Wednesday, 18th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ನಿಖಿತಾ ಮುಖದಲ್ಲಿ ಪ್ರವಾಸದ ನಗೆ

Thursday, 12.10.2017, 3:01 AM       No Comments

ಬೆಂಗಳೂರು: ‘ಮುಗುಳು ನಗೆ’ ಚಿತ್ರದ ಪುದುಚೇರಿ ಹುಡುಗಿ ನಿಖಿತಾ ನಾರಾಯಣ್ ಕಳೆದ ಕೆಲವು ದಿನಗಳಿಂದ ಎಲ್ಲೂ ಕಾಣಿಸಿಕೊಂಡಿಲ್ಲವಲ್ಲ ಎಂದು ಕೆಲವರು ಅಂದುಕೊಂಡಿರಬಹುದು. ನಿಜ.. ಚಿತ್ರ ಬಿಡುಗಡೆ ಆಗಿ ಒಂದೆರಡು ವಾರ ಕಳೆಯುತ್ತಿದ್ದಂತೆ ಅವರು ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದು ಇತ್ತೀಚೆಗಷ್ಟೇ ಮರಳಿದ್ದಾರೆ. ಅಂದಹಾಗೆ ಅವರು ಅಲ್ಲಿ ಕಳೆದದ್ದು ಭರ್ತಿ ಹದಿನೆಂಟು ದಿನಗಳು.

‘ನನ್ನ ಸ್ನೇಹಿತನೊಬ್ಬ ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿದ್ದು, ಅಲ್ಲಿಯ ಯುವತಿಯನ್ನೇ ಮದುವೆ ಆಗಿದ್ದಾನೆ. ಆ ಮದುವೆಗೆ ಹೋಗಬೇಕು ಎಂಬುದು ಪೂರ್ವ ನಿಗದಿಯಾಗಿತ್ತು. ಅದೇ ವೇಳೆ ‘ಮುಗುಳು ನಗೆ’ ಚಿತ್ರ ಬಿಡುಗಡೆ ಆಗಿತ್ತು. ಒಂದಷ್ಟು ದಿನಗಳ ಕಾಲ ಆ ಚಿತ್ರದ ಚಿತ್ರೀಕರಣದಲ್ಲಿ ಬಿಜಿ ಆಗಿದ್ದ ನನಗೆ ಒಂದು ಬ್ರೇಕ್ ಬೇಕು ಎನಿಸಿತ್ತು. ಆದ್ದರಿಂದ ಮದುವೆಯ ನೆಪದಲ್ಲಿ ಅಲ್ಲಿಗೆ ಒಂದು ಪ್ರವಾಸದ ಯೋಜನೆ ಹಾಕಿಕೊಂಡೇ ಹೋದೆ’ ಎನ್ನುತ್ತ ಪ್ರವಾಸದ ಹಿನ್ನೆಲೆ ವಿವರಿಸಿದರು ನಿಖಿತಾ.

ಜೊಹಾನ್ಸ್ ಬರ್ಗ್, ಕೇಪ್​ಟೌನ್ ಮುಂತಾದೆಡೆ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿ ಬಂದಿರುವ ನಿಖಿತಾ, ತಮ್ಮ ಪ್ರವಾಸದ ಅನುಭವಗಳನ್ನು ‘ವಿಜಯವಾಣಿ’ ಜತೆ ಹಂಚಿಕೊಂಡಿದ್ದಾರೆ. ‘ನವ ವಿವಾಹಿತರು ಹನಿಮೂನ್ ಬದಲಿಗೆ ‘ಬಡಿ ಮೂನ್’  ಆಯೋಜಿಸಿದ್ದರು.

ಅಂದರೆ ಮದುವೆ ಬಳಿಕ ಅವರು ಸ್ನೇಹಿತರೊಂದಿಗೆ ಸಣ್ಣ ಪ್ರವಾಸ ಹಮ್ಮಿಕೊಂಡಿದ್ದರು. ಅದರಲ್ಲಿ ನಾನೂ ಒಬ್ಬಳಾಗಿದ್ದೆ’ ಎನ್ನುವ ನಿಖಿತಾ, ಕ್ರಗರ್ ನ್ಯಾಷನಲ್ ಪಾರ್ಕ್​ನಲ್ಲಿ ಸಫಾರಿಗೆ ಹೋಗಿ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ಅನುಭವ ಹೇಳಿಕೊಳ್ಳುತ್ತಾರೆ. ‘ನಾವು ಸಫಾರಿಗೆ ಹೊರಟಿದ್ದ ವಾಹನದ ಟಯರ್ ಪಂಕ್ಚರ್ ಆಗಿತ್ತು. ಅಲ್ಲೇ ಸುತ್ತ ಹತ್ತಕ್ಕೂ ಹೆಚ್ಚು ಸಿಂಹಗಳು ಇದ್ದವು. ಕೊನೆಗೆ ಪಂಕ್ಚರ್ ಆದ ವಾಹನವನ್ನು ಒಂದಷ್ಟು ದೂರ ಹಾಗೇ ಚಲಾಯಿಸಿಕೊಂಡು ಬಂದು ಸರಿ ಮಾಡಿಸಿಕೊಂಡು ಬಂದೆವು. ಆ ಸಂದರ್ಭದಲ್ಲಿ ಹೊರಗೆ ಇಳಿದಿದ್ದಾಗ ಅಲ್ಲೇ ಹತ್ತಿರದಲ್ಲೇ ಕಾಡುಪ್ರಾಣಿಗಳು ಓಡಾಡುತ್ತಿದ್ದವು’ ಎಂದು ಸಫಾರಿಯ ರೋಮಾಂಚಕ ಅನುಭವ ಸ್ಮರಿಸಿಕೊಳ್ಳುತ್ತಾರೆ. ಒಟ್ಟಿನಲ್ಲಿ ಇದೇ ಮೊದಲ ಬಾರಿಗೆ ದಕ್ಷಿಣ ಆಫ್ರಿಕಕ್ಕೆ ಹೋಗಿ ಬಂದಿರುವ ಅವರು, ಅಲ್ಲಿನ ಪ್ರವಾಸದ ಅನುಭವಗಳನ್ನು ನೆನೆದು ಮುಗುಳು ನಗೆ ಬೀರುತ್ತಿದ್ದಾರೆ.

ಕಳೆದ ವರ್ಷ ದುಬೈಗೆ ಹೋಗಿದ್ದೆ, ಈ ವರ್ಷ ದಕ್ಷಿಣ ಆಫ್ರಿಕಾ.. ಹೀಗೆ ಪ್ರತಿವರ್ಷ ಒಂದೊಂದು ಅಂತಾರಾಷ್ಟ್ರೀಯ ಪ್ರವಾಸ ಮಾಡುವ ಮೂಲಕ ಹೊಸಹೊಸ ದೇಶಗಳ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಬೇಕು ಅಂತ ಅಂದುಕೊಂಡಿದ್ದೇನೆ.

| ನಿಖಿತಾ, ನಟಿ

Leave a Reply

Your email address will not be published. Required fields are marked *

Back To Top