Friday, 20th July 2018  

Vijayavani

ಶೀರೂರು ಶ್ರೀಗಳ ಸಾವು ಕೊಲೆಯಲ್ಲ - ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು - ಉಡುಪಿಯಲ್ಲಿ ಪೇಜಾವರ ಶ್ರೀ ಸ್ಪಷ್ಟನೆ        ರಾಹುಲ್‌ ಅಪ್ಪುಗೆಗೆ ಬಿಜೆಪಿ ಸಿಡಿಮಿಡಿ - ಸದನದಲ್ಲಿನ ವರ್ತನೆ ಬಗ್ಗೆ ಕೋಪ - ರಾಹುಲ್‌ಗೆ ಸ್ಪೀಕರ್‌ ನೀತಿಪಾಠ        ಭಾಷಣಕ್ಕಿಂತ ರಾಹುಲ್‌ ಕಣ್ಣೇಟು ಫೇಮಸ್‌ - ಪ್ರಿಯಾ ವಾರಿಯರ್‌ ವಿಡಿಯೋಗೆ ಲಿಂಕ್‌ - ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ವೈರಲ್‌        ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ - ಕಾವೇರಿಗೆ ಮುಖ್ಯಮಂತ್ರಿ ದಂಪತಿಯಿಂದ ಪೂಜೆ - ಸಚಿವ ಡಿಕೆಶಿ, ಮಹೇಶ್‌ ಸಾಥ್‌        ಸಿಬ್ಬಂದಿ ಒತ್ತಾಯದಿಂದ ಅಲ್ಲಿಗೆ ಹೋಗಿದ್ದೆ - ಮೊಗಸಾಲೆಯಲ್ಲಿ ಬರ್ತಡೇ ಪಾರ್ಟಿ ತಪ್ಪು - ಕ್ಷಮೆ ಕೋರಿದ ವಿಧಾನಸಭೆ ಕಾರ್ಯದರ್ಶಿ        ನಿನ್ನೆ ಬೌಬೌ ಬಿರಿಯಾನಿ - ಇಂದು ಮಿಯಾಂವ್‌ ಮಿಯಾಂವ್‌ ಮಸಾಲ - ಬೆಂಗಳೂರಿನ ವಿಜಯನಗರದಲ್ಲಿ ಬೆಕ್ಕು ನಾಯಿ ಭಕ್ಷ       
Breaking News

ನಿಧಾನವೇ ಪ್ರಧಾನ ಅದೇ ಸೇಫು ಪ್ರಯಾಣ!

Thursday, 09.02.2017, 5:00 AM       No Comments

ಇಂದಿನ ಧಾವಂತದ ಬದುಕಿನಲ್ಲಿ ನಿಧಾನಗತಿಗೂ ಒಂದಿಷ್ಟು ಪ್ರಾಶಸ್ಱ ಕೊಡಲೇಬೇಕು. ಹೆಚ್ಚುತ್ತಿರುವ ಒತ್ತಡ, ಖಿನ್ನತೆಯಿಂದ ದೂರವಿದ್ದು ಸದಾ ಸಂತೋಷವನ್ನು ಕಾಪಿಟ್ಟುಕೊಳ್ಳಬೇಕಾದರೆ ಜೀವನದ ವೇಗವನ್ನು ನಾವೇ ಸ್ವಲ್ಪ ತಗ್ಗಿಸಿಕೊಳ್ಳುವುದು ಒಳಿತು.

ಮನೋವೇಗದಲ್ಲಿ ಓಡುವ ಕುದುರೆಗಳ ಬಗ್ಗೆ ಪುರಾಣದಲ್ಲಿ, ಯಕ್ಷಗಾನಗಳಲ್ಲಿ ಕೇಳಿ ಮಾತ್ರ ಗೊತ್ತಿದ್ದ ನಾನು ಉದ್ಯೋಗಕ್ಕಾಗಿ ಮಂಗಳೂರಿಗೆ ಬಂದಿಳಿದಾಗ ಆ ಕುದುರೆಗಳ ತರಬೇತುದಾರರ ಕುಲದವರೇ ಓಡಿಸುವಂತಿದ್ದ ಮಂಗಳೂರಿನ ಸಿಟಿ ಬಸ್ಸುಗಳ ವೇಗ ಆವೇಗಗಳನ್ನು ಕಂಡು ತತ್ತರಿಸಿ ಹೋಗಿದ್ದೆ. ದಕ್ಷಿಣ ಕನ್ನಡದ ಖಾಸಗಿ ಬಸ್ಸುಗಳಿಗೆ ಇಬ್ಬರು ನಿರ್ವಾಹಕರಿದ್ದು ಇಬ್ಬರೂ ಏಕಕಾಲದಲ್ಲಿ ‘ದುಂಪೋಲೆ’ (ಮುಂದಕ್ಕೆ ಹೋಗಿ) ‘ಪಿರಪೋಲೆ’ (ಹಿಂದಕ್ಕೆ ಹೋಗಿ) ಎಂದು ಎರಡು ಬಾಗಿಲಲ್ಲಿ ಒಬ್ಬರಂತೆ ಬೊಬ್ಬಿಡುತ್ತಾರೆ. ಮೊದಮೊದಲು ಅವರು ಸೀಟಿ ಊದುತ್ತ ‘ಬೇಗ ಬೇಗ’ ಎಂದು ಕಿರುಚುವಾಗ ಏನು ಮಾಡಲೂ ತೋಚದೇ ಅನೇಕ ಬಾರಿ ನನ್ನ ಸ್ಟಾಪು ಬರುವ ಮೊದಲೇ ಇಳಿದು ಬಿಡುತ್ತಿದ್ದೆ. ಬಸ್ಸಿಳಿದ ಕೂಡಲೇ ಬದುಕಿದೆಯಾ ಬಡಜೀವವೇ ಎಂದು ಹಾಯೆನಿಸುತ್ತಿತ್ತು. ನಮ್ಮ ಬಾಲ್ಯದ ಹಳ್ಳಿಯ ಶಾಲೆಗೆ ಮೂರು ಮೈಲಿ ಉದ್ದಾನುದ್ದ ಕಾಡುರಸ್ತೆಯಲ್ಲಿ ನಡೆದು ಹೋಗುವ ಸುಖ ನೆನಪಾಗುತ್ತಿತ್ತು. ಹಳ್ಳಿಯ ಶಾಲಾ ಪಟಾಲಂ ಜತೆ ‘ಕಾಡುಹರಟೆ’ ಮಾಡುತ್ತ ನಡೆದುಕೊಂಡೇ ಶಾಲೆ ತಲುಪುವಾಗ ‘ಲೇಟಾಯ್ತು’ ಎಂಬ ಭಯ ತಪ್ಪಿಯೂ ನಮ್ಮನ್ನು ಬಾಧಿಸಿದ್ದಿಲ್ಲ. ಯಾಕೆಂದರೆ ನಾವು ಎಷ್ಟೇ ತಡಮಾಡಿ ಹೋದರೂ ನಮಗಿಂತ ದೂರದ ಹಳ್ಳಿಯಿಂದ ನಡೆದುಕೊಂಡೇ ಬರಬೇಕಾದ ಮಾಸ್ತರರು ಇನ್ನೂ ಬಂದಿರುತ್ತಿರಲಿಲ್ಲ. ಆದರೀಗ ಅಂಥದೊಂದು ನಿರಾಳ ಕಾಲವನ್ನು ನೆನಪಿಸಿಕೊಂಡೂ ಕೂಡಲಾಗದ ಓಡು ಓಡು ಸ್ಪೀಡು ಸ್ಪೀಡು ಎನ್ನುವ ದೌಡಿನ ದಿನಚರಿ ತೊಡಗಿಕೊಂಡಾಗಿತ್ತು.

ಈ ಸ್ಪೀಡು, ಸ್ಟ್ರೆಸ್ಸು, ಟೆನ್​ಷನ್… ಒಂದಾದರೂ ನಮ್ಮ ಮೂಲ ಪದಗಳೇ? ಪರಕೀಯರು ಬಂದು ದಾಳಿ ಮಾಡಿದ ಹಾಗೇ ಪರಕೀಯ ಪದಗಳೂ ಹೇಗೆ ನಮ್ಮ ತಲೆ ಮೇಲೇರಿ ಕೂತು ನಮ್ಮನ್ನು ಥಕಥೈ ಕುಣಿಸುತ್ತವೆ! ಈ ಸಿಟಿ ಲೈಫೇ ಎನ್​ಗ್ಸೈಟಿ (ಮೇಲಿಂದ ಬಸ್ಸಿನವರ ಸೀಟಿ), ಬೇಗ ಬೇಗ ಎಂಬ ಪ್ರಚೋದನೆ ಪ್ರಲೋಭನೆ! ಹಿಂದಿರುಗಲಾರದಷ್ಟು ದೂರ ಕ್ರಮಿಸಿ (ಓಡಿ) ಬಂದು ತಲುಪಿಬಿಟ್ಟಿದ್ದೇವೆ.

ಈಗೀಗ ಎಲ್ಲಿ ಪುಟ ತೆಗೆದರೂ ಆರೋಗ್ಯ ಸಲಹೆಗಳೇ. ಡಾಕ್ಟ್ರುಗಳಿಗೇ ಗೊತ್ತಿಲ್ಲದ ಸಲಹೆಗಳು! ಕೆಲಸ ಮಾಡುವಾಗ ನಡು ನಡುವೆ ಕೈಕಾಲು ತಿರುಗಿಸಿ, ದುರು ದುರು ನೋಡಿರಿ, ಬಡ ಬಡ ಒಂದಿಷ್ಟು ದೂರ ಓಡಿರಿ. ದಾರಿಯಲ್ಲಿ ಪರಿಚಿತರ್ಯಾರಾದರೂ ಸಿಕ್ಕರೂ ಲೆಕ್ಕಿಸದೇ ಓಡಿರಿ, ಬೆವರು ಬಂತೆಂದು ಒರೆಸಿಕೊಳ್ಳುತ್ತ ನಿಲ್ಲಬೇಡಿ. ಉಸಿರು ಬಂದರೂ ಜಗ್ಗದೇ ಜಾಗು ಮಾಡಿರಿ. ಲಿಫ್ಟ್​ನ್ನು ಕತ್ತೆತ್ತಿಯೂ ನೋಡಬೇಡಿ. ದಡ ದಡ ಮೆಟ್ಟಿಲು ಹತ್ತಿರಿ. ಕುರ್ಚಿಯಲ್ಲಿ ಕೂತಾಗಲೂ ಕುತ್ತಿಗೆ ತಿರುಗಿಸುತ್ತ ದೀರ್ಘ ಉಸಿರು ತೆಗೆದು ಬಿಟ್ಟು ಉಶ್ ಪುಶ್ ಮಾಡಿ, ಜೋರಾಗಿ ಚಪ್ಪಾಳೆ ತಟ್ಟಿರಿ… ಒಂದಕ್ಕಿಂತ ಒಂದು ಭಯಂಕರವಾದ ದೇಹದಂಡನಾ ವಿಧಾನಗಳೇ.

ಆದರೆ ಈ ‘ದೇಹದಂಡನಾ ಪಂಥ’ಕ್ಕೆ ಸೇರಲು ಚೂರೂ ಇಷ್ಟವಿಲ್ಲದ ‘ಆಲಸ್ಯ ಮಾರ್ಗಿ’ಗಳು ಸಂತೋಷದಿಂದ ಕೇಕೆ ಹಾಕಬಹುದಾದ ಸಂದೇಶವೊಂದು ಜರ್ಮನಿಯ ಕಡೆಯಿಂದ ಬಂದಿದೆಯಂತೆ. ಅಲ್ಲಿಗೆ ಓರ್ವ ತಂದೆ ಮಗಳು ಸೇರಿ ನಡೆಸಿದ ಸಂಶೋಧನೆಯ ಪ್ರಕಾರ ಆಲಸ್ಯವೇ ದೀರ್ಘ ಆರೋಗ್ಯಕರ ಬದುಕಿಗೆ ಕೀಲಿಕೈ ಅಂತೆ. ಪುಸ್ತಕದ ಹೆಸರೇ ಕಿವಿಗಿಂಪೆನಿಸುವ ಹಾಗಿದೆ. ’ಖಜಛಿ ್ಜಢ ಟ್ಛ ್ಝ್ಢ್ಞಠಠ’ ಅದರೊಳಗಿನ ಹಿತೋಪದೇಶ How to slow down and live longer (ಆಲಸ್ಯದಿಂದ ಆಯುಷ್ಯವೃದ್ಧಿ! ತಣ್ಣಗಿದ್ದು ನಿಧಾನಿಗಳಾಗಿ ನೂರ್ಕಾಲ ಬದುಕಿ… ಹೀಗೆಲ್ಲ ಅನುವಾದಿಸಿಕೊಂಡು ಆಲಸಿಗಳು ಸಂಭ್ರಮಿಸಬಹುದು).

ಅವರ ಪ್ರಕಾರ ನೈಸರ್ಗಿಕ ಸಂಪನ್ಮೂಲಗಳ ಹಾಗೇ ನಿಸರ್ಗದ ಕೂಸಾದ ಮನುಷ್ಯನ ದೇಹವೂ ಒಂದು ಸೀಮಿತ ಪ್ರಮಾಣದ ಮೂಲ ಜೀವಶಕ್ತಿಯನ್ನು ಹೊಂದಿ ಬಂದಿರುತ್ತದೆ. ಈ ಶಕ್ತಿಯನ್ನು ನಿಧಾನಕ್ಕೆ ಸ್ವಲ್ಪ ಸ್ವಲ್ಪ ಬಳಸದೇ ಅತಿಯಾದ ದೇಹದಂಡನೆಯಿಂದ ಬೇಗ ಬೇಗ ಬಳ(ಲಿ)ಸುವುದರಿಂದ ಆ ಶಕ್ತಿ ಬೇಗನೇ ವ್ಯಯವಾಗಿ ಮುಪ್ಪನ್ನು ಆಹ್ವಾನಿಸುತ್ತೇವಂತೆ. ಅಂದರೆ ಬಸವನ ಹುಳುವಿನ ಮಂದಗತಿಯಲ್ಲಿ (ಆಮೆಯನ್ನು ಆದರ್ಶವಾಗಿಟ್ಟುಕೊಂಡು?) ಅತೀ ಕಡಿಮೆ ಶಕ್ತಿಯ ಬಳಕೆ ಮಾಡುತ್ತ (ಕಡಿಮೆ ಸವಕಳಿ) ಮುನ್ನಡೆಯುವುದರಿಂದ ದೀರ್ಘಕಾಲ ಬಾಳುತ್ತೀರೆನ್ನುತ್ತಾರೆ ಈ ತಂದೆ ಮಗಳು.

ಆದರೆ ಜಗತ್ತಿಡೀ ‘ವಯಶ್ಶಾಸ್ತ್ರ ಪಂಡಿತರು’ ಈ ವಾದಕ್ಕೆ ಕವಡೆ ಕಿಮ್ಮತ್ತು ಕೊಡಲಾರೆವು ಎನ್ನುತ್ತಾರೆ (ಅಂದಹಾಗೆ ಇಂಗ್ಲಿಷಿನಲ್ಲಿ ಎಛ್ಟಿಟ್ಞಠಿಟ್ಝಟಜಢ ಎಂಬ ಶಬ್ದ ನಮ್ಮ ಸಂಸ್ಕೃತ ಮೂಲದ ‘ಜರಾ’ ಎಂದರೆ ಮುಪ್ಪು ಎಂಬ ಶಬ್ದವನ್ನೇ ಮೂಲವಾಗಿಟ್ಟುಕೊಂಡಿರಬಹುದು ಎಂಬ ವಾದವನ್ನು ಆಸಕ್ತರು ಹಾಗೂ ಪುರುಸೊತ್ತಿರುವವರು ಹುಟ್ಟು ಹಾಕಿ ವಾದ ನಡೆಸಬಹುದು). ನೂರಾರು ವರ್ಷಗಳಿಂದ ನಾವು ಸಂಶೋಧನೆ ನಡೆಸಿ ಮನುಷ್ಯ, ದೇಹದ, ಸವಕಳಿ ಆಗುವುದು ಅವನ ಚಟುವಟಿಕೆಗಳಿಂದಲ್ಲ. ಆಲಸ್ಯದಿಂದ ಎಂಬುದನ್ನು ಪ್ರತಿಪಾದಿಸುತ್ತ ಬಂದಿದ್ದೇವೆ. ಜಗತ್ತಿನ ಆಲಸಿಗಳಿಗೆ ತಪ್ಪು ಸಂದೇಶ ನೀಡುವ ಇವರ ವಾದ ಉಲ್ಟಾವಾದ ಎನ್ನುತ್ತಾರೆ ಇವರು.

ಮಿತಿ ಮೀರಿದ ವ್ಯಾಯಾಮ ಅಪಾಯಕಾರಿ ಅಂತ ನಾವೂ ಹೇಳ್ತಾನೇ ಬಂದಿದೀವಿ. ಆದರೆ ನಮ್ಮ ಪ್ರಕಾರ ನಿಮ್ಮ ಮನಸ್ಸು ಉಲ್ಲಸಿತವಾಗಿರಬೇಕಾದರೆ ನಿಮ್ಮ ದೇಹ ಆಲಸಿಯಾಗಿರಬಾರದು. ಚಟುವಟಿಕೆಯಲ್ಲಿರಬೇಕು ಎಂಬುದು ಜರಶಾಸ್ತ್ರಜ್ಞರ ಜರೂರು ಮಜಕೂರು.

ಜರ್ಮನಿಯ ಉಲ್ಟಾವಾದಿ ತಂದೆ ಮಗಳು ದೇಹದ ಶಕ್ತಿ ಮೂಲಕ್ಕೂ ಮನಸ್ಸಿನ ಶಕ್ತಿ ಮೂಲಕ್ಕೂ ಸಂಬಂಧ ಕಲ್ಪಿಸಿದ್ದಾರೆ. ನಾವು ನಿರುದ್ವಿಗ್ನವಾಗಿ ತಣ್ಣಗಿದ್ದಷ್ಟೂ ದೀರ್ಘ ಆಯಸ್ಸು ಹೊಂದುತ್ತೇವೆ ಎನ್ನುತ್ತಾರೆ ಅವರು. (ಇದಾದರೆ ನಮ್ಮ ಯೋಗ ಗುರುಗಳೂ ಹೇಳುವ ನಿಮೋಹ, ನಿರಾತಂಕ ನಿರ್ಭಾಧಿತ… ಯೋಗ ಪ್ರಕಾರ! ಸೈ ಎನ್ನಬಹುದು) ಸುಮ್ಮನೆ ಒಂದಷ್ಟು ಹೊತ್ತು ಅಡ್ಡಾಗಿ ಅಂಗಾತ ಬಿದ್ದುಕೊಂಡು ಕಣ್ಣು ಪಿಳುಕಿಸುವುದು, (ಆಹಾ! ಶವಾಸನ) ಏನೂ ಅಂದರೆ ಏನೂ ಮಾಡದೇ (ಯೋಚನೆ ಸಹ) ಮೈ ಸಡಿಲ ಬಿಟ್ಟು ಜೋತಾಡಿಸಿಕೊಂಡ ಭಂಗಿಯಲ್ಲಿ ಕೂತಿರುವುದು ಇವೆಲ್ಲ ಖಠ್ಟಿಛಿಠಠ ಜಚ್ಟಞಟ್ಞಛಿ ಎಂದೇ ಗುರುತಿಸಲಾದ ‘ಕಾರ್ಟಿಸಾಟ್’ ಅನ್ನು ಕನಿಷ್ಠ ಪ್ರಮಾಣದಲ್ಲಿಡಲು ಸಹಾಯ ಮಾಡುತ್ತವೆಯಂತೆ (ಚಿಂತೆಯು ನಮ್ಮನ್ನು ಚಿತೆಗೆ ಹತ್ತಿರವಾಗಿಸುತ್ತದೆ ಎಂದು ಮೊದಲಿನಿಂದಲೂ ನಮ್ಮವರೂ ಹೇಳುತ್ತ ಬಂದಿದ್ದಾರೆ ಅನ್ನಿ). ವಯಸ್ಸಾಗಿ ಮುಪ್ಪು ಬರುವುದಕ್ಕೂ ಆಯಾಸ ದಣಿವುಗಳಿಂದ ಬರುವ ಅಕಾಲ ವೃದ್ಧಾಪ್ಯಕ್ಕೂ ವ್ಯತ್ಯಾಸ ಗುರುತಿಸಿರುವ ಈ ಜರ್ಮನಿಯ ಪಿತಸುತೆಯರ ಪ್ರಕಾರ ಒತ್ತಡವನ್ನು ದೂರವಿಡುವುದು ವೃದ್ಧಾಪ್ಯ ಪ್ರಹಾರದೆದುರು ರಕ್ಷಾ ಕವಚವಾಗಿರುತ್ತದೆ. ಅಷ್ಟೇ ಅಲ್ಲ ಯಥೇಚ್ಛ ನಗು (ಸಕಾರಣವಾಗಿರಲಿ ಪ್ಲೀಸ್!) ನಿಮ್ಮ ಅಕಾಲ ವೃದ್ಧಾಪ್ಯದ ವಿರುದ್ಧ ಹೋರಾಡುವ ಖಡ್ಗದಂತೆ ಎಂದಿದ್ದಾರೆ.

ಸಮೃದ್ಧ ನಗುವಿನಿಂದ ನಮ್ಮ ದೇಹದಲ್ಲಿ ‘ಸೆರೋಟಾನಿನ್’ ಎಂಬ ಊಛಿಛ್ಝಿ ಜಟಟಛ ್ಚಛಿಞಜ್ಚಿಚ್ಝ ಉತ್ಪತ್ತಿ ತೀವ್ರವಾಗುತ್ತದೆಯಂತೆ, ಇದೊಂದು ಉಲ್ಲಾಸ ಸ್ಪುರಿಸುವ ಚೋದಕ. ಸದಾ ಕಾಲ ‘ಈಗ ಅಯ್ಯಬ್ಬ ಅನ್ನೋ ಹಾಗಾಯ್ತು’ ಎಂಬ ಭಾವವೇ ಜಾಗ್ರತವಾಗಿದ್ದರೆ ಅದು ನಮ್ಮನ್ನು ಉಲ್ಲಸಿತವಾಗಿಯೂ ಸಂತೋಷ ಮನಸ್ಕರನ್ನಾಗಿಯೂ ಇಡುತ್ತದೆಯಂತೆ. ಇಷ್ಟಕ್ಕೂ ನಾವು ಸಂತೋಷವಾಗಿರುವಾಗ ಬೇರೆಯವರ ಹತ್ತಿರ ಕಾಲ್ಕೆರೆದು ಜಗಳವಾಡುವ ಮೂಡೂ ಬರುವುದಿಲ್ಲ. ಈಗಿನ್ನು ನಗದೇ ಬೇರೆ ಮಾರ್ಗವೇ ಇಲ್ಲ ಅಲ್ಲವೇ? ಸ್ಮಿತ, ಹಸಿತ, ಅತಿಹಸಿತ…ಗಳ ಪಟ್ಟಿಗೆ ‘ಅನಿವಾರ್ಯ ಸ್ಮಿತ’ ಎಂದೊಂದು ಪ್ರಕಾರದ ‘ಮುಂಜಾಗ್ರತಾ ನಗು’ ಸೇರಿದಂತಾಯ್ತು. ಯಾವುದಕ್ಕೂ ಇರಲಿ ಗಂಟು ಮುಖ ಒಳ್ಳೇದಲ್ವಂತೆ, ಸ್ವಲ್ಪ ಮಂದಹಾಸ ಇಟ್ಕೊಂಡು ಕೂತಿರುತ್ತೇನೆ ಎಂದು ಮೇಲಧಿಕಾರಿಗಳೆಲ್ಲ ಉರಿಮುಖ ತ್ಯಜಿಸಿ ನಗುಮುಖ ಧರಿಸಿಬಿಟ್ಟರೆ ಅವರ ಆರೋಗ್ಯವೂ ಸುಧಾರಿಸುವುದರ ಜತೆ ಪಾಪ ಕೈಕೆಳಗಿನ ನೂರಾರು ನೌಕರರ (ತನ್ಮೂಲಕ ಅವರವರ ಮನೆಯಲ್ಲಿನ ಸಹವಾಸಿಗಳ) ಆರೋಗ್ಯವೂ ಸುಧಾರಿಸುತ್ತದೆ. ಅಲ್ಲಿಗೆ ‘ಸ್ವಾಸ್ಥ್ಯೆಡೆಗೆ ನಮ್ಮ ನಡೆ ಮೂಲವದಕೆ ಮುಗುಳು ನಗೆ’ ಎಂಬ ಒಂದು ಆಂದೋಲನವೇ ಪ್ರಾರಂಭವಾದಂತೇ ಸರಿ.

ಅನಗತ್ಯ ಅಧ್ವಾನಗಳನ್ನು ಸೃಷ್ಟಿಸಿಕೊಂಡು ಪೇಚಾಡುತ್ತ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತ (ಏrಢ ಠಟಟಜ್ಝಿಠ ಠಿಜಛಿ c್ಟ) ಘಟಿಸಬಹುದಾದುದನ್ನು ತಾವು ಹೇಗೂ ತಡೆಯಲಾರೆವೆಂಬ ಕನಿಷ್ಠ ಅರಿವೂ ಇಲ್ಲದೆ ಸುತ್ತಮುತ್ತಲಿನವರೆಲ್ಲರ ಮಂಡೆ ಬಿಸಿ ಮಾಡುವ ಗಡಬಿಡೀಶ್ವರರು ಕೊಂಚ ತಾಳಿಕೊಂಡು ತಾಳಿದವನು ಬಾಳಿಯಾನು ಎನ್ನುತ್ತ ಕೋಪವನ್ನೋ ಬಿರುನುಡಿಯನ್ನೋ ನಿಯಂತ್ರಿಸಿಕೊಂಡರೆ ವಾತಾವರಣದಲ್ಲಿನ ತಾಪ ಕಡಿಮೆಯಾಗಿ ಮೌನದ ತಂಪು ತಾಳ್ಮೆಯ ಕಂಪು ಹಗುರುತನದ ಇಂಪು ಸುತ್ತಮುತ್ತಲನ್ನು ಆಹ್ಲಾದಗೊಳಿಸುತ್ತದೆ. ‘ತಲ್ಲಣಿಸದಿರು ಕಂಡ್ಯ ತಾಳು ಮನವೇ… ಎಲ್ಲರನೂ ಸಲಹುವನು ಇದಕೆ ಸಂಶಯ ಬೇಡ’. ಎಂದು ದಾಸವರೇಣ್ಯರು ಹಾಡಿರುವುದು ನಮಗಾಗಿಯೇ ಅಲ್ಲವೇ?

(ಲೇಖಕರು ಅರ್ಥಶಾಸ್ತ್ರ ಉಪನ್ಯಾಸಕರು, ಖ್ಯಾತ ಹಾಸ್ಯ ಸಾಹಿತಿ)

Leave a Reply

Your email address will not be published. Required fields are marked *

Back To Top