Thursday, 20th September 2018  

Vijayavani

ಸಿಎಂ ಕುಟುಂಬದ ವಿರುದ್ಧ ಬಿಜೆಪಿ ಭೂ ಅಸ್ತ್ರ - ಮೈಸೂರು, ರಾಮನಗರದಲ್ಲೂ ಭೂ ಅಕ್ರಮ - ಬಿಜೆಪಿ ನಾಯಕರಿಂದ ಭೂ ಚಕ್ರ        ಹಾಸನದಲ್ಲಿ ಗೌಡರ ಕುಟುಂಬದಿಂದ ಗೋಮಾಳ ಕಬಳಿಕೆ - ದೇಶಪಾಂಡೆಗೆ ದೂರು -ಎ.ಮಂಜುರಿಂದ ಕಂಪ್ಲೆಂಟ್​ ದಾಖಲು        ಬಿಜೆಪಿಯಿಂದ ಅಭಿವೃದ್ಧಿಗೆ ಸಹಕಾರ ಸಿಗುತ್ತಿಲ್ಲ - ದಂಗೆ ಏಳುವಂತೆ ಸಿಎಂ ಕರೆ - ಎಚ್ಡಿಕೆ ಮಾತಿನ ಬೆನ್ನಲ್ಲೇ ದಾಂಧಲೆ ಶುರು        ಎಚ್​ಡಿಕೆ-ಬಿಎಸ್​ವೈ ವಾಗ್ದಾಳಿ ಬೆನ್ನಲ್ಲೇ ಹೈಡ್ರಾಮಾ -ಯಡಿಯೂರಪ್ಪ ನಿವಾಸದೆದುರು ಕೈ ಕಾರ್ಯಕರ್ತರ ಹಂಗಾಮಾ        ಡಾಲರ್ಸ್ ಕಾಲನಿ ನಿವಾಸದಲ್ಲಿ ಗಲಾಟೆ - ರೇಣುಕಾಚಾರ್ಯ ಮೇಲೆ ಹಲ್ಲೆಗೆ ಯತ್ನ - ಬಿಎಸ್​ವೈ ಭಾವಚಿತ್ರ ಹರಿದು ಹಾಕಿ ಆಕ್ರೋಶ        ಇಲ್ಲಿ ನಿಮ್ಮ ಸರ್ಕಾರ, ಅಲ್ಲಿ ನಮ್ಮ ಸರ್ಕಾರ - ನಿಮ್ಮ ಯಾವುದೇ ಧಮ್ಕಿಗೂ ಹೆದರಲ್ಲ -  ಅಟ್ಯಾಕ್​ಗೆ ಬಿಎಸ್​ವೈ ಕೌಂಟರ್​ ಅಟ್ಯಾಕ್       
Breaking News

ನೈಜತೆಯ ನೆರಳಲ್ಲಿ ಶತಾಯ ಗತಾಯ

Friday, 12.01.2018, 3:03 AM       No Comments

‘ಅದೊಂದು ಹಳ್ಳಿ. ಆ ಹಳ್ಳಿಯಲ್ಲಿ ನಡೆದ ಸತ್ಯ ಘಟನೆಯೇ ನಮ್ಮ ಚಿತ್ರದ ತಿರುಳು. ದ್ವೇಷ-ದಳ್ಳುರಿ, ಕೊಲೆ-ರಕ್ತ ಎಲ್ಲವೂ ಅಲ್ಲಿ ಮಾಮೂಲಿ. ಅದನ್ನೇ ನಾವು ಸಿನಿಮಾ ಮಾಡಿದ್ದೇವೆ’ ಎಂದು ‘ಶತಾಯ ಗತಾಯ’ ಚಿತ್ರದ ನಿರ್ದೇಶಕ ಸಂದೀಪ್​ಗೌಡ ಹೇಳುತ್ತ ಹೋದರು.. ಆಗಿದ್ದು ಆಗಲಿ ಒಂದು ಸಿನಿಮಾ ಮಾಡೇ ಬಿಡುವೆ ಎಂದು ಶತಾಯ ಗತಾಯವಾಗಿ ಕಣಕ್ಕಿಳಿದಿದ್ದ ಸಂದೀಪ್, ಕೊನೆಗೂ ಅಂದುಕೊಂಡಂತೆ ಸಿನಿಮಾ ಮಾಡಿದ್ದಾರಂತೆ. ಆ ಸಿನಿ ಕನಸಿನ ಪಯಣವನ್ನು ಹಂಚಿಕೊಳ್ಳಬೇಕೆಂಬ ಉದ್ದೇಶದಿಂದ ಮಾಧ್ಯಮದವರ ಮುಂದೆ ಬಂದಿತ್ತು ಚಿತ್ರತಂಡ. ‘ತುಂಬ ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ವೀಕ್ಷಕರಿಗೆ ಸಿನಿಮಾ ಇಷ್ಟವಾಗಲಿದೆ ಎಂಬ ನಂಬಿಕೆ ಇದೆ’ ಎನ್ನುವ ಸಂದೀಪ್​ಗಿದು ಮೊದಲ ಅನುಭವ. ನೈಜ ಘಟನೆಯನ್ನು ಹಿಡಿದುಕೊಂಡು ಸಿನಿಮಾ ಮಾಡಿದ್ದಾರೆ.

ಆಡಿಯೋ ಸಿಡಿ ಬಿಡುಗಡೆ ಕಾರ್ಯಕ್ರಮ ಆಗಿದ್ದರಿಂದ ಸಿನಿಮಾಕ್ಕಿಂತ ಅದರಲ್ಲಿನ ಹಾಡುಗಳ ಬಗ್ಗೆ ಸಂದೀಪ್ ಹೆಚ್ಚು ಹೊತ್ತು ಮಾತನಾಡಿದರು. ‘ಸಂಗೀತ ನಿರ್ದೇಶಕ ರವಿನಂದನ್ ಜೈನ್ ಅದ್ಭುತವಾಗಿ ರಾಗ ಸಂಯೋಜಿಸಿದ್ದಾರೆ. ಅವರಲ್ಲಿ ಅಡಗಿದ್ದ ಎಲ್ಲ ಕಲೆಯನ್ನು ಹೊರಹಾಕಿಸಿದ್ದೇನೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಎಲ್ಲ ಹಾಡುಗಳಿಗೆ ನಾನೇ ಸಾಹಿತ್ಯ ಬರೆದು ಗೀತ ಸಾಹಿತಿ ಆಗಿದ್ದೇನೆ. ಬಂಡವಾಳ ಹೂಡಿ ನಿರ್ವಪಕನೂ ಆಗಿದ್ದೇನೆ’ ಎನ್ನುತ್ತಾರೆ ನಿರ್ದೇಶಕರು. ನೈಜ ಸಿನಿಮಾದ ಜತೆಗೆ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ರೀತಿಯ ಅಂಶಗಳೂ ಚಿತ್ರದಲ್ಲಿ ಇರಲಿವೆಯಂತೆ. ಸರಣಿ ಕೊಲೆಗಳ ಸುತ್ತ ನಡೆಯುವ ಕಥೆಯಾಗಿದ್ದರಿಂದ ಕಣ್ಣಿಗೆ ಕಟ್ಟುವ ರೀತಿಯಲ್ಲಿ ದೃಶ್ಯಗಳನ್ನು ನಿರ್ದೇಶಕರು ಕಟ್ಟಿಕೊಟ್ಟಿದ್ದಾರಂತೆ. ಮುದ್ದಾದ ಪ್ರೇಮಕಥೆಯೂ ಚಿತ್ರದ ಹೈಲೆಟ್​ಗಳಲ್ಲೊಂದಂತೆ. ಚಿತ್ರದ ಬಹುಪಾಲು ಚಿತ್ರೀಕರಣ ಹಾಸನ ಜಿಲ್ಲೆಯ ಹಿರೇಸಾವೆ ಗ್ರಾಮದಲ್ಲಿ ನಡೆದಿದೆ. ರಿಯಾಲಿಟಿ ಶೋ ಮೂಲಕ ಗುರುತಿಸಿಕೊಂಡ ರಘು ರಾಮಪ್ಪ ಮೊದಲಬಾರಿಗೆ ನಾಯಕನಾಗಿ ಬಡ್ತಿ ಪಡೆದಿದ್ದಾರೆ.

ಸಿನಿಮಾ ಅಚ್ಚುಕಟ್ಟಾಗಿ ಮೂಡಿ ಬಂದ ಖುಷಿಯಲ್ಲಿದ್ದಾರವರು. ಆದರೆ ಎಲ್ಲಿಯೂ ತಾವು ಮಾಡಿದ ಪಾತ್ರದ ಬಗ್ಗೆ ಒಂದೇ ಒಂದು ಮಾಹಿತಿಯನ್ನು ಬಿಟ್ಟುಕೊಡಲಿಲ್ಲ. ಅದೇ ರೀತಿ ಮೊದಲ ಬಾರಿಗೆ ಬಣ್ಣದ ಲೋಕಕ್ಕೆ ಕಾಲಿಟ್ಟಿರುವ ನಾಯಕಿ ಸೋನು ಗೌಡ, ಮಾಡೆಲಿಂಗ್ ಲೋಕದಿಂದ ಬಂದಿದ್ದಾರೆ. ಚಿತ್ರದಲ್ಲಿ ಪಕ್ಕಾ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರಂತೆ. ನಟ ಶ್ರೀಮುರಳಿ ಆಡಿಯೋ ಸಿಡಿ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಾಶಯ ಕೋರಿದರು. ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಮಾಡಿದ್ದಾರೆ. ಇನ್ನುಳಿದಂತೆ ಶಿವಪ್ರದೀಪ್, ಕುರಿ ಪ್ರತಾಪ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇಗೌಡ (ಜಿ.ಜಿ), ಎಂ.ಎಸ್. ಉಮೇಶ್, ಗಡ್ಡಪ್ಪ ಚಿತ್ರದಲ್ಲಿದ್ದಾರೆ. ಫೆಬ್ರವರಿಯಲ್ಲಿ ಚಿತ್ರ ರಿಲೀಸ್ ಮಾಡುವ ಉದ್ದೇಶ ಚಿತ್ರತಂಡದ್ದು.

 

 

Leave a Reply

Your email address will not be published. Required fields are marked *

Back To Top