Saturday, 26th May 2018  

Vijayavani

ರಾಮನಗರದಲ್ಲಿ ನಾಡಿಗೆ ಬಂತು ಚಿರತೆ - ರೇಷ್ಮೆ ಸಾಕಾಣಿಕಾ ಕೊಠಡಿಯಲ್ಲಿ ಸೆರೆ - ಅರಣ್ಯಇಲಾಖೆ ಅಧಿಕಾರಿಗಳಿಂದ ಆಪರೇಷನ್​​ ಚಿರತೆ        ಬಿಬಿಎಂಪಿ ರಸ್ತೆ ಕಾಮಗಾರಿ ವೇಳೆ ದುರಂತ - ಬಾಲಕನ ಮೇಲೆ ಹರಿದ ರೋಡ್​​ರೋಲರ್​​ - ಸೈಕಲ್​ ತುಳಿಯುತ್ತಿದ್ದ ಬಾಲಕ ದರ್ಮರಣ        ಕೈ​​​ ಹೈ ಕಮಾಂಡ್​ ಭೇಟಿಗೆ ನಿಗದಿಯಾಗದ ಟೈಂ - ರಾಜ್ಯ ಕಾಂಗ್ರೆಸ್​​​​ ನಾಯಕರ ದೆಹಲಿ ಪ್ರವಾಸ ಕ್ಯಾನ್ಸಲ್​​​ - ಇತ್ತ ಪ್ರಧಾನಿ ಭೇಟಿಗೆ ಸಮಯಾವಕಾಶ ಕೇಳಿದ ಸಿಎಂ        11 ದಿನವಾದ್ರೂ ಸ್ವಕ್ಷೇತ್ರದತ್ತ ಬಾರದ ಶಾಸಕರು - ನಾಯಕರ ಮನೆಗಳಿಗೆ ಬಂದ್ರು ಬೆಂಬಲಿಗರು - ಗೋಳು ಕೇಳೋರಿಲ್ಲದೆ ಜನರ ಕಂಗಾಲು        ಮೋದಿ ಸರ್ಕಾರಕ್ಕೆ ತುಂಬಿತು ನಾಲ್ಕು ವರ್ಷ - 15 ದಿನಗಳ ಕಾಲ ಬಿಜೆಪಿ ಸಂಭ್ರಮಾಚರಣೆ - ಅತ್ತ ಕಾಂಗ್ರೆಸ್​​​ನಿಂದ ವಿಶ್ವಾಸ ದಿನಾಚರಣೆ        ಗಡಿ ನುಸುಳಲು ಬಂದವರಿಗೆ ಬ್ರೇಕ್​ - ಜಮ್ಮುವಿನಲ್ಲಿ ಸೇನಾ ದಾಳಿಗೆ ಐವರು ಉಗ್ರರು ಮಟಾಷ್​​ - ಶಸ್ತ್ರಾಸ್ತ್ರಗಳು ವಶ, ಮುಂದುವರಿದ ಶೋಧ       
Breaking News

ಪಲಿಮಾರು ಶ್ರೀಗಳ ಪರ್ಯಾಯಕ್ಕೆ ಉಡುಪಿ ಸಕಲ ಸಜ್ಜು

Wednesday, 17.01.2018, 3:03 AM       No Comments

| ಗೋಪಾಲಕೃಷ್ಣ ಪಾದೂರು

ಉಡುಪಿ: ಶ್ರೀಕೃಷ್ಣ ಮಠದ ಪೂಜಾ ಕೈಕಂರ್ಯಕೈಗೊಳ್ಳುವ ದ್ವೈವಾರ್ಷಿಕ ಪರ್ಯಾಯ ಜ.18ರಂದು ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರ ಸರ್ವಜ್ಞ ಪೀಠಾರೋಹಣ ಮೂಲಕ ಪ್ರಾರಂಭವಾಗಲಿದೆ. ಅದ್ದೂರಿ ಸಮಾರಂಭಕ್ಕೆ ಕೃಷ್ಣನಗರಿಯಲ್ಲಿ ಸಕಲ ಸಿದ್ಧತೆ ನಡೆದಿದೆ.

ಪ್ರತಿ 2 ವರ್ಷಕ್ಕೊಮ್ಮೆ ನಡೆದು ಬರುತ್ತಿರುವ ಅಧಿಕಾರ ಹಸ್ತಾಂತರ (ಪರ್ಯಾಯ) ಕಾರ್ಯಕ್ರಮದಲ್ಲಿ ಸರಣಿ ಧಾರ್ವಿುಕ ಕಾರ್ಯಕ್ರಮಗಳಿಗೆ ಸಹಸ್ರಾರು ಭಕ್ತರು ಸಾಕ್ಷಿಯಾಗಲಿದ್ದಾರೆ. ಕಾಪು ಸಮೀಪದ ದಂಡತೀರ್ಥ ಕೆರೆಯಲ್ಲಿ ಜ.18ರಂದು ಬೆಳಗಿನ ಜಾವ 2 ಗಂಟೆಗೆ ಪರ್ಯಾಯ ಶ್ರೀಗಳು ಪವಿತ್ರಸ್ನಾನ ಮಾಡಿ, 3 ಗಂಟೆಗೆ ಜೋಡುಕಟ್ಟೆಗೆ ಆಗಮಿಸುತ್ತಾರೆ.

ಪ್ರತಿಬಾರಿ ಪರ್ಯಾಯ ಮೆರವಣಿಗೆ ಜೋಡುಕಟ್ಟೆಯಿಂದ ತೆಂಕಪೇಟೆ ಮೂಲಕ ರಥಬೀದಿ ಪ್ರವೇಶಿಸುತ್ತಿದ್ದು, ಈ ಬಾರಿ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ವೈಭವದ ಪರ್ಯಾಯೋತ್ಸವ ಮೆರವಣಿಗೆ ಕವಿಮುದ್ದಣ್ಣ ಮಾರ್ಗವಾಗಿ ಸಂಸ್ಕೃತ ಕಾಲೇಜಿನ ಕನಕದಾಸ ರಸ್ತೆಯ ಮೂಲಕ ರಥಬೀದಿಗೆ ತಲುಪಲಿದೆ.

ದರ್ಬಾರ್​ನಲ್ಲಿ ಪರ್ಯಾಯ ಶ್ರೀಗಳು ಮಠದ ಅಭಿಮಾನಿಗಳನ್ನು, ಗಣ್ಯರನ್ನು ಸನ್ಮಾನಿಸಲಿದ್ದಾರೆ. ಬಳಿಕ ಪಲಿಮಾರು ಶ್ರೀಗಳು ಕೃಷ್ಣನಿಗೆ ಮಹಾಪೂಜೆ ನೆರವೇರಿಸಲಿದ್ದಾರೆ.

ಇಂದು ಅಭಿವಂದನೆ

ಜ.17ರ ಸಾಯಂಕಾಲ 7 ಗಂಟೆಗೆ ರಥಬೀದಿ ಶ್ರೀಪರ ವಿದ್ಯಾಮಂಟಪದಲ್ಲಿ ಐತಿಹಾಸಿಕ ಪಂಚಮ ಪರ್ಯಾಯವನ್ನು ಯಶಸ್ವಿಯಾಗಿ ಮುಗಿಸಿದ ಪರ್ಯಾಯ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಮತ್ತು ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರಿಗೆ ಅಭಿವಂದನೆ ಕಾರ್ಯಕ್ರಮ ನಡೆಯಲಿದೆ.

ಮಠಕ್ಕೆ ಮತ್ತೆ ಗಜರಾಜ

ಉಡುಪಿ ಕೃಷ್ಣಮಠದಲ್ಲಿ ಉತ್ಸವಕ್ಕೆ ಗಜರಾಜನ ಸೇವೆ ವರ್ಷಗಳ ಬಳಿಕ ಮತ್ತೆ ದೊರೆಯಲಿದೆ. ಪಲಿಮಾರು ಶ್ರೀಗಳಿಗೆ ಬೆಂಗಳೂರಿನ ಉದ್ಯಮಿಯೊಬ್ಬರು ಆನೆಯನ್ನು ದಾನ ನೀಡಿದ್ದು, ಕೇರಳದಲ್ಲಿ ತರಬೇತಿ ಪಡೆದು ಜ.17ಕ್ಕೆ ಉಡುಪಿಗೆ ಆಗಮಿಸಲಿದೆ.

ಪಲಿಮಾರು ಶ್ರೀಗಳ ಯೋಜನೆಗಳು

ತಮ್ಮ ಪ್ರಥಮ ಪರ್ಯಾಯದಲ್ಲಿ ಪಲಿಮಾರು ಶ್ರೀಗಳು ಚಿಣ್ಣರ ಸಂತರ್ಪಣೆ ಎಂಬ ವಿಶಿಷ್ಟ ಯೋಜನೆ ಪ್ರಾರಂಭಿಸಿದ್ದರು. ಬಳಿಕ ಈ ಯೋಜನೆ ಸರ್ಕಾರದ ಗಮನ ಸೆಳೆದು ರಾಜ್ಯವ್ಯಾಪಿಯಾಗಿ ಬೆಳೆದಿದೆ. 2ನೇ ಪರ್ಯಾಯ ಅವಧಿಯಲ್ಲಿ ಕೃಷ್ಣಮಠದ ಗರ್ಭಗುಡಿ ಛಾವಣಿಗೆ ಸ್ವರ್ಣ ಹೊದಿಕೆ, ಎರಡು ವರ್ಷಗಳ ಕಾಲ ಅಖಂಡ ಭಜನೆ, ನಿತ್ಯ ಲಕ್ಷ ತುಳಸಿ ಅರ್ಚನೆ ಶ್ರೀಗಳು ಘೊಷಿಸಿರುವ ಪ್ರಮುಖ ಯೋಜನೆಗಳು.

ದೀಕ್ಷಾಬದ್ಧರಾಗಿ ನಡೆಸುವ ಸೇವೆಗೆ ಹೆಚ್ಚು ಮಹತ್ವವಿದೆ. ಹೀಗಾಗಿ ಅಷ್ಟ ಮಠಾಧೀಶರು ಪರ್ಯಾಯದ ನಿರೀಕ್ಷೆಯಲ್ಲಿರುತ್ತಾರೆ. ಸಂಚಾರ ಕಾಲದಲ್ಲಿ ಜನರಿದ್ದಲ್ಲಿ ತೆರಳಿ ಧರ್ಮ ಪ್ರಚಾರ, ಪರ್ಯಾಯದಲ್ಲಿ ಒಂದೆಡೆ ಕುಳಿತು ಸಮಾಜಕ್ಕೆ ಮಾರ್ಗದರ್ಶನ ಮಾಡಲು ಸಾಧ್ಯ.

| ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ, ಪರ್ಯಾಯ ಪಲಿಮಾರು ಮಠ

 

ಪಂಚಮ ಪರ್ಯಾಯ ಸಮಾಪನ ಬಳಿಕವೂ ನನ್ನ ಸೇವಾ ಕಾರ್ಯ ಮುಂದುವರಿಯಲಿದೆ. ಜಿಲ್ಲೆ ಹಾಗೂ ಹೊರ ಜಿಲ್ಲೆಯಲ್ಲೂ ಪ್ರಾಚೀನ ತತ್ವಜ್ಞಾನದ ಪ್ರಸಾರ, ಶೈಕ್ಷಣಿಕ ಹಾಗೂ ವೈದ್ಯಕೀಯ ಸೇವೆಯನ್ನು ಆಯುಷ್ಯ, ಆರೋಗ್ಯ ಇರುವವರೆಗೆ ಮುಂದುವರಿಸುತ್ತೇನೆ.

| ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ

 

Leave a Reply

Your email address will not be published. Required fields are marked *

Back To Top