Friday, 25th May 2018  

Vijayavani

ನಾಮಪತ್ರ ವಾಪಸ್ ಪಡೆದ ಸುರೇಶ್​ಕುಮಾರ್​- ಅವಿರೋಧವಾಗಿ ರಮೇಶ್​ಕುಮಾರ್​ ಆಯ್ಕೆ- ಎರಡನೇ ಬಾರಿಗೆ ಸ್ಪೀಕರ್​ ಆಗಿ ನೇಮಕ        ಸದನದಲ್ಲಿ ವಿಶ್ವಾಮತ ಪರೀಕ್ಷೆ- ಮೂರು ಪಕ್ಷಗಳ ಎಲ್ಲಾ ಶಾಸಕರು ಹಾಜರ್​- ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಬಿಎಸ್​ವೈ        ಮೈತ್ರಿ ಸರ್ಕಾರದ ಪರ್ವ ಆರಂಭ- ಸಾಲ ಮನ್ನಾ ಮಾಡ್ತಾರಾ ಎಚ್​ಡಿಕೆ- ಕೊಟ್ಟ ಮಾತು ಉಳಿಸಿಕೊಳ್ತಾರಾ ಕಾಂಗ್ರೆಸ್​ ನಾಯಕರು        ಸಚಿವ ಸ್ಥಾನಕ್ಕಾಗಿ ಲಾಬಿ ಶುರು- ಕೆಪಿಸಿಸಿ ಅಧ್ಯಕ್ಷ ಸ್ಥಾನ, ಗೃಹಖಾತೆಗೆ ಡಿಕೆಶಿ ಪಟ್ಟು- ಹೈಕಮಾಂಡ್ ಭೇಟಿಗೆ ತೆರಳಲಿರುವ ಕೈ ನಾಯಕರು        ಮುಗಿದ ಬಹುಮತ ಸಾಬೀತಿನ ಪರೀಕ್ಷೆ- ಶಾಸಕರ ರೆಸಾರ್ಟ್​ ರಾಜಕೀಯ ಅಂತ್ಯ- ಇನ್ನಾದ್ರೂ ಕ್ಷೇತ್ರಗಳತ್ತ ತೆರಳ್ತಾರಾ ಎಂಎಲ್​ಎಗಳು        ಸಿಎಂಗೆ ಹೊಸ ಕಾರು ನೀಡಿದ ಡಿಪಿಎಆರ್- ಜಿಎ 6363 ಕಾರ್​ ನಂಬರ್​- ಹೊಸ ಕಾರು ಬಳಸಲು ಸಿಎಂ ನಿರ್ಧಾರ       
Breaking News

ನೀರಿನಾಳದಲ್ಲಿ ಧನ್ಯವಾದ ಹೇಳಿದ ಶಾರುಖ್!

Tuesday, 13.02.2018, 3:01 AM       No Comments

ನಟ ಶಾರುಖ್ ಖಾನ್ ಚಿತ್ರರಂಗಕ್ಕೆ ಬಂದು 25 ವರ್ಷಗಳಿಗೂ ಅಧಿಕ ಕಾಲವಾಗಿದೆ. ಸಿನಿಮಾ ಬದುಕಿನಲ್ಲಿ ಅವರು ನೀಡಿದ ಹಿಟ್ ಚಿತ್ರಗಳ ಪಟ್ಟಿಯೇನು ಚಿಕ್ಕದಿಲ್ಲ. ಹೀಗಾಗಿ ಶಾರುಖ್ ಅಭಿಮಾನಿಗಳ ಸಂಖ್ಯೆ ದಿನೇದಿನೆ ಹೆಚ್ಚುತ್ತಲೇ ಇದೆ. ವಿಶೇಷ ಎಂದರೆ ಟ್ವಿಟರ್ ಹಿಂಬಾಲಕರ ಸಂಖ್ಯೆಯಲ್ಲಿ ಖ್ಯಾತ ನಟ ಅಮಿತಾಭ್ ಬಚ್ಚನ್ ಅವರನ್ನು ಶಾರುಖ್ ಹಿಂದಿಕ್ಕಿದ್ದರು. ಟ್ವಿಟರ್​ನಲ್ಲಿ ಶಾರುಖ್​ರನ್ನು ಫಾಲೋ ಮಾಡುವವರ ಸಂಖ್ಯೆ 33 ಮಿಲಿಯನ್ (3.3 ಕೋಟಿ) ದಾಟಿದೆ. ಇದೇ ಖುಷಿಯಲ್ಲಿ ಶಾರುಖ್ ಅಂಡರ್​ವಾಟರ್​ನಲ್ಲಿ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ!

ಈ ವಿಡಿಯೋವನ್ನು ಅವರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಟುಕ್ಸೆಡೋ ಶರ್ಟ್ ಧರಿಸಿ ಕನ್ನಡಕ ಹಾಕಿಕೊಂಡು, ಶಾರುಖ್ ನೀರಿನಾಳಕ್ಕೆ ಸಾಗಿದ್ದಾರೆ. ಈ ವೇಳೆ ‘ದೇವ್​ದಾಸ್’ ಸೇರಿ ಅನೇಕ ಹಿಟ್ ಚಿತ್ರಗಳ ಡೈಲಾಗ್​ಗಳನ್ನು ಹೇಳಿದ್ದಾರೆ. ನೀರಿನಿಂದ ಮೇಲೆ ಬಂದ ನಂತರದಲ್ಲಿ ಶಾರುಖ್ ಮತ್ತೊಮ್ಮೆ ಫ್ಯಾನ್​ಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಆನಂದ್ ಎಲ್. ರೈ ನಿರ್ದೇಶನದ ‘ಜೀರೋ’ ಚಿತ್ರದಲ್ಲಿ ಶಾರುಖ್ ಬಿಜಿಯಾಗಿದ್ದಾರೆ. ಕಳೆದ ವರ್ಷ ತೆರೆಕಂಡಿದ್ದ ಅವರ ಎರಡು ಚಿತ್ರಗಳು ಫ್ಲಾಪ್ ಆಗಿದ್ದವು. ಹೀಗಾಗಿ ಅವರಿಗೆ ಈ ಬಾರಿ ಗೆಲುವು ಅನಿವಾರ್ಯವಾಗಿದೆ. -ಏಜೆನ್ಸೀಸ್

Leave a Reply

Your email address will not be published. Required fields are marked *

Back To Top