Tuesday, 17th July 2018  

Vijayavani

ಕಾಂಗ್ರೆಸ್‌ ಕಿರುಕುಳದಿಂದಲೇ ಸಿಎಂ ಕಣ್ಣೀರು - ಕಾಂಗ್ರೆಸ್‌ ನೆಚ್ಚಿಕೊಂಡು ಹೋದ್ರೆ ಇದೇ ಸ್ಥಿತಿ - ಎಚ್​ಡಿಕೆ  ಕಣ್ಣೀರಿಗೆ ಜೇಟ್ಲಿ ಟಾಂಗ್‌        ವಾಣಿಜ್ಯ ಬ್ಯಾಂಕ್‌ನಲ್ಲಿನ ಚಾಲ್ತಿ ಸಾಲವೂ ಮನ್ನಾ - ಸಿಎಂ ನಿರ್ಧಾರ - ರೈತರಿಗೆ ಮತ್ತೊಂದು ಕೊಡುಗೆ ನೀಡಿದ ಮುಖ್ಯಮಂತ್ರಿ        ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಶಾಸಕರ ಪುತ್ರ - ಪ್ರಶ್ನಿಸಿದ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದನೆ        ಬಂಗಾಳದಲ್ಲಿ ಮೋದಿ ರ್ಯಾಲಿ ವೇಳೆ ಅವಗಢ - ಪೆಂಡಾಲ್ ಕುಸಿದು 22 ಜನರಿಗೆ ಗಾಯ - ಆರೋಗ್ಯ ವಿಚಾರಿಸಿದ ಪ್ರಧಾನಿ ನಮೋ        ಕರಾವಳಿಯಲ್ಲಿ ಭಾರಿ ಮಳೆಯ ಅವಾಂತರ - ಕುಸಿದುಬಿತ್ತು ಭಟ್ಕಳದ ಬಸ್ ನಿಲ್ದಾಣ - ಹೊರ ಓಡಿದ ಪ್ರಯಾಣಿಕರು        ಕೆಆರ್​​ಎಸ್​​​ನಿಂದ ಭಾರಿ ಪ್ರಮಾಣದ ನೀರು - ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಮುಳುಗಡೆ - ಧುಮ್ಮಿಕ್ಕುತ್ತಿದೆ ಹೊಗೇನಕಲ್ ಫಾಲ್ಸ್       
Breaking News

ನೆಲನೆಲ್ಲಿಯಲ್ಲಿದೆ ರೋಗನಿರೋಧಕ ಶಕ್ತಿ

Saturday, 12.08.2017, 3:00 AM       No Comments

ನೆಲನೆಲ್ಲಿಗೆ ಕಲ್ಲನ್ನೂ ಕರಗಿಸುವ ಶಕ್ತಿ ಇದೆ. ಇದರ ಇನ್ನೊಂದು ಹೆಸರು ಸ್ಟೋನ್ ಬ್ರೇಕರ್. ಇದು ಕಿಡ್ನಿಯಲ್ಲಿನ ಕಲ್ಲಿನ ಸಮಸ್ಯೆ ಕಡಿಮೆ ಮಾಡಬಲ್ಲದು. ಈ ಗಿಡದ ಇನ್ನೊಂದು ವಿಶೇಷತೆ ಎಂದರೆ ಇಡೀ ಗಿಡವೂ ಔಷಧೀಯ ವಸ್ತುವಾಗಿ ಬಳಕೆಯಾಗಬಲ್ಲದು. ಪ್ರತಿನಿತ್ಯ ನೆಲನೆಲ್ಲಿಯ ಜ್ಯೂಸ್ ಕುಡಿಯುವುದರಿಂದ ಕಿಡ್ನಿಯಲ್ಲಿನ ಕಲ್ಲು ಹೊರಹೋಗಲು ಅಥವಾ ಕರಗಲು ಸಾಧ್ಯವಾಗುತ್ತದೆ. ಒಮ್ಮೆ ಕಿಡ್ನಿಯಲ್ಲಿ ಕಲ್ಲು ಉಂಟಾದರೆ ಅದು ಪುನಃ ಪುನಃ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. 6 ತಿಂಗಳಿಗೆ ಮತ್ತೆ ನಿರ್ವಣವಾಗಬಹುದು. ಅದನ್ನು ತಡೆಯುವ ಸಾಮರ್ಥ್ಯ ನೆಲನೆಲ್ಲಿಗಿದೆ.

ಲಿವರ್​ನ ಆರೋಗ್ಯಕ್ಕೆ ನೆಲನೆಲ್ಲಿ ಸಹಕಾರಿ. ಲಿವರ್ ಹಾಳಾಗಿದೆ, ಸಮಸ್ಯೆಯಾಗಿದೆ ಎಂದು ಅದಕ್ಕೆ ಚಿಕಿತ್ಸೆ, ಮಾತ್ರೆ ನೀಡುತ್ತಿದ್ದಲ್ಲಿ, ಅದರ ಜತೆಗೆ ನೆಲನೆಲ್ಲಿಯನ್ನೂ ಆಹಾರದಲ್ಲಿ ಬಳಸುವುದರಿಂದ ಬೇಗನೆ ಲಿವರ್​ನ್ನು ಆರೋಗ್ಯಕರವಾಗಿಸಬಹುದು. ನೆಲನೆಲ್ಲಿಯ ಎಲ್ಲ ಭಾಗಗಳನ್ನೂ ತೆಗೆದುಕೊಂಡು (ಬೇರು ಹೊರತುಪಡಿಸಿ) ಪೇಸ್ಟ್ ಮಾಡಿಕೊಳ್ಳಬೇಕು. ಅರ್ಧ ಚಮಚ ಪೇಸ್ಟ್​ಗೆ ಒಂದು ಚಮಚ ಕೆನೆ ಇಲ್ಲದ ಸಿಹಿ ಮೊಸರು ಹಾಕಿ ಮಿಶ್ರಣ ಮಾಡಬೇಕು. ಒಂದು ಚಿಟಿಕೆ ಅರಿಶಿಣ, ಒಂದು ಚಿಟಿಕೆ ಸೈಂಧವ ಲವಣ ಸೇರಿಸಿ ಕಲಸಿ ಪ್ರತಿನಿತ್ಯ ಸೇವಿಸುವುದರಿಂದ ಲಿವರ್​ನ ಆರೋಗ್ಯಕ್ಕೆ ಒಳ್ಳೆಯದು. ಮದ್ಯಪಾನ ಮಾಡುವವರಿಗೆ ಲಿವರ್ ಸಮಸ್ಯೆ ಬರುವ ಸಂಭವ ಅಧಿಕ. ಮದ್ಯಪಾನ ನಿಲ್ಲಿಸುವುದು ಅತ್ಯುತ್ತಮ. ಫ್ಯಾಟಿಲಿವರ್ ಸಮಸ್ಯೆ ನಿಯಂತ್ರಣಕ್ಕೆ ಹೆಚ್ಚು ಸಹಕಾರಿ.

ನೆಲನೆಲ್ಲಿಯು ಆಂಟಿ-ವೈರಸ್ ಗುಣವನ್ನೂ ಹೊಂದಿದೆ. ದೇಹದಲ್ಲಿ ವೈರಸ್ ಸೋಂಕು ಉಂಟಾದಾಗ ನೆಲನೆಲ್ಲಿಯ ಪ್ರಯೋಗ ಬಹಳ ಹಿತಕಾರಿ. ಜ್ವರ ನಿವಾರಣೆಗೆ ನೆಲನೆಲ್ಲಿಯ ಕಷಾಯ ಸಹಕಾರಿ. ನೀರನ್ನು ಬಿಸಿಗಿರಿಸಿ ಅದಕ್ಕೆ ನೆಲನೆಲ್ಲಿಯ ಎಲೆ, ಕೊಂಬೆ, ಕಾಯಿ ಎಲ್ಲವನ್ನೂ ಕತ್ತರಿಸಿ ಹಾಕಬೇಕು. ಅರ್ಧ ಇಂಚು ಹಸಿಶುಂಠಿ ಕುಟ್ಟಿ ಮಾಡುತ್ತಿರುವ ಕಷಾಯಕ್ಕೆ ಹಾಕಬೇಕು. ನಂತರ ಕಾಲು ಚಮಚ ಕಾಳುಮೆಣಸಿನ ಪುಡಿ, ಜೀರಿಗೆ ಪುಡಿ ಹಾಕಿ ಮಂದ ಉರಿಯಲ್ಲಿ ಕುದಿಸಬೇಕು. ಇಳಿಸುವಾಗ ಚಿಟಿಕೆ ಅರಿಶಿಣ, ಸ್ವಲ್ಪ ಸೈಂಧವ ಲವಣ ಹಾಕಿ ಒಂದು ನಿಮಿಷ ಬಿಟ್ಟು ಇಳಿಸಿ ಸೋಸಿದರೆ ಕಷಾಯ ಸಿದ್ಧ. ಇದನ್ನು 10ರಿಂದ 15 ಎಂಎಲ್​ನಷ್ಟು ಗಂಟೆಗೊಮ್ಮೆ ಕುಡಿಯುತ್ತ ಬರುವುದು. ಎಲ್ಲ ರೀತಿಯ ಜ್ವರಕ್ಕೂ ಇದು ರಾಮಬಾಣ. ಬೇರೆ ಬೇರೆ ರೀತಿಯ ಜ್ವರ ಬಂದಲ್ಲಿ ಔಷಧ ಜತೆಗೆ ಈ ಕಷಾಯವನ್ನು ದಿನದ ಹೊತ್ತಲ್ಲಿ ಸೇವಿಸುವುದರಿಂದ ಜ್ವರ ಬೇಗ ಕಡಿಮೆಯಾಗಲು ಸಾಧ್ಯವಾಗುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ನೆಲನೆಲ್ಲಿಯ ಬೇರನ್ನು ಮಾತ್ರ ತೆಗೆದುಕೊಂಡು ಪೇಸ್ಟ್ ಮಾಡಿಕೊಳ್ಳಬೇಕು. ಅದಕ್ಕೆ ಹಸುವಿನ ಹಾಲು ಮಿಶ್ರಣ ಮಾಡಬೇಕು. ಚಿಟಿಕೆ ಅರಿಶಿಣ ಹಾಕಿ ಕಲಸಿ, ಒಂದು ಚಮಚ ಈ ಮಿಶ್ರಣವನ್ನು ದಿನಕ್ಕೆ ಎರಡರಿಂದ ಮೂರು ಬಾರಿ ಸೇವಿಸಿದ್ದಲ್ಲಿ ಕಾಮಾಲೆ ಕಡಿಮೆ ಮಾಡಲು ಸಹಕಾರಿ ಹಾಗೂ ಅದರ ಅಡ್ಡ ಪರಿಣಾಮ ನಿಯಂತ್ರಿಸಲೂ ಸಾಧ್ಯವಾಗುತ್ತದೆ.

Leave a Reply

Your email address will not be published. Required fields are marked *

Back To Top