Wednesday, 22nd November 2017  

Vijayavani

1. ಉಗ್ರನ ವಿರುದ್ಧ ಕೊಡಲಿಲ್ಲ ಪಾಕ್ ಸಾಕ್ಷ್ಯ – LET ಕ್ರಿಮಿ ಹಫೀಜ್ ಸಯೀದ್​ಗೆ ಕ್ಲೀನ್​ಚಿಟ್ – ಮನೆಯಿಂದ ಹೊರಬರ್ತಾನೆ ಮುಂಬೈ ದಾಳಿ ಮಾಸ್ಟರ್ ಮೈಂಡ್ 2. ಅಲೆಮಾರಿಗಳ ಮನೆ ತೆರವು ವೇಳೆ ಅಮಾನವೀಯ ವರ್ತನೆ – ನಡುರಸ್ತೆಯಲ್ಲಿ ಮಹಿಳೆಗೆ ಹೆರಿಗೆ – ದಿಗ್ವಿಜಯ ನ್ಯೂಸ್​ ವರದಿಗೆ ಡಿಸಿ ಸ್ಪಂದನೆ 3. ಹೆರಿಗೆ ವೇಳೆ ಮೃತಪಟ್ಟಿದ್ದಾಳೆ ಅಂದ್ರು ಡಾಕ್ಟರ್ಸ್​ – ಅಂತ್ಯ ಸಂಸ್ಕಾರದ ವೇಳೆ ಕಣ್ಣು ಬಿಟ್ಲಂತೆ ಬಾಣಂತಿ – ಮನೆಗೆ ತರೋವಷ್ಟರಲ್ಲಿ ಮತ್ತೆ ಸಾವಿನ ದರ್ಶನ 4. ಕೊಪ್ಪಳ ಜಿಲ್ಲಾಪ್ರವಾಸದಲ್ಲಿ ಎಚ್​ಡಿಡಿ – ಗವಿಮಠಕ್ಕೆ ಮಾಜಿ ಪ್ರಧಾನಿ ಭೇಟಿ – ಇಳಿವಯಸ್ಸಿನಲ್ಲೂ ಕಿಂಡಿಯಲ್ಲೆ ತೆರಳಿ ದರ್ಶನ 5. ಯೂರ್ಟನ್​ ವೇಳೆ ಕಾರಿಗೆ ಲಾರಿ ಡಿಕ್ಕಿ – ಡಿಕ್ಕಿ ಹೊಡೆದ ಲಾರಿಗೆ ಟ್ರಕ್ ಡ್ಯಾಶ್ – ಸೌದಿ ಹೈವೇಯಲ್ಲಿ ಹಾರಿಬಲ್ ಆಕ್ಸಿಡೆಂಟ್
Breaking News :

ನಿಶ್ವಿಕಾ ಈಗ ಚಿರು ಜೋಡಿ

Tuesday, 14.11.2017, 3:03 AM       No Comments

ಬೆಂಗಳೂರು: ವಾಸು ಜತೆ ಸೇರಿಕೊಂಡು ನಾನ್ ಪಕ್ಕಾ ಕಮರ್ಷಿಯಲ್ ಎನ್ನುತ್ತಿರುವ ನಿಶ್ವಿಕಾ ನಾಯ್ಡು ಈಗ ಅಮ್ಮಾ ಐ ಲವ್ ಯೂ ಎನ್ನಲು ಹೊರಟಿದ್ದಾರೆ. ಅಂದರೆ ‘ವಾಸು ನಾನ್ ಪಕ್ಕಾ ಕಮರ್ಷಿಯಲ್’ ಚಿತ್ರದ ನಾಯಕಿ ಇದೀಗ ‘ಅಮ್ಮಾ ಐ ಲವ್ ಯೂ’ ಎಂಬ ಸಿನಿಮಾಗೂ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ‘ವಿಚಿತ್ರ ಪ್ರೇಮಕಥೆ’ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಪ್ರವೇಶಿಸಿರುವ ಅವರು, ಆ ಚಿತ್ರ ಇನ್ನೂ ಶೂಟಿಂಗ್ ಹಂತದಲ್ಲಿ ಇರುವಾಗಲೇ ಮತ್ತೆರಡು ಸಿನಿಮಾಗಳಲ್ಲಿ ನಟಿಸುವ ಚಾನ್ಸ್ ಗಿಟ್ಟಿಸಿಕೊಂಡಿರುವುದು ವಿಶೇಷ.

ಕೆ.ಎಂ. ಚೈತನ್ಯ ನಿರ್ದೇಶಿಸಲಿರುವ ‘ಅಮ್ಮಾ…’ ಚಿತ್ರದಲ್ಲಿ ಚಿರಂಜೀವಿ ಸರ್ಜಾ ನಾಯಕರಾಗಿ ಅಭಿನಯಿಸಲಿದ್ದು, ಅವರಿಗೆ ಜೋಡಿಯಾಗಿ ನಿಶ್ವಿಕಾ ಕಾಣಿಸಿಕೊಳ್ಳಲಿದ್ದಾರೆ. ಅಂದಹಾಗೆ ತಮಿಳಿನ ‘ಪಿಚ್ಒ್ಯೆಕಾರನ್’ ಚಿತ್ರವನ್ನು ಸ್ಪೂರ್ತಿಯಾಗಿಟ್ಟುಕೊಂಡು ಈ ಚಿತ್ರ ತಯಾರಾಗುತ್ತಿದೆಯಂತೆ. ‘ಈ ಚಿತ್ರಕ್ಕೂ ನಾನು ಆಡಿಷನ್ ಮೂಲಕವೇ ಆಯ್ಕೆ ಆಗಿದ್ದು. ರೆಸ್ಟೋರೆಂಟ್​ನಲ್ಲಿ ಕೆಲಸ ಮಾಡುವ ಯುವತಿಯ ಪಾತ್ರದಲ್ಲಿ ಕಾಣಿಸಲಿದ್ದೇನೆ’ ಎನ್ನುತ್ತಾರೆ ನಿಶ್ವಿಕಾ. ಗುಬ್ಬಿ ರವಿವರ್ಮ ನಿರ್ದೇಶನದ ‘ವಿಚಿತ್ರ ಪ್ರೇಮಕಥೆ’ಯಲ್ಲಿ ಚಂದನ್ ಶೆಟ್ಟಿಗೆ ಜೋಡಿಯಾಗಿ ಕಾಣಿಸಿಕೊಂಡಿರುವ ನಿಶ್ವಿತಾ, ಅಜಿತ್​ವಾಸನ್ ನಿರ್ದೇಶನದ ‘ವಾಸು..’ ಚಿತ್ರದಲ್ಲಿ ಅನೀಶ್ ತೇಜೇಶ್ವರ್​ಗೆ ನಾಯಕಿಯಾಗಿ ನಟಿಸಿದ್ದಾರೆ. ‘ವಾಸು..’ಗೆ ಶೇ. 10 ಭಾಗ ಶೂಟಿಂಗ್ ಬಾಕಿ ಇದೆ. ಇನ್ನು ಚಂದನ್ ಶೆಟ್ಟಿ ‘ಬಿಗ್ ಬಾಸ್’ನಲ್ಲಿ ಬಿಜಿ ಇರುವುದ ರಿಂದ ಅವರು ಅಲ್ಲಿಂದ ಮರಳಿದ ಬಳಿಕ ‘ವಿಚಿತ್ರ ಪ್ರೇಮಕಥೆ’ ಮುಂದುವರಿಯಲಿದೆ’ ಎನ್ನುತ್ತಾರೆ ನಿಶ್ವಿಕಾ.

Leave a Reply

Your email address will not be published. Required fields are marked *

Back To Top