Monday, 21st August 2017  

Vijayavani

1. ರಾಜ್ಯ ಸರ್ಕಾರದಿಂದ ಎಸಿಬಿ ದುರ್ಬಳಕೆ ವಿಚಾರ- ರಾಜ್ಯಪಾಲರಿಗೆ ಬಿಜೆಪಿ ನಾಯಕರ ದೂರು- ಸರ್ಕಾರವನ್ನು ವಜಾಗೊಳಿಸುವಂತೆ ಮನವಿ 2. ಬೆಂಗಳೂರಲ್ಲಿ ಕಾರ್​ಗಳ ಗ್ಲಾಸ್​​ ಒಡೆದು ಕಳ್ಳತನ- ದುಷ್ಕರ್ಮಿಗಳ ಪತ್ತೆಗೆ ಮುಂದಾದ ಪೊಲೀಸರು- ಗಲ್ಲಿ ಗಲ್ಲಿಯಲ್ಲೂ ಖಾಕಿ ಪಡೆ ಶೋಧ 3. ರೋಡ್​​​ ಕ್ರಾಸ್​​​​​​​​ ಮಾಡುವಾಗ ನೋಡಲಿಲ್ಲ- ವೇಗವಾಗಿ ಬಡಿದ ಕಾರು ಪ್ರಾಣ ನುಂಗಿತಲ್ಲ- ತಮಿಳುನಾಡಿನ ನಮಕಲ್​​​​​ನಲ್ಲಿ ಭೀಕರ ಅಪಘಾತ 4. ಮಲೆಂಗಾವ್​​​​ ಬಾಂಬ್​ ಸ್ಫೋಟ ಪ್ರಕರಣ- ಆರೋಪಿ ಪುರೋಹಿತ್​​​​ಗೆ ಷರತ್ತು ಬದ್ಧ ಜಾಮೀನು- ಒಂಬತ್ತು ವರ್ಷಗಳ ಬಳಿಕ ಕರ್ನಲ್​​​ಗೆ ರಿಲೀಫ್​​​​ 5. ಇಂದು ಜಗತ್ತನ್ನ ಆವರಿಸಲಿದೆ ಸೂರ್ಯಗ್ರಹಣ- ಜೀವ ಜಗತ್ತಿಗೆ ಕೌತುಕದ ಕ್ಷಣ- ಮಟಮಟ ಮಧ್ಯಾಹ್ನವೇ ಕತ್ತಲಾಗಲಿದೆ ವಿಶ್ವದ ದೊಡ್ಡಣ್ಣ
Breaking News :

ನಾಸಾ-ಇಸ್ರೋ ಜಂಟಿ ಯೋಜನೆ ನಿಸಾರ್

Saturday, 20.05.2017, 3:10 AM       No Comments

ಲಾಸ್​ಏಂಜಲೀಸ್: ಬಾಹ್ಯಾಕಾಶ ಅನ್ವೇಷಣೆಯಲ್ಲಿ ಮುಂಚೂಣಿಯಲ್ಲಿರುವ ವಿಶ್ವದ ಎರಡು ದೊಡ್ಡ ಸಂಸ್ಥೆಗಳಾದ ಅಮೆರಿಕದ ನಾಸಾ ಮತ್ತು ಭಾರತದ ಇಸ್ರೋ ಜಂಟಿಯಾಗಿ ಸಿಂಥೆಟಿಕ್ ಅಪರ್ಚರ್ ರೆಡಾರ್ ಉಪಗ್ರಹವನ್ನು ನಿರ್ವಿುಸುತ್ತಿದ್ದು, 2021ರ ಹೊತ್ತಿಗೆ ಇದನ್ನು ಭಾರತದಿಂದ ಜಿಎಸ್​ಎಲ್​ವಿ ರಾಕೆಟ್ ಮೂಲಕ ಉಡಾವಣೆ ಮಾಡುವ ಉದ್ದೇಶ ಇದೆ.

ಮಹತ್ವಾಕಾಂಕ್ಷೆಯ ಈ ಉಪಗ್ರಹಕ್ಕೆ ‘ನಿಸಾರ್’ ಎಂದು ಹೆಸರಿಸಲಾಗಿದೆ. ಯೋಜನೆಗೆ 10 ಸಾವಿರ ಕೋಟಿ ರೂಪಾಯಿಗೂ (1.50 ಬಿಲಿಯನ್ ಡಾಲರ್) ಹೆಚ್ಚು ವೆಚ್ಚವಾಗಲಿದ್ದು, ವಿಶ್ವದಲೇ ಅತಿ ದುಬಾರಿ ಮೊತ್ತದ ಉಪಗ್ರಹ ಯೋಜನೆಯಾಗಿದೆ. ಹಾಲಿ ಬಾಹ್ಯಾಕಾಶದಲ್ಲಿರುವ ಉಪಗ್ರಹಗಳಿಗಿಂತ ಇದು ಹೆಚ್ಚಿನ ಮಟ್ಟದಲ್ಲಿ ಭೂ ಮೇಲ್ಮೈ ಮತ್ತು ಭೂಗರ್ಭದೊಳಗೆ ನಿಗಾ ಇರಿಸಿ ಪ್ರತಿ ಸೂಕ್ಷ್ಮವನ್ನು ಗಮನಿಸಲಿದ್ದು, ಈ ಉಪಗ್ರಹ ನಿರ್ವಣಕ್ಕಾಗಿ ನಾಸಾ ಮತ್ತು ಇಸ್ರೋ ವಿಜ್ಞಾನಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ.

‘ಇದು ನಾಸಾ ಮತ್ತು ಇಸ್ರೋ ಕೈಗೊಂಡಿರುವ ಜಂಟಿ ಯೋಜನೆಗಳಲ್ಲೇ ಅತಿ ದೊಡ್ಡ ಪ್ರಾಜಕ್ಟ್. ಇದು ಎಲ್- ಬ್ಯಾಂಡ್​ನ 24 ಸೆಂ.ಮೀ. ಮತ್ತು ಎಸ್- ಬ್ಯಾಂಡ್​ನ 13 ಸೆಂ.ಮೀ. ರೆಡಾರ್​ಗಳನ್ನು ಹೊಂದಿದೆ. ಎಸ್-ಬ್ಯಾಂಡ್ ರೆಡಾರ್ ಅನ್ನು ಇಸ್ರೋ ಮತ್ತು ಎಲ್- ಬ್ಯಾಂಡ್ ಅನ್ನು ನಾಸಾ ಅಭಿವೃದ್ಧಿ ಪಡಿಸಲಿದೆ. ತಾಂತ್ರಿಕವಾಗಿ ಸವಾಲಿನದ್ದಾಗಿರುವ ಈ ಯೋಜನೆ ಸಾಕಾರಗೊಳಿಸಲು ಎರಡೂ ದೇಶಗಳ ವಿಜ್ಞಾನಿಗಳು ಶ್ರಮಿಸುತ್ತಿದ್ದಾರೆ’ ಎಂದು ಈ ಯೋಜನೆಯಲ್ಲಿ ದುಡಿಯುತ್ತಿರುವ ನಾಸಾದ ವಿಜ್ಞಾನಿ ಪಾಲ್ ಎ. ರೋಸೆನ್ ತಿಳಿಸಿದ್ದಾರೆ.

‘ಈ ರೆಡಾರ್​ಗಳ ಮೂಲಕ ಭೂಮಿಯ ಚಿತ್ರಗಳನ್ನು ಪ್ರತಿವಾರವೂ ತೆಗೆಯಲಾಗುತ್ತದೆ. ಇದರಿಂದ ಭೂಗರ್ಭದ ಫಲಕಗಳ ಪ್ರತಿ ಚಲನೆಯ ಕಾಲಾವಧಿ ಬಿಂಬಗಳನ್ನು ಪಡೆಯಲು ಸಾಧ್ಯ. ಜತೆಗೆ ಭೂ ಮೇಲ್ಮೈನ ಮಂಜು ಗಡ್ಡೆ (ಐಸ್) ಫಲಕಗಳು, ಭೂಮಿ ಮೇಲಿನ ಸಸ್ಯವರ್ಗಗಳ ಮಾಹಿತಿಗಳನ್ನು ಪಡೆಯಬಹುದು. ಭೂಕಂಪಗಳು, ಜ್ವಾಲಾಮುಖಿಗಳು ಉಂಟಾದ ಬಗೆ, ಸಮುದ್ರ ಮಟ್ಟದ ಏರಿಳಿಕೆ, ಭೂಗ್ರಹದ ಕಾಲಮಾನದಲ್ಲಿನ ವ್ಯತ್ಯಾಸವನ್ನು ಕರಾರು ವಾಕ್ಕಾಗಿ ಗುರುತಿಸಬಹುದು. ಹಾಗಾಗಿ ಭೂಮಿಯ ಮೇಲಿನ ಜೀವಿಗಳು, ಅವುಗಳ ಜೀವಿತಾವಧಿ, ವಿನಾಶಗಳನ್ನು ವಿಶ್ಲೇಷಿಸಲು ಸಾಧ್ಯವಾಗುತ್ತದೆ. ಒಟ್ಟಾರೆ ಯಾಗಿ ಹವಾಮಾನ ಮತ್ತು ಪರಿಸರದಲ್ಲಿನ ಬದಲಾವಣೆಗಳನ್ನು ಗುರುತಿಸಿ ಅವು ಸಮಾಜದ ಮೇಲೆ ಯಾವ ರೀತಿ ಪರಿಣಾಮ ಬೀರಿತು ಎಂಬುದನ್ನು ವಿಶ್ಲೇಷಣೆ ಮಾಡಬಹುದು’ ಎಂದು ಅವರು ಹೇಳಿದ್ದಾರೆ. ಏಜೆನ್ಸೀಸ್

ವಿಶೇಷ ಏನು

  • 10 ಸಾವಿರ ಕೋಟಿ ರೂ. (1.50 ಬಿಲಿಯನ್ ಡಾಲರ್) ಅಧಿಕ ವೆಚ್ಚ
  • 24 ಸೆಂ.ಮೀ. ಎಲ್ ಮತ್ತು 13 ಸೆಂ.ಮೀ. ಎಸ್ ಬ್ಯಾಂಡ್​ಗಳು
  • ಇಸ್ರೋದಿಂದ ಎಸ್- ಬ್ಯಾಂಡ್, ಎಲ್- ಬ್ಯಾಂಡ್ ನಾಸಾದಿಂದ ಅಭಿವೃದ್ಧಿ
  • ಭೂ ಮೇಲ್ಮೈ ಮತ್ತು ಭೂಗರ್ಭದಲ್ಲಿನ ಸೂಕ್ಷ್ಮಗಳ ಅಧ್ಯಯನಕ್ಕೆ ಸಹಕಾರಿ

Leave a Reply

Your email address will not be published. Required fields are marked *

Back To Top