Thursday, 18th January 2018  

Vijayavani

ಹಿರಿಯ ನಟ ನಿರ್ದೇಶಕ ಕಾಶಿನಾಥ್ ಇನ್ನಿಲ್ಲ - ಬೆಂಗಳೂರಿನ ಶಂಕರ ಕ್ಯಾನ್ಸರ್​ ಆಸ್ಪ್ರೆಯಲ್ಲಿ ಕೊನೆಯುಸಿರು- ಕಳಚಿದ ಅನುಭವದ ಕೊಂಡಿ        ಡೈರೆಕ್ಟರ್​ ಎಪಿ ಅರ್ಜುನ್​ ಕಚೇರಿಯಲ್ಲಿ ಕಳ್ಳತನ - ಯಶ್​ ಬರ್ತಡೇ ದಿನ ಕೃತ್ಯ - ಮಾಜಿ ಕಾರು ಡ್ರೈವರ್ ವಿರುದ್ಧ ಅನುಮಾನದ ಹುತ್ತ         ಒಂಟಿ ಮಹಿಳೆಗೆ ಜಡೆ ಹಿಡಿದು ಥಳಿತ - ಕೊಪ್ಪಳ ಬಸ್​ಸ್ಟಾಪ್​ನಲ್ಲಿ ಪುರುಷರ ಅಟ್ಟಹಾಸ - ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್         ನೈಂಟಿ ಕೊಡ್ತೇವೆ ಅಂತ ಹರಕೆ ಹೊರ್ತಾರೆ ಭಕ್ತರು - ದೇವರ ಹೆಸರಲ್ಲಿ ಸಾಮೂಹಿಕ ಮದ್ಯಾರಾಧನೆ - ಕುಣಿಗಲ್‍ನ ಒಡೇಭೈರವನಿಗೆ ಬ್ರಾಂದಿ ವಿಸ್ಕಿಯೇ ನೈವೇದ್ಯ        ಕೃಷ್ಣನಗರಿಯಲ್ಲಿ ಪರ್ಯಾಯ ಸಂಭ್ರಮ - ಕೃಷ್ಣಪೂಜೆ ನೆರವೇರಿಸಿದ ಪಲಿಮಾರು ಶ್ರೀಗಳು - ಅದ್ಧೂರಿಯಿಂದ ಸರ್ವಜ್ಞ ಪೀಠಾರೋಹಣ       
Breaking News :

ನಿವೃತ್ತಿ ಖಚಿತಪಡಿಸಿದ ವೇಗಿ ಆಶಿಶ್ ನೆಹ್ರಾ

Friday, 13.10.2017, 3:00 AM       No Comments

ಹೈದರಾಬಾದ್: ಪ್ರವಾಸಿ ನ್ಯೂಜಿಲೆಂಡ್ ತಂಡದ ವಿರುದ್ಧ ಫಿರೋಜ್ ಷಾ ಕೋಟ್ಲಾದಲ್ಲಿ ನ.1 ರಂದು ನಡೆಯಲಿರುವ ಮೊದಲ ಟಿ20 ಪಂದ್ಯದೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಲಿದ್ದೇನೆ ಎಂದು ಸ್ವತಃ ವೇಗಿ ಆಶಿಶ್ ನೆಹ್ರಾ ಖಚಿತಪಡಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ನೆಹ್ರಾ ನಿವೃತ್ತಿ ಸುದ್ದಿಯಲ್ಲಿದ್ದರೂ, ಇದಕ್ಕೆ ನೆಹ್ರಾ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ, ಆಸ್ಟ್ರೇಲಿಯಾ ವಿರುದ್ಧ ಅಂತಿಮ ಟಿ20 ಪಂದ್ಯಕ್ಕಾಗಿ ಭಾರತ ತಂಡ ಹೈದರಾಬಾದ್​ಗೆ ಆಗಮಿಸಿದ್ದ ವೇಳೆ ಈ ವಿಷಯವನ್ನು ಧೃಡಪಡಿಸಿದ್ದಾರೆ.

‘ಆಶಿಶ್ ನೆಹ್ರಾ ತಂಡದಲ್ಲಿ ಯಾಕೆ ಇರಬಾರದು ಎನ್ನುವ ಬದಲು ಯಾಕೆ ಇದ್ದಾರೆ ಎಂದು ಜನ ಪ್ರಶ್ನಿಸುವ ಮುನ್ನ ನಿವೃತ್ತಿ ಆದರೆ ಒಳ್ಳೆಯದು’ ಎಂದು 38 ವರ್ಷದ ವೇಗಿ ತಿಳಿಸಿದ್ದಾರೆ. ಟೀಮ್ ಮ್ಯಾನೇಜ್​ವೆುಂಟ್ ಹಾಗೂ ಆಯ್ಕೆ ಸಮಿತಿ ಸದಸ್ಯರೊಂದಿಗೂ ಈ ಬಗ್ಗೆ ಮಾತನಾಡಿದ್ದು. ದೆಹಲಿಯಲ್ಲಿ ನಡೆಯಲಿರುವ ಪಂದ್ಯ ನನ್ನ ಕೊನೆಯ ವೃತ್ತಿಪರ ಪಂದ್ಯವಾಗಿರಲಿದೆ. ತವರಿನ ಅಭಿಮಾನಿಗಳ ಮುಂದೆ ನಿವೃತ್ತಿಯಾಗುವುದಕ್ಕಿಂತ ವಿಶೇಷ ಕ್ಷಣ ಇನ್ನೊಂದಿಲ್ಲ. ಇದೇ ಮೈದಾನದಲ್ಲಿ 20 ವರ್ಷಗಳ ಹಿಂದೆ ಮೊದಲ ರಣಜಿ ಪಂದ್ಯವಾಡಿದ್ದೆ‘ ಎಂದು ನೆಹ್ರಾ ಸ್ಮರಿಸಿಕೊಂಡರು.

ಆಸ್ಟ್ರೇಲಿಯಾ ವಿರುದ್ಧ ಸರಣಿಯ ಎಲ್ಲ ಪಂದ್ಯಗಳನ್ನು ಆಡಬೇಕು ಎನ್ನುವ ಮನಸ್ಥಿತಿಯಲ್ಲಿ ನಾನು ಬಂದಿದ್ದೆ. ಆದರೆ, ಯುವ ತಂಡ ಜವಾಬ್ದಾರಿ ಹೊರಲು ಸಿದ್ಧವಾಗಿರುವಂತೆ ಕಂಡಿದ್ದು ನನ್ನ ನಿವೃತ್ತಿಗೆ ಸಕಾಲ ಎಂದು ಭಾವಿಸಿದ್ದಾಗಿ ಹೇಳಿದ್ದಾರೆ.-ಪಿಟಿಐ

Leave a Reply

Your email address will not be published. Required fields are marked *

Back To Top