Monday, 11th December 2017  

Vijayavani

1. ಜಮ್ಮುವಿನಲ್ಲಿ ಗುಂಡಿನ ಚಕಮಕಿ- ಯೋಧರ ಗುಂಡೇಟಿಗೆ ಮೂವರು ಉಗ್ರರು ಮಟಾಶ್​​​- ಒಬ್ಬ ಜೀವಂತವಾಗಿ ಸೆರೆ, ವಿಚಾರಣೆ 2. ರವಿ ಬೆಳಗೆರೆ ಕಸ್ಟಡಿ ಅವಧಿ ಇಂದಿಗೆ ಅಂತ್ಯ- ಮಧ್ಯಾಹ್ನ ನ್ಯಾಯಾಲಯಕ್ಕೆ ಪತ್ರಕರ್ತ ಹಾಜರು- ಜಾಮೀನು ಕೊಡ್ತಾರಾ ನ್ಯಾಯಾಧೀಶರು..? 3. ಮಕ್ಕಳ ಮೊಟ್ಟೆ ಗುತ್ತಿಗೆದಾರರ ಹೊಟ್ಟೆಗೆ- ಕೊಪ್ಪಳದಲ್ಲಿ ನಡೆದಿದೆ ಮೊಟ್ಟೆ ಗೋಲ್​​ಮಾಲ್​- ಡಿಸಿ ಸೇರಿ ನಾಲ್ವರ ವಿರುದ್ಧ ಲೋಕಾಯುಕ್ತಕ್ಕೆ ದೂರು 4. ಸರ್ಕಾರಿ ಜಾಗದ ಮೇಲೆ ಬಿಲ್ಡರ್​ ಕಣ್ಣು- ರಾತ್ರೋರಾತ್ರೊ ಮನೆ ಖಾಲಿಗೆ ಆವಾಜ್​​- ಹುಬ್ಬಳ್ಳಿಯಲ್ಲಿ ದಯಾಮರಣಕ್ಕೆ 12 ಕುಟುಂಬದಿಂದ ಅರ್ಜಿ 5. ಗುತ್ತಿಗೆದಾರರ ಬಳಿ ಸರ್ಕಾರಿ ಫೈಲ್​​​​​ ಪ್ರಕರಣ- ಸ್ಪಷ್ಟನೆ ಕೋರಿ ಎಇಇಗೆ ನೋಟಿಸ್​​​- ಇದು ದಿಗ್ವಿಜಯ ನ್ಯೂಸ್​​ ಬಿಗ್​​ ಇಂಪ್ಯಾಕ್ಟ್​​​​
Breaking News :

ನಿತ್ಯ ಏರುತ್ತಿದೆ ತೈಲ ಬೆಲೆ

Sunday, 13.08.2017, 3:05 AM       No Comments

ಬೆಂಗಳೂರು: ದೇಶದಲ್ಲಿ ಪ್ರತಿನಿತ್ಯ ತೈಲ ದರ ಪರಿಷ್ಕರಣೆ ವ್ಯವಸ್ಥೆ ಜಾರಿಯಾಗಿ 2 ತಿಂಗಳು ಕಳೆಯುತ್ತಿದೆ. ಈ ವ್ಯವಸ್ಥೆ ಜಾರಿಯಾದ ಬಳಿಕ ಪ್ರತಿನಿತ್ಯವೂ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಪೈಸೆಗಳ ಲೆಕ್ಕದಲ್ಲಿ ಬದಲಾವಣೆಯಾಗುತ್ತಿದೆ. ಕಳೆದ 10 ದಿನದಿಂದ ಸತತವಾಗಿ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಾಗುತ್ತಿರುವುದು ಗ್ರಾಹಕರಿಗೆ ಬಿಸಿ ಮುಟ್ಟಿಸುತ್ತಿದೆ.

ಜು.16ರಿಂದ ಅನ್ವಯವಾಗುವಂತೆ ಡೈನಾಮಿಕ್ ಪ್ರೖೆಸಿಂಗ್(ಪ್ರತಿನಿತ್ಯ ದರ ಪರಿಷ್ಕರಣೆ)ವ್ಯವಸ್ಥೆ ದೇಶದಲ್ಲಿ ಜಾರಿಗೆ ಬಂದಿತ್ತು. ಜು.1ರಂದು ಜಿಎಸ್​ಟಿ ಜಾರಿ ಜತೆಯಲ್ಲಿಯೇ ರಾಜ್ಯ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಪ್ರವೇಶ ತೆರಿಗೆಯನ್ನು ರದ್ದುಪಡಿಸಿತ್ತು. ಈ ಸಂದರ್ಭದಲ್ಲಿ ರಾತ್ರೋರಾತ್ರಿ ಪೆಟ್ರೋಲ್ ಹಾಗೂ ಡೀಸೆಲ್ ದರ 3-4 ರೂ.ವರೆಗೆ ಇಳಿಕೆಯಾಗುತ್ತು. ಇದು ಗ್ರಾಹಕರಿಗೆ ಸಿಹಿ ಸುದ್ದಿಯಾಗಿತ್ತು.

ಪ್ರವೇಶ ತೆರಿಗೆ ರದ್ದಾದ ಸಂದರ್ಭದಲ್ಲಿ ರಾಜ್ಯದಲ್ಲೇ ಪ್ರತಿ ಲೀಟರ್ ಡೀಸೆಲ್​ಗೆ ಅತಿ ಕಡಿಮೆ ಬೆಲೆಯಿತ್ತು. ಜು.2ರಂದು ಬೆಂಗಳೂರು ನಗರದಲ್ಲಿ ಪೆಟ್ರೋಲ್ ದರ 62.29 ರೂ. ಹಾಗೂ ಡೀಸೆಲ್ ದರ 54.28 ರೂ. ಇತ್ತು. ಪ್ರತಿ ನಿತ್ಯ ತೈಲ ದರ ಪರಿಷ್ಕರಣೆ ವ್ಯವಸ್ಥೆ ಜಾರಿಯಾಗಿ ತಿಂಗಳು ಕಳೆದಾಗ, ಎಂದರೆ ಜು.16ರಂದು ಪ್ರತಿ ಲೀಟರ್ ಪೆಟ್ರೋಲ್ 65.28 ರೂ. ಹಾಗೂ ಡೀಸೆಲ್ 55.07 ರೂ. ಇತ್ತು. ಕಳೆದ 10 ದಿನದಲ್ಲಿ ಸತತವಾಗಿ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಾಗುತ್ತಿದ್ದು, ಆ.12ರಂದು ಪ್ರತಿ ಲೀಟರ್ ಪೆಟ್ರೋಲ್​ಗೆ 68.54 ಹಾಗೂ ಡೀಸೆಲ್​ಗೆ 57.22 ರೂ. ಪರಿಷ್ಕರಣೆಯಾಗಿದೆ. ಪ್ರವೇಶ ತೆರಿಗೆ ರದ್ದಾದ ನಂತರವೂ ತೈಲ ದರ ಪ್ರತಿ ನಿತ್ಯ ಏರಿಕೆ ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ.

***

ಯಾವ ಆಧಾರದಲ್ಲಿ ಪರಿಷ್ಕರಣೆ?

ಪ್ರತಿನಿತ್ಯ ದರ ಪರಿಷ್ಕರಣೆಯಾಗುತ್ತಿದ್ದರೂ, ಯಾವ ಆಧಾರದಲ್ಲಿ ತೈಲ ಕಂಪನಿಗಳು ದರ ಪರಿಷ್ಕರಣೆ ಮಾಡುತ್ತಿವೆ ಎಂಬ ಗೊಂದಲ ಇನ್ನೂ ಬಂಕ್ ಮಾಲೀಕರಲ್ಲಿ ಮನೆ ಮಾಡಿದೆ. ತೈಲ ಕಂಪನಿಗಳು ಪ್ರತಿ ನಿತ್ಯ ರಾತ್ರಿ 8 ಗಂಟೆಯ ವೇಳೆಗೆ ಮರುದಿನದ ದರವನ್ನು ಕಳುಹಿಸುತ್ತಿವೆ. ಅದನ್ನು ನಾವು ಅಳವಡಿಸಿಕೊಳ್ಳುತ್ತಿದ್ದೇವೆ. ಆದರೆ ಯಾವ ಆಧಾರದಲ್ಲಿ ದರ ಪರಿಷ್ಕರಣೆ ಮಾಡುತ್ತಿದ್ದಾರೆ ಎನ್ನುವುದರ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಈ ಕುರಿತಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಪೆಟ್ರೋಲಿಯಂ ಇಲಾಖೆಯಿಂದ ಮಾಹಿತಿ ಕೇಳಿದ್ದೇವೆ ಎಂದು ಬೆಂಗಳೂರು ಪೆಟ್ರೋಲ್ ಬಂಕ್ ಮಾಲೀಕರ ಸಂಘದ ಅಧ್ಯಕ್ಷ ಬಿ.ಆರ್.ರವೀಂದ್ರನಾಥ್ ವಿಜಯವಾಣಿಗೆ ತಿಳಿಸಿದರು. ಶನಿವಾರ ಹಾಗೂ ಭಾನುವಾರ ತೈಲ ಮಾರುಕಟ್ಟೆಯೇ ಮುಚ್ಚಿರುತ್ತದೆ. ಆದರೂ ತೈಲ ಕಂಪನಿಗಳು ದರ ಪರಿಷ್ಕರಣೆ ಮಾಡುತ್ತಿವೆ. ಇದಕ್ಕೆ ಆಧಾರ ಏನು ಎಂಬುವುದೇ ನಮ್ಮ ಪ್ರಶ್ನೆ ಎಂದು ರವೀಂದ್ರನಾಥ್ ತಿಳಿಸಿದರು. ಪ್ರತಿ ನಿತ್ಯ ತೈಲ ದರ ಪರಿಷ್ಕರಣೆ ವ್ಯವಸ್ಥೆ ಜಾರಿಯಾದ ನಂತರ ಬಂಕ್ ಮಾಲೀಕರೂ ಗೊಂದಲದಲ್ಲಿದ್ದಾರೆ.

ದಿನ ನಿತ್ಯ ಎಷ್ಟು ಲೀಟರ್ ತೈಲ ಸಂಗ್ರಹಿಸಿಡಬೇಕು, ನಾಳೆ ದರ ಇಳಿದರೆ ಆಗುವ ನಷ್ಟದ ಭಯದಿಂದಲೇ ದಿನ ದೂಡುತ್ತಿದ್ದಾರೆ ಎಂದು ಅವರುತಿಳಿಸಿದರು.

Leave a Reply

Your email address will not be published. Required fields are marked *

Back To Top