Friday, 20th April 2018  

Vijayavani

ಬಾದಾಮಿಯಿಂದ ಸ್ಪರ್ಧೆ ವಿಚಾರದಲ್ಲಿ ದ್ವಂದ್ವ- ಸ್ಪರ್ಧೆ ಬಗ್ಗೆ ಸ್ಪಷ್ಟವಾಗಿ ಹೇಳದ ಸಿಎಂ- ಹೈಕಮಾಂಡ್​ ನಿರ್ಧಾರ ಅಂತಿಮ        ಉಲ್ಟಾ ಹೊಡೆದ ಸಿಎಂ ಪುತ್ರ ಯತೀಂದ್ರ- ತಂದೆಯ ಬಾದಾಮಿ ಸ್ಪರ್ಧೆ ಪೋಸ್ಟ್​​​ ಡಿಲೀಟ್​​ - ಏ.23 ಕ್ಕೆ ನಾಮಪತ್ರ ಎಂದಿದ್ದ ಯತೀಂದ್ರ        ಜಗಳೂರು ಟಿಕೆಟ್​ ವಂಚಿತೆ ಆಸ್ಪತ್ರೆಗೆ ದಾಖಲು- ಟಿಕೆಟ್​​ ಕೊಟ್ಟು ಕಸಿದಿದ್ದರಿಂದ ನೊಂದಿದ್ದ ಪುಷ್ಪಾ- ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ        ಕಾಂಗ್ರೆಸ್​ನಲ್ಲಿ ಆಗಿದೆಯಂತೇ ಕೋಟಿ ಕೋಟಿ ಡೀಲ್​- ಕೆಪಿಸಿಸಿ ಅಧ್ಯಕ್ಷರಿಂದಲೇ ಟಿಕೆಟ್​ ಸೇಲ್​- ಛಲವಾದಿ ನಾರಾಯಣಸ್ವಾಮಿ ಹೊಸ ಬಾಂಬ್​        ಕೋಲಾರದ ಮಾಲೂರಿನಲ್ಲಿ ವೈದ್ಯರ ಎಡವಟ್ಟು- ಮಗುವಿನ ದೇಹದಲ್ಲೇ ಸೂಜಿ ಬಿಟ್ಟ ಡಾಕ್ಟರ್​- ಏಳು ದಿನದ ಬಳಿಕ ಮಗು ಸಾವು        ನರೋಡಾ ಪಾಟೀಯಾ ಹತ್ಯಾಖಾಂಡ ಪ್ರಕರಣ- ಮಾಜಿ ಸಚಿವೆ ಮಾಯಾ ಕೊಡ್ನಾನಿ ನಿರ್ದೋಶಿ- ಗುಜರಾತ್​​ ಹೈಕೋರ್ಟ್​​ನಿಂದ ತೀರ್ಪು       
Breaking News

ನಿಮ್ಮಿಂದ ಅಚ್ಛೇದಿನ್ ಬರುತ್ತಾ ರಾಹುಲ್​ಜೀ

Friday, 13.01.2017, 7:09 AM       No Comments

ರಾಹುಲರೇ, ಬನ್ನಿ ತಮ್ಮ ಪಕ್ಷದ ಆಗುಹೋಗುಗಳ ಮೇಲೆ ಪಕ್ಷಿನೋಟ ಬೀರೋಣ. 1947-56ರ ಅವಧಿಯಲ್ಲಿ ಹಳ್ಳಿಗಳೇ ಹೆಚ್ಚಾಗಿದ್ದ ನಾಡನ್ನು ಕೈಗಾರಿಕಾ ನಾಡನ್ನಾಗಿಸಲೆತ್ನಿಸಿ ದೇಶಕ್ಕೆ ಹಿಂಜರಿತವೊಡ್ಡಿದಿರಿ. ಆಗ ಅಚ್ಛೇದಿನ್ ಕಾಣಲಿಲ್ಲ. 1957-66ರ ಅವಧಿಯಲ್ಲಿ ಮ್ಯಾಕ್​ವೋಹನ್ ಲೈನನ್ನು ಎಳೆದು ಚೀನಾಗೆ ಜಾಗವನ್ನು ದಾನವಾಗಿ ಬಿಟ್ಟುಕೊಟ್ಟದ್ದು ತಮ್ಮ ಅಚ್ಚೇ ಪಕ್ಷವೇ. ಸಿಯಾಚಿನ್​ನಲ್ಲಿ ಬಂದೂಕಕ್ಕೆ ಗುಂಡು ಕೊಡದೆ, ಕುಳಿತಲ್ಲೇ ಗುಂಡೇರಿಸಿ ಮೋಜುಮಸ್ತಿಯಲ್ಲಿ ಮೆರೆದದ್ದು ತಮ್ಮದೇ ಪಕ್ಷ. ನೆಹರೂ ನಂತರ ಶಾಸ್ತ್ರೀಜಿ ಅವಧಿ ಅವಧಿಯಲ್ಲಿ ಕೊಂಚ ಅಚ್ಚೇದಿನ್ ಇದ್ದದ್ದು ನಿಜ. ಶಾಸ್ತ್ರೀಜೀ ನಿಧನಾನಂತರ ಪುರಾಯಾನ್ ಮಹಾ ದುರ್ವಿಧಿಃ! 1967-77ರ ಅವಧಿಯಲ್ಲಿ ಪಾಕ್ ವಿರುದ್ಧ ಗೆಲುವು ಸಾಧಿಸಿದ ಹಿನ್ನೆಲೆಯಲ್ಲೇ ಯುದ್ಧಸಮಯದಲ್ಲಿ ಕಾಳಸಂತೆಯ ವಿರಾಟರೂಪವೂ ಎದ್ದು ಕುಣಿಯಿತು. 1975ರಲ್ಲಿ ಕೈ ಹೋಯಿತೆಂದು ಭಾವಿಸಿದೆವು. ಆದರೆ ಮೂರೇ ವರ್ಷದಲ್ಲಿ ಮತ್ತೆ ಕೈ ಪಕ್ಷದ್ದೇ ಕೈವಾಡ. 1980-89ರ ಅವಧಿಯ ಪೂರ್ವಾರ್ಧದ ಇಂದಿರಾಜೀಯ ಆಡಳಿತಕಾಲದಲ್ಲೇ ಪಂಜಾಬ್ ಸಮಸ್ಯೆ ಉಲ್ಬಣಿಸಿದ್ದು, ಬೋಡೋ ಸಮಸ್ಯೆಯ ಅಂಕುರವಾಗಿದ್ದು; ಅರಸು ಅವರ ವಿರೋಧಿಯಾಗಿದ್ದರಿಂದ ಕಾಂಗ್ರೆಸ್ ವಿಭಜನೆಯಾದದ್ದು. ಉತ್ತರಾರ್ಧದ ರಾಜೀವರ ಕಾಲದಲ್ಲಿ ಕೊಂಚ ಅಚ್ಛೇದಿನ್ ಆಶಯವಿತ್ತು. ಮುದುಕರ ಆಡಳಿತಕ್ಕೇ ಒಗ್ಗಿದ್ದ ಭಾರತಕ್ಕೆ ರಾಜೀವರ ಹುಮ್ಮಸ್ಸಿನ ಮುಖ ಕಳೆತಂದಿತ್ತು. ಆದರೆ 1989ರಿಂದ 1991ರ ಅವಧಿಯಲ್ಲಿ ಅವರಿವರನ್ನು ಕೂಡಿಸಿ ಕಾಲೆಳೆಯುವುದರ ಮೂಲಕ ದೇಶಕ್ಕೆ ಮತ್ತೆ ಮತ್ತೆ ಸಂಕಷ್ಟ ನೀಡಿದರು. ಇದ್ದುದರಲ್ಲಿ ರಾಜೀವರ ನಂತರದ 1991-96ರವರೆಗಿನ ಸರಸಿಂಹರಾವ್ ಕಾಲವೇ ತಮ್ಮ ಪಕ್ಷದ ಪರ್ವಕಾಲ. ಆಗಲೂ ಕೋಮುಗಲಭೆ, ಭಯೋತ್ಪಾದನೆಗಳು ಉತ್ತುಂಗದಲ್ಲಿದ್ದವು. 1998ರಿಂದ 2004ರವರೆಗೆ ಕೈ ಪಕ್ಷ ವಾಜಪೇಯಿಗೆ ಎಷ್ಟು ಸಾಧ್ಯವೋ ಅಷ್ಟು ಕಾಟ ಕೊಡಲು ಯತ್ನಿಸಿತು. 2004-2014ರ ಅವಧಿ ತಮ್ಮ ಪಕ್ಷದ ಭ್ರಷ್ಟಾಚಾರ ಸಂಪ್ರದಾಯಕ್ಕೆ ಪರ್ವಕಾಲ; 2ಜಿ, 3ಜಿ, ಸಿಡಬ್ಲೂ್ಯಜಿ, ಹೆಲಿಕಾಪ್ಟರ್… ಹಗರಣಗಳ ಸಾಲೇ ತೆರೆದಿಟ್ಟಿರಿ. ಅಚ್ಛೇದಿನ್ ಎಂದೂ ದೇಶಕ್ಕೆ ಬರಲೇ ಇಲ್ಲ. ತಮ್ಮ ತಿಜೋರಿಗೆ ಮಾತ್ರ ಎಂದೂ ಅಚ್ಛೇದಿನ್ ತಪ್ಪಲೇ ಇಲ್ಲ. ಈಗ, ತಮ್ಮೆಲ್ಲ ಪೂರ್ವಜರ ಮುಂದೆ ತೃಣಸಮಾನರಾದ ತಮ್ಮಿಂದ ದೇಶಕ್ಕೆ ಅಚ್ಛೇದಿನ್ ಬರುವುದೇನು? ಗುಡ್ ಜೋಕ್ ರಾಹುಲ್​ಜೀ.

ಲಾಸ್ಟ್​ಲೈನ್: ಭರತನಿಂದ ಭಾರತ ಎಂದರೆ ಕೇಸರೀಕರಣವಾದರೆ ಚಂದ್ರ, ರಾಮ ಎನ್ನುವುದೂ ಕೇಸರೀಕರಣವೇ ಅಲ್ಲವೆ? ಪರಿಷ್ಕರಣೆ ಮಾಡಬೇಕು!

 

Leave a Reply

Your email address will not be published. Required fields are marked *

Back To Top