Tuesday, 27th June 2017  

Vijayavani

1. ಅಮೆರಿಕದಲ್ಲಿ ಟ್ರಂಪ್​ ಮೋದಿ ಭೇಟಿ- ಉಭಯ ರಾಷ್ಟ್ರಗಳ ಸಂಬಂಧ ಮತ್ತಷ್ಟು ಗಟ್ಟಿ- ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಶ್ವೇತ ಭವನ 2. ಸಹಜವಾಗಿ ಬರ್ತಿದ್ದೋರು ಕರೆದಿದ್ದಕ್ಕೆ ಬಂದ್ರು- ಕೃಷ್ಣಮಠದಲ್ಲಿ ಎಲ್ಲ ವರ್ಗದವರೂ ಊಟ ಮಾಡ್ತಾರೆ- ಸೌಹಾರ್ಧ ಭೋಜನಕ್ಕೆ ಪೇಜಾವರ ಶ್ರೀ ಸ್ಪಷ್ಟನೆ 3. ವಿಧಾನಸಭೆ ಚುನಾವಣೆ ಮೇಲೆ ವೇಣುಗೋಪಾಲ್ ಕಣ್ಣು- ಇಂದು ರಾಜ್ಯಕ್ಕೆ ಕೈ ಉಸ್ತುವಾರಿ ಆಗಮನ- ಬಿಜೆಪಿ ತಂತ್ರಕ್ಕೆ ಪ್ರತಿತಂತ್ರ 4. ಉದ್ಧಾರ ಮಾಡ್ತೀವಿ ಅಂತಾ ಗುಂಡಿ ತೆಗೆದ್ರು- ಮೇಲುಕೋಟೆ ದೇವಸ್ಥಾನದ ಅಂದ ಹಾಳುಗೆಡುವಿದ್ರು- ಪುರಾತತ್ವ ಇಲಾಖೆ ವಿರುದ್ಧ ಪೊಲೀಸ್​ಠಾಣೆಯಲ್ಲಿ ದೂರು 5. ಆಕಾಶದಲ್ಲಿ ಹಾರುವಾಗಲೇ ತಾಂತ್ರಿಕ ದೋಷ- ವಿಮಾನದಲ್ಲಿದ್ದ ಸೀಟು ಫುಲ್​ ಅಲ್ಲಾಡ್ಸು- ಸೌಂಡ್ಗೆ ಬೆಚ್ಚಿ ಬಿದ್ದ ಜನ ಸೇಫು
Breaking News :

ನೀರಲ್ಲೇ ರೇಡಿಯೋ ಕಾರ್ಯಕ್ರಮ!

Saturday, 20.05.2017, 3:00 AM       No Comments

ಸಿ ಕೊಠಡಿ, ಸೌಂಡ್ ಪ್ರೂಫ್ ಕೊಠಡಿಗಳಲ್ಲಿ ಕೂತು ರೇಡಿಯೋ ಕಾರ್ಯಕ್ರಮ ನಡೆಸಿಕೊಡಲಾಗುತ್ತದೆ. ಆದರೆ ಅಟ್ಲಾಂಟಿಸ್​ನಲ್ಲಿ ರೇಡಿಯೋ ಜಾಕಿಗಳು ನೀರಿನಾಳದಿಂದಲೇ ಕಾರ್ಯಕ್ರಮ ನಡೆಸಿಕೊಡುವ ಮೂಲಕ ಗಿನ್ನೆಸ್ ದಾಖಲೆ ಬರೆದಿದ್ದಾರೆ. 30 ಲಕ್ಷ ಗ್ಯಾಲನ್ ನೀರು ಇರುವ ದೊಡ್ಡ ಈಜುಕೊಳದಲ್ಲಿ ನಾಲ್ಕು ಆರ್​ಜೆಗಳು ಆಮ್ಲಜನಕದ ಮಾಸ್ಕ್ ಧರಿಸಿ ಇಳಿದಿದ್ದಾರೆ. ನಂತರ ನಿರಂತರವಾಗಿ 5 ತಾಸು 25 ನಿಮಿಷ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಈ ಮೂಲಕ ನೀರಿನಾಳದಿಂದ ನೇರಪ್ರಸಾರವಾದ ದೀರ್ಘಕಾಲದ ಕಾರ್ಯಕ್ರಮ ಎಂಬ ದಾಖಲೆಗೆ ಇದು ಪಾತ್ರವಾಗಿದೆ. ಈ ಮೊದಲು ಒಂದು ಗಂಟೆಗೂ ಹೆಚ್ಚು ಕಾಲ ನೀರಿನಾಳದಿಂದ ಕಾರ್ಯಕ್ರಮ ನಡೆಸಿಕೊಟ್ಟಿರುವುದು ದಾಖಲೆ ಆಗಿತ್ತು. ಈ ರೀತಿ ಕಾರ್ಯಕ್ರಮ ನಡೆಸಿಕೊಡಲು ಆರ್​ಜೆಗಳು ತರಬೇತಿ ಪಡೆದುಕೊಂಡಿದ್ದರು. ಜತೆಗೆ ಇವರು ಧರಿಸಿದ್ದ ಆಮ್ಲಜನಕದ ಟ್ಯಾಂಕ್​ಗಳನ್ನು ಬದಲಾಯಿಸುವ ಅವಶ್ಯಕತೆ ಇದ್ದುದರಿಂದ ಇದಕ್ಕೆ ವಿಶೇಷ ಮುಳುಗು ತಜ್ಞರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಒಟ್ಟು 11 ಬಾರಿ ಆಮ್ಲಜನಕದ ಟ್ಯಾಂಕ್​ಬದಲಾಯಿಸಲಾಗಿತ್ತು.

– ಏಜೆನ್ಸೀಸ್

Leave a Reply

Your email address will not be published. Required fields are marked *

ten + 4 =

Back To Top