Saturday, 22nd September 2018  

Vijayavani

ಸಿಎಂ ಜನತಾ ದರ್ಶನದಲ್ಲಿ ಸಿಗಲಿಲ್ಲ ನ್ಯಾಯ - ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ - ಸಿಎಂಗೆ ಪತ್ರ ಬರೆದು ನಾಲ್ವರು ಸುಸೈಡ್‌        ಬಿಎಸ್‌ವೈ ನಿವಾಸದಲ್ಲಿ ಬಿಗ್‌ ಮೀಟಿಂಗ್‌ - ಮೈತ್ರಿ ಸರ್ಕಾರದ ವಿರುದ್ಧ ಹೋರಾಟಕ್ಕೆ ರಣತಂತ್ರ        ಶೃಂಗೇರಿಯಲ್ಲಿ ಸಿಎಂ ಶತ್ರುಸಂಹಾರ ಯಾಗ - ಕಾರವಾರದಲ್ಲಿ ಡಿಸಿಎಂ ದೇವಿ ದರ್ಶನ - ಸಂಕಷ್ಟ ನಿವಾರಣೆಗೆ ದೇವರ ಮೊರೆ        ಜೆಡಿಎಸ್‌ಗೂ ಕಾಡ್ತಿದೆ ಅಪರೇಷನ್‌ ಭಯ - ಹಾಸನದಲ್ಲಿ ಜೆಡಿಎಲ್‌ಪಿ ಮೀಟಿಂಗ್‌ - ಶಾಸಕರನ್ನ ಹಿಡದಿಟ್ಟುಕೊಳ್ಳ ಗೌಡರ ತಂತ್ರ        ಒಡಿಸ್ಸಾದಲ್ಲಿ ಪ್ರಧಾನಿ ರೌಂಡ್ಸ್‌ - ವಿವಿದ ಅಭಿವೃದ್ಧಿಕಾರ್ಯಗಳಿಗೆ ಮೋದಿ ಚಾಲನೆ - ಹೊಸ ಒಡಿಸ್ಸಾ ಕಟ್ಟೋಣ ಎಂದ ಪ್ರಧಾನಿ        ರಫೇಲ್‌ ಯುದ್ಧ ವಿಮಾನಕ್ಕೆ ಓಕೆ ಎಂದ ಐಎಎಫ್‌- ಮೊದಲ ಪರೀಕ್ಷೆಯಲ್ಲಿ ಯಶಸ್ವಿ ಹಾರಾಟ - ಮೋದಿ ಸರ್ಕಾರಕ್ಕೆ ಬಿಗ್‌ ಬೂಸ್ಟ್‌       
Breaking News

ಪಟೌಡಿ ಉಪನ್ಯಾಸ ನೀಡಿದ ಪೀಟರ್ಸೆನ್

Wednesday, 13.06.2018, 3:03 AM       No Comments

ಬೆಂಗಳೂರು: ಮ್ಯಾಚ್ ಫಿಕ್ಸಿಂಗ್​ನಂಥ ಘೋರ ಅಪರಾಧದಿಂದ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹ್ಯಾನ್ಸಿ ಕ್ರೋನಿಯೆ ಗುರುತಿಸಿಕೊಂಡರೂ, ಅವರ ಸಾವು ಇನ್ನೂ ಅನುಮಾನಗಳಿಗೆ ಎಡೆ ಮಾಡಿಕೊಡುತ್ತದೆ. ಮಂಗಳವಾರ ಬೆಂಗಳೂರಿನಲ್ಲಿ ನಡೆದ 6ನೇ ಆವೃತ್ತಿಯ ಎಂಎಕೆ ಪಟೌಡಿ ಉಪನ್ಯಾಸ ಕಾರ್ಯಕ್ರಮದಲ್ಲಿ ಇಂಗ್ಲೆಂಡ್​ನ ಮಾಜಿ ನಾಯಕ ಕೆವಿನ್ ಪೀಟರ್ಸೆನ್, ಕ್ರೋನಿಯೆಯನ್ನು ನೆನೆಸಿಕೊಳ್ಳುವುದರೊಂದಿಗೆ ಅಳಿವಿನ ಅಂಚಿನಲ್ಲಿರುವ ಘೇಂಡಾಮೃಗಗಳ ಸಂತತಿಯನ್ನು ಕಾಪಾಡುವಂತೆ ಮನವಿ ಮಾಡಿದರು.

ಭಾಷಣದ ವೇಳೆ ದಿಗ್ಗಜರನ್ನು ನೆನೆಸಿಕೊಳ್ಳುವ ವೇಳೆ, ‘ಸಚಿನ್ ತೆಂಡುಲ್ಕರ್, ಶೇನ್ ವಾರ್ನ್, ಮಾಲ್ಕಂ ಮಾರ್ಷಲ್, ಸ್ಟೀವ್ ವಾ, ರಿಚರ್ಡ್ ಹ್ಯಾಡ್ಲಿ, ಕಪಿಲ್ ದೇವ್ ಹಾಗೂ ಹ್ಯಾನ್ರಿ ಕ್ರೋನಿಯೆ’ ಹೆಸರನ್ನು ಪೀಟರ್ಸೆನ್ ಪ್ರಸ್ತಾಪಿಸಿದರು. ‘ಈ ಎಲ್ಲ ಆಟಗಾರರು ಸಮ ಪ್ರಮಾಣದ ಏಕದಿನ ಪಂದ್ಯಗಳು ಅಡಿರಬಹುದು. ಆದರೆ, ಅವರ ನಿರ್ವಹಣೆ ಹಾಗೂ ಸಾಧನೆಗಳನ್ನು ಪರಿಗಣನೆ ಮಾಡುವ ವಿಚಾರ ಬಂದಾಗ ಟೆಸ್ಟ್ ಕ್ರಿಕೆಟ್ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ’ ಎಂದರು.ಇದೇ ವೇಳೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎರಡು ಆವೃತ್ತಿಯ ಪಾಲಿ ಉಮ್ರಿಗರ್ ಪ್ರಶಸ್ತಿಯನ್ನು ಸ್ವೀಕರಿಸಿದರು. ಅಲ್ಲದೆ, ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದ ವಿಜೇತರನ್ನು ಬಿಸಿಸಿಐ, ಟ್ರೋಫಿ ಹಾಗೂ ನಗದು ಬಹುಮಾನ ನೀಡಿ ಸನ್ಮಾನಿಸಿತು. ಪಟೌಡಿ ಉಪನ್ಯಾಸ ನೀಡಿದ ಮೊದಲ ವಿದೇಶಿ ಆಟಗಾರ ಎನಿಸಿಕೊಂಡ ಪೀಟರ್ಸೆನ್, ಘೇಂಡಾಮೃಗದ ರಕ್ಷಣೆಗಾಗಿ ತಾವು ನಡೆಸುತ್ತಿರುವ ಅಭಿಯಾನದ ಕುರಿತಾಗಿಯೂ ಮಾಹಿತಿ ನೀಡಿದರು. ‘ಆಫ್ರಿಕಾ ಹಾಗೂ ಭಾರತ ಘೇಂಡಾಮೃಗಗಳ ತವರು. ಇತ್ತೀಚಿನ ವರ್ಷಗಳಲ್ಲಿ ಇವುಗಳ ಬೇಟೆ ಹೆಚ್ಚಾಗಿದೆ. ಇವುಗಳ ಕೊಂಬುಗಳು ನಮಗೆ ತಾತ್ಕಾಲಿಕ ಶ್ರೀಮಂತಿಕೆ ನೀಡಬಹುದು. ಆದರೆ, ಈ ಕಾರಣಕ್ಕಾಗಿ ನಾವು ಅಪರೂಪದ ತಳಿಯೊಂದನ್ನು ಕಳೆದುಕೊಳ್ಳುವ ಹಂತ ತಲುಪಿದ್ದೇವೆ’ ಎಂದಿದ್ದಾರೆ.

Leave a Reply

Your email address will not be published. Required fields are marked *

Back To Top