Thursday, 21st June 2018  

Vijayavani

ಮೈತ್ರಿ ಸರ್ಕಾರದಲ್ಲಿ ಮತ್ತೆ ತಾರತಮ್ಯತೆ - ರೇವಣ್ಣ ಕಾರ್​​​ಗೆ ಗೇಟ್​​ ಓಪನ್​​, ದೇಶಪಾಂಡೆಗೆ ನಟರಾಜ ಸರ್ವಿಸ್​​        ಅಂದು ಹೇಳಿದ್ದೊಂದು.. ಇಂದು ಮಾಡಿದ್ದೊಂದು - ಸಂಡೂರಿನಲ್ಲಿ ಕೊಟ್ಟು ಮಾತು ಮರೆತ ಸಿಎಂ - ಮತ್ತೆ ಗಣಿಗಾರಿಕೆಗೆ ಅವಕಾಶ        ಡಿಕೆಶಿ ಡೈರಿಯಲ್ಲಿ ಕೆಜಿ ಕೋಡ್​ ವಿಚಾರ - ದೆಹಲಿಯಿಂದ ಆಗಮಿಸಿದ ಇಡಿ ತಂಡ - ಡಿಕೆಶಿ ಸೇರಿ ಐವರು ವಿರುದ್ಧ ಇಡಿ FIR ಸಾಧ್ಯತೆ        ಶಕ್ತಿ ಭವನದಲ್ಲಿ ಬಜೆಟ್​​​ ಪೂರ್ವಭಾಗಿ ಸಭೆ - ಸಣ್ಣ ನೀರಾವರಿ ಇಲಾಖೆ ಜತೆ ಸಿಎಂ ಚರ್ಚೆ - ಅನುದಾನ ಭರವಸೆ ನೀಡಿದ ಎಚ್​ಡಿಕೆ        ಬಿಜಿಎಸ್​ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಚಿಕಿತ್ಸೆ - ನಡೆದಾಡುವ ದೇವರ ಕಾಣಲು ಗಣ್ಯರ ದಂಡು - ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​​ವೈ        ಜಿಲ್ಲಾಸ್ಪತ್ರೆಯಲ್ಲಿ ಅನಾಥವಾಯ್ತು ಕಂದಮ್ಮ - ಶಸ್ತ್ರಚಿಕಿತ್ಸೆಗೆ ಬಂದು ಮಗು ಬಿಟ್ಟೋದ ಹೆತ್ತಮ್ಮ - ರೋಧಿಸುತ್ತಿದೆ 3 ತಿಂಗಳ ಕೂಸು       
Breaking News

ನಿರ್ಮಲ ಇದು ಮಕ್ಕಳ ಸೈನ್ಯ

Friday, 08.06.2018, 3:01 AM       No Comments

ಒಂಭತ್ತನೇ ತರಗತಿ ಓದುತ್ತಿರುವ ಲೋಹಿತ್ ಚಿತ್ರದ ನಿರ್ದೇಶಕ. ಮತ್ತೋರ್ವ ಪುಟಾಣಿ ಲೋಹಿತ್ ಚಂದ್ರಗೆ ಸಂಕಲನದ ಹೊಣೆ, ಪಿಯುಸಿ ಕಲಿಯುತ್ತಿರುವ ಸುವರ್ಣಶ್ರೀ ಸಂಗೀತ ನಿರ್ದೇಶಕಿ, 6ನೇ ತರಗತಿಯ ಪುಣ್ಯಶ್ರೀ ವಸ್ತ್ರ ವಿನ್ಯಾಸಕಿ. 9ನೇ ಕ್ಲಾಸ್​ನ ಅಂಕಿತಾ ಪೋಸ್ಟರ್ ಡಿಸೈನರ್, ಭಾವನಾ ನೃತ್ಯ ನಿರ್ದೇಶಕಿ. ಆರ್ಯನ್ ಮತ್ತು ಮಿಥಿಲೇಶ್ ಕಲಾ ನಿರ್ದೇಶಕರು… ಹೀಗೊಂದು ಪುಟಾಣಿ ಸೈನ್ಯವನ್ನೇ ಕಟ್ಟಿಕೊಂಡು ‘ನಿರ್ಮಲ‘ ಶೀರ್ಷಿಕೆಯ ಸಿನಿಮಾ ಮಾಡಲು ಹೊರಟವರು ನಿರ್ವಪಕ ಉಲ್ಲಾಸ್.

ನಿರ್ವಪಕ ಬಾ.ಮಾ. ಹರೀಶ್​ಗೆ ಈಗಾಗಲೇ ಕನ್ನಡದಲ್ಲಿ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ ಅನುಭವವಿದೆ. ಇದೀಗ ‘ನಿರ್ಮಲ’ ಚಿತ್ರಕ್ಕೆ ಅವರ ಪುತ್ರ ಉಲ್ಲಾಸ್ ನಿರ್ವಪಕರಾಗಿದ್ದಾರೆ. ಅವರಿಗೆ ಸಾಥ್ ನೀಡಲು ‘ಹರಿವು’, ‘ಆ ಕರಾಳ ರಾತ್ರಿ’ ಚಿತ್ರಗಳಿಗೆ ಬಂಡವಾಳ ಹೂಡಿದ್ದ ಅವಿನಾಶ್ ಶೆಟ್ಟಿ ಸಹ ಕೈ ಜೋಡಿಸಿದ್ದಾರೆ. ಇತ್ತೀಚಿಗೆ ವಿಜಯನಗರದ ಕೇಂಬ್ರಿಡ್ಜ್ ಶಾಲೆಯ ಸಾವಿರಾರು ಮಕ್ಕಳ ಸಮ್ಮುಖದಲ್ಲಿ ‘ರಾಕಿಂಗ್ ಸ್ಟಾರ್’ ಯಶ್ ಚಿತ್ರಕ್ಕೆ ಕ್ಲಾಪ್ ಮಾಡಿ ಚಾಲನೆ ನೀಡಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಮಕ್ಕಳ ಸಾಹಸಕ್ಕೆ ಅಭಿನಂದಿಸಿದರು.

10ರಿಂದ 17 ವರ್ಷದೊಳಗಿನ ಮಕ್ಕಳೇ ಒಂದಿಡಿ ಸಿನಿಮಾವನ್ನು ನಿಭಾಯಿಸುವುದು ತುಂಬ ಕಷ್ಟ. ಅದನ್ನು ಅವರಿಂದಲೇ ಮಾಡಿಸಬೇಕೆಂಬುದು ಉಲ್ಲಾಸ್ ಅವರ ಅಭಿಪ್ರಾಯ. ‘ಇಡೀ ಚಿತ್ರದ ಎಲ್ಲ ಜವಾಬ್ದಾರಿಯನ್ನು ಮಕ್ಕಳೇ ಹೊರಲಿದ್ದಾರೆ. ಅವರೊಟ್ಟಿಗೆ ಪ್ರೊಡಕ್ಷನ್ ಕೆಲಸಗಳಲ್ಲಿ ನಮ್ಮ ಇಡೀ ತಂಡವಿರುತ್ತದೆ. ಅವರಿಗೆ ಯಾವುದೇ ಸಮಸ್ಯೆ ಆಗದಂತೆ ಅವರ ಪ್ರತಿಭೆ ಪ್ರದರ್ಶನಕ್ಕೆ ಒಂದು ವೇದಿಕೆ ಕಲ್ಪಿಸಿಕೊಟ್ಟಿದ್ದೇವೆ’ ಎನ್ನುತ್ತಾರೆ.

ವೆಂಕಾಗಿರಿ ಕಥೆ-ಚಿತ್ರಕಥೆ ಬರೆದಿದ್ದಾರೆ. ಪುಟಾಣಿ ಲೋಹಿತ್ ಸಿನಿಮಾ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು, ನಿರ್ದೇಶಕ ಪ್ರೀತಮ್ ಶೆಟ್ಟಿ ಬಳಿ ತರಬೇತಿ ಪಡೆದಿದ್ದಾರೆ. ‘ಉಲ್ಲಾಸ್ ಮಕ್ಕಳ ರಂಗಭೂಮಿ ಶಾಲೆಯಲ್ಲಿ ಕಳೆದ ಒಂದು ವರ್ಷದಿಂದ ತರಬೇತಿ ಪಡೆಯುತ್ತಿದ್ದೇನೆ. ಈಗಾಗಲೇ ಹಲವು ಕಿರುಚಿತ್ರಗಳಿಗೆ ನಿರ್ದೇಶನ ಮಾಡಿದ್ದೆ. ಇದೀಗ ಅದರ ಅನುಭವ ಇಟ್ಟುಕೊಂಡು ‘ನಿರ್ಮಲ’ ಸಿನಿಮಾ ನಿರ್ದೇಶನಕ್ಕಿಳಿದ್ದೇನೆ. ಇಡೀ ಸಿನಿಮಾ ಸಮಾಜಕ್ಕೆ ಸಂದೇಶ ನೀಡಲಿದೆ. ಚಿತ್ರದ ಹೆಸರು ‘ನಿರ್ಮಲ’ ಅಂತಿರುವುದರಿಂದ ಸ್ವಚ್ಛತೆ ಕುರಿತೇ ಸಿನಿಮಾ ಮಾಡುತ್ತಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ ಲೋಹಿತ್. ಚಿತ್ರದಲ್ಲಿ 50ಕ್ಕೂ ಅಧಿಕ ಮಕ್ಕಳು ನಟಿಸುತ್ತಿದ್ದು, ರಾಮನಗರದ ತೆಂಗಿನಕಲ್ಲು ಬಳಿ 30 ದಿನಗಳ ಕಾಲ ಚಿತ್ರೀಕರಣ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ಸಿನಿಮಾದ ಕೆಲ ವಿಭಾಗಗಳ ಉಸ್ತುವಾರಿ ವಹಿಸಿಕೊಂಡಿರುವ ಮಕ್ಕಳೆಲ್ಲ ಪರಿಣಿತರಿಂದ ತರಬೇತಿ ಪಡೆದುಕೊಂಡಿದ್ದು, ಇಡೀ ತಂಡದಲ್ಲಿ ಛಾಯಾಗ್ರಾಹಕ ಪವನ್ ಒಬ್ಬರೇ ಹಿರಿಯರು.

Leave a Reply

Your email address will not be published. Required fields are marked *

Back To Top