Sunday, 21st October 2018  

Vijayavani

ಅರ್ಜುನ್‌ ಸರ್ಜಾಕಡೆಯಿಂದ ಬೆದರಿಕೆ ಕರೆ - ಕಾನೂನು ಹೋರಾಟದ ಬಗ್ಗೆ ದಾಖಲೆ ಸಂಗ್ರಹ - ಸುದ್ದಿಗೋಷ್ಠಿಯಲ್ಲಿ ಶ್ರುತಿ ಗಂಭೀರ ಆರೋಪ        ಭಾವೈಕ್ಯತೆ ಶ್ರೀಗಳಿಗೆ ಕಣ್ಣೀರ ವಿದಾಯ - ಕ್ರಿಯಾಸಮಾಧಿಯಲ್ಲಿ ಸಿದ್ದಲಿಂಗ ಶ್ರೀ ಲೀನ - ಭಕ್ತಸಾಗರದಿಂದ ತೋಂಟದಾರ್ಯರಿಗೆ ಅಂತಿಮ ನಮನ        ಡಿಕೆಶಿ ಶೋ ಮಾಡೋದು ಬಿಡ್ಬೇಕು - ಪಕ್ಷದ ಪರ ಕೆಲಸ ಮಾಡ್ಬೇಕು - ಬಳ್ಳಾರಿ ಪ್ರಚಾರದಲ್ಲಿ ಬಯಲಾಯ್ತು ಜಾರಕಿಹೊಳಿ ಸಿಟ್ಟು        ಸಿಎಂ ಎಚ್‌ಡಿಕೆ ಮತ್ತೆ ಟೆಂಪಲ್‌ರನ್‌ - ಶಕ್ತಿ ದೇವತೆ ಸನ್ನಿಧಿಗೆ ಕುಮಾರಸ್ವಾಮಿ - ಮಹಾರಾಷ್ಟ್ರದ ತುಳಜಾ ಭವಾನಿ ದೇಗುಲಕ್ಕೆ ಭೇಟಿ        ಶಿರಡಿ ಸಾಯಿ ಸಮಾಧಿ ಶತಮಾನೋತ್ಸವ ಹಿನ್ನೆಲೆ - ಸಾಯಿ ಸನ್ನಿಧಿಗೆ ಭಕ್ತ ಸಾಗರ - ನಾಲ್ಕು ದಿನದಲ್ಲಿ 5 ಕೋಟಿ ರೂಪಾಯಿ ಕಾಣಿಕೆ        ರೋಡ್ ರೋಲರ್​ನ್ನೂ ಬಿಡದ ಕಳ್ಳರು - ವರ್ತೂರು ಬಳಿ ನಿಲ್ಲಿಸಿ ಎಸ್ಕೇಪ್ ಆದ ಚೋರರು - ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ       
Breaking News

ನೈತಿಕತೆ ಇಲ್ಲದ ಶಿಕ್ಷಣ ಅಪಾಯಕಾರಿ

Monday, 11.06.2018, 3:00 AM       No Comments

ತುಮಕೂರು: ಸ್ವಾರ್ಥಿಗಳನ್ನು ಪ್ರಪಂಚ ಬೇಗ ಮರೆಯುತ್ತೆ, ಇತರಿಗಾಗಿ ಬದುಕುವವರು ನೆನಪಿನಲ್ಲಿರುತ್ತಾರೆ, ಏನು ಪಡೆದಿದ್ದೇನೋ ಅದು ಯಶಸ್ಸಲ್ಲ, ಏನು ನೀಡುತ್ತೇವೊ ಅದು ಯಶಸ್ಸು ಎಂದು ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ ಅಭಿಪ್ರಾಯಪಟ್ಟರು.

ನಗರದ ಶ್ರೀ ಸಪ್ತಗಿರಿ ಪಿಯು ಕಾಲೇಜಿನಲ್ಲಿ ಭಾನುವಾರ ಆಯೋಜಸಿದ್ದ ‘ಅಂಕುರ-2018’ ಪ್ರತಿಭಾ ಪುರಸ್ಕಾರ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಿಜವಾದ ಮನುಷ್ಯತ್ವವೇ ನಿಜವಾದ ಯಶಸ್ಸು. ಪ್ರತಿಯೊಬ್ಬನು ಸಮಾಜದ ಒಳಿತಿಗಾಗಿ ಶ್ರಮಿಸುತ್ತಾ ಮಾದರಿಯಾಗಬೇಕು. ನಾವೆಲ್ಲರೂ ಸದೃಢ ಸಮಾಜ ನಿರ್ವಿುಸುವ ಸಂಕಲ್ಪ ಮಾಡೋಣ. ನೈತಿಕತೆ ಇಲ್ಲದ ಶಿಕ್ಷಣ ಸಮಾಜಕ್ಕೆ ಅಪಾಯಕಾರಿ. ಜಗತ್ತಿನಲ್ಲಿ ಜನಿಸಿದ ಪ್ರತಿಯೊಬ್ಬನು ಒಂದೊಂದು ಕೊಡುಗೆಯನ್ನು ಕೊಟ್ಟು ಸುಸಂಸ್ಕೃತ ಸಮಾಜಕ್ಕೆ ನಂದಾದೀಪಗಳಾಗಿ ಬೆಳಗಬೇಕು ಎಂದರು.

ಪ್ರಾಚಾರ್ಯ ಡಾ.ಎಚ್.ಎಸ್.ನಿರಂಜನಾರಾಧ್ಯ ಮತನಾಡಿ, ಸಾಧಕ ವಿದ್ಯಾರ್ಥಿಗಳು ಮುಂಬರುವ ವಿದ್ಯಾರ್ಥಿಗಳಿಗೆ ಮಾದರಿ ಹಾಗೂ ಸ್ಪೂರ್ತಿಯಾಗಲಿ ಎಂದರು.

ಕಾಲೇಜಿನ ಪ್ರಧಾನ ವಿಶ್ವಸ್ಥ ಅಧಿಕಾರಿ ಅರ್ಚನಾ ಎಸ್. ಕುಮಾರ್, ವಿದ್ಯಾಧಿಕಾರಿ ಚೆನ್ನಪ್ಪ ಬಾರಿಗಿಡದ್ ಮಾತನಾಡಿದರು.

ಕಾಲೇಜಿನ ವಿವಿಧ ವಿಭಾಗಗಳಲ್ಲಿ ಪ್ರತಿಭೆ ತೋರಿದ 63 ವಿದ್ಯಾರ್ಥಿಗಳಿಗೆ ನಗದು ಸಹಿತ ಪ್ರಶಸ್ತಿ, ನೆನಪಿನ ಕಾಣಿಕೆ ಹಾಗೂ ಪುಸ್ತಕ ನೀಡಿ ಅಭಿನಂದಿಸಿ, ಮುಂದಿನ ಶೈಕ್ಷಣಿಕ ಉನ್ನತಿಗೆ ಸಿಇಒ ಮೃಣಾಲ್ ಕುಮಾರ್, ಉಪನ್ಯಾಸಕರಾದ ಎಸ್. ಗುರುಪ್ರಸಾದ್ ಹಾಗೂ ಎಂ.ಎ.ಗುರುಪ್ರಸಾದ್ ಹಾರೈಸಿದರು.

ಸಂಸ್ಥೆ ಅಧ್ಯಕ್ಷ ಡಿ.ಎಸ್.ಕುಮಾರ್ ಹಾಗೂ ಕಾರ್ಯದರ್ಶಿ ಪದ್ಮರೇಖಾ ಮತ್ತಿತರರು ಇದ್ದರು.

2 ವರ್ಷದ ಪಿಯುಸಿ ಭವಿಷ್ಯ ನಿರ್ಧರಿಸುವ ಮುಖ್ಯ ಘಟ್ಟ. ಇಲ್ಲಿ ನೀವು ತೆಗೆದುಕೊಳ್ಳುವ ಒಂದೊಂದು ನಿರ್ಧಾರಗಳು ನಿಮ್ಮ ಬದುಕು ಬೆಳಗಿಸುವಂತಿರಬೇಕು ಹಾಗೂ ಸಮಾಜಮುಖಿಯಾಗಿರಬೇಕು

| ಡಾ.ಗುರುರಾಜ ಕರ್ಜಗಿ,ಶಿಕ್ಷಣ ತಜ್ಞ

Leave a Reply

Your email address will not be published. Required fields are marked *

Back To Top