಟ್​ನಲ್ಲಿರುವ ಎಲ್ಲ ಕೊಠಡಿಗಳನ್ನು ದಿನಕರನ್ ಬೆಂಬಲಿಗರು ಕಾಯ್ದಿರಿಸಿದ್ದಾರೆ. ಆದ್ದರಿಂದ ಇತರರಿಗೆ ರೆಸಾರ್ಟ್ ಒಳಗೆ ಪ್ರವೇಶ ನಿಷೇಧಿಸಲಾಗಿದೆ. ಚೆನ್ನೈನ ಟ್ರಾವೆಲ್ ಏಜೆನ್ಸಿಯೊಂದು ರೆಸಾರ್ಟ್ ಬುಕ್ಕಿಂಗ್ ಮಾಡಿದ್ದು, ಇಲ್ಲಿ ಒಂದು ಕೊಠಡಿಗೆ 12,480 ರಿಂದ 17,280 ರೂ. ಬಾಡಿಗೆ ವಿಧಿಸಲಾಗುತ್ತದೆ.

ತಮಿಳುನಾಡು ಪೊಲೀಸರು ತಮಗೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಟಿ.ಟಿ.ವಿ. ದಿನಕರನ್ ಬಣದ ಶಾಸಕರು ಬುಧವಾರ ಸಂಜೆ ಸುಂಟಿಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *

Back To Top