Wednesday, 18th July 2018  

Vijayavani

ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅನುಮತಿ - ಕೇರಳ ಸರ್ಕಾರದಿಂದ ಗ್ರೀನ್​ಸಿಗ್ನಲ್        ಕೇಂದ್ರದಿಂದ ನೆರವಿನ ಮಹಾಪೂರ - ಕೃಷಿ ಯೋಜನೆ, ಮೆಗಾ ಡೈರಿ ಆರಂಭಕ್ಕೆ 900 ಕೋಟಿ ನೆರವು        ಸ್ಮಶಾನ ಜಾಗದ ವಿಚಾರವಾಗಿ ಜಟಾಪಟಿ - ಎರಡು ಗುಂಪುಗಳ ಮಧ್ಯೆ ಮಾರಾಮಾರಿ - ಘರ್ಷಣೆಯಲ್ಲಿ 50 ಮಂದಿಗೆ ಗಾಯ        ಕೃಷ್ಣಾ ನದಿಯಲ್ಲಿ ಪ್ರವಾಹದ ನರ್ತನ - ಯಾದಗಿರಿಯ ನೀಲಕಂಠನದೊಡ್ಡಿ ಗ್ರಾಮಕ್ಕೆ ಜಲದಿಗ್ಬಂಧನ - ಗ್ರಾಮಸ್ಥರು ತಲ್ಲಣ        ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಜಿಟಿಡಿ - ಬಳ್ಳಾರಿಗೆ ಕಳಿಸೋದಾಗಿ ಅಧಿಕಾರಿಗಳಿಗೆ ವಾರ್ನಿಂಗ್- ಚಪ್ಪಾಳೆ ಹೊಡೆದ ಸ್ಟೂಡೆಂಟ್ಸ್        ಎಲ್ಲೆಡೆ ಕೇಳಿಬರ್ತಿದೆ ಧೋನಿ ನಿವೃತ್ತಿ ವಿಷಯ - ಲೀಡ್ಸ್​​ನಲ್ಲಿ ಅಂಪೈರ್ ಬಳಿ ಬಾಲ್ ಪಡೆದಿದ್ದೇಕೆ - ಕ್ರಿಕೆಟಿಗೆ ಗುಡ್​​ಬೈ ಹೇಳ್ತಾರಾ ಮಾಹಿ       
Breaking News

ಪರನಾರಿ ಮಾತೆಗೆ ಸಮಾನ

Monday, 03.07.2017, 3:00 AM       No Comments

ರಸ್ತ್ರೀಯನ್ನು ತಾಯಿಯಂತೆಯೂ, ಪರದ್ರವ್ಯವನ್ನು ಮಣ್ಣಿನ ಹೆಂಟೆಯಂತೆಯೂ, ತನ್ನಂತೇ ಪರರೂ ಎಂದು ತಿಳಿಯುವವನೇ ಸಂಸ್ಕಾರವಂತ. ಸ್ತ್ರೀಯರನ್ನು ಗೌರವದಿಂದ ಕಾಣುವುದು ನಮ್ಮ ಧರ್ಮದ ಒಂದು ಅಂಗವೇ ಆಗಿದೆ. ಒಂದು ಉದಾಹರಣೆ ನೋಡಿ. ಒಬ್ಬ ಮರಾಠಾ ಸರದಾರನು ಶತ್ರು ಪಾಳಯದ ಸುಂದರಿಯಾದ ಒಬ್ಬ ತರುಣಿಯನ್ನು ಹಿಡಿದು ತಂದು ಶಿವಾಜಿ ಮಹಾರಾಜರ ಏಕಾಂತಕ್ಕೆ ಕಳುಹಿಸಿ ನೀನು ಮಹಾರಾಜರ ಮನಸ್ಸನ್ನು ಒಲಿಸಿಕೊಳ್ಳಬೇಕು ಎಂದನಂತೆ. ತುಳಜಾಭವಾನಿ ಭಕ್ತನಾದ ಶಿವಾಜಿ ಆಕೆಯನ್ನು ಕಂಡು ‘ನನ್ನ ತಾಯಿ ಇಷ್ಟು ಸುಂದರಳಾಗಿರುತ್ತಿದ್ದರೆ ನಾನೆಷ್ಟು ಸುಂದರನಾಗುತ್ತಿದ್ದೇನೋ?’ ಎಂದನಂತೆ. ಆಕೆಯನ್ನು ಗೌರವಾದರದಿಂದ ಬೀಳ್ಕೊಟ್ಟನಂತೆ. ಇಂತಹದೇ ಸಂದರ್ಭ ಸ್ವಾಮಿ ವಿವೇಕಾನಂದರಿಗೂ ಒದಗಿತ್ತು. ಸುಂದರ ತರುಣಿಯೊಬ್ಬಳು ವಿವೇಕಾನಂದರ ಏಕಾಂತಕ್ಕೆ ಬಂದು ‘ನನಗೆ ನಿಮ್ಮ ಸಹವಾಸದಿಂದ ನಿಮ್ಮಂಥ ಒಬ್ಬ ಮಗನನ್ನು ಪಡೆಯಬೇಕೆಂಬ ಅಪೇಕ್ಷೆ ಇದೆ’ ಎಂದಳು. ಕೊಂಚ ಆಕೆಯನ್ನು ಕಂಡ ವಿವೇಕಾನಂದರು ‘ನಾನೇ ನಿನ್ನ ಮಗ’ ಎಂದು ಆಕೆಯ ಕಾಲಿಗೆರಗಿದರಂತೆ. ತರುಣಿ ಬೆರಗಾಗಿ ವೀರ ಸನ್ಯಾಸಿಗೆ ವಂದಿಸಿ ಹೊರಟು ಹೋದಳಂತೆ.

 

Leave a Reply

Your email address will not be published. Required fields are marked *

Back To Top