Friday, 20th July 2018  

Vijayavani

ಶೀರೂರು ಶ್ರೀಗಳ ಸಾವು ಕೊಲೆಯಲ್ಲ - ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು - ಉಡುಪಿಯಲ್ಲಿ ಪೇಜಾವರ ಶ್ರೀ ಸ್ಪಷ್ಟನೆ        ರಾಹುಲ್‌ ಅಪ್ಪುಗೆಗೆ ಬಿಜೆಪಿ ಸಿಡಿಮಿಡಿ - ಸದನದಲ್ಲಿನ ವರ್ತನೆ ಬಗ್ಗೆ ಕೋಪ - ರಾಹುಲ್‌ಗೆ ಸ್ಪೀಕರ್‌ ನೀತಿಪಾಠ        ಭಾಷಣಕ್ಕಿಂತ ರಾಹುಲ್‌ ಕಣ್ಣೇಟು ಫೇಮಸ್‌ - ಪ್ರಿಯಾ ವಾರಿಯರ್‌ ವಿಡಿಯೋಗೆ ಲಿಂಕ್‌ - ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ವೈರಲ್‌        ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ - ಕಾವೇರಿಗೆ ಮುಖ್ಯಮಂತ್ರಿ ದಂಪತಿಯಿಂದ ಪೂಜೆ - ಸಚಿವ ಡಿಕೆಶಿ, ಮಹೇಶ್‌ ಸಾಥ್‌        ಸಿಬ್ಬಂದಿ ಒತ್ತಾಯದಿಂದ ಅಲ್ಲಿಗೆ ಹೋಗಿದ್ದೆ - ಮೊಗಸಾಲೆಯಲ್ಲಿ ಬರ್ತಡೇ ಪಾರ್ಟಿ ತಪ್ಪು - ಕ್ಷಮೆ ಕೋರಿದ ವಿಧಾನಸಭೆ ಕಾರ್ಯದರ್ಶಿ        ನಿನ್ನೆ ಬೌಬೌ ಬಿರಿಯಾನಿ - ಇಂದು ಮಿಯಾಂವ್‌ ಮಿಯಾಂವ್‌ ಮಸಾಲ - ಬೆಂಗಳೂರಿನ ವಿಜಯನಗರದಲ್ಲಿ ಬೆಕ್ಕು ನಾಯಿ ಭಕ್ಷ       
Breaking News

ನಾವು ಯಾರಿಗೂ ಕಮ್ಮಿ ಇಲ್ಲ

Tuesday, 05.09.2017, 3:04 AM       No Comments

ರಂಗುರಂಗಾದ ವೇದಿಕೆ, ಆಚೀಚೆ ಕುಳಿತಿದ್ದ ತೀರ್ಪಗಾರರು. ಎದುರಲ್ಲಿ ಕುತೂಹಲದಿಂದ ಕಾದು ಕುಳಿತಿದ್ದ ನೂರಾರು ಜನ. ಭಾನುವಾರದ ವರ್ಣರಂಜಿತ ಸಂಜೆಗೆ ಆಪ್ಯಾಯತೆಯ ಸ್ಪರ್ಶ ನೀಡಿದ್ದು ಮಿಸೆಸ್ ಪ್ರೖೆಡ್ ಆಫ್ ಕರ್ನಾಟಕ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ. ಸಂಜೆಯ ರಂಗಿಗೆ ಸಂಗೀತ, ನೃತ್ಯದ ಸಾಥ್. ಅಲ್ಲಿ ಇತ್ತೀಚೆಗಷ್ಟೇ ಮದುವೆಯಾದವರಿದ್ದವರು, ಮದುವೆಯಾಗಿ 35-40 ವರ್ಷಗಳಾದವರೂ ಇದ್ದರು. ಇಷ್ಟು ದಿನ ಮಕ್ಕಳನ್ನು ಸ್ಟೇಜ್ ಮೇಲೆ ನೋಡಿ ಚಪ್ಪಾಳೆ ತಟ್ಟುತ್ತ ಕುಳಿತಿದ್ದ ಅಮ್ಮನ ಜಾಗದಲ್ಲಿ ಮಕ್ಕಳು-ಮೊಮ್ಮಕ್ಕಳು ಕುಳಿತು ಕೇಕೆ ಹಾಕುತ್ತಿದ್ದರು. ಸಾಂಪ್ರದಾಯಿಕ ಉಡುಗೆಯನ್ನಷ್ಟೇ ತೊಟ್ಟು ಗೊತ್ತಿದ್ದ ಅಮ್ಮಂದಿರು ಗೌನ್-ಲೆಹೆಂಗಾದಲ್ಲಿ ಮಿಂಚುತ್ತಿದ್ದರು. ಹೊರಗೆ ಸುರಿಯುತ್ತಿದ್ದ ಮಳೆಗೆ ಪೈಪೋಟಿ ನೀಡುವಂತೆ ಒಬ್ಬೊಬ್ಬರ ಹೆಂಡತಿ-ತಾಯಂದಿರು ರ‍್ಯಾಂಪ್ ಮೇಲೆ ಬರುತ್ತಿದ್ದಂತೆ ಚಪ್ಪಾಳೆಯ ಸುರಿಮಳೆ ಸುರಿಯುತ್ತಿತ್ತು.

ಬೆಂಗಳೂರು: ವಿ ಫ್ರಂಟ್​ಲೈನ್ ಫಾರ್ಚ್ಯೂನ್ ಸಂಸ್ಥೆಯು ವಿಜಯವಾಣಿ ಮತ್ತು ದಿಗ್ವಿಜಯ ಸುದ್ದಿವಾಹಿನಿ ಮಾಧ್ಯಮ ಸಹಯೋಗದಲ್ಲಿ ಆಯೋಜಿಸಿದ್ದ ‘ಮಿಸೆಸ್ ಪ್ರೖೆಡ್ ಆಫ್ ಕರ್ನಾಟಕ‘ ಸ್ಪರ್ಧೆಯಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ಬಾಗಲಕೋಟೆ ಮೂಲದ ಸಹನಾ ದೊಡ್ಡಮನಿ ವಿನ್ನರ್ ಕಿರೀಟ ತೊಟ್ಟು ರ‍್ಯಾಂಪ್ ಮೇಲೆ ಗೆಲುವಿನ ಹೆಜ್ಜೆ ಹಾಕಿದರು. ಧಾರವಾಡದ ಹೇಮಾಕ್ಷಿ ಮೊದಲ ರನ್ನರ್ ಅಪ್ ಸ್ಥಾನ ಪಡೆದುಕೊಂಡರೆ ಹಾಸನದ ಡಾ. ಕಾವ್ಯಾ 2ನೇ ರನ್ನರ್ ಅಪ್ ಆಗಿ ಆಯ್ಕೆಯಾದರು. ಈ ಸ್ಪರ್ಧೆಯ ರಾಯಭಾರಿಯಾಗಿದ್ದ ನಟಿ ಪ್ರಿಯಾಂಕಾ ಉಪೇಂದ್ರ, ತೀರ್ಪಗಾರರಾಗಿದ್ದ ನಟ ರಘು ಮುಖರ್ಜಿ, ನಟಿಯರಾದ ಅನು ಪ್ರಭಾಕರ್, ಚೈತ್ರಾ ಹಳ್ಳಿಕೇರಿ, ವಿ ಫ್ರಂಟ್​ಲೈನ್ ಫಾರ್ಚ್ಯೂನ್ ಸಂಸ್ಥೆಯ ಎಂಡಿ ಸುಮಾ ಪ್ರಮೋದ್ ವೇದಿಕೆಯಲ್ಲಿದ್ದರು.

ಮೊದಲ ಅನುಭವ

ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದ ಸ್ಪರ್ಧಿಗಳಲ್ಲಿ ವೈದ್ಯೆಯರು ಹೆಚ್ಚಾಗಿದ್ದರೂ ಎಲ್ಲರೂ ಇದೇ ಮೊದಲ ಬಾರಿಗೆ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದು ಎಂಬುದು ವಿಶೇಷ. ಆದರೂ ಬಹಳ ಆತ್ಮವಿಶ್ವಾಸದಿಂದ ಕ್ಯಾಟ್​ವಾಕ್ ಮಾಡಿದ ಸ್ಪರ್ಧಿಗಳು ರ್ಯಾಪಿಡ್ ರೌಂಡ್​ನಲ್ಲಿ ಸ್ವಲ್ಪ ನರ್ವಸ್ ಆದಂತೆ ಕಂಡುಬಂದರು. ಮೊದಲ ಸುತ್ತಿನಲ್ಲಿ ಪಾರಂಪರಿಕ ಹಿನ್ನೆಲೆಯುಳ್ಳ ಮೈಸೂರು ಸಿಲ್ಕ್ ಸೀರೆಯುಟ್ಟು ಭರ್ಜರಿಯಾಗಿ ವೇದಿಕೆಗೆ ಎಂಟ್ರಿ ಕೊಟ್ಟರು. ಬಳಿಕ, ಲೆಹೆಂಗಾ ಮತ್ತು ಗೌನ್​ಗಳನ್ನು ಧರಿಸಿ, ‘ಮದುವೆಯಾದರೇನಾಯಿತು? ಮಾಡರ್ನ್ ಉಡುಗೆ ಧರಿಸಿದರೆ ನಾವೂ ಗ್ಲಾಮರಸ್ ಆಗಿ ಕಾಣುತ್ತೇವೆ’ ಎಂಬುದನ್ನು ಸಾಬೀತುಪಡಿಸಿದರು.

730 ಮಹಿಳೆಯರು

ವಿವಾಹಿತ ಮಹಿಳೆಯರಿಗೆ ವೇದಿಕೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ವಿ ಫ್ರಂಟ್​ಲೈನ್​ನ ಅಧ್ಯಕ್ಷೆ ಸುಮಾ ಪ್ರಮೋದ್ ರಾಜ್ಯದ ವಿವಿಧ ಜಿಲ್ಲೆಗಳಿಂದ ಸ್ಪರ್ಧಿಗಳನ್ನು ಆಹ್ವಾನಿಸಿದ್ದರು. ಅದಕ್ಕೆ ಅತ್ಯುತ್ತಮ ಸ್ಪಂದನೆಯೂ ದೊರಕಿತ್ತು. ಒಟ್ಟು 730 ವಿವಾಹಿತೆಯರು ಈ ಸ್ಪರ್ಧೆಯಲ್ಲಿ ಹೆಸರು ನೋಂದಾಯಿಸಿ ಕೊಂಡಿದ್ದರು. ಅವರಲ್ಲಿ 22ರಿಂದ 36 ಹಾಗೂ 37ರಿಂದ 55 ವರ್ಷದ 2 ಗುಂಪಾಗಿ ವಿಭಾಗಿಸಿ 30 ಜನರನ್ನು ಶಾರ್ಟ್ ಲಿಸ್ಟ್ ಮಾಡಲಾಗಿತ್ತು. ಭಾನುವಾರ (ಸೆ. 3) ದಯಾನಂದಸಾಗರ ಕಾಲೇಜು ಸಭಾಂಗಣದಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ರ‍್ಯಾಂಪ್ ವಾಕ್, ರ್ಯಾಪಿಡ್ ರೌಂಡ್, ಪಿಕ್ ಆಂಡ್ ಸ್ಪೀಚ್ ಎಂಬ 3 ಸುತ್ತುಗಳ ಮೂಲಕ 10 ಸ್ಪರ್ಧಿಗಳನ್ನು ಫಿನಾಲೆಗೆ ಆಯ್ಕೆ ಮಾಡಲಾಯಿತು. ತೀರ್ಪಗಾರರ ಬಹುಮತದಿಂದ ವಿಜೇತರಾದ ಸಹನಾ ದೊಡ್ಡಮನಿ ಅವರಿಗೆ ಮಿಸೆಸ್ ಕರ್ನಾಟಕ-2017 ವಿಜೇತೆ ಡಾ.ಶ್ರುತಿ ಗೌಡ ಕಿರೀಟ ತೊಡಿಸಿ 1 ಲಕ್ಷ ರೂ. ಮೊತ್ತದ ಚೆಕ್ ಹಸ್ತಾಂತರಿಸಿದರು. ಇಬ್ಬರು ರನ್ನರ್ ಅಪ್​ಗಳಿಗೆ 25 ಸಾವಿರ ಹಾಗೂ 15 ಸಾವಿರ ರೂ. ನಗದು ಚೆಕ್ ನೀಡಿ ಕಿರೀಟ ತೊಡಿಸಲಾಯಿತು.

ಐದು ಮೊಮ್ಮಕ್ಕಳ ಅಜ್ಜಿ

ಮಾಡರ್ನ್ ಆಗಿ ತಯಾರಾಗಿ ಆತ್ಮವಿಶ್ವಾಸದ ಹೆಜ್ಜೆ ಹಾಕಿದ ಜವಾಹರ್ ಜಾನ್, ‘ನನಗೆ ಎಸ್ಸೆಸ್ಸೆಲ್ಸಿಯಲ್ಲಿದ್ದಾಗಲೇ ಮದುವೆಯಾಯಿತು. ಇದೀಗ 4 ಮಕ್ಕಳು, 5 ಮೊಮ್ಮಕ್ಕಳಿದ್ದಾರೆ. ನಾನು ಓದಿಲ್ಲದಿದ್ದರೂ ಮಕ್ಕಳೆಲ್ಲರನ್ನೂ ಮೆಡಿಕಲ್, ಇಂಜಿನಿಯರಿಂಗ್ ಓದಿಸಿ ಸ್ವಾವಲಂಬಿಯಾಗಿ ಬದುಕುವಂತೆ ಮಾಡಿದ್ದೇನೆ. ಮೊಮ್ಮಕ್ಕಳ ಮುಂದೆ ರ‍್ಯಾಂಪ್ ಮೇಲೆ ನಡೆಯುತ್ತಿರುವುದಕ್ಕೆ ಖುಷಿ ಆಗುತ್ತಿದೆ’ ಎಂದಾಗ ನಿಬ್ಬೆರಗಾಗುವ ಸರದಿ ಪ್ರೇಕ್ಷಕರದ್ದು.

‘ಸಹನಾ’ಶೀಲೆ

ರ್ಯಾಪಿಡ್ ರೌಂಡ್​ನಲ್ಲಿ ಸಖತ್ತಾಗಿಯೇ ಉತ್ತರಿಸಿ ತೀರ್ಪಗಾರರ ಮನಗೆದ್ದ ಸಹನಾ ದೊಡ್ಡಮನಿ ನೀರಸವಾಗಿದ್ದ ವೇದಿಕೆಗೆ ಜೋಶ್ ತುಂಬಿದರು. ಅವರ ವಾಕ್ಚಾತುರ್ಯವನ್ನು ನೋಡಿದ ನಿರೂಪಕ ನಿರಂಜನ್ ದೇಶಪಾಂಡೆ, ಯಾವ ಪಕ್ಷದಿಂದ ಎಲೆಕ್ಷನ್​ಗೆ ನಿಲ್ಲುತ್ತೀರ?’ ಎಂದು ಕಾಲೆಳೆದಾಗ ‘ಯಾವ ಪಕ್ಷದಿಂದ ಟಿಕೆಟ್ ಕೊಡ್ತಾರೋ ಅಲ್ಲಿ ನಿಲ್ಲಲು ನಾನು ಸಿದ್ಧ’ ಎಂದು ತಿರುಗೇಟು ನೀಡಿದರು. ಚಿಕ್ಕ ವಯಸ್ಸಿನಿಂದಲೂ ಐಎಎಸ್, ಐಪಿಎಸ್ ಮಾಡಬೇಕೆಂಬ ಕನಸಿತ್ತು. ಆದರೆ, ನನ್ನಪ್ಪ-ಅಮ್ಮನಿಗೆ ಮದುವೆ ಮಾಡುವ ಆತುರವಿತ್ತು. ಮದುವೆ ಆದಮೇಲೆ ಮಕ್ಕಳ ಪಾಲನೆಯಲ್ಲೇ 21 ವರ್ಷ ಕಳೆಯಿತು. ಗಂಡನಿಗೆ ಟ್ರಾನ್ಸ್​ಫರ್ ಆಗುತ್ತಲೇ ಇದ್ದುದರಿಂದ ಹಲವು ಊರುಗಳನ್ನು ತಿರುಗುವಂತಾಯಿತು. ಇಷ್ಟುದಿನ ನನ್ನ ಹೆಸರಿಗೆ ತಕ್ಕಂತೆ ಸಹನಶೀಲೆಯಾಗಿ ಬದುಕಿದೆ. ಇದೀಗ ಇಬ್ಬರು ಹೆಣ್ಣುಮಕ್ಕಳೂ ದೊಡ್ಡವರಾಗಿರುವುದರಿಂದ ನನ್ನ ಐಡೆಂಟಿಟಿಯನ್ನು ನಿರೂಪಿಸಬೇಕೆಂದು ಬಂದಿದ್ದೇನೆ ಎಂದಾಗ ಸಭಿಕರಿಂದ ಕರತಾಡನ.

 

ಸಂಗೀತ, ನೃತ್ಯದ ಸಾಥ್

ರ‍್ಯಾಂಪ್ ವಾಕ್, ಪ್ರಶ್ನಾವಳಿಯ ಜತೆಗೆ ಪ್ರೇಕ್ಷಕರನ್ನು ಮನರಂಜಿಸಲು ನಕುಲ್ ಅಭಯಂಕರ್ ಹಾಗೂ ಸಂಗೀತಾ ಕನ್ನಡ ಗೀತೆಗಳನ್ನು ಹಾಡಿ ಮನತಣಿಸಿದರು. ಹಾಗೇ, ಇಮ್ರಾನ್ ಸರ್ದಾರಿಯಾ ತಂಡದವರು ಕನ್ನಡ ಗೀತೆಗಳಿಗೆ ನೃತ್ಯ ಮಾಡಿ ಕಾರ್ಯಕ್ರಮದ ಕಳೆಯನ್ನು ಹೆಚ್ಚಿಸಿದರು.

 

5 ಬೆಸ್ಟ್ ಪ್ರಶಸ್ತಿ

ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದ 30 ಸ್ಪರ್ಧಿಗಳಲ್ಲಿ ಐವರಿಗೆ ವಿಶೇಷ ಪ್ರಶಸ್ತಿ ನೀಡಲಾಯಿತು. ಅನ್ನಪೂರ್ಣ- ಬೆಸ್ಟ್ ಫೋಟೋಜೆನಿಕ್, ಅರ್ಚನಾ- ಬೆಸ್ಟ್ ಸ್ಕಿನ್, ಸೌಜನ್ಯಾ- ಬೆಸ್ಟ್ ಸ್ಮೈಲ್, ನಮಿತಾ, ಬೆಸ್ಟ್ ಹೇರ್, ಶ್ರುತಿ ನವೀನ್- ಬೆಸ್ಟ್ ಆಯ್್ಸ ವಿಭಾಗದಲ್ಲಿ ಪ್ರಶಸ್ತಿ ಗಿಟ್ಟಿಸಿಕೊಂಡು ಗೆಲುವಿನ ನಗೆ ಬೀರಿದರು.

 

ಈ ಸ್ಪರ್ಧೆಯ ಆಡಿಷನ್​ನಿಂದ ಫಿನಾಲೆವರೆಗೂ ನಾನು ಈ ಸ್ಪರ್ಧಿಗಳ ಜತೆಗೇ ಇದ್ದೇನೆ. ಯಾರೂ ಪರ್ಫೆಕ್ಟ್ ಆಗಿರಲು ಸಾಧ್ಯವಿಲ್ಲ. ಎಲ್ಲರಲ್ಲೂ ಒಂದೊಂದು ಕೊರತೆ ಇದ್ದೇ ಇರುತ್ತದೆ. ಹಾಗಾಗಿ, ಇಲ್ಲಿ ವಿಜೇತರಾದವರು ಮಾತ್ರ ಪರ್ಫೆಕ್ಟ್ ಎಂಬ ಮನೋಭಾವ ಬೇಡ. ದೈನಂದಿನ ಜವಾಬ್ದಾರಿಯ ಹೊರತಾಗಿಯೂ ಉತ್ಸಾಹದಿಂದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಮುಖ್ಯ. ಹಾಗಾಗಿ, ಎಲ್ಲ 30 ಸ್ಪರ್ಧಿಗಳೂ ವಿಜೇತರು.

| ಪ್ರಿಯಾಂಕಾ, ಉಪೇಂದ್ರ ನಟಿ

 

ಫ್ಯಾಷನ್ ಶೋ ಎಂದರೆ ಸೌಂದರ್ಯ ಮಾತ್ರವಲ್ಲ; ಅವರ ವ್ಯಕ್ತಿತ್ವ, ಆತ್ಮವಿಶ್ವಾಸ ಹೀಗೆ ಪ್ರತಿಯೊಂದೂ ಮುಖ್ಯವಾಗುತ್ತದೆ. ಮನೆ ಮತ್ತು ಖಾಸಗಿತನ ಎರಡನ್ನೂ ಸರಿದೂಗಿಸಿಕೊಂಡು ಹೋಗುವವರಿಗೆ ಇದು ಒಳ್ಳೆಯ ಅವಕಾಶ ಕಲ್ಪಿಸಿದೆ. ಮನೆಕೆಲಸದಲ್ಲಿ ಕಳೆದು ಹೋಗುತ್ತಿದ್ದ ಮಹಿಳೆಯರಿಗೆ ಇದರಿಂದ ಆತ್ಮವಿಶ್ವಾಸ ಹೆಚ್ಚಾದಂತಾಗಿದೆ.

| ರಘು ಮುಖರ್ಜಿ, ನಟ

 

ಗೃಹಿಣಿಯರಿಗಾಗಿ ವೇದಿಕೆಯನ್ನು ಸೃಷ್ಟಿಸಿ ಅವರ ಪ್ರತಿಭೆ ಅನಾವರಣ ಮಾಡಬೇಕೆಂಬ ಉದ್ದೇಶಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಿದ ಸಂತಸವಿದೆ. ವಿಜಯವಾಣಿ, ದಿಗ್ವಿಜಯ 247 ಸಹಕಾರಕ್ಕೆ ಧನ್ಯವಾದಗಳು.

| ಕೆ.ಪಿ.ಎಸ್. ಪ್ರಮೋದ್, ಮುಖ್ಯ ವ್ಯವಸ್ಥಾಪಕರು, ವಿ ಫ್ರಂಟ್​ಲೈನ್ ಫಾರ್ಚ್ಯೂನ್

 

ನನಗೆ ಸ್ವರ್ಗದಲ್ಲಿ ತೇಲಿದ ಹಾಗೆ ಆಗ್ತಿದೆ. ದೊಡ್ಡ ಆಸೆ ಇಟ್ಟುಕೊಂಡರೆ ಅದರ ಒಂದಂಶವಾದರೂ ನೆರವೇರುತ್ತದೆ. 21 ವರ್ಷದ ನಂತರ ನನಗೋಸ್ಕರ ನಾನು ಒಂದು ವೇದಿಕೆ ಹತ್ತಿದ್ದೇನೆ. ಬೇರೆಯವರಿಗಲ್ಲದಿದ್ದರೂ ನನಗಾಗಿಯಾದರೂ ನಾನೇನು ಎಂಬುದನ್ನು ಪ್ರೂವ್ ಮಾಡಿಕೊಳ್ಳಬೇಕಿತ್ತು. ಮನೆಯವರೆಲ್ಲರ ಪ್ರೀತಿಯಿಂದ ಅದು ಸಾಧ್ಯವಾಗಿದೆ, ನನ್ನ ಜವಾಬ್ದಾರಿಯೂ ಹೆಚ್ಚಾಗಿದೆ.

| ಸಹನಾ ದೊಡ್ಡಮನಿ, ಮಿಸೆಸ್ ಪ್ರೖೆಡ್ ಆಫ್ ಕರ್ನಾಟಕ ವಿನ್ನರ್

 

ಮದುವೆ ಆದೋರು ಕೂಡ ಚೆನ್ನಾಗಿ ಕಾಣಲು ಸಾಧ್ಯ ಎಂಬುದನ್ನು ಈ ವೇದಿಕೆ ತೋರಿಸಿಕೊಟ್ಟಿದೆ. ನಮ್ಮ ರೇಷ್ಮೆ ಇಲಾಖೆಯ ಸೀರೆಗಳನ್ನು ಉಟ್ಟು ಅದರ ಮೆರುಗನ್ನೂ ಹೆಚ್ಚಿಸಿದ್ದಾರೆ. ರ್ಯಾಂಪ್​ವಾಕ್ ಮೂಲಕ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾರೆ.

| ಎ. ಮಂಜು, ರೇಷ್ಮೆ ಸಚಿವ

 

ಇಲ್ಲಿ ಭಾಗವಹಿಸಿದ ಮಹಿಳೆಯರಲ್ಲಿ ಬಹುತೇಕರು ಮೊದಲ ಬಾರಿಗೆ ರ‍್ಯಾಂಪ್ ಮೇಲೆ ಹೆಜ್ಜೆ ಹಾಕುತ್ತಿದ್ದಾರೆ ಎಂಬ ವಿಷಯವೇ ಥ್ರಿಲ್ ಕೊಡುತ್ತದೆ. ತಮ್ಮ ಜವಾಬ್ದಾರಿ, ಮನೆಕೆಲಸದ ನಡುವೆಯೂ ಆಗಾಗ ಇಂತಹ ಬದಲಾವಣೆ ಇರಬೇಕು. ಏಕೆಂದರೆ ಜೀವನದಲ್ಲಿ ಎಲ್ಲ ಅನುಭವವೂ ಹೊಸತೇ ಆಗಿರುತ್ತದೆ.

| ಚೈತ್ರಾ ಹಳ್ಳಿಕೇರಿ, ನಟಿ

Leave a Reply

Your email address will not be published. Required fields are marked *

Back To Top