Sunday, 18th February 2018  

Vijayavani

ಶಾಸಕ ಹ್ಯಾರಿಸ್ ಪುತ್ರನ ಗೂಂಡಾಗಿರಿ ಕೇಸ್ - ಪ್ರಕರಣ ಸಂಬಂಧ ಐವರು ಅರೆಸ್ಟ್ - ಮಹಮ್ಮದ್‌ ಬಂಧನ ಯಾವಾಗ?        ಮಕ್ಕಳಂದ್ರೆ ಹಿಂಗೆ ಬೆಳಸ್ಪೇಕು ನೋಡಿ - ಹ್ಯಾರಿಸ್‌ ಪುತ್ರನನ್ನು ಹೊಗಳಿದ್ದ ಪ್ರಕಾಶ್ ರೈ - ಘಟನೆ ಬಳಿಕ ಉಲ್ಟಾ ಹೊಡೆದ ನಟ.        ವಿಂದ್ಯಗಿರಿಯಲ್ಲಿ ಮಹಾಮಸ್ತಕಾಭಿಷೇಕ ಸಂಭ್ರಮ - ನಾಳೆ ಮೋದಿಯಿಂದ ಜೈನಮುನಿಗಳಿಗೆ ನಮನ - ಶ್ರವಣಬೆಳಗೊಳದಲ್ಲಿ ಬಿಗಿ ಬಂದೋಬಸ್ತ್.        ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗುದ್ದಲಿಪೂಜೆ ಗುದ್ದಾಟ - ಸಿಎಂ ಪುತ್ರ ಯತೀಂದ್ರಗೆ ಘೇರಾವ್‌ - ಜೆಡಿಎಸ್‌ ಕಡೆಗಣಿಸಿದ್ದಕ್ಕೆ ಆಕ್ರೋಶ.        ತಮಿಳುನಾಡು ರಾಜಕೀಯದಲ್ಲಿ ಮಹಾಪರ್ವ - ತಲೈವಾ ಭೇಟಿ ಮಾಡಿದ ಕಮಲ್‌ - ಮೈತ್ರಿ ಕುರಿತು ಮಹತ್ವದ ಚರ್ಚೆ.       
Breaking News

ಪಯದಿಂದಲೇ ಪಾಯಸ!

Thursday, 14.09.2017, 3:00 AM       No Comments

ಮಾನವರ ಆಹಾರವ್ಯವಸ್ಥೆಯೇ ಗೋ ಆಧಾರಿತ. ಹಾಲು ಮಾನವರೆಲ್ಲರ ಜೀವನದ ಅವಿಭಾಜ್ಯ ಅಂಗ. ಎಳೆಗೂಸುಗಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರಿಗೂ ಹಾಲು ಬೇಕು. ಬಹುಪಾಲು ಮಕ್ಕಳು ಹಾಲನ್ನೇ ನೇರವಾಗಿ ಸೇವಿಸುತ್ತಾರೆ. ಯುವಜನರು, ಮಧ್ಯವಯಸ್ಕರು, ವೃದ್ಧಾಪ್ಯದಲ್ಲಿರುವವರು ಹಾಲೇ ಆಧಾರವಾಗಿರುವ ಕಾಫಿ, ಟೀಗಳನ್ನೇ ಅಭ್ಯಾಸ ಮಾಡಿಕೊಂಡಿರುತ್ತಾರೆ. ಹಾಲು ಹಾಕಿದ ಕಷಾಯವನ್ನೂ ಸೇವಿಸುತ್ತಾರೆ. ಪುಟಾಣಿಗಳಿಗೆ ಹಾಲನ್ನು ಕೊಡುವ ಸಂಪ್ರದಾಯವಿದೆ. ರಾಗಿಯ ಮಣ್ಣಿ ಮಾಡಿ ಎಳೆಶಿಶುಗಳಿಗೆ ನೀಡುವ ಪದ್ಧತಿಯಿದೆ. ಶಿಶುಆಹಾರಗಳನ್ನೂ ಹಾಲಿನೊಡನೆ ನೀಡುವುದು ರೂಢಿಯಲ್ಲಿದೆ. ವಿಶ್ವದಾದ್ಯಂತ ವಯಸ್ಕರು ಓಟ್ಸ್​ಗೆ ಹಾಲು ಬೆರೆಸಿ ಚಪ್ಪರಿಸುವ ಹೊಸ ಪದ್ಧತಿ ಪ್ರಚಲಿತವಾಗುತ್ತಿದೆ. ದವಸಧಾನ್ಯಗಳಿಂದ ತಯಾರಿಸಿದ ಪ್ರಸಿದ್ಧ ಕಂಪನಿಗಳ ಸಿದ್ಧಆಹಾರಗಳನ್ನೂ ಹಾಲಿನೊಂದಿಗೇ ಮಿಶ್ರಿಸಿ ಸೇವಿಸುವ ಭರಾಟೆಯನ್ನು ನೋಡುತ್ತಿದ್ದೇವೆ. ಹೆಸರೇ ಸೂಚಿಸುವಂತೆ ಹಸುವಿನ ಹಾಲಿಲ್ಲದೆ ಮಿಲ್ಕ್​ಶೇಕೂ ಇಲ್ಲ. ಹಾಲನ್ನು ವಿಧಿಯುಕ್ತವಾಗಿ ವಿಕೃತಗೊಳಿಸಿ ತಯಾರಿಸಿದ ರಸಗುಲ್ಲಾ, ಖೋವಾ, ಪನೀರ್​ಗಳು ಭಾರತೀಯ ಆಹಾರವನ್ನು ಆವರಿಸಿಕೊಂಡಿದೆ. ಚಿಣ್ಣರಿಗಿಷ್ಟವಾದ ಗಿಣ್ಣ, ಚೀಸ್​ಗಳು, ದಾವಣಗೆರೆ ದೋಸೆಯಿಂದ ಹಿಡಿದು ಉತ್ತರ ಕರ್ನಾಟಕದ ಜೋಳದ ರೊಟ್ಟಿಯ ತನಕ ಹಲವಾರು ತಿಂಡಿಗಳ ಜೊತೆ ಸ್ಥಾನ ಹಂಚಿಕೊಳ್ಳುವ ಬೆಣ್ಣೆಯೂ ಕಣ್ಣಮುಂದಿದೆ.

ಭಾರತವು ಸಹಸ್ರಾರು ಸಿಹಿತಿನಿಸುಗಳ ಮೂಲನೆಲ. ಈ ಸಿಹಿತಿಂಡಿಗಳಿಗೆಲ್ಲ ಒಂದೋ ತುಪ್ಪ ಹಾಕಿ ತಯಾರಿಸಲಾಗುತ್ತದೆ ಇಲ್ಲವಾದಲ್ಲಿ ಹಾಲು ಹಾಕಲಾಗಿರುತ್ತದೆ. ದೇಶದ ಯಾವುದೇ ಮೂಲೆಗೆ ಹೋದರೂ ಸ್ವೀಟ್​ಗಳಿಗೆಲ್ಲ ಹಾಲು, ತುಪ್ಪಗಳೇ ಆಧಾರದ್ರವ್ಯಗಳು. ಸಿಹಿಭಕ್ಷ್ಯಗಳ ವೈವಿಧ್ಯವು ಭಾರತದ ಆಹಾರ ಸಮೃದ್ಧಿಯ ಸಂಕೇತ. ಪಾಯಸವನ್ನು ಹಸುವಿನ ಹಾಲು ಅಥವಾ ತೆಂಗಿನಕಾಯಿಯ ಹಾಲು ಹಾಕಿ ತಯಾರಿಸುವುದು ರೂಢಿಯಲ್ಲಿದೆ. ಹುಳಿಯಾದ ದ್ರವ್ಯದ ಪಾಯಸ ತಯಾರಿಸುವಾಗ ಕಾಯಿಯ ಹಾಲು ಹಾಕುವುದು ಸರಿ. ಆದರೆ ಗೋವಿನ ಹಾಲು ಅರ್ಥಾತ್ ಪಯ ಹಾಕಿ ಮಾಡುವುದರಿಂದಲೇ ಅದಕ್ಕೆ ಪಾಯಸವೆಂಬ ಹೆಸರು! ನೂರಾರು ಬಗೆಯ ಪಾಯಸಗಳು ಭಾರತದ ಅಡುಗೆ ಪಟ್ಟಿಯನ್ನು ಅಲಂಕರಿಸಿವೆ. ಇನ್ನೂ ಮಜ್ಜಿಗೆ, ಮೊಸರು ಸೇರಿಸಿ ಮಾಡುವ ರುಚಿಯಾದ ವ್ಯಂಜನಗಳೂ ಬಹುಸಂಖ್ಯೆಯಲ್ಲಿವೆ. ನೇರವಾಗಿ ಮೂಲರೂಪದಲ್ಲೇ ಇವನ್ನು ಬಳಸುವುದೂ ಇದೆ. ಅಂತೂ ಹಾಲು, ಗಿಣ್ಣ, ಕೆನೆ, ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪಗಳಿಲ್ಲದ ನಿತ್ಯಾಹಾರವನ್ನು ಊಹಿಸುವುದೂ ಕಷ್ಟ ಎಂಬಷ್ಟರ ಮಟ್ಟಿಗೆ ಗವ್ಯವೆಂದರೆ ಮಾನವರೆಲ್ಲರಿಗೆ ಇಷ್ಟ. ಸಮಸ್ತ ಮಾನವಜನಾಂಗಕ್ಕೆ ಸಿಹಿ ನೀಡಿದ ಗೋವಿಗೆ ಮಧುರ ಜೀವನ ನೀಡಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯ.

ಪಂಚಸೂತ್ರಗಳು

ವಾಯುವಿಡಂಗ: ಮೂಲವ್ಯಾಧಿ ಗುಣಕರ.

ಆಪ್ರಿಕಾಟ್ ಹಣ್ಣು: ನೋವು ಶಮನಕಾರಿ.

ಬದನೆಕಾಯಿ: ನೇತ್ರರೋಗಗಳಲ್ಲಿ ಹಿತಕರ.

ದಾಲ್ಚಿನ್ನಿ: ಕ್ಷಯರೋಗಿಗಳ ಗಾಯ ಗುಣಕಾರಿ.

ಕರಿಜೀರಿಗೆ: ಬೊಕ್ಕತಲೆಯಾಗುವುದನ್ನು ತಡೆಯುತ್ತದೆ.

Leave a Reply

Your email address will not be published. Required fields are marked *

Back To Top