Tuesday, 17th October 2017  

Vijayavani

1. ಅಕ್ರಮ ಕಸಾಯಿಖಾನೆ ಮಾಲೀಕರ ದರ್ಪ – ನೋಟಿಸ್​​​ ನೀಡಲು ಹೋದ ಪೊಲೀಸರ ಮೇಲೆಯೇ ಹಲ್ಲೆ – ಹೊಯ್ಸಳ ಸೇರಿ ನಾಲ್ಕು ವಾಹನಗಳು ಜಖಂ 2. ದಿಗ್ವಿಜಯ ಸಿಂಗ್​​ ಸಂಬಂಧಿ ಟೆಂಡರ್​ ಟೋಪಿ – ಗುತ್ತಿಗೆ​​​​​​ ನೆಪದಲ್ಲಿ ಕೋಟಿ ಕೋಟಿ ಪಂಗನಾಮ – ಭವಾನಿ ಸಿಂಗ್​​​ ವಿರುದ್ಧ ವಂಚನೆ ಆರೋಪ 3. ಉಸ್ತುವಾರಿ ಎದುರಲ್ಲೇ ಕಾಂಗ್ರೆಸ್​ ಗಲಾಟೆ – ಕೈಗೆ ಸಿಕ್ಕ ಕುರ್ಚಿಗಳು ಪೀಸ್ ಪೀಸ್​- ಚಿತ್ರದುರ್ಗದಲ್ಲಿ ಮನೆ ಮನೆ ಪ್ರಚಾರದ ವೇಳೆ ಕಿತ್ತಾಟ 4. ಜನರಕ್ಷಾ ಯಾತ್ರೆಗೆ ಅಂತಿಮ ತೆರೆ – ಸಾವಿರಾರು ಕಾರ್ಯಕರ್ತರೊಂದಿಗೆ ಚಾಣಕ್ಯ ಪಾದಯಾತ್ರೆ -ತಿರುವನಂತಪುರಂನಲ್ಲಿ ಬಿಜೆಪಿ ಬೃಹತ್​ Rally  5. ಸಾರಥಿಗೆ ಸಂದ ಬ್ರಿಟನ್​ ಗೌರವ – ಚಕ್ರವರ್ತಿಗೆ ಬಂದಿದೆ ಆಹ್ವಾನ – ಅ.19 ರಂದು ಲಂಡನ್​ನಲ್ಲಿ ಸನ್ಮಾನ
Breaking News :

ನೀರಲ್ಲಿ ತೇಲುವ ಬ್ಲಾ್ಯಕ್​ಬಾಕ್ಸ್

Sunday, 13.08.2017, 3:00 AM       No Comments

ಚೆನ್ನೈ: ವಿಮಾನದ ದತ್ತಾಂಶ ಸಂಗ್ರಹ ಮಾಡುವ ಬ್ಲಾ್ಯಕ್ ಬಾಕ್ಸ್ ಅಪಘಾತದ ಸಂದರ್ಭದಲ್ಲಿ ಬಹಳ ಉಪಯುಕ್ತ. ಆದರೆ, ಕೆಲವೊಮ್ಮೆ ಈ ಬ್ಲಾ್ಯಕ್ ಬಾಕ್ಸ್ ಕಳೆದುಹೋಗುತ್ತದೆ. ಆಗ, ಅಪಘಾತಕ್ಕೆ ನಿಖರ ಕಾರಣ ತಿಳಿಯುವುದು ಕಷ್ಟ. ಇಂತಹ ತೊಡಕನ್ನು ನಿವಾರಿಸಲು ಭಾರತದ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ (ಡಿಆರ್​ಡಿಒ) ವಿಮಾನ ಅಪಘಾತ ಸಂದರ್ಭದಲ್ಲಿ ಬ್ಲಾ್ಯಕ್ ಬಾಕ್ ಪತ್ತೆ ಸ್ವಯಂ ಚಾಲಿತವಾಗಿ ಹೊರಬರುವ ಮತ್ತು ನೀರಿನಲ್ಲಿ ಪತನವಾದರೆ ಬ್ಲಾ್ಯಕ್ ಬಾಕ್ ತೇಲುವಂತಹ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದೆ.

ಬಿಸ್ಯಾಟ್ ಎಂದು ಕರೆಯಲಾಗುವ ಉಪಗ್ರಹ ಸಂವಹನ ವ್ಯವಸ್ಥೆ ಆಧಾರಿತ ಬ್ಲಾ್ಯಕ್​ಬಾಕ್ಸ್ ಅನ್ನು ಚೆನ್ನೈನ ಅವಡಿಯ ಡಿಆರ್​ಡಿಒ ಕೇಂದ್ರದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ವಿಶಾಖಪಟ್ಟಣದ ನೇವಲ್ ಸೈನ್ಸ್ ಆಂಡ್ ಟೆಕ್ನಾಲಜಿ ಲ್ಯಾಬ್​ನಲ್ಲಿ ಪರೀಕ್ಷಿಸಲಾಗಿದೆ.

ಸಬ್​ವೆುರೀನ್ ಮೂಲಕ ಉಡಾಯಿಸಲಾಗುವ ಕ್ಷಿಪಣಿಯನ್ನು ಪತ್ತೆಹಚ್ಚುವ ತಂತ್ರಜ್ಞಾನವನ್ನು ಬಳಸಿ ಬಿಸ್ಯಾಟ್ ಬ್ಲಾ್ಯಕ್​ಬಾಕ್ಸ್ ಅಭಿವೃದ್ಧಿಪಡಿಸಲಾಗಿದೆ.

ವಿಮಾನ ದುರಂತಕ್ಕೆ ಕಾರಣ ಪತ್ತೆಹಚ್ಚುವ ಜತೆಗೆ ಬ್ಲಾ್ಯಕ್​ಬಾಕ್ಸ್, ವಿಮಾನದ ಅವಶೇಷ ಪತ್ತೆಗೂ ನೆರವಾಗಲಿದೆ. ಈ ತಂತ್ರಜ್ಞಾನವನ್ನು ಮತ್ತಷ್ಟು ಅಭಿವೃದ್ಧಿಪಡಿಸಿ, ಸೂಕ್ತ ಅನುಮತಿ ದೊರೆತ ಬಳಿಕ ನಾಗರಿಕ ವಿಮಾನಯಾನದಲ್ಲೂ ಬಳಸಿಕೊಳ್ಳಲಾಗುತ್ತದೆ. ಏಜೆನ್ಸೀಸ್

Leave a Reply

Your email address will not be published. Required fields are marked *

Back To Top