Saturday, 21st July 2018  

Vijayavani

ಶೀರೂರು ಶ್ರೀಗಳ ಸಾವು ಕೊಲೆಯಲ್ಲ - ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು - ಉಡುಪಿಯಲ್ಲಿ ಪೇಜಾವರ ಶ್ರೀ ಸ್ಪಷ್ಟನೆ        ರಾಹುಲ್‌ ಅಪ್ಪುಗೆಗೆ ಬಿಜೆಪಿ ಸಿಡಿಮಿಡಿ - ಸದನದಲ್ಲಿನ ವರ್ತನೆ ಬಗ್ಗೆ ಕೋಪ - ರಾಹುಲ್‌ಗೆ ಸ್ಪೀಕರ್‌ ನೀತಿಪಾಠ        ಭಾಷಣಕ್ಕಿಂತ ರಾಹುಲ್‌ ಕಣ್ಣೇಟು ಫೇಮಸ್‌ - ಪ್ರಿಯಾ ವಾರಿಯರ್‌ ವಿಡಿಯೋಗೆ ಲಿಂಕ್‌ - ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ವೈರಲ್‌        ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ - ಕಾವೇರಿಗೆ ಮುಖ್ಯಮಂತ್ರಿ ದಂಪತಿಯಿಂದ ಪೂಜೆ - ಸಚಿವ ಡಿಕೆಶಿ, ಮಹೇಶ್‌ ಸಾಥ್‌        ಸಿಬ್ಬಂದಿ ಒತ್ತಾಯದಿಂದ ಅಲ್ಲಿಗೆ ಹೋಗಿದ್ದೆ - ಮೊಗಸಾಲೆಯಲ್ಲಿ ಬರ್ತಡೇ ಪಾರ್ಟಿ ತಪ್ಪು - ಕ್ಷಮೆ ಕೋರಿದ ವಿಧಾನಸಭೆ ಕಾರ್ಯದರ್ಶಿ        ನಿನ್ನೆ ಬೌಬೌ ಬಿರಿಯಾನಿ - ಇಂದು ಮಿಯಾಂವ್‌ ಮಿಯಾಂವ್‌ ಮಸಾಲ - ಬೆಂಗಳೂರಿನ ವಿಜಯನಗರದಲ್ಲಿ ಬೆಕ್ಕು ನಾಯಿ ಭಕ್ಷ       
Breaking News

ನಿಜವಾದ ವೈರಾಗ್ಯ

Tuesday, 17.04.2018, 3:03 AM       No Comments

|ಜ ಡಾ. ಕಾಂತೇಶಾಚಾರ್ಯ ಕದರಮಂಡಲಗಿ

‘ಜ್ಞಾನ ಪಡೆಯಬೇಕು’ ಎಂಬ ಅಪೇಕ್ಷೆ ಯಾರಿಗೆ ಇಲ್ಲ ಹೇಳಿ? ಪ್ರತಿಯೊಬ್ಬ ಸಾಧಕನಿಗೂ ಜಿಜ್ಞಾಸೆ ಇದ್ದೇ ಇರá-ತ್ತದೆ. ಆದರೆ ಜ್ಞಾನಕ್ಕೂ ವೈರಾಗ್ಯಕ್ಕೂ ಅವಿನಾಭಾವ ಸಂಬಂಧ ಇದೆ.

‘‘ವಿರಕ್ತಾನಾಮೇವ ಚ ಜ್ಞಾನಮ್’. ಯಾರಿಗೆ ವೈರಾಗ್ಯ ಇದೆ ಅವರಿಗೆ ಮಾತ್ರ ಜ್ಞಾನ ಲಭ್ಯವಾಗá-ತ್ತದೆ ಎನ್ನುತ್ತಾರೆ ಶ್ರೀಮಧ್ವಾಚಾರ್ಯರು. ವೈರಾಗ್ಯವೂ ಸಹ ಎರಡು ವಿಧವಾಗಿದೆ. ಒಂದು ಅಭಾವವೈರಾಗ್ಯ. ಮತ್ತೊಂದು ಭಾವವೈರಾಗ್ಯ. ವಸ್ತುಗಳೇ ಇಲ್ಲದಿರá-ವಾಗ, ಭೋಗ ಮಾಡಲು ವಸ್ತುಗಳೇ ಸಿಗದಿದ್ದಾಗ ಅಂತಹ ಪ್ರಸಂಗದಲ್ಲಿ ಅದು ನನಗೆ ಬೇಡ’ ಎಂಬುದಾಗಿ ಬಾಯಿಯಲ್ಲಿ ವೈರಾಗ್ಯದ ಮಾತá-ಗಳನ್ನಾಡಿದರೆ ಅದು ಅಭಾವವೈರಾಗ್ಯ. ನಮ್ಮ ಜೀವನದಲ್ಲಿ ಈ ತರಹದ ಅಭಾವವೈರಾಗ್ಯದ ಪ್ರಸಂಗಗಳೇ ಹೆಚ್ಚು. ಆದರೆ ವಸ್ತುಗಳು ಎದುರಿಗೆ ಇದ್ದಾಗಲೂ, ಭೋಗ ಮಾಡಲು ಎಲ್ಲತರಹದ ಅನá-ಕೂಲತೆಗಳು ಇದ್ದಾಗಲೂ ಸಹ ಅದನ್ನು ಅಪೇಕ್ಷಿಸದೇ ವೈರಾಗ್ಯದಿಂದ ಇರá-ವುದು ಭಾವವೈರಾಗ್ಯ.

ಭಕ್ತ ಪುರಂದರದಾಸರು ಭಿಕ್ಷಾವೃತ್ತಿ ಕೈಗೊಂಡಮೇಲೆ ಒಮ್ಮೆ ಕೃಷ್ಣದೇವರಾಯರ ಅರಮನೆಗೂ ಹೋದರು. ಅದೇಕೋ ದಾಸರನ್ನು ಪರೀಕ್ಷಿಸಬೇಕೆಂಬ ಮನಸ್ಸು ರಾಜನಿಗೆ ಉಂಟಾಗಿ ಅವರ ಜೋಳಿಗೆಗೆ ಮುತ್ತು-ರತ್ನಗಳನ್ನು ಸá-ರಿದರು. ದಾಸರು ಭಿಕ್ಷೆ ಸ್ವೀಕರಿಸಿ ಮುನ್ನಡೆದರು. ಮರá-ದಿನವೂ ದಾಸರು ಹೋದರು. ಅಂದೂ ಕೃಷ್ಣದೇವರಾಯ ಮುತ್ತು-ರತ್ನಗಳನ್ನೇ ನೀಡಿದರು. ಹೀಗೆ ಹಲವು ದಿನ ಕಳೆಯಿತು. ರಾಯರಿಗೆ ದಾಸರ ಮೇಲೆ ಬೇಸರ ಉಂಟಾಯಿತು. ಅರ್ನÂವಾದ ಮá-ತ್ತು-ರತ್ನಗಳಿಂದಲೂ ದಾಸರಿಗೆ ತೃಪ್ತಿಯುಂಟಾಗಲಿಲ್ಲವಲ್ಲ! ಈ ತ್ಯಾಗಿಗಳಿಗೂ ಇಂತಹ ದುರಾಸೆಯೇ ಎಂದು ನೊಂದುಕೊಂಡು, ದಾಸರನ್ನು ಪರೀಕ್ಷಿಸಬೇಕೆಂದು ವೇಷ ಮರೆಸಿಕೊಂಡು ಮಂತ್ರಿಗಳೊಂದಿಗೆ ದಾಸರ ಮನೆಗೆ ಹೋದರು. ದಾಸರು ಮನೆಯಲ್ಲಿ ಇರಲಿಲ್ಲ. ರಾಯರು ದಾಸರ ಹೆಂಡತಿಯನ್ನು ಕುರಿತು ‘‘ಅಮ್ಮಾ! ಏನು ಮಾಡá-ತ್ತಿರá-ವಿರಿ?’ ಎಂದು ಕೇಳಿದರು. ಅದಕ್ಕೆ ದಾಸರ ಹೆಂಡತಿ- ಅRಯಲ್ಲಿ ತುಂಬ ಕಲ್ಲುಗಳಿವೆಯಪ್ಪ. ಅವುಗಳನ್ನು ಆರಿಸಿ ತೆಗೆದá-ಹಾಕá-ವುದೇ ದೊಡ್ಡ ಕೆಲಸವಾಗಿದೆ. ತಿಪ್ಪೆ ಪೂರ್ತಿ ಕಲ್ಲು

ಗಳಿಂದಲೇ ತುಂಬಿದೆ’ ಎಂಬá-ದಾಗಿ ತಿಪ್ಪೆಯ ಕಡೆ ಕೈಮಾಡಿ ತೋರಿಸಿದರು. ರಾಯರು

ಹೋಗಿ ನೋಡಿದರೆ ದಾಸರಿಗೆ ತಾವು ಭಿಕ್ಷೆ ನೀಡಿದ್ದ ಮುತ್ತು-ರತ್ನಗಳೇ ತಿಪ್ಪೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಇದಲ್ಲವೆ ನಿಜವಾದ ವೈರಾಗ್ಯ. ಮá-ತ್ತು-ರತ್ನಗಳನ್ನು ನೀಡಿದರೂ ಅವುಗಳನ್ನು ಕಲ್ಲಿನಂತೆ ಕಾಣುತ್ತ ವೈರಾಗ್ಯದಿಂದ ಇದ್ದವರು ಪುರಂದರದಾಸರು.

(ಲೇಖಕರು ಸಂಸ್ಕೃತ ಸಂಶೋಧಕರು)

Leave a Reply

Your email address will not be published. Required fields are marked *

Back To Top