Friday, 20th April 2018  

Vijayavani

ಬಾದಾಮಿಯಿಂದ ಸ್ಪರ್ಧೆ ವಿಚಾರದಲ್ಲಿ ದ್ವಂದ್ವ- ಸ್ಪರ್ಧೆ ಬಗ್ಗೆ ಸ್ಪಷ್ಟವಾಗಿ ಹೇಳದ ಸಿಎಂ- ಹೈಕಮಾಂಡ್​ ನಿರ್ಧಾರ ಅಂತಿಮ        ಉಲ್ಟಾ ಹೊಡೆದ ಸಿಎಂ ಪುತ್ರ ಯತೀಂದ್ರ- ತಂದೆಯ ಬಾದಾಮಿ ಸ್ಪರ್ಧೆ ಪೋಸ್ಟ್​​​ ಡಿಲೀಟ್​​ - ಏ.23 ಕ್ಕೆ ನಾಮಪತ್ರ ಎಂದಿದ್ದ ಯತೀಂದ್ರ        ಜಗಳೂರು ಟಿಕೆಟ್​ ವಂಚಿತೆ ಆಸ್ಪತ್ರೆಗೆ ದಾಖಲು- ಟಿಕೆಟ್​​ ಕೊಟ್ಟು ಕಸಿದಿದ್ದರಿಂದ ನೊಂದಿದ್ದ ಪುಷ್ಪಾ- ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ        ಕಾಂಗ್ರೆಸ್​ನಲ್ಲಿ ಆಗಿದೆಯಂತೇ ಕೋಟಿ ಕೋಟಿ ಡೀಲ್​- ಕೆಪಿಸಿಸಿ ಅಧ್ಯಕ್ಷರಿಂದಲೇ ಟಿಕೆಟ್​ ಸೇಲ್​- ಛಲವಾದಿ ನಾರಾಯಣಸ್ವಾಮಿ ಹೊಸ ಬಾಂಬ್​        ಕೋಲಾರದ ಮಾಲೂರಿನಲ್ಲಿ ವೈದ್ಯರ ಎಡವಟ್ಟು- ಮಗುವಿನ ದೇಹದಲ್ಲೇ ಸೂಜಿ ಬಿಟ್ಟ ಡಾಕ್ಟರ್​- ಏಳು ದಿನದ ಬಳಿಕ ಮಗು ಸಾವು        ನರೋಡಾ ಪಾಟೀಯಾ ಹತ್ಯಾಖಾಂಡ ಪ್ರಕರಣ- ಮಾಜಿ ಸಚಿವೆ ಮಾಯಾ ಕೊಡ್ನಾನಿ ನಿರ್ದೋಶಿ- ಗುಜರಾತ್​​ ಹೈಕೋರ್ಟ್​​ನಿಂದ ತೀರ್ಪು       
Breaking News

ನಿರ್ಮಾಣ ಕ್ಷೇತ್ರಕ್ಕೆ ಕೌಶಲಾಧರಿತ ಕಾರ್ವಿುಕರು

Saturday, 14.01.2017, 4:00 AM       No Comments

| ಹೊಸಹಟ್ಟಿ ಕುಮಾರ ಬೆಂಗಳೂರು

ಯಾವ ಕ್ಷೇತ್ರವಾದರೂ ಸರಿ… ಅಲ್ಲಿ ಪರಿಣಿತ ಉದ್ಯೋಗಿ ಮತ್ತು ಕಾರ್ವಿುಕರ ಅಗತ್ಯ ಇದ್ದೇ ಇರುತ್ತದೆ. ಇದಕ್ಕೆ ರಿಯಲ್ ಎಸ್ಟೇಟ್ ಉದ್ಯಮವೂ ಹೊರತಾಗಿಲ್ಲ. ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಕೌಶಲಯುಕ್ತ ಕಾರ್ವಿುಕರಿಗೆ ಬೇಡಿಕೆ ಕಡಿಮೆಯಾಗಿಲ್ಲ.

ನಿರ್ಮಾಣ ಹಾಗೂ ರಿಯಾಲ್ಟಿ ಕ್ಷೇತ್ರದಲ್ಲಿ ಆಧುನಿಕತೆಯ ಬಿರುಗಾಳಿ ಬೀಸುತ್ತಿದೆ. ನಿವೇಶನ ಅಭಿವೃದ್ಧಿ, ಮನೆ ನಿರ್ವಣ, ಮನೆ ವಿನ್ಯಾಸ, ಒಳಾಂಗಣ ಹಾಗೂ ಹೊರಾಂಗಣ ವಿನ್ಯಾಸಗಳು ಸೇರಿ ಎಲ್ಲ ವಿಭಾಗಗಳೂ ಈಗ ಕೌಶಲಾಧರಿತ ವಾಗಿವೆ. ಇದರಿಂದ ಕ್ಷೇತ್ರಕ್ಕೆ ಉತ್ತಮ ಕೌಶಲ ಇರುವ ಕಾರ್ವಿುಕರ ಅಗತ್ಯತೆ ಹಿಂದಿಗಿಂತ ಇಂದು ಹೆಚ್ಚಾಗಿದೆ.

2022ರ ವೇಳೆಗೆ ನಿರ್ಮಾಣ ಕ್ಷೇತ್ರಕ್ಕೆ ಹೆಚ್ಚುವರಿಯಾಗಿ ಸುಮಾರು 31.1 ದಶಲಕ್ಷ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ 14 ದಶ ಲಕ್ಷ ಕೌಶಲಾಧರಿತ ಕಾರ್ವಿುಕರ ಅಗತ್ಯ ಇದೆ ಎಂದು ರಾಷ್ಟ್ರೀಯ ಕೌಶಲ ಅಭಿವೃದ್ಧಿ ಮಂಡಳಿ ತಿಳಿಸಿದೆ. ಸದ್ಯ ಕ್ಷೇತ್ರದಲ್ಲಿ 38.3 ದಶಲಕ್ಷ ಕಾರ್ವಿುಕರು ಇದ್ದು, ಇವರಲ್ಲಿ 10ನೇ ತರಗತಿ ಕಲಿತವರು ಹಾಗೂ ಅದಕ್ಕಿಂತ ಕಡಿಮೆ ವಿದ್ಯಾರ್ಹತೆ ಹೊಂದಿದವರೇ ಹೆಚ್ಚು. ಇವರಲ್ಲಿ ಶೇ.80 ಮಂದಿಗೆ ಕೌಶಲ ತರಬೇತಿ ಇಲ್ಲ. ಸದ್ಯ ಶೇ. 1ರಿಂದ 3 ಮಾತ್ರ ಕೌಶಲ ತರಬೇತಿ ಹೊಂದಿದ್ದಾರೆ. ಹೀಗಾಗಿ, ಕ್ಷೇತ್ರಕ್ಕೆ ಭವಿಷ್ಯದಲ್ಲಿ ಹೆಚ್ಚು ಮಂದಿ ತರಬೇತಿ ಹೊಂದಿದ ಕಾರ್ವಿುಕರ ಅಗತ್ಯ ಇದೆ ಎಂದು ವರದಿ ಹೇಳಿದೆ.

ನಿರ್ಮಾಣ ಕ್ಷೇತ್ರದ ಪ್ರಮುಖ ಉದ್ಯೋಗಗಳಾದ ಬಡಗಿ, ಕಲ್ಲು ಕೆತ್ತನೆ, ಮರಗೆಲಸ ಸೇರಿ ವಿವಿಧ ಕೆಲಸಗಳು ಇವೆ. ಇವುಗಳಲ್ಲಿ ವೃತ್ತಿ ನೈಪುಣ್ಯ ಹೊಂದಿರುವವರ ಸಂಖ್ಯೆ ಕಡಿಮೆಯಾಗಿದೆ.

ರಿಯಾಲ್ಟಿ ಹಾಗೂ ನಿರ್ಮಾಣ ಕ್ಷೇತ್ರ ಎದುರಿಸುತ್ತಿರುವ ಕೌಶಲಾಧರಿತ ಕಾರ್ವಿುಕರ ಕೊರತೆಯನ್ನು ನೀಗಿಸಲು ಕೇಂದ್ರ ಸರ್ಕಾರದ ಕಾರ್ವಿುಕ ಇಲಾಖೆಯ ತರಬೇತಿ ವಿಭಾಗದ ಉದ್ಯೋಗ ಹಾಗೂ ತರಬೇತಿ ನಿರ್ದೇಶನಾಲಯ ಮುಂದಾಗಿದ್ದು, ಬೆಂಗಳೂರು ಕ್ರೆಡಾಯ್ ಜತೆ ಸೇರಿ ತರಬೇತಿ ನೀಡುವ ಯೋಜನೆ ರೂಪಿಸಿದೆ. ತರಬೇತಿಯ ಸಂಪೂರ್ಣ ಜವಾಬ್ದಾರಿಯನ್ನು ಕ್ರೆಡಾಯ್ಗೆ ವಹಿಸಲಾಗಿದ್ದು, ಸಂಸ್ಥೆ ತರಬೇತಿಗಾಗಿ ನಾಲ್ಕು ಏಜೆನ್ಸಿಗಳನ್ನು ನೇಮಕ ಮಾಡಿದೆ. ಅಲ್ಲದೆ, ಪ್ರಧಾನಮಂತ್ರಿಗಳ ಕೌಶಲ ವಿಕಾಸ ಯೋಜನೆ-2 (ಪಿಎಂಕೆವಿವೈ-2) ಅಡಿ 25 ಸಾವಿರ ಕಾರ್ವಿುಕರಿಗೆ ತರಬೇತಿ ನೀಡುವ ಯೋಜನೆ ಕೂಡ ತಯಾರಾಗಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ 1 ಲಕ್ಷ ಕಾರ್ವಿುಕರಿಗೆ ಕೌಶಲಾಧರಿತ ತರಬೇತಿ ನೀಡಿ ಕ್ಷೇತ್ರಕ್ಕೆ ಪರಿಚಯಿಸುವ ಯೋಜನೆ ಇದಾಗಿದೆ.

 ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ ಬಿಲ್ಡರ್​ಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕ್ರೆಡಾಯ್ನ ಎಲ್ಲ ಚಾಪ್ಟರ್​ಗಳಲ್ಲಿ ರಾಜ್ಯಮಟ್ಟದ ಪ್ರಾತ್ಯಕ್ಷಿಕೆ ನೀಡಲಾಗುತ್ತದೆ.

| ಸುರೇಶ್ ಹರಿ, ಕ್ರೆಡಾಯ್ ಬೆಂಗಳೂರು ಕಾರ್ಯದರ್ಶಿ

 

 ಬಿಲ್ಡರ್​ಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಕಾರ್ವಿುಕರಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡರೆ ಕ್ಷೇತ್ರವನ್ನು ಇನ್ನಷ್ಟು ಉತ್ತೇಜಿಸಬಹುದು. ಇದರ ಲಾಭ ಬಿಲ್ಡರ್ ಹಾಗೂ ಗ್ರಾಹಕರಿಗೆ ಸಿಗುತ್ತದೆ.

| ಜೆ.ಸಿ.ಶರ್ವ, ಕ್ರೆಡಾಯ್ ಬೆಂಗಳೂರು ಅಧ್ಯಕ್ಷ.

Leave a Reply

Your email address will not be published. Required fields are marked *

Back To Top